Tuesday, 7th December 2021

ಕರೋನಾ ಇಂಜೆಕ್ಷನ್ ತೆಗೆದುಕೊಳ್ಳದೆ ಪೋಸ್ ನೀಡಿರುವ ಡಿಹೆಚ್‌ಒ, ಪ್ರಾಂಶುಪಾಲೆ

ತುಮಕೂರು: ಕರೋನಾ ನಿಯಂತ್ರಣಕ್ಕಾಗಿ ಸರಕಾರ ಬಿಡುಗಡೆ ಮಾಡಿರುವ ಕರೋನಾ ವ್ಯಾಕ್ಸಿನ್ ಅನ್ನು ಡಿಹೆಚ್‌ಓ ನಾಗೇಂದ್ರಪ್ಪ, ಸರಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ರಜನಿಯವರು ತೆಗೆದುಕೊಳ್ಳುವ ನಾಟಕವಾಡಿ ಪೋಸ್ ನೀಡಿರು ವುದು ಭಾರಿ ಚರ್ಚೆಗೆ ಒಳಗಾಗಿದೆ.

ಕಳೆದ ಜ.16ರಂದು ಜಿಲ್ಲೆಯಲ್ಲಿ ಪ್ರಥಮವಾಗಿ ಕರೋನಾ ವಾರಿರ‍್ಸ್ಗೆ ವ್ಯಾಕ್ಸಿನ್ ನೀಡಲು ಜಿಲ್ಲಾಸ್ಪತ್ರೆಯಲ್ಲಿ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ಚಾಲನೆ ನೀಡಲಾಗಿತ್ತು. ಈ ವೇಳೆ ಜಿಲ್ಲಾ ಶಸ್ತ್ರಚಿಕಿತ್ಸಕ ವೀರಭದ್ರಯ್ಯ ಅವರು ಇಂಜೆಕ್ಷನ್ ತೆಗೆದುಕೊಂಡು ಇತರ ಕಾರ್ಯಕರ್ತರಿಗೆ ಧೈರ್ಯ ತುಂಬಿ ಶ್ಲಾಘನೀಯವಾಗಿದ್ದಾರೆ.

ಇದೇ ವೇಳೆ ಡಿಹೆಚ್‌ಓ ಡಾ.ನಾಗೇಂದ್ರಪ್ಪ ಅವರು ಇಂಜೆಕ್ಷನ್ ತುಂಬಿದ ಸೂಜಿಯನ್ನು ಚುಚ್ಚಿಕೊಳ್ಳುತ್ತಿರುವಂತೆ ಪೋಸ್ ನೀಡಿ ನಾಟಕವಾಡಿರುವುದು ಖಂಡನೀಯವಾಗಿದೆ. ಸರಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ.ರಜನಿಯವರು ಕರೋನಾ ವ್ಯಾಕ್ಸಿನ್ ತೆಗೆದುಕೊಳ್ಳುತ್ತಿರುವಂತೆ ವಿಕ್ಟರಿ ತೋರಿಸಿ ಪೋಟೋಗಳಲ್ಲಿ ಮಿಂಚಿದ್ದು ಭಾರಿ ದುರಂತ.

ಈ ಇಬ್ಬರು ಅಧಿಕಾರಿಗಳು ಸರಕಾರಿ ವ್ಯಾಕ್ಸಿನ್ ಮೇಲೆ ನಂಬಿಕೆಯಿಟ್ಟಿಲ್ಲದಿರುವುದು ನಾಚಿಕೆಸಂಗತಿ. ಇಂತಹವರು ಆರೋಗ್ಯ ಇಲಾಖೆಯಲ್ಲಿರುವುದು ಸಮಾಜಕ್ಕೆ ದೊಡ್ಡ ಕಳಂಕ. ನಾಟಕವಾಡಿರುವ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಧಿ ಕಾರಿಗಳ ಕರ್ತವ್ಯ ನಿಷ್ಟೆಯನ್ನು ಹರಾಜು ಹಾಕಿದೆ.

ಇವರೀರ್ವರನ್ನು ಆಮಾನತ್ತು ಮಾಡಲು ಆಗ್ರಹ: ಜಿಲ್ಲಾ ಆರೋಗ್ಯ ಇಲಾಖೆಯಲ್ಲಿದ್ದು ಮಾದರಿಯಾಗಬೇಕಿದ್ದ ಡಿಹೆಚ್‌ಓ ನಾಗೇಂದ್ರಪ್ಪ ಮತ್ತು ಸರಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ರಜನಿ ಅವರುಗಳು ಕರೋನಾ ವ್ಯಾಕ್ಸಿನ್ ತೆಗೆದುಕೊಂಡು ಇಡೀ ಸಮಾಜಕ್ಕೆ ಧೈರ್ಯ ತುಂಬಬೇಕಾಗಿತ್ತು. ಆದರೆ, ಇಂಜೆಕ್ಷನ್ ತೆಗೆದುಕೊಳ್ಳುವಂತೆ ಪೋಸ್ ನೀಡಿ ಇಡೀ ಇಲಾಖೆಗೆ ಮೋಸ ಮಾಡಿರುವ ಇವರ ವಿರುದ್ದ ಮೇಲಧಿಕಾರಿಯವರು ಸೂಕ್ತ ಕ್ರಮಕೈಗೊಂಡು ಅಮಾನತ್ತು ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.