Friday, 29th March 2024

ಸ್ವಚ್ಛ ಸರ್ವೇಕ್ಷಣ ಅಭಿಯಾನ: ಶಿವಮೊಗ್ಗ ಮಹಾನಗರ ಪಾಲಿಕೆ ಪ್ರಥಮ

ಶಿವಮೊಗ್ಗ : ಕೇಂದ್ರ ಸರ್ಕಾರ ಪ್ರತಿ ವರ್ಷ ನಡೆಸುವ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ರಾಜ್ಯದಲ್ಲೇ ಶಿವಮೊಗ್ಗ ಮಹಾನಗರ ಪಾಲಿಕೆಯು ರಾಜ್ಯದಲ್ಲೇ ಅತಿ ಹೆಚ್ಚು ಅಂಕಗಳಿಸಿ ಪ್ರಥಮ ಸ್ಥಾನ ಪಡೆದುಕೊಂಡಿರು ವುದು ಭಾರೀ ಹೆಗ್ಗಲಿಕೆಗೆ ಪಾತ್ರವಾಗಿದೆ.

2022 ಸ್ವಚ್ಛ ಸರ್ವೇಕ್ಷಣ ಅಭಿಯಾನ ಹಲವು ವಿಚಾರಗಳಲ್ಲಿ ಶಿವಮೊಗ್ಗ ಜಿಲ್ಲೆಯ ಪಾಲಿಕೆ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ತಿಳಿಸಿದ್ದಾರೆ.

1) ಬಯೋ ಮೆಥನೇಷನ್ ಘಟಕ.
2) ಶೂನ್ಯ ತ್ಯಾಜ್ಯ ವಿಲೇವಾರಿ ಘಟಕ.
3) ಹಸಿ ಮತ್ತು ಒಣ ಕಸ ವಿಂಗಡಿಸಲು ಡಸ್ಡ್ ಬಿನ್ ವಿತರಣೆ.

4) ವಾಹನ ಖರೀದಿ.
5) ಪಾರಂಪರಿಕ ತ್ಯಾಜ್ಯ ವಿಲೇವಾರಿ.

6) ಬಯಲು ಶೌಚ ಮುಕ್ತ
7) ಕಟ್ಟಡಗಳ ಭಗ್ನಾವಶೇಷ ತ್ಯಾಜ್ಯ
8) ಕಸಮುಕ್ತ ನಗರ
9) ದ್ರವ ತ್ಯಾಜ್ಯ ನಿರ್ವಹಣೆ.
10) ಮ್ಯಾನುವಲ್ ಸ್ಕ್ಯಾ‌ವೆಂಜಿಗ್ ಅಳವಡಿಸಿಕೊಂಡಿರುವುದು.

11) ಪೌರ ಕಾರ್ಮಿಕರಿಗೆ ಬೆಳಗ್ಗೆ ತಿಂಡಿ ವಿತರಣೆ ಹೀಗೆ ಅನೇಕ ‌ ನಿಗಮ ರಚನೆ ಮಾಡಲಾಗಿದೆ.

ರಾಷ್ಟ್ರಪತಿಯವರು ಪ್ರಶಸ್ತಿ ನೀಡಲಿದ್ದಾರೆ. ಪ್ರಶಸ್ತಿಯನ್ನು ಪಡೆಯಲು ಮೇಯರ್, ಆಯುಕ್ತರು, ರಾಜ್ಯ ಸಚಿವರು ಭಾಗವಹಿಸ ಲಿದ್ದಾರೆ.

error: Content is protected !!