Sunday, 14th August 2022

ಕಾಗಿನೆಲೆ ಶ್ರೀಗಳ ಪೂರ್ವಾಶ್ರಮದ ಪಿತೃ ಶಿವೈಕ್ಯ

ಚಿತ್ರದುರ್ಗ: ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮೀಜಿ ಅವರ ಪೂರ್ವಾಶ್ರಮದ ಪಿತೃಗಳಾದ ಪೂಜ್ಯ ಕಲಮರಹಳ್ಳಿ ಮಹಾ ದೇವಪ್ಪ (72) ನವರು ಆ.15ರಂದು ಸ್ವಾತಂತ್ರ್ಯ ದಿನೋತ್ಸವ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜನಿಸಿದ ದಿನದಂದು ಶಿವೈಕ್ಯರಾದರು.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಲಮರಹಳ್ಳಿ ಗ್ರಾಮದಲ್ಲಿ ನೆಲೆಸಿದ್ದ ಮಹಾದೇವಪ್ಪ ಅವರು ಹೃದಯಾಘಾತದಿಂದ ಭಾನುವಾರ ಶಿವೈಕ್ಯರಾಗಿದ್ದು ಪತ್ನಿ ಜಯಮ್ಮ, ಮಕ್ಕಳಾದ ಶ್ರೀಧರ್, ಪ್ರದೀಪಕುಮಾರ್, ರೂಪ ಅವರನ್ನು ಹಾಗೂ ತಂಗಿ, ತಮ್ಮ, ಅಣ್ಣ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರ ಸ್ವಗ್ರಾಮ ಕಲಮರಹಳ್ಳಿಯಲ್ಲಿ ಸೋಮವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದು ಆಗಮಿಸಿವ ದುಃಖ ತಪ್ತರು ಕೋವಿಡ್ ನಿಯಮಗಳನ್ನು ಪಾಸಿಲಿ ಮಾಸ್ಕ್ ಧರಿಸಿ ಬರಬೇಕು ಎಂದು ವಕೀಲರಾದ ಪುತ್ರ ಪ್ರದೀಪ್ ಮನವಿ ಮಾಡಿದ್ದಾರೆ.

ಶ್ರೀ ಸಿದ್ದರಾಮಾನಂದ ಮಹಾಸ್ವಾಮೀಜಿ ಅವರು ಪ್ರಸ್ತುತ ತಿಂಥಿಣಿ ಹಾಗೂ ಬೆಂಗಳೂರು ಹೊಸಕೋಟೆ ಶಾಖಾಮಠದ ಪೀಠಾಧಿಪತಿಗಳಾಗಿದ್ದಾರೆ. ಮಹಾ ದೇವಪ್ಪ ಅವರ ನಿಧನಕ್ಕೆ ರಾಜ್ಯದ ನಾನಾ ಮಠಾಧೀಶರು, ಜನಪ್ರತಿನಿಧಿಗಳು, ಸಮಾಜದ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಸಂತಾಪ: ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾ ಸ್ವಾಮೀಜಿ ಅವರು ಮಹಾದೇವಪ್ಪ ಅವರ ದರ್ಶನ ಪಡೆದು ಗೌರವ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀ ಸಿದ್ದರಾಮಾನಂದ ಮಹಾಸ್ವಾಮೀಜಿ, ಬಂಧುಗಳು, ಇತರರು ಹಾಜರಿದ್ದರು.