Saturday, 23rd September 2023

ಕ್ರೀಡಾಂಗಣ ಕಾಮಗಾರಿ ಪರಿಶೀಲಿಸಿದ ಪರಮೇಶ್ವರ್

ತುಮಕೂರು: ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ 52 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗು ತ್ತಿರುವ ಸಿಂಥೆಟಿಕ್ ಟ್ರ್ಯಾಕ್ ಸೇರಿದಂತೆ ಆಧುನಿಕ ಸೌಲಭ್ಯವುಳ್ಳ ಕ್ರೀಡಾಂಗಣ ನಿರ್ಮಾಣ ಕಾಮಗಾರಿಯನ್ನು ಮಾಜಿ ಉಪಮುಖ್ಯಮಂತ್ರಿ ಹಾಗೂ ಕರ್ನಾಟಕ ರಾಜ್ಯ ಅಮೆಚೂರ್ ಅಥ್ಲೇಟಿಕ್ ಅಸೊಸಿಯೇಷನ್ ಅಧ್ಯಕ್ಷ ಶಾಸಕ ಡಾ. ಜಿ. ಪರಮೇಶ್ವರ್ ಪರಿಶೀಲನೆ ನಡೆಸಿದರು.

ನಗರದ ಮಹಾತ್ಮಗಾಂಧಿ ಕ್ರೀಡಾಂಗಣಕ್ಕೆ ಶಾಸಕ ಜ್ಯೋತಿಗಣೇಶ್ ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಾಜಿ ಉಪಮುಖ್ಯ ಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಕ್ರೀಡಾಂಗಣದಲ್ಲಿ ನಿರ್ಮಿಸಲಾಗುತ್ತಿರುವ ಸಿಂಥೆಟಿಕ್ ಟ್ರ್ಯಾಕ್ ಕೊಠಡಿಗಳು, ಜಿಮ್ನಾಸ್ಟಿಕ್, ಫುಟ್ಬಾಲ್ ಕೋರ್ಟ್ ಸೇರಿದಂತೆ ಎಲ್ಲವನ್ನು ವೀಕ್ಷಿಸಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಭಾರತ ದಲ್ಲೇ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿಕೊoಡoತೆ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂಬ ಪ್ರಸ್ತಾವನೆಯನ್ನು ನಾನು ಸಚಿವನಾಗಿದ್ದ ಅವಧಿಯಲ್ಲಿ ರಾಜ್ಯ ಸರ್ಕಾರದ ಮುಂದೆ ಇಡಲಾಗಿತ್ತು.

ಅದೇ ಸಂದರ್ಭದಲ್ಲಿ ತುಮಕೂರು ಸ್ಮಾರ್ಟ್ಸಿಟಿ ಯೋಜನೆಗೆ ಆಯ್ಕೆಯಾಗಿತ್ತು. ಈ ಎಲ್ಲ ಸಂದರ್ಭವನ್ನು ಬಳಸಿಕೊಂಡು 52 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕ್ರೀಡಾಂಗಣವನ್ನು ಅತ್ಯಾಧುನಿಕವಾಗಿ ನಿರ್ಮಿಸಲಾಗುತ್ತಿದೆ ಎಂದರು. ರ್ನಾಟಕದಲ್ಲೇ ಅತ್ಯಾಧುನಿಕ ಸೌಲಭ್ಯವುಳ್ಳ ಕ್ರೀಡಾಂಗಣ ಇದಾಗಲಿದೆ. ಫುಟ್ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡಲು ಈ ಸ್ಟೇಡಿಯಂನಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.

ಈ ಕ್ರೀಡಾಂಗಣದಲ್ಲಿ ಸುಮಾರು 800 ಕ್ರೀಡಾಪಟುಗಳು ವಾಸ್ತವ್ಯ ಹೂಡಲು ಸಹ ಕೊಠಡಿಗಳನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ನಿರ್ಮಿಸಲಾಗುತ್ತಿದೆ. ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಕ್ರೀಡಾಕೂಟಗಳನ್ನು ನಡೆಸಲು ಈ ಕ್ರೀಡಾಂಗಣ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದರು.

