Wednesday, 24th April 2024

ಕೊಡಗಿನ ಸ್ಥಿತಿಗತಿ ಬಗ್ಗೆ ಸಚಿವ ಸೋಮಣ್ಣ ಪರಿಶೀಲನೆ

ಕೊಡಗು:

ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಶಾಲನಗರದ ಕುವೆಂಪು ಮತ್ತು ಸಾಯಿ ಬಡಾವಣೆಗಳಿಗೆ ಭೇಟಿ ನೀಡಿ ಜಲಾವೖತಗೊಂಡ ಮನೆಗಳ ಮಾಲೀಕರೊಂದಿಗೆ ಸಚಿವರು ಸಮಾಲೋಚನೆ ನಡೆಸಿದರು.

ಕಾವೇರಿ ನದಿ ತೀರದಲ್ಲಿ ಅನೇಕರು ಅಪಾಯದ ಅರಿವಿಲ್ಲದೇ ಮನೆಗಳನ್ನು ನಿಮಿ೯ಸಿಕೊಂಡಿದ್ದು ಈಗ ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇಂಥ ಸಮಸ್ಯೆ ಮರುಕಳಿಸದಂತೆ ಸಕಾ೯ರದಿಂದ ಶಾಶ್ವತ ಯೋಜನೆ ರೂಪಿಸಲಾಗುತ್ತದೆ ಎಂದೂ ಸಚಿವರು ಭರವಸೆ ನೀಡಿದರು. ಶಾಸಕ ರಂಜನ್ ಪ್ರಯತ್ನದಿಂದ ಈ ಬಾರಿ ಕಾವೇರಿ ನದಿ ಹೂಳೆತ್ತುವ ಕಾಯ೯ಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾಮಗಾರಿಗೆ ಚುರುಕು ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.

ಕೊಡಗಿನಲ್ಲಿ ಪ್ರಕೖತ್ತಿ ವಿಕೋಪ ಹಾನಿ ಸಂಬಂಧಿತ ಪರಿಹಾರ ಕಾಯ೯ಗಳಿಗೆ ಕೇಂದ್ರ ಮತ್ತು ರಾಜ್ಯ ಸಕಾ೯ರಗಳಿಂದ ಅಗತ್ಯ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದ ಸೋಮಣ್ಣ, ಕೊಡಗಿನಾದ್ಯಂತ ಮಹಾಮಳೆಯಿಂದಾಗಿ ಸಾಕಷ್ಟು ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಸಕಾ೯ರಕ್ಕೆ ವರದಿ ನೀಡಲಾಗುತ್ತದೆ.

ಭಾಗಮಂಡಲದಲ್ಲಿ ಕಾವೇರಿ ನದಿ ಪ್ರವಾಹ ಇಳಿದ ಕೂಡಲೇ ತಲಕಾವೇರಿ ಭೂಕುಸಿತದಲ್ಲಿ ಸಿಲುಕಿರುವ ಅಚ೯ಕರ ಕುಟುಂಬದ 5 ಸದಸ್ಯರ ಪತ್ತೆಗೆ ಕಾಯಾ೯ಚರಣೆ ಪ್ರಾರಂಭಿಸಲಾಗುತ್ತದೆ ಎಂದು ಸಚಿವ ಸೋಮಣ್ಣ ಹೇಳಿದರು. ಕೊಡಗು ಜಿಲ್ಲಾಡಳಿತ ಮಳೆ ಹಾನಿ ಎದುರಿಸಲು ಸವ೯ರೀತಿಯಲ್ಲಿಯೂ ಸಜ್ಜಾಗಿದೆ. ಕೊಡಗಿನ ಜನತೆ ಸಕಾ೯ರದೊಂದಿಗೆ ಕೈಜೋಡಿಸಿ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ ಎಂದೂ ಸಚಿವ ಸೋಮಣ್ಣ ಹೇಳಿದರು.

ಸಂಸದ ಪ್ರೖತಾಪ್ ಸಿಂಹ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಜರಿದ್ದರು.

…..

Leave a Reply

Your email address will not be published. Required fields are marked *

error: Content is protected !!