Thursday, 22nd February 2024

ಹನಿಟ್ರ್ಯಾಪ್ ಮೂಲಕ ಕೆಪಿಎಲ್ ಮ್ಯಾಚ್‌ಫಿಕ್ಸಿಂಗ್

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಹನಿಟ್ರ್ಯಾಾಪ್ ಮೂಲಕ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಆಟಗಾರರನ್ನು ಮ್ಯಾಾಚ್ ಫಿಕ್ಸಿಿಂಗ್‌ಗೆ ಕೆಡವಲಾಗಿತ್ತು ಎನ್ನುವ ಸ್ಫೋೋಟಕ ಮಾಹಿತಿ ತನಿಖೆಯಿಂದ ಬಹಿರಂಗಗೊಂಡಿದೆ.
ಕೆಪಿಎಲ್ ಆಟಗಾರರನ್ನು ಚಿಯರ್ ಗರ್ಲ್‌ಸ್‌ ಮತ್ತು ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಾಪ್‌ಗೆ ಬೀಳಿಸಿ, ನಂತರ ಅವರನ್ನು ಮ್ಯಾಾಚ್ ಫಿಕ್ಸಿಿಂಗ್‌ಗೆ ಒಪ್ಪಿಿಸಲಾಗುತ್ತಿಿತ್ತು. ಈ ಹಿನ್ನೆೆಲೆಯಲ್ಲಿ ಕೆಪಿಎಲ್ ತಂಡದ ಏಳು ಮಂದಿ ಆಟಗಾರರನ್ನು ಬಂಧಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ‘ಹನಿಟ್ರ್ಯಾಾಪ್‌ನಿಂದ ಮ್ಯಾಾಚ್ ಫಿಕ್ಸಿಿಂಗ್‌ಗೆ ಬಲವಂತವಾಗಿ ಒಪ್ಪಿಿಕೊಳ್ಳಬೇಕಾಗಿದ್ದು, ಬೇರೆ ಮಾರ್ಗ ಇರಲಿಲ್ಲ’ ಎಂಬುದನ್ನು ಬಾಯ್ಬಿಿಟ್ಟಿಿದ್ದಾಾರೆ. ಕ್ರಿಿಕೆಟ್ ಮ್ಯಾಾಚ್ ಫಿಕ್ಸಿಿಂಗ್ ದಂಧೆ ದೊಡ್ಡದಾಗಿ ಬೆಳೆದಿದ್ದು, ಆಟಗಾರರನ್ನು ಹನಿಟ್ರ್ಯಾಾಪ್ ಮೂಲಕ ಮ್ಯಾಾಚ್ ಫಿಕ್ಸಿಿಂಗ್ ಕರೆತರಲಾಗುತ್ತಿಿದೆ ಎಂಬುದು ಬಹಿರಂಗಗೊಂಡಿದೆ.
ಇನ್ನು ಕೆಪಿಎಲ್ ತಂಡಗಳ ಮಾಲೀಕರು ಕ್ರಿಿಕೆಟ್‌ಗಿಂತ ಬೆಟ್ಟಿಿಂಗ್‌ನಲ್ಲೇ ಹೆಚ್ಚು ಹಣ ಮಾಡಿರುವುದು ತನಿಖೆಯಲ್ಲಿ ಕಂಡು ಬಂದಿದೆ. ಬುಕ್ಕಿಿಗಳು ಆಟಗಾರರನ್ನು ವಿದೇಶಿ ಪ್ರವಾಸಕ್ಕೆೆ ಕಳುಹಿಸುವುದು, ಹನಿಟ್ರ್ಯಾಾಪ್‌ನಲ್ಲಿ ಸಿಲುಕಿಸಿ ಕಟ್ಟಿಿ ಹಾಕುವುದರಲ್ಲಿ ಯಶಸ್ವಿಿಯಾಗುತ್ತಿಿದ್ದರು. ಮ್ಯಾಾಚ್‌ಫಿಕ್ಸಿಿಂಗ್ ಸಂಬಂಧ ತನಿಖೆಯನ್ನು ತೀವ್ರಗೊಳಿಸಿ ಕೆಲ ಆಟಗಾರರನ್ನು, ಬುಕ್ಕಿಿಗಳನ್ನು ಬಂಧಿಸಿರುವುದಕ್ಕೆೆ ಬಹುತೇಕ ಹಿರಿಯ ಕ್ರಿಿಕೆಟಿಗರು ‘ಒಳ್ಳೆೆಯ ಕೆಲಸ ಮಾಡುತ್ತಿಿದ್ದೀರಿ’ ಎಂದು ಸಿಸಿಬಿ ಬೆನ್ನು ತಟ್ಟುತ್ತಿಿದ್ದಾಾರೆ ಎನ್ನಲಾಗಿದೆ.

ಲಿಖಿತ ರೂಪದಲ್ಲಿ ಹೇಳಿಕೆ:
ಕೆಪಿಎಲ್‌ನ ಕೆಲ ಆಟಗಾರರಿಗೆ ನೋಟಿಸ್ ನೀಡಲಾಗಿದ್ದು, ತನಿಖೆಯ ದೃಷ್ಟಿಿಯಿಂದ ಅವರ ಹೆಸರನ್ನು ಬಹಿರಂಗಪಡಿಸುತ್ತಿಿಲ್ಲ. ಅವರು ಮ್ಯಾಾಚ್ ಫಿಕ್ಸಿಿಂಗ್‌ನಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಮುಲಾಜಿಲ್ಲದೆ ಬಂಧಿಸಲಾಗುವುದು. ಮ್ಯಾಾಚ್ ಫಿಕ್ಸಿಿಂಗ್ ಸಂಬಂಧ ಕೆಪಿಎಲ್ ಬಳ್ಳಾಾರಿ ಕ್ರಿಿಕೆಟ್ ತಂಡದ ಮಾಲೀಕ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಾಗಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ವಿಚಾರಣೆಗೆ ಹಾಜರ್
ಮ್ಯಾಾಚ್ ಫಿಕ್ಸಿಿಂಗ್ ಪ್ರಕರಣ ಸಂಬಂಧ ಕೆಎಸ್‌ಸಿಎ ಹಾಗೂ ಎಲ್ಲ ಕೆಪಿಎಲ್ ತಂಡದ ಮಾಲೀಕರು ಹಾಗೂ ನಿರ್ವಾಹಕರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆೆಲೆಯಲ್ಲಿ ಮೈಸೂರು ವಾರಿಯರ್ಸ್ ತಂಡದ ಸಲಹೆಗಾರ, ಬೆಂಗಳೂರು ಬ್ಲಾಾಸ್ಟರ್ಸ್ ತಂಡದ ಸಲಹೆಗಾರರು ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾಗಿ ಮಾಹಿತಿ ನೀಡಿದ್ದಾರೆ.

ವಿಚಾರಣೆಗೆ ಕರೆದಿರುವ ಕೆಪಿಎಲ್‌ನ ಏಳು ತಂಡಗಳ ಮಾಲೀಕರು ತಮ್ಮ ತಂಡದ ಆಟಗಾರರ ಹರಾಜು ಪ್ರಕ್ರಿಿಯೆ, ಮಾರಾಟದ ಮೊತ್ತ, ಇನ್ನಿಿತರ ಮಾಹಿತಿಯನ್ನು ಲಿಖಿತ ರೂಪದಲ್ಲಿ ನೀಡಬೇಕು.
ಸಂದೀಪ್ ಪಾಟೀಲ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ

Leave a Reply

Your email address will not be published. Required fields are marked *

error: Content is protected !!