Sunday, 24th September 2023

ಗಬ್ಬು ನಾರುತ್ತಿದೆ ದಿಬ್ಬೂರು ದೇವರಾಜ ಅರಸು ಬಡಾವಣೆ

ತುಮಕೂರು: ದಿಬ್ಬೂರು ದೇವರಾಜು ಅರಸು ಬಡಾವಣೆ ನಿರ್ಮಾಣವಾಗಿ ಸುಮಾರು ಮೂರು ವರ್ಷಗಳ ಅವಧಿಯೆ ಕಳೆದುಹೋಗಿದೆ.

ಸುಮಾರು ಮೂರು ಸಾವಿರಕ್ಕೂ ಅಧಿಕ ಜನಸಂಖ್ಯೆ ದಿಬ್ಬೂರು ದೇವರಾಜ ಅರಸು ಬಡಾವಣೆ ಕೊಳಚೆ ಪ್ರದೇಶವಾಗಿ ಮಾರ್ಪಾಟು ಗೊಂಡಿದೆ. ಸುತ್ತಲೂ ಕಸ ಮಳೆ ಬಂದಾಗಲಂತೂ ತುಂಬಿಹರಿಯುವ ಚರಂಡಿ ಗಳಿಂದ ಕಸ ರಸ್ತೆಗೆ ಬಂದು ವಾತಾವರಣ ಕಲುಷಿತವಾಗಿದೆ ಇಲ್ಲಿ ಮಕ್ಕಳು ವಯೋವೃದ್ಧರು ವಯಸ್ಕರು ಮಹಿಳೆಯರು ಅತಿ ಹೆಚ್ಚಾಗಿ ವಾಸಿಸುತ್ತಿದ್ದು ಮೊದಲೇ ಕೊರೋನ ಆತಂಕದಲ್ಲಿ ಬದುಕುತ್ತಿರುವ ಜನರಿಗೆ ಕಸದ ಸಮಸ್ಯೆ ತುಂಬಾ ಆತಂಕ ಕಾರಿಯಾಗಿದೆ.

ಈಗಾಗಲೇ ಹಲವು ಬಾರಿ ಕಸದ ಮತ್ತು ಯುಜಿಡಿ ಸಂಪರ್ಕ ಕಲ್ಪಿಸುವ ಬಗ್ಗೆ ಮಹಾನಗರಪಾಲಿಕೆ ಆಯುಕ್ತರು ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದರು ಬಗೆಹರಿಯದ ಸಮಸ್ಯೆ.ಸುಮಾರು ಒಂದುವರೆ ತಿಂಗಳಿಂದ ಮಹಾ ನಗರಪಾಲಿಕೆಯ ಪೌರಕಾರ್ಮಿಕರ ಆಗಲೇ ಪಾಲಿಕೆಯ ಸಿಬ್ಬಂದಿಗಳನಾಗಲಿ ಮಾನ್ಯ ಆಯುಕ್ತರು ಕಳಿಸಿ ಕೊಟ್ಟಿ ರುವುದಿಲ್ಲ. ಅತಂತ್ರ ಸ್ಥಿತಿಯಿಂದ ಜನರಲ್ಲಿ ಮಾರಣಾಂತಿಕ ಕಾಯಿಲೆಗಳ ಆತಂಕ ಹೆಚ್ಚಾಗಿದ್ದು ಜಿಲ್ಲಾಧಿಕಾರಿ ಗಳು ದಿಬ್ಬೂರು ದೇವರಾಜ್ ಅರಸು ಬಡಾವಣೆಯ ನಾಗರಿಕರನ್ನು ರಕ್ಷಿಸಬೇಕು ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಕ್ರಮವಹಿಸಬೇಕೆಂದು ಒತ್ತಾಯಿಸಿ ದ್ದಾರೆ.

ಈಗಾಗಲೇ ಪಾಲಿಕೆ ಆಯುಕ್ತರ ಗಮನಕ್ಕೆ ತಂದಿದ್ದು ಸ್ಲಮ್ ಬೋರ್ಡ್ ಇಂದ ಪಾಲಿಕೆಗೆ ಹಸ್ತಾಂತರವಾಗಿಲ್ಲದ ಕಾರಣ ಕೆಲಸಗಳು ವಿಳಂಬವಾಗುತ್ತಿದೆ ಎಂಬುದಾಗಿ ಮಾನ್ಯ ಆಯುಕ್ತರು ಹೇಳಿರುವುದು ಖಂಡನೀಯವಾಗಿದೆ.

ತುಮಕೂರು ನಗರದ 35 ನೇ ವಾರ್ಡ್ ವ್ಯಾಪ್ತಿಯಲ್ಲಿ ಇರತಕ್ಕಂತ ತಳ ಸಮುದಾಯದ ಕುಟುಂಬಗಳನ್ನು ಇಲ್ಲಿ ತಂದು ಹಾಕಿರುವುದು ಸರಿಯಷ್ಟೇ ಆದರೆ ಮೂಲಭೂತವಾಗಿ ಉತ್ತಮ ವಾತಾವರಣ ನೀಡಬೇಕಾಗಿರುವುದು ಜಿಲ್ಲಾಡಳಿತದ ಜವಾಬ್ದಾರಿ ಎಂದು ಭಾವಿಸಿ ಮಹಾನಗರ ಪಾಲಿಕೆ ಮತ್ತು ಸ್ಲಮ್ ಬೋರ್ಡ್ ಇಲಾಖೆಗಳಲ್ಲಿ ಸಮನ್ವಯತೆ ಕಾಪಾಡಿಕೊಂಡು ಈ ಕಲುಷಿತ ವಾತಾವರಣದಿಂದ ರಕ್ಷಿಸಬೇಕೆಂದು ನಿವಾಸಿಗಳು ಒತ್ತಾಯಿಸಿದ್ದಾರೆ.

error: Content is protected !!