Friday, 19th July 2024

ಮೃತ ಚಾಲಕನ ಕುಟುಂಬಕ್ಕೆ ಸಾಂತ್ವನ: ಪರಿಹಾರ ಚೆಕ್‌ ವಿತರಣೆ

ಬಾಗಲಕೋಟ : ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಬಾಜಪೇಯಿ ರವರು ಜಮಖಂಡಿಯಲ್ಲಿ ರುವ ಮೃತ ಚಾಲಕ ಜಮಖಂಡಿ ಘಟಕದ ಚಾಲಕ ನಬೀದ ರಸುಲ್ ಕೆ ಅವಟಿಯವರ ಕುಟುಂಬದವರನ್ನು ಭೇಟಿ ಮಾಡಿ, ತೀವ್ರ ಸಂತಾಪ ವ್ಯಕ್ತಪಡಿಸಿ, ಮೃತ ಚಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿ ರೂ 30 ಲಕ್ಷ ಪರಿಹಾರ ನೀಡಿರುತ್ತಾರೆ.

ಈ ಸಂದರ್ಭದಲ್ಲಿ ಕ್ಯಾಪ್ಟನ್ ಆರ್. ರಾಜೇಂದ್ರ , ಜಿಲ್ಲಾಧಿಕಾರಿಗಳು , ಹಾಗೂ ಶ್ರೀ.ಲೋಕೇಶ್, ಪೊಲೀಸ್ ವರಿಷ್ಠಾಧಿಕಾರಿಗಳು,
ಬಾಗಲಕೋಟೆ ರವರುಗಳು ಹಾಜರಿದ್ದರು.

ಜಮಖಂಡಿ ಘಟಕದ ಚಾಲಕ ನಬೀದ ರಸುಲ್ ಕೆ ಅವಟಿರವರು (59) ವಿಜಾಪುರದಿಂದ ಜಮಖಂಡಿ ಮಾರ್ಗದ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ, ದುಷ್ಕಮಿ೯ಗಳು ಬಸ್ಸಿಗೆ ಕಲ್ಲೆಸೆದ ಪರಿಣಾಮ, ಚಾಲಕನಿಗೆ ಗಂಭೀರ ಗಾಯವಾಗಿ ತೀವ್ರ ರಕ್ತಸ್ರಾವದಿಂದ ಜಮಖಂಡಿಯಲ್ಲಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.

 

Leave a Reply

Your email address will not be published. Required fields are marked *

error: Content is protected !!