Sunday, 16th June 2024

‘ಯಶವಂತ ಪುರಷ’ ಯಾರಾಗಲಿದ್ದಾರೆ?

ಮೂರನೇ ಬಾರಿಗೆ ಜವರಾಯಿಗೌಡ ಅದೃಷ್ಟ ಪರೀಕ್ಷೆೆ ಎಸ್.ಟಿ ಸೋಮಶೇಖರ್‌ಗೆ ಜಗ್ಗೇಶ್ ಬೆಂಬಲ

ವಿಶ್ವವಾಣಿ ಸುದ್ದಿಮನೆ ಬೆಂಗಳೂರು
ಕಾಂಗ್ರೆೆಸ್ ಭದ್ರಕೋಟೆ, ಒಕ್ಕಲಿಗ ಪ್ರಾಾಬಲ್ಯದ ಯಶವಂತಪುರ ಕ್ಷೇತ್ರದಲ್ಲಿ ಯಶ ಯಾವ ಪುರುಷನಿಗೆ ಒಲಿಯಲಿದೆ ಎಂಬುದನ್ನು ಮತದಾರರು ನಿರ್ಧರಿಸಲಿದ್ದಾಾರೆ.

ಕಾಂಗ್ರೆೆಸ್, ಜೆಡಿಎಸ್ ಮತ್ತು ನಡುವೆ ತ್ರಿಿಕೋನ ಪೈಪೋಟಿಯಿದ್ದ ಕ್ಷೇತ್ರದಲ್ಲಿ ಕಾಂಗ್ರೆೆಸ್‌ನ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿದ್ದಾಾರೆ. ಕಳೆದ ಎರಡು ಅವಧಿಯಲ್ಲಿ ಜೆಡಿಎಸ್‌ನಿಂದ ಸ್ಪರ್ಧೆ ಮಾಡಿ ಸೋಲು ಕಂಡಿರುವ ಜವರಾಯಿಗೌಡ ಮತ್ತೊೊಮ್ಮೆೆ ಅದೃಷ್ಟ ಪರೀಕ್ಷೆೆಗೆ ಇಳಿದಿದ್ದಾಾರೆ. ಕಾಂಗ್ರೆೆಸ್‌ನಿಂದ ಹೊಸಮುಖ ಪಾಳ್ಯ ನಾಗರಾಜ್ ಸ್ಪರ್ಧಿಸಿದ್ದು, ಕಾಂಗ್ರೆೆಸ್‌ನ ಸಾಂಪ್ರದಾಯಿಕ ಮತಗಳು ನನ್ನ ಕೈಹಿಡಿಯಲಿವೆ ಎಂಬ ವಿಶ್ವಾಾಸದಲ್ಲಿದ್ದಾಾರೆ.

ಎಸ್.ಟಿ.ಸೋಮಶೇಖರ್‌ಗೆ ಬಿಜೆಪಿಯಲ್ಲಿ ಯಾವುದೇ ಭಿನ್ನಮತವಿಲ್ಲದೆ ಕಾರ್ಯಕರ್ತರೆಲ್ಲ ಒಟ್ಟಾಾಗಿ ಕೆಲಸ ಮಾಡುತ್ತಿಿರುವುದು ಮತ್ತು ಕಾಂಗ್ರೆೆಸ್‌ನಲ್ಲಿದ್ದ ತಮ್ಮ ಬೆಂಬಲಿಗರೆಲ್ಲ ತಮ್ಮನ್ನು ಬೆಂಬಲಿಸುತ್ತಿಿರುವುದು ಗೆಲುವಿಗೆ ಸಹಕಾರಿಯಾಗಲಿದೆ. ಪಕ್ಷಾಾಂತರ ಮಾಡಿದರು, ಕುಮಾರಸ್ವಾಾಮಿ ನೇತೃತ್ವದ ಮೈತ್ರಿಿ ಸರಕಾರ ಪತನಕ್ಕೆೆ ಕಾರಣವಾದರು ಎಂಬ ಸೋಮಶೇಖರ್ ಮೇಲಿನ ಆರೋಪ ಮತದಾರರ ಸಿಟ್ಟಿಿಗೆ ಕಾರಣವಾದರೆ ಮೂರನೇ ಪ್ರಯತ್ನದಲ್ಲಿ ಜವರಾಯಿಗೌಡ ಶಾಸಕರಾಗಿ ಆಯ್ಕೆೆಯಾಗಲಿದ್ದಾಾರೆ. ಈ ಎರಡು ಪ್ರಬಲ ಅಭ್ಯರ್ಥಿಗಳ ನಡುವೆ ಇಲ್ಲಿ ಕಾಂಗ್ರೆೆಸ್ ಅಭ್ಯರ್ಥಿ ಮಂಕಾಗಿ ಕಾಣುತ್ತಿಿದ್ದು, ತಮ್ಮ ಅದೃಷ್ಟ ಪರೀಕ್ಷೆೆ ಮತ್ತು ರಾಜ್ಯ ನಾಯಕರ ಬೆಂಬಲಕ್ಕಾಾಗಿ ಹಂಬಲಿಸಿದ್ದಾಾರೆ.

