ಚಿತ್ರದುರ್ಗ: ಟೊಮೆಟೋ ವ್ಯಾಪಾರಿಯೊಬ್ಬ ಉತ್ತರ ಕರ್ನಾಟಕದ ರೈತನಿಂದ ಖರೀದಿ ಮಾಡಿದ ಟೊಮೆಟೋವನ್ನು ರಸ್ತೆ ಪಕ್ಕದಲ್ಲಿ ಸುರಿದಿದ್ದಾನೆ.
ಈ ಘಟನೆಯಿಂದ ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ, ಉತ್ತಮ ಆದಾಯದ ನಿರೀಕ್ಷೆ ಯಲ್ಲಿದ್ದ ರೈತರಿಗೆ ಬರಸಿಡಿಲು ಬಡಿದಂತಾಗಿದೆ.
ಟೊಮೆಟೋ ಖರೀದಿಸಿ ಬೆಂಗಳೂರು ಎಪಿಎಂಸಿ ಮಾರುಕಟ್ಟೆಗೆ ಕೊಂಡೊಯ್ಯುತ್ತಿರುವಾಗ ಬೆಲೆ ಕುಸಿತದ ಸುದ್ದಿ ಕೇಳಿ ಚಿತ್ರದುರ್ಗ ಹಿರಿಯೂರು ತಾಲೂಕಿನ ಹರ್ತಿಕೋಟೆ ಗ್ರಾಮದ ಬಳಿ ನೂರಾರು ಕ್ರೆಟ್ ಟೊಮೆಟೋವನ್ನು ಸುರಿದು ಹೋಗಿರುವ ಘಟನೆ ನಡೆದಿದೆ.
ಅವಿನಾಶ್ ಎನ್ನುವ ವ್ಯಾಪಾರಿ ರೈತರಿಂದ ಟೊಮೆಟೋ ಖರೀದಿಸಿಕೊಂಡು ಬೀದರ್‌ನಿಂದ ಬೆಂಗ ಳೂರಿಗೆ ಲಾರಿಯಲ್ಲಿ ಹೊರಟಿದ್ದರು. ಬೀದರ್‌ನಿಂದ ಬೆಂಗಳೂರಿಗೆ ಟೊಮೆಟೋ ಕೊಂಡೊಯ್ಯುಲು ಒಂದು ಕ್ರೆಟ್ ಬಾಕ್ಸಿಗೆ 100 ರೂಪಾಯಿ ಬಾಡಿಗೆ ಕೊಡಬೇಕು. ಒಂದು ಬಾಕ್ಸಿಗೆ 50-60 ರೂಪಾಯಿ ಬರುತ್ತದೆ. ಅಲ್ಲಿಗೆ ತೆಗೆದುಕೊಂಡು ಹೋಗುವ ಬದಲು ಇಲ್ಲಿಯೇ ಸುರಿದರೆ ಉತ್ತಮ ಎಂದು ವ್ಯಾಪಾರಿ ರಸ್ತೆ ಬದಿ ಸುರಿದಿದ್ದಾನೆ.