ಬೆಂಗಳೂರು: ಬ್ರಿಗೇಡ್ ರಸ್ತೆ ಸಮೀಪವಿರುವ ಡ್ಯುಯೆಟ್ ಬಾರ್ ಓನರ್ ಮನೀಶ್ ಶೆಟ್ಟಿ ಅವರನ್ನು ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಘಟನೆ ಗುರುವಾರ ರಾತ್ರಿ ನಡೆದಿದೆ.
ರೆಸ್ಟ್ ಹೌಸ್ ರಸ್ತೆಯಲ್ಲಿರುವ ತಮ್ಮ ಬಾರ್ ಮುಂದೆ ರಾತ್ರಿ ನಿಂತಿದ್ದ 45 ವರ್ಷ ವಯಸ್ಸಿನ ಮನೀಶ್ ಶೆಟ್ಟಿ ಅವರ ಮೇಲೆ ಬೈಕಿ ನಿಂದ ಬಂದ ಅನಾಮಿಕ ವ್ಯಕ್ತಿಗಳು ಮೊದಲಿಗೆ ಮನೀಶ್ ಶೆಟ್ಟಿ ಅವರಿಗೆ ಚಾಕುವಿನಿಂದ ತಿವಿದಿದ್ದಾರೆ. ನಂತರ ಡಬ್ಬಲ್ ಬ್ಯಾರೆಲ್ ಗನ್ ಬಳಸಿ ಎರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ಮನೀಶ್ ರನ್ನು ತಕ್ಷಣವೇ ಸಮೀಪದ ಮಲ್ಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲು ಯತ್ನಿಸ ಲಾಗಿದೆ. ಆದರೆ, ಗುಂಡು ಮನೀಶ್ ಪ್ರಾಣ ತೆಗೆದಿದೆ.
ಮೇಲ್ನೋಟಕ್ಕೆ ಇದು ಹಳೆ ದ್ವೇಷ ಹಾಗೂ ರವಿ ಪೂಜಾರಿ ಗ್ಯಾಂಗಿನವರು ಇರಬಹುದು ಎಂದು ಶಂಕಿಸಲಾಗಿದೆ. ಮೃತ ಮನೀಶ್ ಶೆಟ್ಟಿ ಅವರು ಉಡುಪಿಯ ಅಂಬಾಲಪಾಡಿಯವರಾಗಿದ್ದು, ಅವರ ವಿರುದ್ಧ ಉಡುಪಿ, ದಕ್ಷಿಣ ಕನ್ನಡ ಹಾಗೂ ಮುಂಬೈನಲ್ಲಿ ಹಲವು ಕೇಸುಗಳಿವೆ. ಕೊಲೆ ಬೆದರಿಕೆ, ಕೊಲೆ ಯತ್ನ ಪ್ರಕರಣದ ಆರೋಪಿಯೂ ಹೌದು.
ಬೆಂಗಳೂರು ಹಾಗೂ ಹೈದರಾಬಾದಿನಲ್ಲಿ ದೊಡ್ಡ ಮಟ್ಟದಲ್ಲಿ ಚಿನ್ನಾಭರಣ ಮಳಿಗೆ ದೋಚುವ ಕೃತ್ಯಗಳಲ್ಲಿ ಮನೀಶ್ ಕೈವಾಡ ಇದ್ದೆ ಇರುತ್ತಿತ್ತು. ಸದ್ಯ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಜಾರಿಯಲ್ಲಿದೆ.