ಕಳೆದ ಮೂರು ಚುನಾವಣೆಗಳಲ್ಲಿ ಒಮ್ಮೆೆ ಬಿಜೆಪಿ ಮತ್ತು ಎರಡು ಕಾಂಗ್ರೆೆಸ್ ಗೆಲುವು ಸಾಧಿಸಿದ್ದ ಕ್ಷೇತ್ರದಲ್ಲಿ ಜೆಡಿಎಸ್ ಪ್ರಾಾಬಲ್ಯ ಹೊಂದಿದೆ. ಆದರೆ, ಮತಗಳ ಕ್ರೂಢೀಕರಣ ಲೆಕ್ಕಾಾಚಾರದಲ್ಲಿ ನಾಯಕರು ಎಡವುತ್ತಿಿದ್ದಾಾರೆ. ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸಬೇಕು ಎಂಬ ಹಠಕ್ಕೆೆ ಬಿದ್ದಿರುವ ಜೆಡಿಎಸ್ ರಾಷ್ಟ್ರೀಯ ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಾಮಿ ಅವರ ಬೆಂಬಲದಿಂದ ಮೂರನೇ ಬಾರಿಗೆ ತಮ್ಮ ಅದೃಷ್ಟ ಬದಲಾಗಲಿದೆ ಎಂಬ ಆಸೆಯಲ್ಲಿ ಜವರಾಯಿಗೌಡ ಇದ್ದಾಾರೆ.

ಬಿಜೆಪಿ ಸರಕಾರ ಉಳಿಸಿಕೊಳ್ಳಬೇಕಾದರೆ ಅನರ್ಹರ ಎಲ್ಲ ಕ್ಷೇತ್ರಗಳಲ್ಲಿಯೂ ಗೆಲುವು ಬೇಕು. ಹೀಗಾಗಿ, ಬಿಜೆಪಿ ಕಾರ್ಯಕರ್ತರು ಪರವಾಗಿ ಕೆಲಸ ಮಾಡಲೇಬೇಕು ಎಂಬ ಪರ್ಮಾನು ಹೊರಡಿಸಿದ್ದು, ಸೋಮಶೇಖರ್ ಗೆಲುವಿಗೆ ಹಾದಿ ಸುಗಮವಾಗಿದೆ ಎನ್ನಬಹುದು. ಬಿಜೆಪಿಯ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಹಳೆಯ ದ್ವೇಷವನ್ನು ಮರೆತು ಕೆಲಸ ಮಾಡುತ್ತಿಿರುವುದು ಅವರ ಗೆಲುವಿನ ಆಸೆಯನ್ನು ಹೆಚ್ಚಿಿಸಿದೆ. ಜತೆಗೆ, ಸೋಮಶೇಖರ್ ಬಿಎಸ್‌ವೈ ಸರಕಾರದಲ್ಲಿ ಮಂತ್ರಿಿಯಾಗಲಿದ್ದಾಾರೆ ಎಂಬ ಅಂಶವೂ ಅವರ ಗೆಲುವಿಗೆ ಕಾರಣವಾಗಲಿದೆ.

