Tuesday, 15th October 2019

ವಿದೇಶಿಗರ ಕಣ್ಣಲ್ಲಿ ದಸರಾ ಮಹೋತ್ಸವದ ರಂಗು

ಮೈಸೂರು: ಸದಾ ಭಾರತೀಯ ಸಂಸ್ಕೃತಿ ಆಚಾರ-ವಿಚಾರಕ್ಕೆ ಮಾರು ಹೋಗಿರುವ ವಿದೇಶಿಗರು ಮಂಗಳವಾರ ಮೈಸೂರಿನಲ್ಲಿ ನಡೆದ ದಸರಾ ಮಹೋತ್ಸವಕ್ಕೆೆ ಸಾಕ್ಷಿಯಾದರು.

ಸ್ತಬ್ಧಚಿತ್ರ, ಕಲಾತಂಡಗಳ ಹಾಗೂ ಜಂಬೂಸವಾರಿ ಮೆರವಣಿಗೆ ಕಂಡು ಸಂಭ್ರಮಿಸಿದರು. ಕಲ್ಪವೃಕ್ಷ ಟ್ರಸ್‌ಟ್‌ ಮತ್ತು ಜನಚೇತನ ಟ್ರಸ್‌ಟ್‌‌ನಿಂದ ನಗರದ ಆಯುರ್ವೇದ ಆಸ್ಪತ್ರೆೆ ಮತ್ತು ಕಾಲೇಜು ವೃತ್ತದಲ್ಲಿ ವಿದೇಶಿಗರಿಗೆ ದಸರಾ ವೀಕ್ಷಣೆಗೆ ಅವಕಾಶ ಕಲ್ಪಿಿಸುವ ಮೂಲಕ ಆಸನ ವ್ಯವಸ್ಥೆೆಯನ್ನೂ ಮಾಡಲಾಗಿತ್ತು. ಅದರಲ್ಲಿ 500ಕ್ಕೂ ಹೆಚ್ಚು ವಿದೇಶಿಗರು ಕುಳಿತು ದಸರಾ ವೀಕ್ಷಿಸಿದರು. ಇದಕ್ಕಾಾಗಿ ಒಂದು ದಿನದ ಮುನ್ನವೇ ವಿದೇಶಿಯರಿಗೆ ಉಚಿತ ಪಾಸ್ ವಿತರಣೆ ಮಾಡಲಾಗಿತ್ತು. ವಿದೇಶಿಗರು ಮತ್ತು ವಿಶೇಷಚೇತನರಿಗೆ ಉಚಿತವಾಗಿ ಬಿಸ್ಕತ್ ಮತ್ತು ನೀರು ವಿತರಣೆ ಮಾಡಲಾಯಿತು. ಈ ಬಾರಿಯ ದಸರೆ ವೀಕ್ಷಣೆಗೆ ಬಂದಿದ್ದ ವಿದೇಶಿಗರಲ್ಲಿ ಜರ್ಮಿನಿ ಮತ್ತು ಆರ್ಜೆಂಟೈನಾದವರು ಹೆಚ್ಚಾಾಗಿದ್ದರು. ಅದರಲ್ಲೂ ವಿದೇಶಿಗರು ಜಂಬೂಸವಾರಿ ಮೆರವಣಿಗೆ ವೀಕ್ಷಿಸುತ್ತಲೇ ಭಾಷಾಂತರದ ಮೂಲಕ ಮಾಹಿತಿ ಪಡೆದುಕೊಂಡರು.

ವಿದೇಶಿಯರಿಗೆ ಅರ್ಥವಾಗುವಂತೆ ವೀಕ್ಷಣೆ ವಿವರಣೆಯನ್ನು ಅಂಗ್ಲ ಭಾಷೆಯಲ್ಲಿ ಮೈಸೂರು ವಿವಿಯ ಇಂಗ್ಲಿಿಷ್ ವಿಭಾಗದ ಮುಖ್ಯಸ್ಥರಾದ ಪ್ರೊೊ. ಮಹದೇವು ಹಾಗೂ ವಿಶೇಷಚೇತನರಿಗೆ ಮಹಾವೀರ್ ಪ್ರಸಾದ್ ಅವರು ಕನ್ನಡದಲ್ಲಿ ಜಂಬೂಸವಾರಿಯ ಪೂರ್ಣ ಮಾಹಿತಿಯನ್ನುನೀಡಿದರು. ಕಳೆದ ಆರು ವರ್ಷಗಳಿಂದ ಕಲ್ಪವೃಕ್ಷ ಟ್ರಸ್‌ಟ್‌ ವಿದೇಶಿಗರು ಮತ್ತು ವಿಶೇಷಚೇತನರಿಗೆ ವಿಶೇಷ ಆಸನದ ವ್ಯವಸ್ಥೆೆ ಮಾಡಲಾಗುತ್ತದೆ.

Leave a Reply

Your email address will not be published. Required fields are marked *