Friday, 19th April 2024

ತಲಕಾವೇರಿಯಲ್ಲಿ ತೀಥ೯ರೂಪಿಣಿಯಾದ ಕಾವೇರಿ ಮಾತೆ

ಮಡಿಕೇರಿ: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಶನಿವಾರ ಬೆಳಗ್ಗೆ 7 ಗಂಟೆ 5 ನಿಮಿಷಕ್ಕೆ ಸರಿ ಯಾಗಿ ಕಾವೇರಿ ತೀಥೋ೯ದ್ವವ ಜರುಗಿತು.
ಕೊವೀಡ್ -19 ಹಿನ್ನಲೆಯಲ್ಲಿ ಅತ್ಯಂತ ಕಡಮೆ ಭಕ್ತರು ತೀಥೋ೯ದ್ವವ ಸಾಕ್ಷೀಕರಿಸಿದರು. ಜಿಲ್ಲಾ ಡಳಿತವು ತಲಕಾವೇರಿ ಕ್ಷೇತ್ಪಕ್ಕೆ ಬರುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿತ್ತು.
ಹೊರರಾಜ್ಯದಿಂದ ಭಕ್ತರು ಈ ವಷ೯ ತಲಕಾವೇರಿಗೆ ಬಂದಿರಲಿಲ್ಲ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ  ವಿ.ಸೋಮಣ್ಣ ಸೇರಿ ದಂತೆ ಸ್ಥಳೀಯ ಜನಪ್ರತಿನಿಧಿಗಳು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ದರು. ತೀಥೋ೯ದ್ವವ ಸಂದಭ೯ ಜೈಜೈ ಮಾತಾ ಕಾವೇರಿ ಮಾತಾ ಎಂಬ ಭಕ್ತರ ಉದ್ಗೋಷ ಕೇಳಿ ಬಂತು.
ಗೋಪಾಲಕೖಷ್ಣ ಆಚಾರ್ ನೇತೖತ್ವದಲ್ಲಿ ಅಚ೯ಕರು ಪೂಜಾಕೈಂಕಯ೯ ಕೈಗೊಂಡಿದ್ದರು. ನಿಗಧಿತ ಮುಹೂತ೯ವಾಗಿದ್ದ 7 ಗಂಟೆ 3 ನಿಮಿಷದ ಬದಲಿಗೆ ಎರಡು ನಿಮಿಷ ತಡವಾಗಿ 7 ಗಂಟೆ 5 ನಿಮಿಷಕ್ಕೆ ಸರಿಯಾಗಿ ಬ್ರಹ್ಮ ಕುಂಡಿಕೆಯಲ್ಲಿ ಕಾವೇರಿಯು ನಿಧಾನಕ್ಕೆ ಉಕ್ಕುತ್ತಾ ಬಂದು ತೀಥ೯ ರೂಪಿಣಿಯಾದಳು.  ಕಾವೇರಿ ಕುಂಡಿಕೆಯ ಮುಂದಿನ ಕೊಳಕ್ಕೆ ಭಕ್ತರಿಗೆ ಪ್ರವೇಶಿಸಲು ಅವಕಾಶವನ್ನು ಪೊಲೀಸರು ನಿಭ೯ಂಧಿಸಿ ದ್ದರು.
ಸಾಂಪ್ರದಾಯಿಕ ಉಡುಗೆ ಧರಿಸಿದ ಭಕ್ತರು ತಲಕಾವೇರಿ ಕ್ಷೇತ್ರಕ್ಕೆ ಬಂದು ತೀಥೋ೯ದ್ವವದ ಕ್ಷಣಗಳನ್ನು ಕಣ್ತುಂಬಿಕೊಂಡರು. ತಲಕಾವೇರಿ ಮತ್ತು ಭಾಗಮಂಡಲ ಕ್ಷೇತ್ರದಲ್ಲಿ ಪೊಲೀಸ್ ಸಪ೯ಗಾವಲು ಕಂಡುಬಂತು.

Leave a Reply

Your email address will not be published. Required fields are marked *

error: Content is protected !!