Friday, 24th March 2023

ನಟ ದರ್ಶನ್ ಜತೆ ನಟಿ ಅಮೂಲ್ಯ ಜಗದೀಶ್ ಪ್ರಚಾರದಲ್ಲಿ ಭಾಗಿ

ಬೆಂಗಳೂರು : ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್ ಜತೆ ನಟಿ ಅಮೂಲ್ಯ ಜಗದೀಶ್ ಸಹ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ.

ಯಶವಂತಪುರ ವಾರ್ಡ್ ಪ್ರಮುಖ ಬೀದಿಗಳಲ್ಲಿ ದರ್ಶನ್ ರೋಡ್ ಶೋ ಮಾಡುತ್ತಿದ್ದಾರೆ. ದರ್ಶನ್ ಅವರನ್ನು ನೋಡಲು ಜನ ಮನೆ, ಕಟ್ಟಡಗಳ ಮೇಲೆ ನಿಂತು ಡಿ ಬಾಸ್ ಗೆ ಜೈ ಕಾರ ಕೂಗಿದರು.

ಕೊರೊನಾ ಸಮಯದಲ್ಲಿ ಜನರಿಗೆ ಅಕ್ಕಿ ನೀಡಿದ್ದು ಮುನಿರತ್ನ ಅವರ ದೊಡ್ಡತನ, ಅವರ ದೊಡ್ಡತನದಿಂದಲೇ ಪ್ರಚಾರಕ್ಕೆ ಬಂದಿದ್ದೇನೆ ಎಂದು ಹೇಳಿದ್ದಾರೆ.

error: Content is protected !!