ಜಗ್ಗೇಶ್ ಬೆಂಬಲ:
ಅನರ್ಹರಿಗೆ ಬಿಜೆಪಿ ಟಿಕೆಟ್ ಎಂಬ ಮಾತುಗಳು ಕೇಳಿಬಂದ ತಕ್ಷಣ ಸಣ್ಣ ಅಸಮಾಧಾನ ಹೊರಹಾಕಿದ್ದ ಜಗ್ಗೇಶ್ ಇದೀಗ ಬೆಂಬಲಕ್ಕೆೆ ನಿಂತಿದ್ದಾಾರೆ. ರಾಜಕೀಯದಲ್ಲಿ ಆಗಿ ಹೋದ ಘಟನೆಗಳನ್ನು ನೆನೆದು ನಾನು ಕೂರುವುದಿಲ್ಲ. ನಮಗೆ ಯಡಿಯೂರಪ್ಪ ಅವರು ಸಿಎಂ ಆಗಿ ಮುಂದಿನ ಮೂರೂವರೆ ವರ್ಷ ಅಧಿಕಾರ ನಡೆಸಬೇಕು ಎಂಬುದಷ್ಟೇ ಮುಖ್ಯವಾಗಿದ್ದು, ಸೋಮಶೇಖರ್ ಪರವಾಗಿ ಕೆಲಸ ಮಾಡುತ್ತಿಿದ್ದೇನೆ. ಅವರ ಗೆಲುವಿಗೆ ಬಿಜೆಪಿ ಕಾರ್ಯಕರ್ತರಾದ ನಾವೆಲ್ಲರೂ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದ್ದಾಾರೆ. ಹೀಗಾಗಿ, ಸೋಮಶೇಖರ್‌ಗೆ ಜಗ್ಗೇಶ್ ಅಸಮಾಧಾನ ಅಡ್ಡಿಿಯಾಗಲಿದೆ ಎಂಬ ಆತಂಕ ದೂರವಾಗಿದೆ.

ಒಕ್ಕಲಿಗರನ್ನು ಒಲೈಕೆಗೆ ಮುಂದು:
ಬೆಂಗಳೂರು ನಗರದ ಬಹುದೊಡ್ಡ ಕ್ಷೇತ್ರವಾದ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರೇ ನಿರ್ಣಾಯಕವಾಗಲಿದ್ದಾಾರೆ. ಕ್ಷೇತ್ರದಲ್ಲಿ 1.3 ಲಕ್ಷ ಒಕ್ಕಲಿಗರ ಮತದಾರರಿದ್ದು, ಅಭ್ಯರ್ಥಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾಾರೆ. ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಬ್ಬರು ಒಕ್ಕಲಿಗ ಸಮುದಾಯಕ್ಕೆೆ ಸೇರಿದ್ದಾಾರೆ. ಹೀಗಾಗಿ, ಒಕ್ಕಲಿಗ ಮತಗಳು ಹಂಚಿಕೆಯಾಗುತ್ತವೆ. ಆದರೆ, ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರ ಉಳಿಸಬೇಕು ಎಂಬ ಮಹತ್ವಾಾಕಾಂಕ್ಷೆೆಯ ಲಿಂಗಾಯತ ಮತದಾರರು ಸುಮಾರು 52 ಸಾವಿರದಷ್ಟಿಿದ್ದು, ಲಿಂಗಾಯತ ಮತಗಳು ನಿರ್ಣಾಯಕ ಪಾತ್ರವಹಿಸಲಿದೆ. ಹೀಗಾಗಿ, ಒಕ್ಕಲಿಗ ಮತ್ತು ಲಿಂಗಾಯತ ಓಲೈಕೆ ಜೋರಾಗಿ ನಡೆಯುತ್ತಿಿದೆ.

ಹಿಂದಿನ ಚುನಾವಣಾ ಲೆಕ್ಕಾಾಚಾರ
2008
ಫಲಿತಾಂಶ ಅಭ್ಯರ್ಥಿ ಪಕ್ಷ ಗಳಿಸಿದ ಮತಗಳು (ಶೇ)
ಗೆಲುವು ಶೋಭಾ ಕರಂದ್ಲಾಾಜೆ ಬಿಜೆಪಿ 38.29
ಸೋಲು ಎಸ್.ಟಿ.ಸೋಮಶೇಖರ್ ಕಾಂಗ್ರೆೆಸ್ 37.57
2013
ಗೆಲುವು ಎಸ್.ಟಿ.ಸೋಮಶೇಖರ್ ಕಾಂಗ್ರೆೆಸ್ 52.00
ಸೋಲು ಜವರಾಯಿಗೌಡ ಜೆಡಿಎಸ್ 39.43
2018
ಗೆಲುವು ಎಸ್.ಟಿ.ಸೋಮೆಶೇಖರ್ ಕಾಂಗ್ರೆೆಸ್ 40.14
ಸೋಲು ಜವರಾಯಿಗೌಡ ಜೆಡಿಎಸ್ 36.41


