Saturday, 23rd September 2023

ಹೊಳಿಮಠ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬೊಮ್ಮಾಯಿ

ಬೆಂಗಳೂರು: ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ಸಂದರ್ಭ ಹೃದಯಾಘಾತಕ್ಕೆ ಒಳಗಾಗಿ ಹಠಾತ್ ನಿಧನರಾದ ಸಿಎಂ ಮಾಧ್ಯಮ ಸಂಯೋಜಕ ಗುರುಲಿಂಗಸ್ವಾಮಿ ಹೊಳಿಮಠ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಡೆದರು.

ಸಿಎಂ ಬಸವರಾಜ ಬೊಮ್ಮಾಯಿಯವರು, ಹೊಳಿಮಠ ಪಾರ್ಥಿವ ಶರೀರಕ್ಕೆ ಮಾಲಾ ರ್ಪಣೆ ಮಾಡಿ, ಅಂತಿಮ ನಮನ ಸಲ್ಲಿಸಿದರು. ಅಲ್ಲದೇ ಅವರ ಪತ್ನಿ, ಮಕ್ಕಳಿಗೆ ಸಿಎಂ ಬೊಮ್ಮಾಯಿ ಸಾಂತ್ವನ ಹೇಳಿದರು.

ಗುರುಲಿಂಗಸ್ವಾಮಿ ಒಬ್ಬ ಯುವ ಸ್ನೇಹಿತ. ಅವನನ್ನು ಸುಮಾರು 20 ವರ್ಷಗಳಿಂದ ಬಲ್ಲೆ. ರಾಮದುರ್ಗದ ಹಳ್ಳಿಯೊಂದರಲ್ಲಿರುವ ಇವರ ಕುಟುಂಬಸ್ಥರು ಗೌರವಾನ್ವಿತ ರು ಎಂದರು.

ಪತ್ರಿಕಾ ವೃತ್ತಿ ಆರಂಭಿಸಿದ ಇವರು, ಮೊದಲಿನಿಂದಲು ಪರಿಚಿತರು. ಸಮಾಜಕ್ಕೆ ಒಳಿತಾ ಗುವ ಕೆಲಸ ಮಾಡಿದಂ ಪತ್ರಕರ್ತ ರಾಗಿದ್ದರು. ಅವರು ಒಬ್ಬರೇ ಬೆಳೆಯಲಿಲ್ಲ, ಅವರೊಟ್ಟಿಗೆ ಅನೇಕರನ್ನು ಬೆಳೆಸಿದರು.

ಪ್ರತಿನಿತ್ಯ ಎರಡು ಮೂರು ಜನರಿಗೆ ಸಹಾಯ ಮಾಡುತ್ತಿದ್ದರು. ಬೆಳಿಗ್ಗೆಯಿಂದ ರಾತ್ರಿಯ ವರೆಗೆ ನನ್ನ ಜೊತೆಗೆ ಇದ್ದರು. ಬೆಳಿಗ್ಗೆ ಎದ್ದು ನೋಡಿದರೆ, ಹೀಗೆ ಅವರ ಅಕಾಲಿಕ ನಿಧನ ಕೇಳಿ ಶಾಕ್ ಆಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಸ್ಥರಿಗೆ ದುಖ ಬರಿಸೋ ಶಕ್ತಿಯನ್ನು ಕೊಡಲಿ ಎಂದರು.

error: Content is protected !!