Thursday, 28th March 2024

ಹಾಸನಾಂಬಾ ದೇವಿ ದರ್ಶನೋತ್ಸವಕ್ಕೆ ಮಂಗಳ

ಹಾಸನಾಂಬಾ ದೇವಿಯ 13 ದಿನಗಳ ದರ್ಶನೋತ್ಸವಕ್ಕೆೆ ಮಂಗಳವಾರ ತೆರೆ ಬಿತ್ತು. ಗರ್ಭಗುಡಿಯ ಬಾಗಿಲು ಮುಚ್ಚಲಾಯಿತು. ಜಿಲ್ಲಾಾ ಉಸ್ತುವಾರಿ ಸಚಿವ ಮಾಧುಸ್ವಾಾಮಿ ಇತರರು ಹಾಜರಿದ್ದರು.

ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಕೆ ಮಧ್ಯಾಹ್ನ 1.20ಕ್ಕೆೆ ಗರ್ಭಗುಡಿಯ ಬಾಗಿಲು ಮುಚ್ಚಿಿದ ಜಿಲ್ಲಾಾಡಳಿತ ಅಚ್ಚುಕಟ್ಟಾದ ವ್ಯವಸ್ಥೆೆಗೆ ಸಚಿವ ಮಾಧುಸ್ವಾಾಮಿ ಶ್ಲಾಾಘನೆ

ವಿಶ್ವವಾಣಿ ಸುದ್ದಿಮನೆ ಹಾಸನ
ಜಿಲ್ಲೆೆಯ ಜನರ ಆರಾಧ್ಯ ದೈವ, ಶಕ್ತಿಿ ದೇವತೆ ಹಾಸನಾಂಬಾ ದೇವಿಯ ದರ್ಶನೋತ್ಸವಕ್ಕೆೆ ಮಂಗಳವಾರ ತೆರೆ ಬಿದ್ದಿದೆ. ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ಮಧ್ಯಾಾಹ್ನ 1.20ಕ್ಕೆೆ ಗರ್ಭಗುಡಿಯ ಬಾಗಿಲು ಮುಚ್ಚಲಾಯಿತು.

ಜಿಲ್ಲಾಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಾಮಿ, ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಾಮಿ, ಶಾಸಕ ಪ್ರೀತಂ ಜೆ.ಗೌಡ, ಪಿ.ನಾಗೇಶ್, ಜಿಲ್ಲಾಾಧಿಕಾರಿ ಆರ್.ಗಿರೀಶ್, ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ರಾಮ್ ನಿವಾಸ್ ಸೆಪಟ್, ಜಿಲ್ಲಾಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಬಿ.ಎ.ಪರಮೇಶ್, ಹಾಸನಾಂಬ ದೇವಾಲಯದ ವಿಶೇಷ ಆಡಳಿತಾಧಿಕಾರಿ ಡಾ. ಎಚ್.ಎಲ್.ನಾಗರಾಜ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ನಂದಿನಿ, ಉಪ ವಿಭಾಗಾಧಿಕಾರಿ ಡಾ. ನವೀನ್ ಭಟ್, ತಹಸೀಲ್ದಾಾರ್ ಮೇಘನಾ ಸಮ್ಮುಖದಲ್ಲಿ ಭಾಗಿಲು ಮುಚ್ಚಲಾಯಿತು. ದೇವಿ ದರ್ಶನದ ಕಡೆಯ ದಿನವಾದ ಸೋಮವಾರ ಭಕ್ತ ಸಾಗರ ದೇವಸ್ಥಾಾನ ಆವರಣದಲ್ಲಿ ಸೇರಿತ್ತು. ಕಡೆಯ ದಿನವಾದ್ದರಿಂದ ಮಂಗಳವಾರ ಬೆಳಗ್ಗೆೆ 6 ಗಂಟೆಯವರೆಗೂ ಇಡೀ ರಾತ್ರಿಿ ನಿರಂತರ ದರ್ಶನಕ್ಕೆೆ ಅವಕಾಶ ಮಾಡಿಕೊಡಲಾಗಿತ್ತು.

