Wednesday, 24th April 2024

ರಾಯಚೂರು ನಗರ ಕ್ಷೇತ್ರ ಶಾಸಕರಿಂದ ಹಾಳಾಗಿದೆ

ರಾಯಚೂರು : ನಾರಾಯಣಪೇಟೆ ಕ್ಷೇತ್ರಕ್ಕೆ ಬಂದು ದೊಡ್ಡ ದೊಡ್ಡದಾಗಿ ಭಾಷಣ ಬಿಗಿದ ಶಾಸಕ ಡಾ.ಶಿವರಾಜ ಪಾಟೀಲ್ ರಾಯಚೂರು ನಗರಕ್ಕೆ ಏನಾದರೂ ಮಾಡಿದರೆ ತೋರಿಸಿ ನಿಮ್ಮಿಂದ ಕ್ಷೇತ್ರ ಹಾಳಾಗಿದೆ. ನಾನು ನಿಮ್ಮ ಕ್ಷೇತ್ರದ ಜನತೆ ಫೋಟೋ

ತೋರಿಸುತ್ತೇನೆ. ಎಲ್ಲಿ ನಿರ್ಮಾಣವಾಗಿದೆ ವಿಮಾನ ನಿಲ್ದಾಣ, ಎಲ್ಲಿ ನಿರ್ಮಾಣವಾಗಿದೆ ಟೆಕ್ಸ್ಟೈಲ್ ಪಾರ್ಕ ಮತ್ತು ಪ್ರತಿನಿತ್ಯ ಯಾವ ಬಡಾವಣೆಯಲ್ಲಿ ನೀರು ಕೊಡುತ್ತಿದ್ದಿರಾ ತೋರಿಸಿ ಎಂದು ಮಾಧ್ಯಮಗಳ ಮೂಲಕ ಶಾಸಕರ ವಿರುದ್ಧ ಹರಿಹಾಯ್ದರು.

ನಗರದ ಪತ್ರಿಕಾಭವನದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲೆಯ ಗಡಿ ರಾಜ್ಯ ತೆಲಂಗಾಣದ ನಾರಾಯಣಪೇಟೆ ಶಾಸಕ ಎಸ್ ಆರ್ ರೆಡ್ಡಿ ನಗರ ಶಾಸಕರಾದ ರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಾನು ಯಾವುದೇ ಪಕ್ಷದ ವಿರುದ್ಧ ವಾಗಲಿ, ಪರವಾಗಿ ಮಾತನಾಡಲು ಇಲ್ಲಿ ಬಂದಿಲ್ಲ. ನಗರ ಶಾಸಕ ಶಿವರಾಜ ಪಾಟೀಲ್ ಅವರ ಕುರಿತು ಮಾತನಾಡಲು ಬಂದಿದ್ದೇನೆ.

ಇತ್ತೀಚಿಗೆ ನಾರಾಯಣಪೇಟೆ ಕ್ಷೇತ್ರಕ್ಕೆ ಬಂದ ಶಾಸಕ ಡಾ.ಶಿವರಾಜ್ ಪಾಟೀಲ ಅವರು ರಾಯಚೂರು ಕ್ಷೇತ್ರದಲ್ಲಿ ವಿಮಾನ ನಿಲ್ದಾಣ ಮಾಡಿದ್ದೇವೆ, ಸಾವಿರ ಎಕರೆ ಸ್ಥಳದಲ್ಲಿ ಟೆಕ್ಸ್ಟೈಲ್ ಪಾರ್ಕ ಮಾಡಿದ್ದೇವೆ. ನಗರವಾಸಿಗಳಿಗೆ ಪ್ರತಿನಿತ್ಯ ಕುಡಿಯಲು ನೀರು ಕೊಡು ತ್ತೇವೆ ಇಂದು ದೊಡ್ಡ ದೊಡ್ಡದಾಗಿ ಭಾಷಣದಲ್ಲಿ ಹೇಳಿದ್ದಾರೆ. ಶಾಸಕರೆ ನಿಮ್ಮ ವಿಮಾನ ನಿಲ್ದಾಣ ಎಲ್ಲಿದೆ ಎಂದು ತೋರಿಸಿ, ನಾನು ನಮ್ಮ ಕ್ಷೇತ್ರದ ಜನರಿಗೆ ಉತ್ತರಿಸಬೇಕು. ಯಾವಾಗ ಭೂಮಿ ಪೂಜೆ ಮಾಡಿದಿರಿ, ಯಾವ ಗೊತ್ತಿಗೆದಾರೂ ನಿರ್ಮಿಸಿದ್ದಾರೆ. ಮತ್ತು ಮೊದಲನೇ ವಿಮಾನ ಯಾವಾಗ ಬರಲಿದೆ ಎಂದು ಮಾದ್ಯಮಗಳ ಮೂಲಕ ಪ್ರಶ್ನಿಸಿದರು.

