Tuesday, 18th January 2022

ಬಿಡಿಎ ಅಧ್ಯಕ್ಷರ ಹತ್ಯೆಗೆ ಸಂಚು ವಿಡಿಯೋ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ ಪ್ರತಿಕ್ರಿಯೆ…

D K Shivakumar

ಬೆಂಗಳೂರು: ಬಿಜೆಪಿ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಸಂಚು ರೂಪಿಸಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗ ಪ್ರಕರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ತಪ್ಪು ಯಾರು ಮಾಡಿದ್ದಾರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿ ಎಂದಿ ದ್ದಾರೆ.

ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸ್ಕೆಚ್ ವಿಚಾರಕ್ಕೆ ಸಂಬಂಧಿಸಿದಂತೆ ಇದೆಲ್ಲ ರಾಜಕೀಯದಲ್ಲಿ ಇದ್ದಿದ್ದೆ. ಎಲ್ಲಾ ರೌಡಿಗಳು ವಿಶ್ವನಾಥ್ ಜೊತೆ ಇದ್ದಾರೆ. ಅವರ ಲಿಸ್ಟ್ ಬೇಕಾದರೂ ಕೊಡುತ್ತೇನೆ. ಇದರಲ್ಲಿ ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದರು.

ಗೋಪಾಲಕೃಷ್ಣ ಜೊತೆಯೂ ಮಾತನಾಡಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ತಪ್ಪು ಯಾರೇ ಮಾಡಿ ದರೂ ಅವರ ವಿರುದ್ಧ ಕ್ರಮ ಜರುಗಿಸಲಿ. ನಾನು ವಿಡಿಯೋ ನೋಡಿಲ್ಲ, ವಿಡಿಯೋ ನೋಡಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.