Tuesday, 7th December 2021

ಸೈಬರ್‌ ಕ್ರೈಂ ಕಥೆಯಲ್ಲಿ ರಮೇಶ್ ಸೂಪರ್‌ ಕಾಪ್

ಸಿನಿಮಾ ಮನರಂಜನೆಗೆ ಮಾತ್ರ ಸೀಮಿತವಾಗದೆ ಅಪರಾಧ ಜಗತ್ತನ್ನ ಮಟ್ಟ ಹಾಕಲು ಸಹಕಾರಿಯಾಗಿದೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಮುಳುಗಿರುವ ಯುವ ಜನಾಂಗ ಹೇಗೆ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಿದೆ ಅನ್ನುವುದನ್ನು 100 ಸಿನಿಮಾದಲ್ಲಿ ಬಹಳ ಚೆನ್ನಾಗಿ ನಿರೂಪಿಸಿದ್ದಾರೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಚಿತ್ರತಂಡವನ್ನು ಶ್ಲಾಘಿಸಿದ್ದಾರೆ.

ಶಿವಾಜಿ ಸುರತ್ಕಲ್‌ನಲ್ಲಿ ನಿಗೂಢತೆಯ ಬೆನ್ನುಹತಿ ಅದನ್ನು ಯಶಸ್ವಿಯಾಗಿ ಭೇದಿಸಿದ ರಮೇಶ್ ಅರವಿಂದ್, ಈಗ 100 ನಲ್ಲಿ ಮತ್ತೊಮ್ಮೆ ಹೊಸ ಪ್ರರಣವನ್ನು ಭೇದಿಸಲು ಪಣತೊಟ್ಟಿದ್ದಾರೆ. ಸೈಬರ್ ಕ್ರೈಂ ಕಥೆಯ 100 ಸಮಾಜಕ್ಕೆ ಕಂಟಕವಾಗಿ ಕಾಡುತ್ತಿರುವ ದುರುಳರ ಹುಟ್ಟಡಗಿಸಲು ರಮೇಶ್ ಸನ್ನಿದ್ಧರಾಗಿದ್ದಾರೆ. ಹೌದು, ರಮೇಶ್ 100 ಚಿತ್ರ ದಲ್ಲಿ ಸೂಪರ್ ಕಾಪ್ ಆಗಿ ಕಾಣಿಸಿಕೊಂಡಿದ್ದಾರೆ.

100 ಇಂದು ಭರ್ಜರಿಯಾಗಿ ರಾಜ್ಯಾದ್ಯಂತ ತೆರೆಗೆ ಬಂದಿದೆ. 100 ರಮೇಶ್ ಅರವಿಂದ್ ಅಭಿನಯದ 102ನೇ ಸಿನಿಮಾ ಅನ್ನುವುದು ವಿಶೇಷ. ಈ ಚಿತ್ರವನ್ನು ರಮೇಶ್ ನಿರ್ದೇ ಶನದ ಹತ್ತನೆ ಸಿನಿಮಾ ಎನ್ನುವುದು ಇನ್ನೂ ವಿಶೇಷ. ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಕಥೆ ಚಿತ್ರದಲ್ಲಿದೆ. ಹಾಗಾಗಿ ಚಿತ್ರ ಬಿಡುಗಡೆಗೂ ಮುನ್ನವೇ ಕುತೂಹಲ ಮೂಡಿಸಿದೆ.

ಸಂಕಷ್ಟಕ್ಕೆ ಸಿಲುಕಿಸುವ ಆ ಘಟನೆ : 100, ಈ ಸಂಖ್ಯೆ ನಮ್ಮನ್ನು ರಕ್ಷಿಸುವ ಅರಕ್ಷಕ ರದ್ದಾಗಿರುತ್ತದೆ. ಇಂದು ದರೋಡೆ, ಕಳ್ಳತನ ಗಳಿಗಿಂತ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಿವೆ. ಆಧುನಿಕತೆ ಬೆಳೆದಂತೆ ಖದೀಮರು, ನಮಗೆ ಅರಿವಿಲ್ಲದಂತೆ ನಮ್ಮ ಗೌಪ್ಯ ವಿಚಾರಗಳನ್ನು, ಮಾಹಿತಿಗಳನ್ನು ಕದಿಯುತ್ತಾರೆ. ಹೀಗಿರುವಾ ಗಲೇ ಸೈಬರ್ ಕ್ರೈಂನಿಂದಾಗಿ ಒಂದು ಕುಟುಂಬ ಸಮಸ್ಯೆಗೆ ಸಿಲುಕು ತ್ತದೆ. ಇದರಿಂದ ಪ್ರತಿನಿತ್ಯ ಆ ಕಟುಂಬದ ಸದಸ್ಯರು ನೋವು ಅನುಭವಿಸುವಂತಾಗುತ್ತದೆ. ಮಾತ್ರವಲ್ಲ ಬದುಕುವ ಭರವಸೆಯನ್ನೇ ಕಳೆದುಕೊಂಡಿರುತ್ತಾರೆ. ಈ ಸಂದಿಗ್ಧ ಸಮಯದಲ್ಲಿ ಆ ಕುಟುಂಬ ಆ ಸಮಸ್ಯೆ ಯಿಂದ ಹೇಗೆ ಹೊರಬರುತ್ತದೆ ಎಂಬು ದನ್ನು ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಬೆರೆಸಿ ಚಿತ್ರದಲ್ಲಿ ಹೇಳಲಾಗಿದೆ.