ಇನ್ನು ಸಾವಿರ ಎಕರೆ ಸ್ಥಳದಲ್ಲಿ ಟೆಕ್ಸ್ಟೈಲ್ ನಿರ್ಮಿಸಿಲಾಗಿದೆ ಎಂದು ಹೇಳಿದ್ದೀರಿ, ನನ್ನ ಕ್ಷೇತ್ರದ ಜನರು ಒಂದು ಕೆಲಸ ಕೊಡಿಸಿ ಎಂದು ಕೇಳುತ್ತಿದ್ದಾರೆ. ಎಲ್ಲಿದೆ ಟೆಕ್ಸ ಟೈಲ್ ಪಾರ್ಕ ನಿರ್ಮಿಸಿದ್ದೀರಿ. ಒಮ್ಮೆ ತೋರಿಸಿ ಅದರ ಫೋಟೋಗಳನ್ನು ನಮ್ಮ ಕ್ಷೇತ್ರದ ಜನರಿಗೆ ತೋರಿಸುತ್ತೇನೆ ಎಂದು ಮಾತುಕೊಟ್ಟಿದ್ದೇನೆ. ಇನ್ನು ರಾಯಚೂರು ನಗರದ ಸಾರ್ವಜನಿಕರಿಗೆ ಪ್ರತಿನಿತ್ಯ ಕುಡಿಯಲು ನೀರು ಕೊಡುತ್ತೇನೆ ಎಂದು ಹೇಳಿದ್ದೀರಿ. ಸ್ವತಃ ರಾಯಚೂರಿನಲ್ಲಿ ನನ್ನ ಮನೆಗೆ ಇದುವರೆಗೂ ಪೈಪ್ಲೈನ್ ಹಾಕಿದ್ದನ್ನು ಯಾವ ಮನೆಗೆ ನೀರು ಬರುತ್ತದೆ ಎಂದು ಸ್ಪಷ್ಟಪಡಿಸಿ ಎಂದರು.

ನಾರಾಯಣಪೇಟೆ ಕ್ಷೇತ್ರಕ್ಕೆ ಬಂದೊಡನೆ ಸುಳ್ಳು ಹೇಳಿದ್ದೀರಿ ರಾಯಚೂರು ನೋಡಿದರೆ ಕಸದ ತೊಟ್ಟಿಯಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಎಲ್ಲ ಮಾಧ್ಯಮದವರು ನನ್ನ ಕ್ಷೇತ್ರಕ್ಕೆ ಬನ್ನಿ ರಾಯಚೂರು ಕ್ಷೇತ್ರ ಮತ್ತು ನಾರಾಯಣಪೇಟ ಕ್ಷೇತ್ರ ಯಾವುದು ಅಭಿವೃದ್ಧಿಯಾಗಿದೆ ಎಂದು ನೋಡಿ ಎಂದು ಹೇಳಿದರು.

error: Content is protected !!