ಜಾತಿ ಲೆಕ್ಕಾಾಚಾರ
ಒಕ್ಕಲಿಗ : 103230
ದಲಿತ : 56483
ಲಿಂಗಾಯತ: 52809

ಸಂದರ್ಶನ
ಸೋಮಶೇಖರ್

* ನಿಮ್ಮ ಗೆಲುವಿನ ಕಾರಣವಾಗುವ ಅಂಶಗಳೇನು?
ಬಿಜೆಪಿ ಮತ್ತು ನನ್ನ ಬೆಂಬಲಿಗ ಕಾರ್ಯಕರ್ತರು ಒಟ್ಟಾಾಗಿ ಕೆಲಸ ಮಾಡುತ್ತಿಿದ್ದಾಾರೆ. ಬಿಜೆಪಿ ಸರಕಾರದ ಅವಧಿಯಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿಿಗೆ ಈಗಾಗಲೇ 761 ರು. ಅನುದಾನ ಬಿಡುಗಡೆ ಮಾಡಿದ್ದಾಾರೆ. ಮುಂದೆ ನನ್ನ ಕ್ಷೇತ್ರದ ಅಭಿವೃದ್ಧಿಿಗೆ ಹೆಚ್ಚಿಿನ ಅನುದಾನ ನೀಡುವ ಭರವಸೆ ಇದೆ. 115 ಹಳ್ಳಿಿ ವ್ಯಾಾಪ್ತಿಿಯ ಬಹುತೇಕ ಗ್ರಾಾಮಗಳು ನನ್ನ ಕ್ಷೇತ್ರದ ವ್ಯಾಾಪ್ತಿಿಯಲ್ಲಿ ಬರುವುದರಿಂದ ಹೆಚ್ಚಿಿನ ಅಭಿವೃದ್ಧಿಿ ಬೇಕಾಗಿದೆ. ಇದಕ್ಕೆೆ ಬಿಎಸ್‌ವೈ ಸಹಕಾರ ನೀಡುವ ನಂಬಿಕೆ ಇದೆ. ಪಂಚಾಯಿತಿಗಳ ವ್ಯಾಾಪ್ತಿಿಯಲ್ಲಿ ಕುಡಿಯುವ ನೀರು, ರಸ್ತೆೆ ಸೌಕರ್ಯ ಒದಗಿಸಲು ಅಗತ್ಯವಾದ ಅನುದಾನವನ್ನು ಬಿಜೆಪಿ ಸರಕಾರ ಒದಗಿಸಲು ಬದ್ಧವಾಗಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತೇನೆ. ಕ್ಷೇತ್ರ ನಾನೇ ಕಟ್ಟಿಿದ್ದ ಕಾಂಗ್ರೆೆಸ್ ಕೋಟೆ. ಈಗ ಆ ಕೋಟೆಯನ್ನು ಭೇದಿಸುವುದೇ ನನ್ನ ಗುರಿ.

