Monday, 20th January 2020

ಡಿಕೆಶಿ ಅಣ್ಣ ನನ್ನನ್ನು ಕ್ಷಮಿಸಿ…

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅಣ್ಣ ನನ್ನನ್ನು ಕ್ಷಮಿಸಿ, ನಾನು ಮುಗಿದು ಕೇಳುತ್ತೇನೆ. ಈ ವಿಚಾರದಲ್ಲಿ ನಾನು ಟೀಕೆ ಮಾಡುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಾಣ ಖಾತೆ ಸಚಿವ ಶ್ರೀರಾಮುಲು ಕ್ಷಮೆ ಕೋರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಜಾರಿ ನಿರ್ದೇಶನಾಲಯದ ವಿಚಾರಣೆಗೆ ಒಳಗಾಗಿರುವ ಡಿ.ಕೆ.ಶಿವಕುಮಾರ್ ಸೋಮವಾರ ಮಾಧ್ಯಮದ ಮುಂದೆ ಕಣ್ಣೀರು ಹಾಕಿ, ಕೆಲವರು ಉಪ್ಪುು ತಿಂದವರು ನೀರು ಕುಡಿಯಲೇ ಬೇಕು ಎಂದು ಹೇಳಿದ್ದಾರೆ, ಇರಲಿ ಎಂದು ಹೇಳಿ ಕಣ್ಣೀರು ಹಾಕಿದ್ದರು. ಇದರಿಂದ ಕರಗಿರುವ ಶ್ರೀರಾಮುಲು ಶಿವಕುಮಾರ್‌ಗೆ ಕ್ಷಮೆ ಕೋರಿದ್ದಾರೆ. ಶಿವಕುಮಾರ್ ಕೆಣಕಿ ಮಾತನಾಡುತ್ತಿಿದ್ದರು, ನಾನು ಕೂಡ ಅವರನ್ನು ಕೆಣಕುವ ರೀತಿಯಲ್ಲಿ ಮಾತನಾಡಿದ್ದೆ. ನಾನು ಮನಸ್ಸಿಿನಿಂದ ಯಾವ ಮಾತು ಕೂಡ ಆಡಿಲ್ಲ. ನನ್ನ ಮಾತಿನಿಂದ ನೋವಾಗಿದ್ದರೆ, ಡಿಕೆಶಿ ಅಣ್ಣನವರೇ ನನ್ನ ಕ್ಷಮಿಸಿ. ನನ್ನ ಭಾಷೆ ರಾಜಕಾರಣಕ್ಕೆೆ ಸೀಮಿತವಾಗಿತ್ತು, ವೈಯಕ್ತಿಿಕವಾಗಿ ಅಲ್ಲ ಎಂದರು.

Leave a Reply

Your email address will not be published. Required fields are marked *