ಕೌಟುಂಬಿಕ ಕಥೆ: 100 ಥ್ರಿಲ್ಲರ್ ಜತೆಗೆ ಕೌಟುಂಬಿಕ ಕಥೆಯನ್ನು ಒಳಗೊಂಡಿದೆ. ಇಲ್ಲಿ ಅಪರಾಧಗಳ ವೈಭವೀಕರಣವಿಲ್ಲ. ಬದಲಾಗಿ ಅಪರಾಧಿಗಳ ಬೆನ್ನತ್ತಿ ಹೋಗುವ ರೋಚಕ ಕಥೆ ಇದೆ. ಇದರ ಜತೆಗೆ ಕೌಟುಂಬಿಕ ಕಥೆಯೂ ಚಿತ್ರದಲ್ಲಿದೆ. ಇದು ಸ್ಮಾರ್ಟ್‌ಯುಗ ಹಾಗಾಗಿ ತಿಳಿದೋ, ತಿಳಿಯದೆಯೋ ತಪ್ಪು ಮಾಡುತ್ತಾರೆ. ಸೈಬರ್ ಜಗತ್ತಿನಲ್ಲಿ ಆ ಒಂದು ತಪ್ಪು ಎಂತಹ
ಪ್ರಮಾದಕ್ಕೆ ಕಾರಣವಾಗುತ್ತದೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಹಾಗಾಗಿ ಪ್ರತಿಯೊ ಬ್ಬರು ನೋಡಲೇಬೇಕಾದ, ತಿಳಿಯಲೇ ಬೇಕಾದ ವಿಚಾರಗಳು ಚಿತ್ರದಲ್ಲಿವೆ.

ನೈಜಕಥೆಯ ಚಿತ್ರ: 100 ನೈಜ ಘಟನೆಯಾಧಾರಿತ ಚಿತ್ರವಾಗಿದೆ. ರಮೇಶ್ ಅವರ ಆಪ್ತರೊಬ್ಬರ ಜೀವನದಲ್ಲಿ ನಡೆದ ಘಟನೆಯನ್ನು ಆಧರಿಸಿ, ಅದಕ್ಕೊಂದಿಷ್ಟು ಥ್ರಿಲ್ಲರ್ ಅಂಶವನ್ನು ಬೆರೆಸಿ ಚಿತ್ರದ ಕತೆ ಹೆಣೆಯಲಾಗಿದೆ. ಸಿನಿಮಾ ಕಥೆಗೆ ಪೂರಕ ವಾದ ಅಂಶಗಳು, ಪಾತ್ರಗಳನ್ನು ಅಗತ್ಯಕ್ಕೆ ತಕ್ಕಂತೆ ಸೇರಿಸಲಾಗಿದೆ. ನಾಲ್ಕು ಹಾಡುಗಳು, ನಾಲ್ಕು ಸಾಹಸ ದೃಶ್ಯ ಗಳು ಚಿತ್ರದಲ್ಲಿವೆ. ಬೆಂಗಳೂರು, ಶ್ರೀರಂಗಪಟ್ಟಣದ ಸುತ್ತಮುತ್ತ ಚಿತ್ರೀ ಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ ರಮೇಶ್ ಸೈಬರ್ ಕ್ರೈಂ ಗಳನ್ನು ಭೇದಿ ಸುವ ಪತ್ತೆಧಾರಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ರಮೇಶ್‌ಗೆ ಜತೆಯಾಗಿ ಪೂರ್ಣಾ ನಟಿಸಿದ್ದಾರೆ.

ಡಿಂಪಲ್ ಕ್ವೀನ್ ರಚಿತಾರಾಮ್ ರಮೇಶ್ ಸೋದರಿಯ ಪಾತ್ರದಲ್ಲಿ ಅಭಿನ ಯಿಸಿದ್ದಾರೆ. ಉಳಿದಂತೆ ಶೋಭರಾಜ್, ಸತ್ಯಹೆಗಡೆ, ಪ್ರಕಾಶ್ ಬೆಳವಾಡಿ ಮತ್ತಿತರರು ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಹಿಂದೆ ಉಪ್ಪು ಹುಳಿ ಖಾರ ಚಿತ್ರವನ್ನು ನಿರ್ಮಿಸಿ ಸೈ ಎನಿಸಿ ಕೊಂಡ ನಿರ್ಮಾಪಕ ರಮೇಶ್ ರೆಡ್ಡಿ, ಸೂರಜ್ ಪ್ರೊಡಕ್ಷನ್ ಮೂಲಕ ೧೦೦ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಥ್ರಿಲ್ಲಿಂಗ್ ಎನಿಸುವ ಚೇಸಿಂಗ್
100 ಚಿತ್ರದಲ್ಲಿ ಆಕ್ಷನ್‌ಗೂ ಹೆಚ್ಚು ಒತ್ತು ನೀಡಲಾಗಿದೆ. ಅದ್ಭುತವಾದ, ಥ್ರಿಲ್ ಎನ್ನಿಸುವ ಚೇಸಿಂಗ್ ದೃಶ್ಯ ಚಿತ್ರದಲ್ಲಿದೆ. ಇದಕ್ಕಾಗಿ 150 ಕ್ಕೂ ಹೆಚ್ಚು ಕಾರುಗಳನ್ನು ಬಳಸಿಕೊಳ್ಳಲಾಗಿದೆ. ಇಡೀ ರಸ್ತೆಯನ್ನು ಬಾಡಿಗೆ ಪಡೆದು ಈ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾ ಗಿದೆ. ರವಿವರ್ಮ ಸಾಹಸ ನಿರ್ದೇಶನದಲ್ಲಿ ಈ ದೃಶ್ಯವನ್ನು ಚಿತ್ರೀಕರಿಸಲಾಗಿದೆ.