* ಕಾಂಗ್ರೆೆಸ್ ನಾಯಕರು ಪಕ್ಷಾಾಂತರಿಗಳಿಗೆ ಬುದ್ಧಿಿ ಕಲಿಸಿ ಎನ್ನುತ್ತಿಿದ್ದಾಾರಲ್ಲಾಾ?
ಪಕ್ಷಾಾಂತರಿಗಳಿಗೆ ಬುದ್ಧಿಿ ಕಲಿಸಲು ಜೆಡಿಎಸ್ ಮತ್ತು ಕಾಂಗ್ರೆೆಸ್ ನಾಯಕರಿಂದ ಸಾಧ್ಯವಿಲ್ಲ. ನನ್ನ ಕ್ಷೇತ್ರದ ಮತದಾರರು ಬುದ್ಧಿಿ ಕಲಿಸಬೇಕೇ ಹೊರತು ಬೇರೆ ಯಾರಿಂದಲೂ ಅದು ಸಾಧ್ಯವಿಲ್ಲ. ನಾನು ಯಾವ ಕಾರಣಕ್ಕೆೆ ಪಕ್ಷ ಬಿಟ್ಟಿಿದ್ದೇನೆ ಎಂಬುದು ಎಲ್ಲರಿಗೂ ಗೊತ್ತಿಿದೆ. ಮೈತ್ರಿಿ ಸರಕಾರದಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿಿ ಕಡೆಗಣಿಸಿದ್ದು ಮತ್ತು ಬಿಡಿಎ ಅಧ್ಯಕ್ಷನಾಗಿ ಕೆಲಸ ಮಾಡಲು ಬಿಡದೆ ಕಿರುಕುಳ ಕೊಟ್ಟ ಬಗ್ಗೆೆ ನನ್ನ ಕ್ಷೇತ್ರದ ಮತದಾರರಿಗೆ ಬೇಸರವಿದೆ. ಇದಕ್ಕಾಾಗಿ ಕ್ಷೇತ್ರದ ಮತದಾರರು ಜೆಡಿಎಸ್ ಮತ್ತು ಕಾಂಗ್ರೆೆಸ್ ಅಭ್ಯರ್ಥಿಗಳನ್ನು ತಿರಸ್ಕರಿಸಿ ಅಭಿವೃದ್ಧಿಿಗಾಗಿ ನನ್ನನ್ನು ಮತ್ತು ಬಿಜೆಪಿಯನ್ನು ಗೆಲ್ಲಿಸುತ್ತಾಾರೆ ಎಂಬ ವಿಶ್ವಾಾಸ

* ಬಿಜೆಪಿ ಮತ್ತು ನಿಮ್ಮ ನಡುವೆ ಹೊಂದಾಣಿಕೆ ಆಗಿದೆಯೇ?
ನಾನು ಬಿಜೆಪಿ ಸೇರಿದ್ದೇನೆ. ಬಿಜೆಪಿ ಕಾರ್ಯಕರ್ತರು ನನ್ನನ್ನು ಅಭ್ಯರ್ಥಿ ಎಂದು ಒಪ್ಪಿಿಕೊಂಡಿದ್ದಾಾರೆ. ಕ್ಷೇತ್ರದ ಎಲ್ಲ ಬಿಜೆಪಿ ನಾಯಕರು ನನ್ನ ಜತೆಗೆ ಕೆಲಸ ಮಾಡುತ್ತಿಿದ್ದಾಾರೆ. ಜಗ್ಗೇಶ್ ಸೇರಿದಂತೆ ಶೋಭಾ ಕರಂದ್ಲಾಾಜೆ ಮತ್ತಿಿತರ ನಾಯಕರು ನನ್ನ ಗೆಲುವಿಗೆ ಶ್ರಮಿಸುತ್ತಿಿದ್ದಾಾರೆ. ನನ್ನ ಜತೆಗಿದ್ದ ಕಾಂಗ್ರೆೆಸ್‌ನ ಬಹುತೇಕ ಕಾರ್ಯಕರ್ತರು ಬಿಜೆಪಿಗೆ ಸೇರುತ್ತಿಿದ್ದಾಾರೆ. ಬಿಜೆಪಿ ಮತ್ತು ನನ್ನ ಕಾರ್ಯಕರ್ತರ ನಡುವೆ ಇದ್ದ ಕೆಲವು ಸಣ್ಣಪುಟ್ಟ ಮನಸ್ತಾಾಪಗಳನ್ನು ಸಭೆ ನಡೆಸಿದ್ದೇನೆ. ಎಲ್ಲರೂ ಒಟ್ಟಾಾಗಿ ಕೆಲಸ ಮಾಡುತ್ತಿಿದ್ದಾಾರೆ. ಕಾಂಗ್ರೆೆಸ್‌ನ ಶೇ.70 ಕಾರ್ಯಕರ್ತರು ನಮ್ಮೊೊಡನೆ ಬಿಜೆಪಿಗೆ ಕೈಜೋಡಿಸುತ್ತಿಿದ್ದಾಾರೆ. ಹೀಗಾಗಿ, ಬಿಜೆಪಿ ನಾಯಕರು, ಕಾರ್ಯಕರ್ತರು ಮತ್ತು ನನ್ನ ಅಭಿಮಾನಿಗಳ ಬೆಂಬಲದಿಂದ ನಾನು ಮತ್ತೊೊಮ್ಮೆೆ ಗೆಲುವು ಸಾಧಿಸಿ ಶಾಸಕನಾಗಿ ಆಯ್ಕೆೆಯಾಗುತ್ತೇನೆ.

