Tuesday, 16th April 2024

ಸಂಜೆಯಿಂದಲೇಎನ್ ಡಿಆರ್ ಎಫ್ ಕಾಯಾ೯ಚರಣೆ ಪ್ರಾರಂಭ

ಮಡಿಕೇರಿ

ಮಡಿಕೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ

ಕೊಡಗಿನಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡರೂ ಪ್ರಾಕೖತ್ತಿಕ ವಿಕೋಪ ಸಂಭವಿಸಿದೆ,.

ಜನರ ನೋವು , ತೊಳಲಾಟ, ದುಗುಡ ನೋಡಲು ಸಾಧ್ಯವಾಗುತ್ತಿಲ್ಲ.

ತಲಕಾವೇರಿ ಭೂಕುಸಿತದಲ್ಲಿ ಕಾಣೆಯಾಗಿರುವ ಅಚ೯ಕರ ಕುಟುಂಬದ ಐವರನ್ನು ಹುಡುಕುವುದು ಸವಾಲಿನ ಕೆಲಸವಾಗಿದೆ.

ಇಂದು ಮಳೆ ಇಳಿಮುಖವಾಗಿರುವ ಹಿನ್ನಲೆಯಲ್ಲಿ ಸಂಜೆಯಿಂದಲೇ ಹುಡುಕಾಟದ ಕಾಯಾ೯ಚರಣೆ ಕೈಗೊಳ್ಳಲಾಗುತ್ತದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಇಂದೇ ಕಾಯಾ೯ಚರಣೆ ಪ್ರಾರಂಭಿಸುವಂತೆ ಸೂಚನೆಕಮಲ ನೀಡಿದ್ದಾರೆ.

ಯಡಿಯೂರಪ್ಪ ಅವರು ಕೂಡ ಕೊಡಗಿನ ಮಳೆ ದುರಂತವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ತಾನು ಸಂಜೆ 4 ಗಂಟೆಗೆ ರಕ್ಷಣಾ ಕಾಯಾ೯ಚರಣೆಗೆ ಅಗತ್ಯವಾದ ಯಂತ್ರೋಪಕರಣಗಳೊಂದಿಗೆ ಶಾಸಕರ ಜತೆ ತಲಕಾವೇರಿಗೆ ತೆರಳುತ್ತಿದ್ದೇನೆ- ಸಚಿವಸೋಮಣ್ಣ ಹೇಳಿಕೆ.

ಕೊಡಗಿನಲ್ಲಿ ಸಂಭವಿಸಿದ ವಿಕೋಪದಲ್ಲಿ ಸಂತ್ರಸ್ಥರಾದವರಿಗೆ ಬಟ್ಟೆ, ಇತರ ವಸ್ತುಗಳನ್ನು ನೀಡುವುದು ಬೇಡ.ಬದಲಿಗೆ, ಮುಖ್ಯಮಂತ್ರಿಗಳ ಪ್ರಕೖತ್ತಿ ವಿಕೋಪ ಪರಿಹಾರ ನಿಧಿಗೆ ದಾನಿಗಳು ನೆರವು ನೀಡಿ ಎಂದು ಸಚಿವ ಸೋಮಣ್ಣ ಮನವಿ ಮಾಡಿದರು.

ಕರೋನಾ ಮತ್ತು ಮಹಾಮಳೆ ಸಂದಭ೯ ಕೊಡಗಿನ ಅಧಿಕಾರಿಗಳು ತಂಡಸ್ಪೂತಿ೯ಯಿಂದ ಒಗ್ಗಟ್ಟಾಗಿ ಕಾಯ೯ನಿವ೯ಹಿಸಿದ್ದೀರಿ ಎಂದು ಉಸ್ತುವಾರಿ ಸಚಿವ ಸೋಮಣ್ಣ ಶ್ಲಾಘನೆ ಮಾಡಿದರು. ಮುಂದೆಯೂ ನಿಲ೯ಕ್ಷ್ಯ ತಾಳದೇ ಸಮನ್ವಯತೆಯಿಂದ ಕಾಯೋ೯ನ್ಮುಖರಾಗಿ ಎಂದು ಸೋಮಣ್ಣ ಅಧಿಕಾರಿಗಳಿಗೆ ಕರೆ ನೀಡಿದರು.

ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ, ಶಾಸಕರಾದ ಅಪ್ಪಚ್ಚು ರಂಜನ್, ಸುನೀಲ್ ಸುಬ್ರಹ್ಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಣಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಉಪಸ್ಥಿತರಿದ್ದರು .

Leave a Reply

Your email address will not be published. Required fields are marked *

error: Content is protected !!