Friday, 27th May 2022

ಧವನ್​ ಸಾರಥ್ಯದ ಟೀಂ ಇಂಡಿಯಾಕ್ಕೆ 14 ದಿನ ಕ್ವಾರಂಟೈನ್​

ನವದೆಹಲಿ: ಬ್ಯಾಟ್ಸ್​ಮನ್​ ಶಿಖರ್​ ಧವನ್​ ಸಾರಥ್ಯದ ನಿಗದಿತ ಓವರ್​ಗಳ ಭಾರತ ತಂಡ, ಶ್ರೀಲಂಕಾ ಪ್ರವಾಸ ತೆರಳುವುದಕ್ಕೂ ಮುನ್ನ ಜೂ. 14 ರಿಂದ 28 ರವರೆಗೆ ಮುಂಬೈನಲ್ಲಿ ಕ್ವಾರಂಟೈನ್​ಗೆ ಒಳಗಾಗಲಿದೆ.

ಈ ಅವಧಿಯಲ್ಲಿ 6 ಬಾರಿ ಆರ್​ಟಿ- ಪಿಸಿಆರ್​ ಪರೀಕ್ಷೆಗೆ ಒಳಗಾಗಲಿದ್ದಾರೆ. ಜುಲೈ 13 ರಿಂದ ಭಾರತ ಹಾಗೂ ಶ್ರೀಲಂಕಾ ನಡುವೆ ಕೊಲಂಬೊದಲ್ಲಿ 3 ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿ ನಡೆಯಲಿದೆ.

ಹೊರ ರಾಜ್ಯದ ಆಟಗಾರರು ಚಾರ್ಟರ್​ ವಿಮಾನ ಹಾಗೂ ಬ್ಯುಸಿನೆಸ್ ಕ್ಲಾಸ್​ ವಿಮಾನಗಳ ಮೂಲಕ ಮುಂಬೈಗೆ ಆಗಮಿಸ ಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. 7 ದಿನಗಳ ಕಾಲ ಕೊಠಡಿಯಲ್ಲೆ ಕ್ವಾರಂಟೈನ್​ನಲ್ಲಿದ್ದರೆ, ಬಳಿಕ ಬಯೋಬಬಲ್​ ವ್ಯಾಪ್ತಿಯಲ್ಲೇ ಆಟಗಾರರಿಗೆ ಜಿಮ್​ ಸೇರಿದಂತೆ ಇನ್ನಿತರ ಕಡೆಗೆ ಓಡಾಡಲು ಅವಕಾಶ ನೀಡಲಾಗುತ್ತಿದೆ.

ಭಾರತ ತಂಡದ ಆಟಗಾರರು ಎಂದಿನಂತೆ ಕೊಲಂಬೊದಲ್ಲಿರುವ ತಾಜ್​ ಸಮುದ್ರಾ ಹೋಟೆಲ್​ನಲ್ಲೆ ಉಳಿದುಕೊಳ್ಳಲಿದ್ದಾರೆ.