* ಕಾಂಗ್ರೆೆಸ್ ಭದ್ರಕೋಟೆ ಭೇದಿಸುವುದು ಹೇಗೆ?
ಕಾಂಗ್ರೆೆಸ್ ಭದ್ರಕೋಟೆಯಾಗಿ ಯಶವಂತಪುರ ರೂಪುಗೊಂಡಿದ್ದು ನನ್ನಿಿಂದಲೇ. ನಾನು ಕಳೆದ ಎರಡು ಬಾರಿ ಶಾಸಕನಾಗಿ, ಮತ್ತೆೆರಡು ಬಾರಿ ಸೋತ ಅಭ್ಯರ್ಥಿಯಾಗಿ ಪಕ್ಷವನ್ನು ಕಟ್ಟಿಿ ಬೆಳೆಸಿದ್ದೇನೆ. ಹೀಗಾಗಿಯೇ, ಭದ್ರಕೋಟೆಯಾಗಿದೆ. ಆ ಕೋಟೆ ಭೇದಿಸುವುದು ನನಗೆ ಕಷ್ಟವಲ್ಲ. ನನ್ನ ಜತೆಗಿದ್ದ ಬಹುತೇಕ ಕಾಂಗ್ರೆೆಸ್ ಕಾರ್ಯಕರ್ತರು ನನ್ನ ಜತೆಗೆ ಬಿಜೆಪಿಗೆ ಬರುತ್ತಿಿದ್ದಾಾರೆ. ಕಾಂಗ್ರೆೆಸ್‌ನಲ್ಲಿ ನನ್ನನ್ನೂ ಸೇರಿದಂತೆ ಉಳಿದ ಅನೇಕ ಶಾಸಕರನ್ನು ನಡೆಸಿಕೊಂಡ ರೀತಿಯ ಬಗ್ಗೆೆ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಇದರ ಜತೆಗೆ ಸರಕಾರ ಉಳಿಸಿಕೊಳ್ಳಲೇಬೇಕು ಎಂಬ ನಿರ್ಧಾರ ಬಿಜೆಪಿ ನಾಯಕರದ್ದಾಾಗಿದೆ. ಯಡಿಯೂರಪ್ಪ ಅವರು ಮುಂದಿನ ಮೂರೂವರೆ ವರ್ಷದ ಅವಧಿಯಲ್ಲಿ ಉತ್ತಮವಾಗಿ ಕೆಲಸ ಮಾಡಲಿದ್ದಾಾರೆ. ಇದಕ್ಕೆೆ ಅಗತ್ಯವಾದ ಸಹಕಾರವನ್ನು ನಾವೆಲ್ಲರೂ ನೀಡುತ್ತೇವೆ.ಜವರಾಯಿಗೌಡ ಬಾರಿಗೆ ಕೈ ಹಿಡಿಯಲಿದ್ದಾಾರೆ ಮತದಾರರು!

* ಚುನಾವಣೆ ಸಿದ್ಧತೆ ಹೇಗೆ ನಡೆಯುತ್ತಿಿದೆ?
ನಾನು ಸದಾ ಕ್ಷೇತ್ರದಲ್ಲೇ ಇರುವ ವ್ಯಕ್ತಿಿಯಾಗಿದ್ದು, ಎರಡು ಬಾರಿ ಸೋತಿದ್ದರೂ ಕ್ಷೇತ್ರದ ಮತದಾರರೊಂದಿಗೆ ಬಾಂಧವ್ಯ ಹೊಂದಿದ್ದೇನೆ. ಹೀಗಾಗಿ, ಹೊಸ ಸಿದ್ಧತೆಗಳ ಅವಶ್ಯಕತೆ ಇಲ್ಲ. ಆದರೆ, ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತಿಿದ್ದೇನೆ. ಮತದಾರರಿಗೆ ಮೋಸ ಮಾಡಿ ಮರುಚುನಾವಣೆ ನಡೆಯುವಂತೆ ಮಾಡಿದ ಶಾಸಕರಿಗೆ ಬುದ್ಧಿಿ ಕಲಿಸಲು ಜನತೆ ತಯಾರಾಗಿದ್ದು, ಅವರ ಬಳಿ ತೆರಳಿ ಮನವಿ ಮಾಡುತ್ತಿಿದ್ದೇನೆ. ಆಕ್ರೋೋಶಗೊಂಡಿರುವ ಕಾಂಗ್ರೆೆಸ್ ನನಗೆ ಸಹಕಾರ ನೀಡುವಂತೆ ಮನವಿ ಮಾಡಿದ್ದೇನೆ. ಕೆಲವರು ಸ್ವಯಂ ಪ್ರೇರಿತವಾಗಿ ನನಗೆ ಬೆಂಬಲ ವ್ಯಕ್ತಪಡಿಸುತ್ತಿಿದ್ದು, ಗೆಲ್ಲುವ ವಿಶ್ವಾಾಸ ನನಗಿದೆ. ಮೂರನೇ ಬಾರಿ ನನಗೆ ಶಾಸಕನಾಗಿ ಕೆಲಸ ಮಾಡುವ ಅವಕಾಶವನ್ನು ಜನತೆ ಮಾಡಿಕೊಡುತ್ತಾಾರೆ ಎಂಬ ವಿಶ್ವಾಾಸವಿದೆ.

