Tuesday, 25th February 2020

9 ತಿಂಗಳಲ್ಲಿ 12 ಸಾವಿರ ಮಂದಿಗೆ ಡೆಂಘೀ!

ಕಳೆದ ವರ್ಷಕ್ಕಿಿಂತ ಶೇ.138ರಷ್ಟು ಉಲ್ಬಣ ರಾಜಧಾನಿದಲ್ಲಿ ನಿಯಂತ್ರಣಕ್ಕೆೆ ಬಾರದ ಸ್ಥಿತಿ ನಿರ್ಮಾಣ

ರಾಜ್ಯದಲ್ಲಿ ಡೆಂಘೀ ಜ್ವರ ವ್ಯಾಾಪಕವಾಗಿ ಹರಡುತ್ತಿಿದೆ. ಕಳೆದ 9 ತಿಂಗಳಲ್ಲಿ 12,239 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕಳೆದ ಬಾರಿಗೆ ಹೋಲಿಸಿದರೆ ಡೆಂಘೀ ರೋಗ ಕಾಣಿಸಿಕೊಂಡವರ ಸಂಖ್ಯೆೆಯಲ್ಲಿ ಶೇ.138 ರಷ್ಟು ಏರಿಕೆಯಾಗಿದ್ದು, ಒಂಭತ್ತು ತಿಂಗಳಲ್ಲಿ ಕರ್ನಾಟಕದೆಲ್ಲೆಡೆ ಸುಮಾರು 12.5 ಸಾವಿರ ಮಂದಿ ಡೆಂಗ್ಯೂ ಜ್ವರದಿಂದ ಬಳಲಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಡೆಂಘೀ ಜ್ವರಕ್ಕೆೆ ತುತ್ತಾಾದವರ ಸಂಖ್ಯೆೆ ಹೆಚ್ಚಿಿದ್ದು, ಕಳೆದ ಬಾರಿಗಿಂತ ಶೇ. 61 ರಷ್ಟು ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಅಂಕಿ-ಅಂಶ ವಿವರಿಸಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ಸೊಳ್ಳೆೆ ನಿಯಂತ್ರಣ, ಲಾರ್ವಾ ನಾಶ, ಜಾಗೃತಿ ಕಾರ್ಯಕ್ರಮದಿಂದಾಗಿ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಇಲಾಖೆ ಹೇಳುತ್ತಿಿದೆ. ಆದರೆ ಅಧಿಕೃತ ಅಂಕಿ ಸಂಖ್ಯೆೆ ಗಮನಿಸಿದರೆ ಈ ಕಾಯಿಲೆಯ ಪರಿಣಾಮ ಈ ಬಾರಿ ತೀವ್ರವಾಗಿರುವುದು ಸ್ಪಷ್ಟವಾಗುತ್ತದೆ. ಚರಂಡಿಗಳು ಹಾಗೂ ರಾಜಕಾಲುವೆಗಳಲ್ಲಿ ಸಮರ್ಪಕವಾಗಿ ಕೊಳಚೆ ನೀರು ಹರಿಯದಿರುವುದು, ಕಟ್ಟಡ ಕಾಮಗಾರಿಗಳು ಹೆಚ್ಚು ನಡೆಯುವುದರಿಂದ ತೆರೆದ ಸಂಪುಗಳು ಹಾಗೂ ಕಟ್ಟಡಗಳ ಕ್ಯೂರಿಂಗ್‌ಗೆ ನೀರು ನಿಲ್ಲಿಸುವುದು, ಸಮರ್ಪಕ ತ್ಯಾಾಜ್ಯ ವಿಲೇವಾರಿ ಮಾಡದಿರುವುದು, ಎಲ್ಲೆಂದರಲ್ಲಿ ಬಿದ್ದಿರುವ ಪ್ಲಾಾಸ್ಟಿಿಕ್ ಚೀಲ, ತೆಂಗಿನ ಚಿಪ್ಪುುಗಳಲ್ಲಿ ನೀರು ತುಂಬಿಕೊಂಡಿರುವುದರಿಂದ ಸೊಳ್ಳೆೆಗಳ ಉತ್ಪತ್ತಿಿ

ಈಡಿಸ್ ಈಜಿಪ್ಟೆೆ ಸೊಳ್ಳೆೆ ಕಚ್ಚುವ ಮೂಲಕ ಹರಡುವ ಈ ಡೆಂಘೀ ಜ್ವರ ಮನುಷ್ಯನ ದೇಹ ಪ್ರವೇಶಿಸಿದ ತಕ್ಷಣ ಬಿಳಿರಕ್ತ ಕಣಗಳನ್ನು ನಾಶ ಮಾಡುತ್ತದೆ. ಪ್ರತಿ ಆರೋಗ್ಯವಂತ ಮನುಷ್ಯನಲ್ಲಿ ಬಳಿ ರಕ್ತಕಣಗಳ ಸಂಖ್ಯೆೆ ಕನಿಷ್ಠ 1.5 ಲಕ್ಷದಿಂದ 3.5 ಲಕ್ಷದಷ್ಟು ಇರಬೇಕು. 1.5 ಲಕ್ಷಕ್ಕಿಿಂತ ಕಡಿಮೆಯಾದರೆ ರಕ್ತ ಹೆಪ್ಪುುಗಟ್ಟುವ ಪ್ರಕ್ರಿಿಯೆಯಲ್ಲಿ ಸಾಕಷ್ಟು ಸಮಸ್ಯೆೆ ಉಂಟಾಗುತ್ತದೆ.

