Saturday, 20th April 2024

ಪ್ಲಾಸ್ಟಿಕ್ ಆಯುವ ಕುಟುಂಬಗಳಿಗೆ ಆಹಾರ ಸಾಮಗ್ರಿ ಕಿಟ್ ವಿತರಣೆ

ಧಾರವಾಡ
ಕೊರೊನಾ ಸೋಂಕನ್ನು ತಡೆಗಟ್ಟುವ ಹಿನ್ನಲೆಯಲ್ಲಿ ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾಗಿರುವ ,  ದಿನನಿತ್ಯ ಪ್ಲಾಸ್ಟಿಕ್ ಆಯ್ದು ಜೀವನ ಸಾಗಿಸುತ್ತಿರುವವರಿಗೆ ಅಕ್ಕಿ, ಬೇಳೆ, ರವಾ, ಗೋಧಿಹಿಟ್ಟು, ಎಣ್ಣೆ ಮುಂತಾದ ಕಿರಾಣಿ  ವಸ್ತುಗಳನ್ನು ,ಪ್ಲಾಸ್ಟಿಕ್ಸ್ ಫಾರ್ ಚೇಂಜ್ ಫೌಂಡೇಷನ್ ಇಂಡಿಯಾ, ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಹಾಗೂ ಗ್ರಾಮೀಣ ವಿಕಾಸ ಫೌಂಡೇಷನ್ ಧಾರವಾಡ ಇವರುಗಳ ಸಂಯುಕಾಶ್ರಯದಲ್ಲಿ ಧಾರವಾಡ  ಮತ್ತು ಹುಬ್ಬಳ್ಳಿ ನಗರದ ಕೊಳಚೆ ಪ್ರದೇಶದ ಪ್ಲಾಸ್ಟಿಕ್ ಆಯುವ ಕುಟುಂಬಗಳಿಗೆ ಉಚಿತ ಆಹಾರ ಸಾಮಗ್ರಿ ಕಿಟ್ನ್ನು ವಿತರಿಸಲಾಯಿತು.
ಶಾಸಕರಾದ ಅರವಿಂದ ಬೆಲ್ಲದ ಮಾತನಾಡಿ , ಅಲ್ಲಿನ ನಿವಾಸಿಗಳಿಗೆ ಕೊರೊನಾ ವೈರಸ್ ಹರಡುವಿಕೆಯಿಂದ ರಕ್ಷಿಸಿಕೊಳ್ಳಲು ಮಾರ್ಗಸೂಚಿಗಳನ್ನು ತಿಳಿಸಿ ಆಹಾರ ಸಾಮಗ್ರಿಗಳ ಕಿಟ್ನ್ನು ವಿತರಿಸಿ, ಅವರಲ್ಲಿ ಆತ್ಮಸ್ಥೈರ್ಯ ತುಂಬಿದರು.ತಮ್ಮ ಕುಟುಂಬದ ರಕ್ಷಣೆಗಾಗಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಸೋಪು ಉಪಯೋಗಿಸಬೇಕು ಮತ್ತು ಕೈಗಳನ್ನು ತೊಳೆದುಕೊಳ್ಳಬೇಕು, ಸ್ವಚ್ಛತೆಗೂ ಹೆಚ್ಚಿನ ಆದ್ಯತೆ ನೀಡಿ ಕುಟುಂಬದ ಆರೋಗ್ಯ ಕಾಪಾಡಿಕೊಳ್ಳಬೇಕು.
ಪ್ಲಾಸ್ಟಿಕ್ಸ್ ಫಾರ್ ಚೇಂಜ್ ಫೌಂಡೇಶನ ಇಂಡಿಯಾ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿಯ ಕಾರ್ಯ ಶ್ಲಾಘನೀಯ ಎಂದರು.
ವಕೀಲರು ಮತ್ತು ಅಸಿಸ್ಟಂಟ್ ಸಾಲಿಸಿಟರ್ ಜನರಲ್ ಜೋಶಿ, ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕ ಹೀನಾ ಖಾನ್, ಮಹಿಳಾ ಕಲ್ಯಾಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರಾದ ಶ್ರಾವಣಿ ಪವಾರ, ಜಗದೀಶ ನಾಯಕ್, ಗಿರೀಶ ಮತ್ತಿಕೊಪ್ಪ, ಮಲ್ಲಪ್ಪ ಮಾನಗಾಂವಿ, ಬಸವರಾಜ ಯಲಿಬಳ್ಳಿ ಉಪಸ್ಥಿತರಿದ್ದರು. ಪ್ಲಾಸ್ಟಿಕ್ ಆಯುವ 450 ಕುಟುಂಬಗಳಿಗೆ ಉಚಿತ ಆಹಾರ ಸಾಮಗ್ರಿ ಕಿಟ್ಗಳನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!