ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಹೊಸದಾಗಿ 24,172 ಜನರಿಗೆ ಕರೋನಾ ಸೋಂಕು ದೃಢಪಟ್ಟಿದ್ದು, ಸೋಂಕಿಗೆ 56 ಮಂದಿ ಮೃತಪಟ್ಟಿದ್ದಾರೆ.
ಮಾಹಿತಿ ನೀಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ‘ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಬೆಂಗಳೂರಿನಲ್ಲಿ 10,692 ಹೊಸ ಕೇಸ್ ಸೇರಿದಂತೆ ರಾಜ್ಯಾಧ್ಯಂತ ಇಂದು ಹೊಸದಾಗಿ 24,172 ಜನರಿಗೆ ಕರೋನಾ ಸೋಂಕು ಧೃಡವಾಗಿದೆ. ಪಾಸಿಟಿವಿಟಿ ದರ ಶೇ.17.11ಕ್ಕೆ ಏರಿಕೆಯಾಗಿದೆ’ ಎಂದಿದ್ದಾರೆ.
ರಾಜ್ಯದಲ್ಲಿ ಕಿಲ್ಲರ್ ಕರೋನಾ ಅಟ್ಟಹಾಸವನ್ನೇ ಮೆರೆದಿದ್ದು, ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ 12 ಜನರು ಸೇರಿದಂತೆ ರಾಜ್ಯದಲ್ಲಿ 56 ಮಂದಿ ಮೃತಪಟ್ಟಿದ್ದಾರೆ. ಸದ್ಯ 2,44,331 ಸಕ್ರಿಯ ಪ್ರಕರಣಗಳಿದೆ. ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ. 17.11% ರಷ್ಟಿದೆ.
◾ರಾಜ್ಯದಲ್ಲಿ ಹೊಸ ಪ್ರಕರಣಗಳು: 24,172
◾ಬೆಂಗಳೂರಿನಲ್ಲಿ ಹೊಸ ಪ್ರಕರಣಗಳು: 10,692
◾ರಾಜ್ಯದಲ್ಲಿ ಧನಾತ್ಮಕತೆ ದರ: 17.11%
◾ಡಿಸ್ಚಾರ್ಜ್ʼಗಳು: 30,869
◾ಸಕ್ರಿಯ ಪ್ರಕರಣಗಳು ರಾಜ್ಯ: 2,44,331 (ಬೆಂಗಳೂರು- 134 ಸಾವಿರ)
◾ಸಾವುಗಳು:56 (ಬೆಂಗಳೂರು- 12)
◾ಟೆಸ್ಟ್ ಗಳು: 1,41,240