ಡೆಂಘೀ ರೋಗ ಲಕ್ಷಣ:
ಡೆಂಘೀಯಲ್ಲಿ ಹೆಮರಾಜಿಕ್, ಸಾಫ್‌ಟ್‌ ಸಿಂಡ್ರೊೊಮ್ ಸೇರಿದಂತೆ 4 ವಿಧದ ವೈರಾಣುಗಳಿವೆ. ’ವೈರಾಣು 1’ ಬಂದರೆ ಗುಣವಾಗುತ್ತದೆ. ಒಮ್ಮೆೆ ಡೆಂಗೆ ಬಂದವರಿಗೆ ಮತ್ತೊೊಮೆ ’ವೈರಾಣು 2 ಮತ್ತು 3’ ಬಂದರೆ ಅದರ ಪರಿಣಾಮ ತುಂಬಾ ಗಂಭೀರದ್ದಾಗಿರುತ್ತದೆ. ದಿಢೀರ್ ಜ್ವರ, ತಲೆನೋವು, ಮೂಗಿನಲ್ಲಿ ಸೋರುವಿಕೆ, ಗಂಟಲು ನೋವು, ವಾಂತಿ, ಹೊಟ್ಟೆೆ ನೋವು, ತೋಳು, ಮೈ-ಕೈ ನೋವು, ಅತಿಸಾರ ಇವು ಆರಂಭಿಕ ಲಕ್ಷಣಗಳು. ಇನ್ನು ಗಂಭೀರ ಹಂತ ತಲುಪಿದಾಗ ಕಾಣಿಸಿಕೊಳ್ಳುವ ಲಕ್ಷಣಗಳೆಂದರೆ ಕರುಳಿನಲ್ಲಿ ರಕ್ತಸ್ರಾಾವವಾಗುತ್ತದೆ.

ಬೆಂಗಳೂರಿನಲ್ಲಿ ನಿಲ್ಲದ ಡೆಂಘೀ ಡಂಗೂರ
ದಾಖಲಾಗಿರುವ ಡೆಂಘೀ ಪ್ರಕರಣಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ಈ ಜ್ವರದ ಸೋಂಕು ನಿಯಂತ್ರಣಕ್ಕೆೆ ಬಾರದ ಸ್ಥಿಿತಿ ನಿರ್ಮಾಣವಾಗಿದೆ. ಕಳೆದ ಒಂಭತ್ತು ತಿಂಗಳಲ್ಲಿ 7,353 ಪ್ರಕರಣಗಳು ಬೆಂಗಳೂರು ವ್ಯಾಾಪ್ತಿಿಯಲ್ಲಿ ದಾಖಲಾಗಿವೆ. ಬೆ.ಗ್ರಾಾಮಾಂತರ ಪ್ರದೇಶದಲ್ಲಿ 2 ಸಾವು ಸಂಭವಿಸಿದೆ. ಎಷ್ಟೇ ಮುಂಜಾಗೃತಾ ಕ್ರಮ ಕೈಗೊಂಡರೂ ರಾಜಧಾನಿಯಲ್ಲಿ ಡೆಂಘೀ ಜ್ವರವು ಜನರಲ್ಲಿ ಭಯದ ವಾತಾವರಣ ಸೃಷ್ಟಿಿ ಮಾಡಿದೆ. ಮುಂಗಾರು ಮಳೆ ಆರಂಭಕ್ಕೂ ಮುನ್ನ ಡೆಂಘೀ ಜ್ವರದ ಹಾವಳಿ ಆಮೆಗತಿಯಲ್ಲಿ ಹೆಚ್ಚಾಾಗುತ್ತಿಿದ್ದು, ಇದೀಗ ಅದೇ ಸಾಗುತ್ತಿಿದೆ.

ಪಟ್ಟಿಿಗೆ….
ಹೆಚ್ಚು ಡೆಂಘೀ ಕಾಣಿಸಿಕೊಂಡ ಜಿಲ್ಲೆೆಗಳು
ಜಿಲ್ಲೆೆ ಪ್ರಕರಣ ಸಾವು
ಬಿಬಿಎಂಪಿ 7262 0
ದಕ್ಷಿಿಣ ಕನ್ನಡ 1322 3
ಶಿವಮೊಗ್ಗ 412 1
ಹಾವೇರಿ 323 0
ಚಾಮರಾಜನಗರ 255

ಅಂಕಿ ಅಂ
-1,926 ಎಚ್1ಎನ್1 ಪ್ರಕರಣ, 88 ಸಾವು
-4975 ಮಂದಿಗೆ ರಾಜ್ಯದಲ್ಲಿ ಕಾಡಿದ ಡೆಂಘೀ, 8 ಸಾವು
7,353 ರಾಜಧಾನಿಯಲ್ಲಿ ಡೆಂಘೀ ಪ್ರಕರಣಗಳು
1,885 ಚಿಕೂನ್‌ಗುನ್ಯಾಾ ಪ್ರಕರಣಗಳು ಬೆಳಕಿಗೆ

ಪ್ರಕರಣ ದಾಖಲಾದ ರಾಜ್ಯಗಳು
ಕರ್ನಾಟಕ
ತಮಿಳು ನಾಡು
ತೆಲಂಗಾಣ
ಕೇರಳ

Leave a Reply

Your email address will not be published. Required fields are marked *