Tuesday, 17th September 2019

ರಾಜಧಾನಿಯಲ್ಲಿ ಡೆಂಘಿ ಡಂಗೂರ!

ರಾಜ್ಯದಲ್ಲಿ 4009, ಬೆಂಗಳೂರು ನಗರದಲ್ಲಿ 6,515 ಪ್ರಕರಣ ದಾಖಲು

ರಾಜ್ಯಧಾನಿಯಲ್ಲಿ ಮಹಾಮಾರಿ ಡೆಂಘಿ ತನ್ನ ಡಂಗೂರ ಸಾರುತ್ತಿಿದೆ. ಇಡೀ ರಾಜ್ಯವನ್ನೇ ಮೀರಿಸುವಷ್ಟು ಪ್ರಕರಣಗಳು ರಾಜಧಾನಿಯಲ್ಲಿ ದಾಖಲಾಗಿದೆ.

ರಾಜ್ಯದಲ್ಲಿ 4009 ಡೆಂ ಪ್ರಕರಣಗಳು ದಾಖಲಾಗಿವೆ. ಆದರೆ ಬೆಂಗಳೂರು ನಗರವೊಂದರಲ್ಲೇ 6,515 ಪ್ರಕರಣಗಳು ಬೆಳಕಿಗೆ ಬಂದಿವೆ. ಸಿಲಿಕಾನ್ ಸಿಟಿಯಲ್ಲಿ ಡೆಂಘಿ ನಿಯಂತ್ರಣಕ್ಕೆೆ ಬಿಬಿಎಂಪಿ ಇನ್ನಿಿಲ್ಲದ ಕಸರತ್ತು ನಡೆಸಿತ್ತು. ಸೊಳ್ಳೆೆಗಳು ಹರಡದಂತೆ ನಗರದೆಲ್ಲೆಡೆ ಆಗಾಗ ರಾಸಾಯನಿಕ ಸಿಂಪಡಿಸಲಾಗಿದೆ. ಆದರೂ ಕೂಡ ಜುಲೈ ತಿಂಗಳಿನಲ್ಲಿ ರಾಜಧಾನಿಯಲ್ಲಿ ಎರಡೂವರೆ ಸಾವಿರ ಪ್ರಕರಣ ಬಯಲಾಗಿದೆ. ಇದಕ್ಕೆೆ ಕಾರಣ ಬಿಬಿಎಂಪಿ ಬಳಸುತ್ತಿಿದ್ದ ರಾಸಾಯನಿಕ. ಸೊಳ್ಳೆೆಗಳ ನಿಯಂತ್ರಣಕ್ಕೆೆ ಬಿಬಿಎಂಪಿ ಬಳಸುತ್ತಿಿದ್ದ ರಾಸಾಯನಿಕದಿಂದ ಸೊಳ್ಳೆೆಗಳೇ ಸಾಯಲ್ಲ. ಅದು ಡೆಂಘಿ ನಿಯಂತ್ರಣಕ್ಕೆೆ ಸೂಕ್ತ ಔಷಧಿಯಲ್ಲ ಎಂಬುದನ್ನು ಮುಖ್ಯ ಆರೋಗ್ಯಾಾಧಿಕಾರಿಯೇ ಒಪ್ಪಿಿಕೊಂಡಿದ್ದಾರೆ

ಬಿಬಿಎಂಪಿ ಸೊಳ್ಳೆೆಗಳು ಅಧಿಕವಿರುವ ಸ್ಥಳಗಳಲ್ಲಿ ಮನೆಯೊಳಗೆ ಪೈರಾತಿರೀನ್ ಎನ್ನುವ ರಾಸಾಯನಿಕ ಬಳಸಿದರೆ ಹೊರಾಂಗಣದಲ್ಲಿ ಟ್ಯಾಾಮಿಫೋಸ್ ಎಂಬ ರಾಸಾಯನಿಕವನ್ನು ಬಳಸಲಾಗುತ್ತಿಿತ್ತು. ಆದರೆ ಈ ರಾಸಾಯನಿಕಗಳು ಸೊಳ್ಳೆೆಗಳ ಮೇಲೆ ಯಾವುದೇ ಪರಿಣಾಮ ಬೀರುತ್ತಿಿರಲಿಲ್ಲ. ಬಿಬಿಎಂಪಿ ಕಳೆದ ನಾಲ್ಕೈದು ವರ್ಷಗಳಿಂದ ಇದೇ ರಾಸಾಯನಿಕವನ್ನು ಕಣ್ಮುಚ್ಚಿಿ ಬಳಕೆ ಮಾಡುತ್ತಿಿದ್ದು, ಡೆಂಘೀ ಪ್ರಕರಣ ಹೆಚ್ಚಳಕ್ಕೆೆ ಕಾರಣವಾಗಿದೆ. ಇನ್ನು ಬಿಬಿಎಂಪಿಯಲ್ಲಿಯೇ ಹಿರಿಯ ವೈದ್ಯಾಾಧಿಕಾರಿಗಳು, ರಾಸಾಯನಿಕ ತಜ್ಞರು ಎಲ್ಲರೂ ಇದ್ದರೂ ಜನರ ಆರೋಗ್ಯ ಕಾಪಾಡುವಲ್ಲಿ ಮಾತ್ರ ಬಿಬಿಎಂಪಿ ವಿಫಲವಾಗಿದೆ. ಕಳೆದ ತಿಂಗಳಲ್ಲಿ ದಿಢೀರ್ ಎಂದು ಡೆಂ ಪ್ರಕರಣ ಹೆಚ್ಚಳವಾಗಿದ್ದಕ್ಕೆೆ ಕಾರಣ ಹುಡುಕಿದಾಗ ಬಿಬಿಎಂಪಿ ಅಧಿಕಾರಿಗಳ ಲೋಪ ಪತ್ತೆೆಯಾಗಿದೆ. ಸದ್ಯ ಇದರಿಂದ ಎಚ್ಚೆೆತ್ತಿಿರುವ ಅಧಿಕಾರಿಗಳು ಇನ್ಮುಂದೆ ಟೆಕ್ನಿಿಕಲ್ ಮೆಲಾಥಿಯನ್ ಎನ್ನುವ ರಾಸಾಯನಿಕ ಬಳಕೆಗೆ ಮುಂದಾಗಿದೆ.

