ತುಮಕೂರು: ದೇಶಭಕ್ತಿಯಿಂದಾಗಿ ನಾನು ಹೆಮ್ಮೆಯಿಂದ ಆರ್.ಎಸ್.ಎಸ್ ಜತೆಗೆ ಗುರುತಿಸಿಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಒಂದು ದೊಡ್ಡ ದೇಶ ಭಕ್ತಿ ಸಂಸ್ಥೆಯೊಂದಿಗೆ ಕೈ ಜೋಡಿಸಿಕೊಂಡಿದ್ದೇನೆ, ಇದರಲ್ಲಿ ಅನುಮಾನವಿಲ್ಲ. ಸಿದ್ದರಾಮಯ್ಯ ಬಗ್ಗೆ ಕನಿಕರವಿದೆ. ಇವರು ಎಂತಹ ಸಂಸ್ಥೆ ಜತೆಗೆ ಕೈ ಜೋಡಿಸಿಕೊಂಡಿದ್ದೇವೆ ಅನ್ನೋದನ್ನು ಅವರೇ ಪ್ರಶ್ನೆ ಮಾಡಿಕೊಳ್ಳಬೇಕು.ಕೆಂಪಣ್ಣ ವಿರುದ್ಧ ಕ್ರಮಕ್ಕೆ ಹಿಂದೇಟು ಇಲ್ಲ ಬರುವ ದಿನಗಳಲ್ಲಿ ನೋಡಿ. ರ‍್ಕಾವತಿ ಡಿನೋಟೀಫೀಷನ್ ಪ್ರಕರಣ ಮತ್ತೆ ಓಪನ್ ವಿಚಾರವಾಗಿ ಈ ಬಗ್ಗೆ ಯಾವುದೇ ವಿಶೇಷ ರ‍್ಚೆಯಾಗಿಲ್ಲ.ಸುಳ್ಳು ಆರೋಪ ಮಾಡೋದಕ್ಕೆ ಏನೆಲ್ಲ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕೋ ಅದನ್ನು ಮಾಡ್ತೀವಿ.ಅದಕೆ ಮುನಿರತ್ನ ಮಾನನಷ್ಟ ಕೇಸ್ ಹಾಕ್ತಾರೆ ಎಂದರು.