ದೇವಸ್ಥಾಾನದ ಬಾಗಿಲು ಮುಚ್ಚುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಜಿಲ್ಲಾಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಾಮಿ ಮಾತನಾಡಿ, ಹಾಸನಾಂಬಾ ದೇವಿಯ ದರ್ಶನವು ಯಾವುದೇ ತೊಂದರೆಗಳಿಲ್ಲದಂತೆ ಅತ್ಯಂತ ಯಶಸ್ವಿಿಯಾಗಿ ಪೂರ್ಣಗೊಂಡಿದೆ. 11 ದಿನಗಳ ಕಾಲ ದೇವಿ ದರ್ಶನದ ವೇಳೆ ಜಿಲ್ಲಾಾಡಳಿತ, ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿ ಜವಾಬ್ದಾಾರಿಯುತವಾಗಿ ಕೆಲಸ ನಿರ್ವಹಿಸಿದ್ದಾಾರೆ. ಯಾವುದೇ ಗೊಂದಲಗಳಿಲ್ಲದೆ ಉತ್ತಮವಾಗಿ ಉತ್ಸವ ಜರುಗಿದೆ. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿದ್ದು, ಮುಂದೆಯೂ ಇದೇ ರೀತಿ ಮಳೆ ಬೆಳೆಯಾಗಲಿ, ತಾಯಿ ಹಾಸನಾಂಬೆ ದೇವಿ ರಾಜ್ಯದ ಸರ್ವ ಜನಾಂಗಕ್ಕೂ ಒಳಿತು ಮಾಡಲಿ ಎಂದರು.

ಭಕ್ತಾಾದಿಗಳು ಸುಲಲಿತವಾಗಿ ಹಾಸನಾಂಬ ದೇವಿ ದರ್ಶನ ಮಾಡಲು ಬಹಳ ಅಚ್ಚುಕಟ್ಟಾಾಗಿ ವ್ಯವಸ್ಥೆೆಗಳನ್ನು ಮಾಡಿ ಸಹಕರಿಸಿದ ಜಿಲ್ಲಾಾಡಳಿತಕ್ಕೆೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಎಲ್ಲ ಅಧಿಕಾರಿ, ಸಿಬ್ಬಂದಿಗೆ, ಸಾವಧಾನ ಚಿತ್ತರಾಗಿ ಬಂದು ದೇವರ ದರ್ಶನ ಪಡೆದ ಭಕ್ತಾಾದಿಗಳಿಗೂ ಅಭಿನಂದನೆಗಳು ಎಂದರು.

ಹಾಸನಾಂಬ ದೇವಿ ದರ್ಶನ ಹಾಗೂ ಸಿದ್ದೇಶ್ವರ ಜಾಥ್ರಾಾ ಮಹೋತ್ಸವವು ಸಚಿವರ ಮಾರ್ಗದರ್ಶನದಂತೆ ಅತ್ಯಂತ ಯಶಸ್ವಿಿಯಾಗಿ ಜರುಗಿದೆ. 300 ಹಾಗೂ 1000 ರು. ಟಿಕೆಟ್ ದರ್ಶನದಿಂದ ಸುಮಾರು 1.6 ಕೋಟಿ ಹಣ ಸಂಗ್ರಹವಾಗಿದೆ. ದೇವಸ್ಥಾಾನದ ಕಾಣಿಕೆ ಹಣ ಅ.30 ರಂದು ಎಣಿಕೆ ನಡೆಯುವುದು. ಪ್ರಾಾರಂಭದಿಂದ ಕೊನೆಯವರೆಗೂ ಪ್ರತಿಯೊಬ್ಬರೂ ಸಹಕಾರ ನೀಡಿದ್ದಾಾರೆ. ವಿಶೇಷವಾಗಿ ಸ್ಕೌೌಟ್‌ಸ್‌ ಮತ್ತು ಗೈಡ್‌ಸ್‌ ಮಕ್ಕಳಿಂದ ಉತ್ತಮ ಸಹಕಾರ ದೊರೆಕಿದೆ. ಅವರೆಲ್ಲರಿಗೂ ಅಭಿನಂದನೆಗಳು.
ಆರ್.ಗಿರೀಶ್
ಜಿಲ್ಲಾಾಧಿಕಾರಿ

Leave a Reply

Your email address will not be published. Required fields are marked *

error: Content is protected !!