Saturday, 9th December 2023

ತಾತಾ, ರಸ್ತೆ ಗುಂಡಿ ಮುಚ್ಚಿ, ಜೀವ ಉಳಿಸಿ..ಪ್ಲೀಸ್…ಎಂದು ಸಿಎಂಗೆ ಮನವಿ

ಬೆಂಗಳೂರು: ಏಳು ವರ್ಷದ ಬಾಲಕಿಯೊಬ್ಬಳು ರಸ್ತೆ ಗುಂಡಿಗಳನ್ನು ಮುಚ್ಚುವಂತೆ ವಿಶೇಷ ರೀತಿಯಲ್ಲಿ ಮನವಿ ಸಲ್ಲಿಸಿದ್ದಾಳೆ.

ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಎರಡನೇ ತರಗತಿ ಓದುತ್ತಿರುವ ಏಳು ವರ್ಷದ ಎಲ್.ಧವನಿ ಯ ಸಾಮಾಜಿಕ ಕಳಕಳಿಗಾಗಿ ಮೆಚ್ಚುಗೆ ವ್ಯಕ್ತವಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರಲ್ಲಿ ರಸ್ತೆ ಗುಂಡಿ ಮುಚ್ಚುವಂತೆ ಆಗ್ರಹಿಸಿದ್ದಾಳೆ.

ಬೆಂಗಳೂರಲ್ಲಿ ರಸ್ತೆಗಳೆ ಸರಿಯಿಲ್ಲ. ಅದರಿಂದ ಸುಮಾರು ಜನ ಸಾವಿಗೀಡಾಗುತ್ತಿದ್ದಾರೆ. ಅವರು ಸತ್ತರೆ ಅವರ ಕುಟುಂಬದವರು ಹೇಗೆ ಜೀವನ ಮಾಡ್ತಾರೆ. ನೀವೆ ಹೇಳಿ ತಾತ ಎಂದು ಸಿಎಂ ಅವರಲ್ಲಿ ಧವನಿ ಪ್ರಶ್ನಿಸಿದ್ದಾಳೆ. ಗುಂಡಿಗಳನ್ನು ಬೇಗ ಮುಚ್ಚಿಸಿ ಅವರ ಜೀವಗಳನ್ನ ಉಳಿಸಿ ತಾತ ಎಂದು ಧವನಿ ಬೇಡಿಕೊಂಡಿದ್ದು, ಗುಂಡಿಗಳಿಂದಾಗಿ ಅನೇಕ ಬಾರಿ ತಾನು ಬೈಕ್ನಿಂದ ಬಿದ್ದಿದ್ದೆ.

ರಸ್ತೆ ಗುಂಡಿ ಬಗ್ಗೆ ಗ್ರಂಥಾಲಯದಲ್ಲಿ ಪತ್ರಿಕೆಗಳಲ್ಲಿ ಓದಿ ತಿಳಿದ ಬಳಿಕ ಹೀಗೆ ಮನವಿ ಮಾಡಿರುವುದಾಗಿ ಧವನಿ ತಿಳಿಸಿದ್ದಾಳೆ.

Leave a Reply

Your email address will not be published. Required fields are marked *

error: Content is protected !!