ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಬುಧವಾರ 29 ಶಾಸಕರು ಸಚಿವರಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಹಿಂದೆ ಯಡಿಯೂರಪ್ಪ ಸಂಪುಟದಲ್ಲಿದ್ದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದಂತ ಎಸ್ ಸುರೇಶ್ ಕುಮಾರ್ ಅವರನ್ನು ಕೈಬಿಟ್ಟಿರೋದು ಖಚಿತಗೊಂಡಿದ್ದು, ಟ್ವಿಟರ್ ಖಾತೆಯಲ್ಲಿ ಎಲ್ಲರಿಗೂ ಧನ್ಯವಾದವನ್ನು ಸಲ್ಲಿಸಿದ್ದಾರೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂಬುದಾಗಿ ತಿಳಿಸುವ ಮೂಲಕ, ಬೊಮ್ಮಾಯಿ ಸಂಪುಟದಿಂದ ಹೊರಗೆ ಉಳಿಯುತ್ತಿರುವುದನ್ನು ಖಚಿತ ಪಡಿಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಇಂದು 8 ಲಿಂಗಾಯಿತ ಸಮುದಾಯದವರು, 7 ಒಕ್ಕಲಿಗ ಸಮುದಾಯದವರಿ, 7 OBC ಸಮುದಾಯ ದವರು, 3 SC, 1 ST, 1 ರೆಡ್ಡಿ, 1 ಮಹಿಳಾ ಮತ್ತು 1 ಬ್ರಾಹ್ಮಣ ಸಮುದಾಯದವರು ಸೇರಿದಂತೆ ಒಟ್ಟು 29 ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸೋ ಮೂಲಕ, ಸೇರ್ಪಡೆಗೊಳ್ಳಲಿದ್ದಾರೆ.