Saturday, 9th December 2023

ಅ.೧ಕ್ಕೆ ಸಿದ್ಧಗಂಗಾ ಆಸ್ಪತ್ರೆಯಿಂದ ಮ್ಯಾರಥಾನ್

ತುಮಕೂರು: ಹೃದಯ ಜಾಗೃತಿಗಾಗಿ ಸಿದ್ಧಗಂಗಾ ಆಸ್ಪತ್ರೆ ಅ.೧ ರಂದು ಆಯೋಜಿಸಿರುವ ೧೦ಕೆ ಮ್ಯಾರಥಾನ್ ಗೆ ಈಗಾಗಲೇ ೨ ಸಾವಿರಕ್ಕಿಂತ ಹೆಚ್ಚು ಜನರು ನೋಂದಣಿಯಾಗಿದ್ದು ಕರ್ನಾಟಕವಷ್ಟೇ ಅಲ್ಲದೆ ಉತ್ತರ ಭಾರತದ ಅನೇಕ ರಾಜ್ಯಗಳಿಂದ ಮ್ಯಾರಥಾನ್ ಸ್ಪರ್ಧಿ ಗಳು ಆಗಮಿಸುತ್ತಿದ್ದಾರೆ ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅ.೧ ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಸಿದ್ಧಗಂಗಾ ಮಠಾಧ್ಯಕ್ಷರಾದ  ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ದಿವ್ಯ ಉಪಸ್ಥಿತಿಯಿರ ಲಿದ್ದು, ಸಹಕಾರ ಸಚಿವ ಕೆ.ಎನ್.ರಾಜಣ್ಣ ಮ್ಯಾರಥಾನ್‌ಗೆ ಹಸಿರು ನಿಶಾನೆ ತೋರ ಲಿದ್ದಾರೆ. ಉಳಿದಂತೆ ಮುಖ್ಯಅಥಿತಿಗಳಾಗಿ  ಡಿಎಕ್ಸ್ ಮ್ಯಾಕ್ಸ್ ನ ಚೇರ್ಮನ್ ಡಾ.ಕೆ.ವಿ.ಸತೀಶ್, ಕೆಎಂಎಫ್ ಅಧ್ಯಕ್ಷ ಸಿ.ವಿ.ಮಹಾ ಲಿಂಗಯ್ಯ,ಶ್ರೀಆಟೋ ಸಂಸ್ಥೆಯ ಎಚ್.ಡಿ.ಶ್ರೀನಿವಾಸ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.
 ಹಿರಿಯ ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಎಚ್.ಎಂ., ಮಾತನಾಡಿ ೧೦ ಕಿ.ಮೀ, ೫ ಕಿ.ಮೀ,೨ ಕಿ.ಮೀ ವಿಭಾಗಗಳಲ್ಲಿ ಮ್ಯಾರಥಾನ್ ನಡೆಯಲಿದೆ.  ಸಿದ್ಧಗಂಗಾ ಆಸ್ಪತ್ರೆಯಿಂದ ಆರಂಭವಾಗುವ ೧೦ ಕೆ ಮ್ಯಾರಥಾನ್ ಭದ್ರಮ್ಮ ಸರ್ಕಲ್, ಟೌನ್‌ ಹಾಲ್, ಕಾಲ್‌ಟ್ಯಾಕ್ಸ್ ಸರ್ಕಲ್ ಮಾರ್ಗವಾಗಿ ಸದಾಶಿವನಗರದಿಂದ ಮರಳೂರು ಕೆರೆಯ ಸಮೀಪದ ರಿಂಗ್ ರೋಡ್‌ನಲ್ಲಿ ಎಡಕ್ಕೆ ತಿರುಗಿ ಗಾರೆನರಸಯ್ಯನ ಕಟ್ಟೆ ಬಳಸಿ, ನಳಂದ ಸ್ಕೂಲ್ ಮಾರ್ಗವಾಗಿ ರೈಲ್ವೇ ಅಂಡರ್ ಪಾಸ್ ಹಾಗೂ ದೋಬಿಘಾಟ್ ಮುಖಾಂತರ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಅಂತ್ಯವಾಗಲಿದೆ.
 ೫ ಕೆ ಮ್ಯಾರಥಾನ್‌ನಲ್ಲಿ ಸಿದ್ಧಗಂಗಾ ಆಸ್ಪತ್ರೆ-ಟೌನ್‌ಹಾಲ್-ಬಸ್ ನಿಲ್ದಾಣ-ಕೋಟೆ ಆಂಜನೇಯ ದೇವಸ್ಥಾನ-ಅಮಾನಿಕೆರೆ ಮಾರ್ಗವಾಗಿ ಶಿವಕುಮಾರಸ್ವಾಮೀಜಿ ಸರ್ಕಲ್ ಮುಖಾಂತರ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಅಂತ್ಯವಾಗಲಿದೆ. ಇನ್ನು ೨ಕೆ ಮ್ಯಾರ ಥಾನ್ ಸಿದ್ಧಗಂಗಾ ಆಸ್ಪತ್ರೆ-ಭದ್ರಮ್ಮ ಸರ್ಕಲ್ ಮುಖಾಂತರ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಅಂತ್ಯವಾಗಲಿದೆ ಎಂದು ಮಾಹಿತಿ ನೀಡಿದರು. ಹೃದ್ರೋಗ ತಜ್ಞ ಡಾ.ಶರತ್‌ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!