Tuesday, 30th May 2023

ನವೆಂಬರ್ 1ರಂದು ಸಚಿವರಿಗೆ ‘ರಾಜ್ಯೋತ್ಸವ ಧ್ವಜಾರೋಹಣ’ ಜವಾಬ್ದಾರಿ ಹಂಚಿಕೆ

ಬೆಂಗಳೂರು: ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲು ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡುವ ಮೂಲಕ ಆದೇಶ ಹೊರಡಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಧ್ವಜಾ ರೋಹಣ ಕಾರ್ಯಕ್ರಮ ನೆರವೇರಿಸಲಿದ್ದಾರೆ.

ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ-ಬಾಗಲಕೋಟೆ, ಡಾ.ಅಶ್ವತ್ಥ್ ನಾರಾಯಣ-ರಾಮನಗರ, ಲಕ್ಷ್ಮಣ ಸವದಿ- ರಾಯ ಚೂರು, ಕೆ.ಎಸ್.ಈಶರಪ್ಪ-ಶಿವಮೊಗ್ಗ, ಆರ್.ಅಶೋಕ್-ಬೆಂಗಳೂರು ಗ್ರಾಮಾಂತರ, ಜಗದೀಶ್ ಶೆಟ್ಟರ್- ಧಾರವಾಡ, ಬಿ.ಶ್ರೀರಾಮುಲು-ಚಿತ್ರದುರ್ಗ, ಎಸ್.ಸುರೇಶ್ ಕುಮಾರ್-ಚಾಮರಾಜನಗರ, ವಿ.ಸೋಮಣ್ಣ-ಕೊಡಗು, ಸಿ.ಟಿ.ರವಿ-ಚಿಕ್ಕ ಮಗಳೂರು, ಬಸವರಾಜ್ ಬೊಮ್ಮಾಯಿ-ಹಾವೇರಿ, ಕೋಟ ಶ್ರೀನಿವಾಸ ಪೂಜಾರಿ-ದಕ್ಷಿಣ ಕನ್ನಡ ಮತ್ತು ತುಮಕೂರಿನಲ್ಲಿ ಜೆ.ಸಿ. ಮಾಧುಸ್ವಾಮಿ ಅವರಿಗೆ ದ್ವಜಾರೋಹಣದ ನೆರವೇರಿಸುವ ಜವಾಬ್ದಾರಿ ನೀಡಲಾಗಿದೆ.

ಸಿ.ಸಿ. ಪಾಟೀಲ-ಗದಗ, ಎಚ್.ನಾಗೇಶ- ಕೋಲಾರ, ಪ್ರಭು ಚೌವ್ಹಾಣ್- ಬೀದರ, ಶಶಿಕಲಾ ಜೊಲ್ಲೆ-ವಿಜಯಪುರ, ಆನಂದ ಸಿಂಗ್- ಬಳ್ಳಾರಿ, ಬಿ.ಎ.ಬಸವರಾಜ್- ದಾವಣಗೆರೆ, ಎಸ್.ಟಿ.ಸೋಮಶೇಖರ- ಮೈಸೂರು, ಬಿ.ಸಿ.ಪಾಟೀಲ-ಕೊಪ್ಪಳ, ಡಾ.ಕೆ.ಸುಧಾಕರ- ಚಿಕ್ಕಬಳ್ಳಾಪುರ, ಕೆ.ಸಿ.ನಾರಾಯಣಗೌಡ-ಮಂಡ್ಯ, ಅರಬೈಲ್ ಶಿವರಾಮ್ ಹೆಬ್ಬಾರ-ಉತ್ತರ ಕನ್ನಡ, ರಮೇಶ್ ಜಾರಕಿಹೊಳಿ-ಬೆಳ ಗಾವಿ, ಕೆ.ಗೋಪಾಲಯ್ಯ-ಹಾಸನ, ಶ್ರೀಮಂತ ಪಾಟೀಲ್- ಕಲಬುರ್ಗಿ, ಉಡುಪಿ ಹಾಗು ಯಾದಗಿರಿಯಲ್ಲಿ ಜಿಲ್ಲಾಧಿಕಾರಿಗಳು ಧ್ವಜಾರೋಹಣ ನಡೆಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

error: Content is protected !!