Friday, 30th September 2022

ನೇಮಕಾತಿ ಅಕ್ರಮ: ಮಾಜಿ ಸಚಿವರಿಂದ ಡೀಲ್ ಆಡಿಯೋ ರಿಲೀಸ್

ಕಲಬುರ್ಗಿ: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಅಕ್ರಮ ಕುರಿತಂತೆ ಶನಿವಾರ ಮಾಜಿ ಸಚಿವ ಪ್ರಿಯಾಂಕ್ ಖರ್ಗೆಯವರು ಹುದ್ದೆಗಳ ಡೀಲ್ ಆಡಿಯೋವನ್ನು ರಿಲೀಸ್ ಮಾಡಿದ್ದಾರೆ. ಅಲ್ಲದೇ 402 ಪಿಎಸ್‌ಐ ಹುದ್ದೆಗಳಿಗೂ ಬುಕ್ ಆಗಿರುವುದಾಗಿ ಗಂಭೀರ ಆರೋಪ ಮಾಡಿದ್ದಾರೆ.

ಪಿಎಸ್‌ಐ ನೇಮಕಾತಿ ಅಕ್ರಮದ ಡೀಲ್ ಮಾಡಿರುವ ಆಡಿಯೋ ಒಂದನ್ನು ರಿಲೀಸ್ ಮಾಡಿದ್ದಾರೆ. ಈ ಆಡಿಯೋದಲ್ಲಿ 5 ಅರ್ಹತೆ ಪಡೆದ ಅಭ್ಯರ್ಥಿ ಹಾಗೂ ಡೀಲ್ ಖುದುರಿಸಿದ ವ್ಯಕ್ತಿಯ ಆಡಿಯೋ ಸಂಭಾಷಣೆ ಇದೆ.

ಇನ್ನೂ ನೇಮಕಾತಿಯಲ್ಲಿ ಮಾತ್ರವೇ ಅಕ್ರಮ ನಡೆದಿಲ್ಲ. ಮುಂಬರುವ 402 ಪಿಎಸ್‌ಐ ಹುದ್ದೆಗಳ ಅಧಿಸೂಚನೆಗೂ ಈಗಲೇ ಡೀಲ್ ಮಾಡಲಾಗಿದೆ. ಆ ಬಗ್ಗೆಯೂ ತನಿಖೆ ನಡೆಸುವಂತೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.