Friday, 2nd June 2023

ಬಿಟ್ ಕಾಯಿನ್: ಯಾರೇ ತಪ್ಪಿತಸ್ಥರಿದ್ದರೂ ತಕ್ಷಣ ಕ್ರಮ

– ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ
– ವಿಪಕ್ಷದವರ ಬಳಿ ದಾಖಲೆಗಳಿದ್ದರೆ ಕೊಡಲಿ

ಕೊಪ್ಪಳ: ನಮ್ಮ ಪಕ್ಷದ ರಾಜ್ಯ ನಾಯಕರು, ಶಾಸಕರು, ಸಚಿವರು ಸೇರಿದಂತೆ ಯಾರ ಮೇಲಾದರುಯ ಆಗಲು ಬಿಟ್ ಕಾಯಿನ್ ವಿಚಾರದಲ್ಲಿ ಅವರುಗಳ ಮೇಲೆ ಒಂದೇ ಒಂದು ಆರೋಪಗಳಿದ್ದರೆ ಕೂಡಲೇ ಆ ಬಗ್ಗೆ ಸೂಕ್ತ ದಾಖಲೆ ಕೊಡಲಿ ತಕ್ಷಣ ಅಂತವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸರ್ಕಾರ ರೆಡಿ ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಬುಧವಾರ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು, ಬಿಟ್ ಕಾಯಿನ್ ವಿಚಾರದಲ್ಲಿ ಕಾಂಗ್ರೆಸ್‌ನ ಸಿದ್ದರಾಮಯ್ಯ, ಡಿಕೆಶಿ, ಪ್ರಿಯಾಂಕ್ ಖರ್ಗೆ ಸ್ಪರ್ಧೆಗೆ ಇಳಿದವ ರಂತೆ ಮಾತಾಡುತ್ತಿದ್ದಾರೆ. ಆದರೆ ಇವರ್ಯಾರೂ ಕೂಡ ಒಂದೇ ಒಂದು ಒಂದು ತುಂಡು ಪೇಪರ್ ದಾಖಲೆ ಕೊಟ್ಟಿಲ್ಲ. ಸಿಎಂ ಬಗ್ಗೆ ಮಾತನಾಡಿದರೆ ಬಹಳ ದೊಡ್ಡವರಾಗುತ್ತೇವೆ ಎನ್ನುವ ಭ್ರಮೆಯಲ್ಲಿ ಇವರು ಇದ್ದಾರೆ. ನಿಮ್ಮ ಬಳಿ ದಾಖಲೆ ಇದ್ದರೆ ಕೊಡಿ. ಐಎಎಸ್ ಅಧಿಕಾರಿಗಳಿದ್ದರೂ ಸಹ ದಾಖಲೆ ಕೊಡಿ, ಸಚಿವರ ಹೆಸರಿದ್ದರೂ ಒಂದೇ ನಿಮಿಷದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಬಿಟ್ ಕಾಯಿನ್ ಕುರಿತು ಈಗಾಗಲೆ ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ. ಬಿಟ್ ಕಾಯಿನ್ ವಿಚಾರ ತನಿಖೆಯ ಆದೇಶದ ಕುರಿತು ಸಿಎಂ, ಗೃಹ ಸಚಿವರು ಯಾವಾಗ ಆದೇಶ ಮಾಡಬೇಕೋ ಅಗ ಮಾಡುತ್ತಾರೆ. ಸಿದ್ದರಾಮಯ್ಯನವರೆ ಬಿಟ್ ಕಾಯಿನ್ ವಿಚಾರ ದಲ್ಲಿ ಹಿಟ್ ಅಂಡ್ ರನ್ ಮಾಡಬೇಡಿ. ನಿಮ್ಮಲ್ಲಿ ದಾಖಲೆ ಇದ್ದರೆ ಈಗಲೇ ಕೊಡಿ. ನೀವೂ ವಕೀಲರೆ ತಾನೇ ಕೋರ್ಟ್‌ನಲ್ಲಿ ಕೇಸ್ ಹಾಕಿ. ಯಾರು ಬೇಡ ಅಂದವರು ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

2023ರ ಚುನಾವಣೆವರೆಗೂ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿ ಇರುತ್ತಾರೆ. ಅವರ ಬದಲಾವಣೆ ಇಲ್ಲ. ಕಾಂಗ್ರೆಸ್‌ನಲ್ಲೂ ಮೂರು ಮೂರು ಸಿಎಂರನ್ನು ಮಾಡಿದ್ದು ಉದಾಹರಣೆಯಿದೆ. ಇನ್ನು ಪ್ರಿಯಾಂಕ್ ಖರ್ಗೆ ಗೃಹ ಇಲಾಖೆ ವಸೂಲಿ ಇಲಾಖೆ ಎಂಬ ಮಾತು ತರವಲ್ಲ. ಅವರೇ ಅವರ ಭಾಗದಲ್ಲಿ ವಸೂಲಿ ಕಿಂಗ್ ಆಗಿದ್ದಾರೆ. ವಸೂಲಿ ದಂಧೆ ಅವರಿಗೆ ಚೆನ್ನಾಗಿ ಗೊತ್ತಿದೆ. ಹಾಗಾಗಿ ವಸೂಲಿ ಬಗ್ಗೆ ಮಾತನಾಡಿದ್ದಾರೆ. ಗೃಹ ಸಚಿವರಿಗೆ ವಸೂಲಿ ದಂಧೆ ಗೊತ್ತಿಲ್ಲ. ವಸೂಲಿಯೂ ಮಾಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದರು.

ಕಾಂಗ್ರೆಸ್ ಬದುಕಿದೆ, ನಾವು ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ನವರು ಮಾತನಾಡು ತ್ತಿದ್ದಾರೆ. ವಿವಿಧ ಉಪಚುನಾವಣೆಯಲ್ಲಿ ನಾವು ಗೆದ್ದಿದ್ದೇವೆ. ಕಾಂಗ್ರೆಸ್ ಮುಳುಗಿ ಹೋಗುವ ಹಡಗು. ಹಾನಗಲ್‌ನಲ್ಲೂ ಅವರು ಸೋತಿ ದ್ದರೆ ಕಾಂಗ್ರೆಸ್ ಕಥೆ ಮುಗಿದು ಹೋಗುತ್ತಿತ್ತು. ಪ್ರಚಾರಕ್ಕಾಗಿ ಪ್ರತಿ ದಿನವೂ ಮಾತನಾಡು ತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವೇಳೆ ಸಚಿವ ಹಾಲಪ್ಪ ಆಚಾರ್, ಸಿ.ವಿ. ಚಂದ್ರಶೇಖರ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!