Friday, 19th April 2024

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ವಿಶೇಷ ರೈಲು

ಹಾವೇರಿ: ಜನವರಿ 6ರಿಂದ ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ನೈರುತ್ಯ ರೈಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ಏಲಕ್ಕಿ ನಗರಿ ಹೆಸರುವಾಸಿ ಹಾವೇರಿಯಲ್ಲಿ ಜನವರಿ 6 ರಿಂದ ಮೂರು ದಿನಗಳ ಕಾಲ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.

ಸಾಹಿತ್ಯ ಸಮ್ಮೇಳನಕ್ಕೆ ಈಗಾಗಲೇ ಸಿದ್ದತೆಗಳು ಪೂರ್ಣಗೊಂಡಿವೆ. ಇನ್ನು ಸಾಹಿತ್ಯ ಸಮ್ಮೇ ಳನ ಪ್ರಾರಂಭಕ್ಕೆ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಆದ್ದರಿಂದ ಸಾಹಿತ್ಯ ಸಮ್ಮೇಳನ ಕ್ಕಾಗಿಯೇ ನೈರುತ್ಯ ರೇಲ್ವೆ ಇಲಾಖೆ ವಿಶೇಷ ರೈಲುಗಳನ್ನು ಓಡಿಸಲು ನಿರ್ಧಾರ ಕೈ ಗೊಂಡಿದೆ.

ರೈಲುಗಳು ಸಂಚರಿಸುವ ಮಾರ್ಗಗಗಳ ವಿವರ

ನಂಬರ್‌ 20653ರ ರೈಲು ಕೆ.ಎಸ್ ಆರ್ ಬೆಂಗಳೂರು-ಬೆಳಗಾವಿ ಮಾರ್ಗವಾಗಿ ಜನವರಿ 5 ರಿಂದ 9 ರವರೆಗೆ ಸಂಚರಿಸಲಿದೆ. ಈ ರೈಲು ಬೆಳಗ್ಗೆ 2:28ಕ್ಕೆ ಹಾವೇರಿ ರೈಲು ನಿಲ್ದಾಣ ತಲಪ ಲಿದೆ. ನಂಬರ್ 20654ರ ರೈಲು ಬೆಳಗಾವಿ-ಕೆ.ಎಸ್.ಆರ್ ಬೆಂಗಳೂರು ಮಾರ್ಗವಾಗಿ ಜನವರಿ 5 ರಿಂದ 9 ರವರೆಗೆ ಸಂಚರಿಸಲಿದೆ. ಈ ರೈಲು ರಾತ್ರಿ 11:50ಕ್ಕೆ ಹಾವೇರಿ ರೈಲು ನಿಲ್ದಾಣ ತಲಪಲಿದೆ.

ರೈಲು ಹಾವೇರಿಗೆ ತಲುಪುವ ಸಮಯ

ನಂಬರ್‌ 22685ರ ರೈಲು ಜನವರಿ 7ಕ್ಕೆ ಮಾತ್ರ ಯಶವಂತಪುರ (ಬೆಂಗಳೂರು)-ಚಂದಿಗಡ ಮಾರ್ಗದ ರೈಲು ಸಾಯಂಕಾಲ7:18ಕ್ಕೆ ಹಾವೇರಿ ರೈಲು ನಿಲ್ದಾಣ ತಲಪಲಿದೆ. ನಂಬರ್ 22686 ಜನವರಿ 7 ರಂದು ಮಾತ್ರ ಚಂದಿಗಡ-ಯಶವಂತಪುರ (ಬೆಂಗಳೂರು) ಮಾರ್ಗದ ರೈಲು ರಾತ್ರಿ 11:18ಕ್ಕೆ ಹಾವೇರಿ ತಲುಪಲಿದೆ. ರೈಲು ಸಂಖ್ಯೆ 22498 ತಿರುಚನಪಲ್ಲಿ-ಗಂಗಾನಗರ ರೈಲು ಮಾರ್ಗವಾಗಿ ಜನವರಿ 6 ರಂದು ಮಾತ್ರ ಸಂಚರಿಸಲಿದೆ. ಈ ರೈಲು ಸಾಯಂಕಾಲ 5:58ಕ್ಕೆ ಹಾವೇರಿಗೆ ತಲುಪಲಿದೆ.

Read E-Paper click here

error: Content is protected !!