Saturday, 9th December 2023

ನ್ಯಾ. ವೆಂಕಟಾಚಲಯ್ಯಗೆ ಶ್ರೀದೇವಿ ರಮಣ ಮಹರ್ಷಿ ಪ್ರಶಸ್ತಿ ಸೆ.30 ಕ್ಕೆ 

ತುಮಕೂರು: ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸೆ.೩೦ ರಂದು ಶ್ರೀದೇವಿ ರಮಣಮಹರ್ಷಿ ಪುರಸ್ಕಾರ-೨೦೨೩ ಕಾರ್ಯಕ್ರಮ ಹಮ್ಮಿಕೊಂಡಿದ್ದು ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ ಎಂದು ಶ್ರೀ ದೇವಿಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ.ಎಂ.ಆರ್.ಹುಲಿನಾಯ್ಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದುರ್ಗಾಂಬಿಕಾದೇವಿಯ ಪ್ರತಿಷ್ಠಾಪನೆ ನೆನಪಿಗಾಗಿ ಕಳೆದ ಮೂರು ವರ್ಷಗಳಿಂದ ಶ್ರೀದೇವಿ ರಮಣಮಹರ್ಷಿ ಪುರಸ್ಕಾರ ನೀಡುತ್ತಾ ಬರಲಾಗು ತ್ತಿದ್ದು ಈ ಬಾರಿ ನ್ಯಾಯಮೂರ್ತಿಗಳಾದ ಎಂ.ಎನ್. ವೆಂಕಟಾಚಲಯ್ಯ ಅವರಿಗೆ ಪ್ರಶಸ್ತಿ ನೀಡಲಾಗುವುದು ಎಂದರು.
ಸೆ. ೩೦ ರ ಬೆಳಗ್ಗೆ ೧೧ ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪಮೊಯಿಲಿ ಪುರಸ್ಕೃತರಿಗೆ ಪ್ರಶಸ್ತಿ ವಿತರಣೆ ಮಾಡಲಿದ್ದು ಡಾ.ಕೆ.ಆರ್. ಕಮಲೇಶ್ ರಚಿಸಿರುವ ನ್ಯಾಯಮೂರ್ತಿ  ಎಂ.ಎನ್. ವೆ೦ಕಟಾಚಲಯ್ಯ ಅವರ ಜೀವನಚರಿತ್ರಯೆ ಕಿರುಹೊತ್ತಿಗೆ ಯನ್ನು ಸಚಿವ ಎಚ್.ಕೆ.ಪಾಟೀಲ್ ಲೋಕಾರ್ಪಣೆ ಮಾಡಲಿದ್ದಾರೆ.
ಬ್ರೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಂಸ್ಥಾಪಕ ಡಾ.ಎನ್.ಕೆ.ವೆಂಕಟರಮಣ ಆಶಯ ನುಡಿಗಳನ್ನಾಡಲಿದ್ದು ಸಮಾಜಸೇವಕ ಅಸಗೋಡು ಜಯಸಿಂಹ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

Leave a Reply

Your email address will not be published. Required fields are marked *

error: Content is protected !!