ಆರೋಗ್ಯ ಇಲಾಖೆ ಸಾರ್ವನಿಕರಿಗೆ ಸ್ವಚ್ಛತೆ ಕಾಪಾಡಿಕೊಂಡು ಮಹಾಮಾರಿ ಡೆಂ ಭೀತಿಯಿಂದ ದೂರವಿರಿ ಅಂತ ಅರಿವು ಮೂಡಿಸುತ್ತಿಿದೆ. ನಿಂತ ನೀರಿನಲ್ಲಿ ಉತ್ಪತ್ತಿಿಯಾಗುವ ಸೊಳ್ಳೆೆಗಳು ಕ್ಷಿಪ್ರಗತಿಯಲ್ಲಿ ಸೋಂಕು ಹರಡುತ್ತಿಿವೆ. ಒಮ್ಮೆೆ ಡೆಂ ಸೋಂಕು ತಗುಲಿದರೆ ನಮ್ಮ ದೇಹದ ರಕ್ತದ ಕಣಗಳಲ್ಲಿರುವ ಪ್ಲೇಟ್‌ಲೆಟ್ ಗಳ ಸಂಖ್ಯೆೆ ಇಳಿಕೆಯಾಗಿ ನಮ್ಮನ್ನು ಹೈರಾಣಾಗಿಸುತ್ತವೆ. ಕೆಲವರು ಸಾವಿನ ಮನೆಯ ಬಾಗಿಲು ಬಡಿದು ಅದೃಷ್ಟವಶಾತ್ ಬದುಕುಳಿದರೆ, ಇನ್ನೂ ಹಲವರು ದೇಹದಲ್ಲಿನ ವೈರಾಣುಗಳ ಅಟ್ಟಹಾಸಕ್ಕೆೆ ಪ್ರಾಾಣವನ್ನೇ ತೆತ್ತಿಿದ್ದಾರೆ. ಹೀಗಾಗಿ ಈ ರೋಗ ಹರಡುವ ಸೊಳ್ಳೆೆಗಳ ಸಂತಾನೋತ್ಪತ್ತಿಿಗೆ ಕಡಿವಾಣ ಹಾಕುವ ಕೆಲಸವನ್ನು ಪ್ರತಿಯೊಬ್ಬರು ಮಾಡಲೇಬೇಕಿದೆ.

ಸೊಳ್ಳೆೆಗಳ ಮೂಲ ಯಾವುದು?
ಸಾಮಾನ್ಯವಾಗಿ ನಾವು ಮನೆಯಂಗಳದಲ್ಲಿಡುವ ಹೂ ಕುಂಡಗಳು, ಗಿಡಗಳನ್ನು ಬೆಳೆಸುವ ಪಾಟ್‌ಗಳು, ಫ್ರಿ್ಜ್ಿನ ತಳ ಭಾಗದಲ್ಲಿ ನೀರು ನಿಲ್ಲುವ ಸ್ಟೋೋರೇಜ್‌ಗಳೇ ಡೆಂ ಸೊಳ್ಳೆೆಗಳಿಗೆ ಹೇಳಿ ಮಾಡಿಸಿದ ಜಾಗಗಳು. ಹೀಗಾಗಿ ಆಗ್ಗಾಾಗ್ಗೆೆ ಕೀಟ ನಾಶಕ ಸಿಂಪಡಿಸಬೇಕು. ಮನೆಯ ಸುತ್ತಮುತ್ತ ಯಾವುದೇ ನಿರುಪಯುಕ್ತ ವಸ್ತುಗಳೊಳಗೆ ನೀರು ನಿಲ್ಲದಂತೆ ನೋಡಿಕೊಳ್ಳೋೋದು ಅಷ್ಟೇ ಮುಖ್ಯ. ವ್ಯಕ್ತಿಿಯಲ್ಲಿ ಮೂರು ದಿನಗಳಿಗಿಂತ ಹೆಚ್ಚಾಾಗಿ ಜ್ವರ ಬಾಧಿಸುತ್ತಿಿದ್ದರೆ ಕೂಡಲೇ ವೈದ್ಯರನ್ನು ಕಾಣುವುದು ಸೂಕ್ತ. ಇಂತಹ ವ್ಯಕ್ತಿಿಗಳ ರಕ್ತ ಪರೀಕ್ಷೆ ಮಾಡಿಸೋ ಮೂಲಕ ಕೂಡಲೇ ಸೋಂಕು ತಗಲಿರುವುದನ್ನು ಪತ್ತೆೆ ಹಚ್ಚಿಿ ಸೂಕ್ತ ಚಿಕಿತ್ಸೆೆ ಪಡೆಯಬೇಕು.

Leave a Reply

Your email address will not be published. Required fields are marked *