Saturday, 20th April 2024

ಜೆಡಿಎಸ್ ಪಕ್ಷಕ್ಕೆ ಲಿಂಗಪ್ಪ ದಢೆಸಗೂರು ರಾಜೀನಾಮೆ

ರಾಯಚೂರು: ಸಿಂಧನೂರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಲಿಂಗಪ್ಪ ದಢೆಸಗೂರು ರಾಜೀನಾಮೆ ಸಿಂಧನೂರು ಕಳೆದ 8 ವರ್ಷಗಳಿಂದ ಜೆಡಿಎಸ್ ತಾಲೂಕು ಅಧ್ಯಕ್ಷ ರಾಗಿದ್ದ ಲಿಂಗಪ್ಪ ದಡೇಸುಗೂರು ಪಕ್ಷಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಪ್ರತಿಯನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಹಾಕಿದ್ದಾರೆ.

ಪಕ್ಷದ ಒಬ್ಬ ನಾಯಕರಿಂದ ಮನಸ್ತಾಪ ಗೊಂಡು ನಾನು ರಾಜೀನಾಮೆ ಸಲ್ಲಿಸಿರುವು ದಾಗಿ ದೂರವಾಣಿ ಮೂಲಕ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ಗ್ರಾಮ ಪಂಚಾಯತಿ ಚುನಾವಣೆಯ ಪ್ರಚಾರ ಬಿರುಸಿನಿಂದ ಒಂದು ಕಡೆ ನಡೆದರೆ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜೀನಾಮೆ ಸಲ್ಲಿಸಿರುವುದರಿಂದ ಗ್ರಾಮ ಪಂಚಾಯಿತಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಎಷ್ಟು ವಿಜಯಶಾಲಿ ಆಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *

error: Content is protected !!