Friday, 2nd June 2023

ಹೆಲ್ಮೆಟ್ ಎಲ್ಲಿ ಸ್ವಾಮಿ?

ತುಮಕೂರು: ಜಿಲ್ಲೆಯ ಚಿ.ನಾ.ಹಳ್ಳಿ ತಾಲೂಕಿನ ಐತಿಹಾಸಿಕ ಕ್ಷೇತ್ರ ತಮ್ಮಡಿಹಳ್ಳಿ ಮಠಕ್ಕೆ ಪೋಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್ ಅವರು ದ್ವಿ ಚಕ್ರ ವಾಹನದಲ್ಲಿ ಪ್ರಯಾಣಿಸಿ ಕ್ಷೇತ್ರ ದರ್ಶನ ಮಾಡಿ ಸರಳತೆ ಮೆರೆದಿದ್ದಾರೆ. ಆದರೆ ಎಸ್ಪಿಯವರು ಹೆಲ್ಮೆಟ್ ಧರಿಸದೆ ಪ್ರಯಾಣಿಸಿರುವ ಬಗ್ಗೆ ಟೀಕೆ ವ್ಯಕ್ತವಾಗಿದೆ.

ಕಾನೂನು ರಕ್ಷಿಸಬೇಕಾದವರು ಕಾನೂನು ಉಲ್ಲಂಘಿಸಿದರೆ ಹೇಗೆ ಎಂಬ ಪ್ರಶ್ನೆ ಮೂಡಿದೆ?.

error: Content is protected !!