* ನಾಯಕರ ಸಹಕಾರ ಹೇಗಿದೆ?
ಮೈತ್ರಿಿ ಸರಕಾರ ಪತನಕ್ಕೆೆ ಕಾರಣರಾಗಿ ರಾಜೀನಾಮೆ ನೀಡಿದ ಶಾಸಕರಿಗೆ ಬುದ್ಧಿಿ ಕಲಿಸಬೇಕು ಎಂದು ನಮ್ಮ ಪಕ್ಷದ ನಾಯಕರು ತೀರ್ಮಾನ ಮಾಡಿದ್ದಾಾರೆ. ರಾಷ್ಟ್ರೀಯ ವರಿಷ್ಠರಾದ ದೇವೇಗೌಡರು ಮತ್ತು ಮಾಜಿ ಕುಮಾರಸ್ವಾಾಮಿ ಅವರು ನಮ್ಮ ಕ್ಷೇತ್ರದ ಬಗ್ಗೆೆ ವಿಶೇಷ ಕಾಳಜಿ ವಹಿಸಿದ್ದಾಾರೆ. ಕ್ಷೇತ್ರದ ಅಭಿವೃದ್ಧಿಿಗೆ ತಾವು ಸಿಎಂ ಆಗಿದ್ದಾಾಗ ನೀಡಿದ ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಸ್ವತಃ ಕುಮಾರಸ್ವಾಾಮಿ ಅವರೇ ಕ್ಷೇತ್ರಕ್ಕೆೆ ಆಗಮಿಸುತ್ತಿಿದ್ದಾಾರೆ. ದೇವೇಗೌಡರು ಅನೇಕ ಪ್ರಚಾರ ಸಭೆಗಳಲ್ಲಿ ಭಾಗವಹಿಸುತ್ತಿಿದ್ದಾಾರೆ. ಇನ್ನು ಕ್ಷೇತ್ರದ ಮೂರೂ ಪಕ್ಷದ ಮುಖಂಡರು ಪಕ್ಷಾಾಂತರಿ ಶಾಸಕರಿಗೆ ಬುದ್ಧಿಿ ಕಲಿಸುವ ಪಣ ತೊಟ್ಟಿಿರುವುದು ನನ್ನ ಗೆಲುವಿಗೆ ಸಹಕಾರಿಯಾಗಲಿದೆ.

