Tuesday, 30th May 2023

ಶ್ರೀಕಿ, ಬಿಟ್ ಕಾಯಿನ್ ಬಗ್ಗೆ ಉತ್ತರಿಸದ ಸಿಎಂ

Bommai

ಕೊಪ್ಪಳ : ಬಿಟ್ ಕಾಯಿನ್ ಬುಕ್ಕಿ ಶ್ರೀಕಿ ಕಣ್ಮರೆಯಾಗಿದ್ದರೆ ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾರಿಕೆ ಉತ್ತರ ನೀಡುವ ಮೂಲಕ ಪಲಾಯನ ಮಾಡಿದರು.

ಕೊಪ್ಪಳದ ಏರೋಡ್ರೋಮ್ ನಲ್ಲಿ ಮಾತನಾಡಿ, ಶ್ರೀಕಿ ಕಣ್ಮರೆಯಾಗಿದ್ದಾರೆ ಎನ್ನುವ ಪ್ರಶ್ನೆಗೆ ನೇರವಾಗಿ ಉತ್ತರಿಸದ ಅವರು, ಅದನ್ನೆಲ್ಲ ಪೊಲೀಸರು ನೋಡಿಕೊಳ್ಳುತ್ತಾರೆ ಎಂದು ಹೇಳುತ್ತಲೇ ನಡೆದೇ ಬಿಟ್ಟರು.

ಸುದ್ದಿಗಾರರು ಎಷ್ಟೇ ಕೂಗಿದರು ಅವರು ಪ್ರತಿಕ್ರಿಯೆ ನೀಡಲಿಲ್ಲ. ಇದಕ್ಕೂ ಮೊದಲು ಮಾತನಾಡಿದ ಅವರು, ರಾಜ್ಯಾದ್ಯಂತ ಬೆಳೆ ಹಾನಿ ಸಮೀಕ್ಷೆ ನಡೆಯುತ್ತಿದೆ. ಅದು ಮುಗಿ ಯುತ್ತಿದ್ದಂತೆ ಹಣಕಾಸು ಇಲಾಖೆಯೊಂದಿಗೆ ಚರ್ಚೆ ಮಾಡಿ ಪರಿಹಾರ ನೀಡಲಾಗುವುದು ಎಂದರು.

ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿವೆ. ಹೀಗಾಗಿ ಬಿಜೆಪಿ ನಾಲ್ಕು ತಂಡಗಳಲ್ಲಿ ಪ್ರಚಾರಕ್ಕೆ ಸೂಚನೆ ನೀಡಿದೆ. ಹೀಗಾಗಿ ನಾನು ಕೊಪ್ಪಳದಲ್ಲಿ ಚಾಲನೆ ನೀಡುತ್ತಿದ್ದೇನೆ. ಇನ್ನು ಟಿಕೇಟ್ ಯಾರಿಗೆ ನೀಡಬೇಕು ಎಂದು ರಾಜ್ಯದಿಂದ ಪಟ್ಟಿ ಫೈನಲ್ ಮಾಡಿ ಕೇಂದ್ರಕ್ಕೆ ಕಳಿಸಲಾಗಿದೆ. ಅಲ್ಲಿಂದ ಮರಳಿ ಬಂದ ತಕ್ಷಣ ಘೋಷಣೆ ಮಾಡಲಾಗು ವುದು ಎಂದರು.

ಈ ವೇಳೆ, ಸಚಿವ ಮುರುಗೇಶ ನಿರಾಣಿ, ಕೇಂದ್ರ ಸಚಿವ ಭಗವಂತ ಖೂಬ, ಸಂಸದ ಸಂಗಣ್ಣ ಕರಡಿ ಸೇರಿ ಹಲವರು ಇದ್ದರು.

error: Content is protected !!