ತುಮಕೂರಿನಲ್ಲಿ ಉತ್ತಮವಾದ ಕ್ರೀಡಾಂಗಣ ನಿರ್ಮಾಣವಾಗುತ್ತಿದೆ. ಈ ಕ್ರೀಡಾಂಗಣ ದಲ್ಲೇ ಅಂತಾರಾಷ್ಟಿçÃಯ ಕ್ರೀಡಾಕೂಟಗಳನ್ನು ನಡೆಸಲು ತುಂಬಾ ಅನುಕೂಲ ವಾಗಲಿದೆ. ಈ ನಿಟ್ಟಿನಲ್ಲಿ ಶಾಸಕ ಜ್ಯೋತಿಗಣೇಶ್ ಅವರು ಬಹಳ ಆಸಕ್ತಿ ವಹಿಸಿ ಸ್ಮಾರ್ಟ್ಸಿಟಿ ಯೋಜನೆಯಡಿ ಕ್ರೀಡಾಂಗಣವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದರು.

ಬಹಳ ಉತ್ತಮವಾದ ಕ್ರೀಡಾಂಗಣ ತುಮಕೂರಿಗೆ ಅವಶ್ಯಕತೆ ಇತ್ತು. ಆ ಕೆಲಸ ಈಗ ಆಗುತ್ತಿದೆ. ನಮ್ಮ ಜಿಲ್ಲೆಯ ಕ್ರೀಡಾಪಟುಗಳು ಅಂತಾರಾಷ್ಟಿçÃಯ ಮಟ್ಟಕ್ಕೆ ಹೋಗಲು ಈ ಕ್ರೀಡಾಂಗಣ ಸಹಕಾರಿಯಾಗಲಿದೆ ಎಂದರು. ಅಬ್ಬತ್ತನಹಳ್ಳಿಯ ಅಥ್ಲೆಟ್ ಪ್ರಿಯಾ ಮೋಹನ್ ಎಂಬ ಹುಡುಗಿ ಫ್ರಾನ್ಸ್ಗೆ ಹೋಗುತ್ತಿದ್ದಾರೆ. ಅವರಿಗೆ ನನ್ನ ಪ್ರೋತ್ಸಾಹ ಸದಾ ಇದ್ದೇ ಇರುತ್ತದೆ ಎಂದರು.

ಕAಠೀರವ ಸ್ಟೇಡಿಯಂಗೆ ಹೊಂದಿಕೊAಡAತೆ ತ್ರಿಸ್ಟಾರ್ ಹೋಟೆಲ್ ನಿರ್ಮಿಸುವಂತೆ ಸರ್ಕಾರದ ಮುಂದೆ ನಾವು ಪ್ರಸ್ತಾವನೆ ಇಟ್ಟಿದ್ದೇವೆ. ಸುಮಾರು 2 ಸಾವಿರ ಕೋಟಿ ಇನ್ವೆಸ್ಟ್ಮೆಂಟ್ನ ಪ್ರಸ್ತಾವನೆ ಇದಾಗಿದೆ. ಇನ್ನು ಸರ್ಕಾರ ಈ ಪ್ರಸ್ತಾವನೆಗೆ ಅನುಮತಿ ನೀಡಿಲ್ಲ ಎಂದ ಅವರು ತಿಳಿಸಿದರು.

ವಿದೇಶಗಳಲ್ಲಿ ಸ್ಟೇಡಿಯಂಗಳಲ್ಲಿ ಫೈಸ್ಟಾರ್, ತ್ರಿಸ್ಟಾರ್ ಹೋಟೆಲ್ಗಳನ್ನು ಆರಂಭಿಸಿ, ಅದರಲ್ಲಿ ಬರುವ ಆದಾಯವನ್ನು ಕ್ರೀಡಾಂಗಣದ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತದೆ. ಅದೇ ರೀತಿ ನಮ್ಮಲ್ಲೂ ಮಾಡುವ ಚಿಂತನೆ ನಡೆಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು. ಮಕ್ಕಳು ಸರಿ ದಾರಿಯಲ್ಲಿ ನಡೆಯಲು, ಶಿಸ್ತಿನಿಂದ ಬೆಳೆಯಲು ಕ್ರೀಡೆ ಅತ್ಯವಶ್ಯಕವಾಗಿದೆ. ಹಾಗಾಗಿ ಕ್ರೀಡೆಯಲ್ಲಿ ನಮ್ಮ ರಾಜ್ಯಕ್ಕೆ ಹೆಸರು ತರಲು ಹಣ ಖರ್ಚು ಮಾಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದೇವೆ ಎಂದು ಅವರು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯೇ ನಡೆಯುತ್ತಿಲ್ಲ. ಬಿಪಿಎಡ್, ಸಿಪಿಎಡ್ ವ್ಯಾಸಂಗ ಮಾಡಿರು ವವರು ಮನೆಯಲ್ಲಿ ಉಳಿಯುವಂತಾಗಿದೆ. ಹಾಗಾಗಿ ಈ ನಿಟ್ಟಿನಲ್ಲಿ ಗಮನ ಹರಿಸಿ ಕ್ರೀಡೆಗೆ ಹೆಚ್ಚು ಒತ್ತು ನೀಡುವಂತೆ ಮುಖ್ಯಮಂತ್ರಿ ಗಳನ್ನು ಒತ್ತಾಯಿಸುವುದಾಗಿ ಅವರು ಹೇಳಿದರು.