* ಗೆದ್ದರೆ ನಿಮ್ಮ ಯೋಜನೆಯೇನು?
ಕ್ಷೇತ್ರದಲ್ಲಿ ಅನೇಕ ಸಮಸ್ಯೆೆಗಳಿದ್ದು, ಬಗೆಹರಿಸುವ ನಿಟ್ಟಿಿನಲ್ಲಿ ನಾನು ಕೆಲಸ ಮಾಡುತ್ತೇನೆ. ಹೊರವಲಯದ ಪ್ರದೇಶವಾದ್ದರಿಂದ ಅನೇಕ ಅಭಿವೃದ್ಧಿಿ ಕಾಮಗಾರಿಗಳು ನಡೆಯಬೇಕಿದೆ. ನಾನು ಎರಡು ಬಾರಿ ಸೋಲು ಕಂಡಿದ್ದು, ಸೋತರೂ ಜನರೊಂದಿಗೆ ಇದ್ದುಕೊಂಡು ಕೆಲಸ ಮಾಡುತ್ತಿಿದ್ದೇನೆ. ನನಗೆ ಮೂರನೇ ಬಾರಿ ನನ್ನ ಕ್ಷೇತ್ರದ ಜನರು ಅಧಿಕಾರ ನೀಡುತ್ತಾಾರೆ ಎಂಬ ಭರವಸೆ ಇದೆ. ಕ್ಷೇತ್ರದ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸುವುದು, ಪಂಚಾಯಿತಿಗಳ ವ್ಯಾಾಪ್ತಿಿಯಲ್ಲಿ ಸೂಕ್ತ ಮೂಲಸೌಕರ್ಯಗಳನ್ನು ಕಲ್ಪಿಿಸಲು ಆದ್ಯತೆ ನೀಡುವುದು ನಗರದ ಸೆರಗಿಗೆ ಹೊಂದಿಕೊಂಡ ಹಳ್ಳಿಿಗಳಲ್ಲಿ ಶಿಕ್ಷಣಕ್ಕೆೆ ಮಹತ್ವ ನೀಡುವುದು ನನ್ನ ಗುರಿ. ಪ್ರೌೌಢಶಾಲೆ ಮತ್ತು ಕಾಲೇಜುಗಳ ಸ್ಥಾಾಪನೆಗೆ ಗಮನ ನೀಡುತ್ತೇನೆ.

* ಚುನಾವಣೆಗೆ ನಿಮ್ಮ ಪ್ರಮುಖಾಸ್ತ್ರವೇನು?
ಮೈತ್ರಿಿ ಸರಕಾರ ಬೀಳಿಸಲು ಪ್ರಯತ್ನ ನಡೆಸಿ ಪಕ್ಷಾಾಂತರ ಮಾಡಿದವರ ಬಗ್ಗೆೆ ಕ್ಷೇತ್ರದ ಜನತೆಗೆ ಬೇಸರವಿದೆ. ಕಳೆದ ಚುನಾವಣೆಯಲ್ಲಿ ನಾನು ಕೆಲವು ಮತಗಳ ಅಂತರದಲ್ಲಿ ಸೋತಿದ್ದೇನೆ. ಹೀಗಾಗಿ, ನನಗೆ ನನ್ನ ಪಕ್ಷದ ಕಾರ್ಯಕರ್ತರ ಬೆಂಬಲವಿದೆ. ಕಾಂಗ್ರೆೆಸ್ ಶಾಸಕರ ರಾಜೀನಾಮೆಗೆ ಬೇಸತ್ತು ಕಾಂಗ್ರೆೆಸ್‌ನ ಅನೇಕ ನಾಯಕರು ನನ್ನ ಜತೆಗೆ ಕೈಜೋಡಿಸಿದ್ದಾಾರೆ. ಎಸ್.ಟಿ.ಸೋಮಶೇಖರ್ ಬಂದಿರುವುದು ಇಷ್ಟವಿಲ್ಲದ ಅನೇಕ ನಾಯಕರು ನನ್ನೊೊಂದಿಗಿದ್ದಾಾರೆ. ಅವರು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರ ಬಗ್ಗೆೆ ಮಾತನಾಡಿದ ಕೆಟ್ಟ ಮಾತುಗಳನ್ನು ಅವರು ಮರೆತಿಲ್ಲ. ಹೀಗಾಗಿ, ಅವರಿಗೆ ಬುದ್ಧಿಿ ಕಲಿಸಬೇಕು ಎಂದು ತೀರ್ಮಾನಿಸಿದ್ದಾಾರೆ. ಜತೆಗೆ ನಾನು ಕ್ಷೇತ್ರದಲ್ಲಿಯೇ ಇದ್ದು ಅಭಿವೃದ್ಧಿಿ ಮಾಡುತ್ತೇನೆ ಎಂಬ ನಂಬಿಕೆಯಿರುವ ಮತದಾರರು ನನ್ನನ್ನು ಗೆಲ್ಲಿಸುತ್ತಾಾರೆ.

Leave a Reply

Your email address will not be published. Required fields are marked *

error: Content is protected !!