ತಾಲ್ಲೂಕು ಕೇಂದ್ರಗಳಲ್ಲಿ ಇಂತಹ ಕ್ರೀಡಾಂಗಣಗಳನ್ನು ನಿರ್ಮಿಸಲು ಆಗುವುದಿಲ್ಲ. 400 ಮೀಟರ್ ಅಳತೆಯ ಕ್ರೀಡಾಂಗಣಗಳು ನಿರ್ಮಾಣ ವಾಗಿವೆ. ನಮ್ಮ ಮಕ್ಕಳು ಅಂತಾರಾಷ್ಟಿçÃಯ ಮಟ್ಟಕ್ಕೆ ಹೋಗಲು ಇಂತಹ ಸೌಲಭ್ಯಗಳನ್ನು ಒದಗಿಸಬೇಕಾಗಿದೆ. ಹಾಗಾಗಿ ಜಿಲ್ಲಾ ಮಟ್ಟದಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಕ್ರೀಡಾಂಗಣ ನಿರ್ಮಾಣದ ಅವಶ್ಯಕತೆ ಇದೆ. ಅತ್ಯಾಧುನಿಕ ಸೌಲಭ್ಯದ ಕ್ರೀಡಾಂಗಣ ತುಮಕೂರು ಜಿಲ್ಲೆಯ ಕ್ರೀಡಾಪಟುಗಳಿಗೆ ದೊರೆಯುತ್ತಿದೆ. ಇದನ್ನು ಉಪಯೋಗಿಸಿಕೊಂಡು ಜಿಲ್ಲೆಯ ಕ್ರೀಡಾಪಟುಗಳು ಅಂತಾರಾ ಷ್ಟಿçÃಯ ಮಟ್ಟಕ್ಕೆ ಹೋಗಬೇಕು ಎಂದು ಸಲಹೆ ಮಾಡಿದರು.

ಕ್ರೀಡಾಂಗಣದ ಉದ್ಘಾಟನೆಗೆ ಮುಖ್ಯಮಂತ್ರಿಗಳು, ಕೇಂದ್ರ ಸಚಿವರುಗಳು, ರಾಷ್ಟಿçÃಯ ಕ್ರೀಡಾಪಟುಗಳು ಎಲ್ಲರನ್ನು ಆಹ್ವಾನಿಸ ಲಾಗುವುದು. ಜತೆಗೆ ಅಂತಾರಾಷ್ಟಿçÃಯ ಚಾಂಪಿಯನ್ ಶಿಫ್ನ್ನು ಸಹ ಮಾಡಲಾಗುವುದು ಎಂದರು.

ಶಾಸಕ ಜ್ಯೋತಿಗಣೇಶ್ ಮಾತನಾಡಿ, ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಜಿ. ಪರಮೇಶ್ವರ್ ಅವರು ಇಂದು ಕ್ರೀಡಾಂಗಣದ ಕಾಮಗಾರಿಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಏನಾದರೂ ಬದಲಾವಣೆ ಅಗತ್ಯವಿದ್ದರೆ ಅವರಿಂದ ಸಲಹೆ-ಸೂಚನೆ ಪಡೆದು ಆ ಕೆಲಸವನ್ನು ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಮೋಹನ್ಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನರಸಿಂಹರಾಜು, ಪಾಲಿಕೆ ವಿಪಕ್ಷ ನಾಯಕ ಜೆ. ಕುಮಾರ್, ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ಪ್ರಭಾಕರ್, ಹಿರಿಯ ಕ್ರೀಡಾಪಟುಗಳಾದ ಬಾಲಾಜಿ, ವೇಣುಗೋಪಾಲ್, ಆನಂದ್, ಗುರುಪ್ರಸಾದ್, ಪ್ರದೀಪ್, ಶಿವಪ್ರಸಾದ್, ಸುಧೀರ್ ದೇವದಾಸ್, ಮಲ್ಲಣ್ಣ, ಅನಿಲ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!