Wednesday, 20th November 2019

ಚಾಮುಂಡೇಶ್ವರಿದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದ ಡಿಕೆಶಿ

ಮೈಸೂರಿನ ಚಾಮುಂಡಿಬೆಟ್ಟಕ್ಕೆೆ ಭೇಟಿ ನೀಡಿದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಚಾಮುಂಡೇಶ್ವರಿದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು.

 

ಮೈಸೂರಿನ ಚಾಮುಂಡಿಬೆಟ್ಟಕ್ಕೆೆ ಆಗಮಿಸಿದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಪತ್ನಿ ಚೆನ್ನಮ್ಮ ದೇವರ ದರ್ಶನ ಪಡೆದರು.

ಎಚ್‌ಡಿಡಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಶಿವಕುಮಾರ್ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಹೆಸರಲ್ಲಿ ಅರ್ಚನೆ

ತಿಹಾರ್ ಜೈಲಿನಿಂದ ಹೊರ ಬಂದ ಬಳಿಕ ಟೆಂಪಲ್‌ರನ್ ಯಾತ್ರೆೆ ಕೈಗೊಂಡಿರುವ ಕಾಂಗ್ರೆೆಸ್ ನಾಯಕ ಡಿ.ಕೆ.ಶಿವಕುಮಾರ್ ಚಾಮುಂಡಿಬೆಟ್ಟಕ್ಕೆೆ ಭೇಟಿ ನೀಡಿ ಚಾಮುಂಡೇಶ್ವರಿ ವಿಶೇಷ ಪೂಜೆ ಸಲ್ಲಿಸಿದರು.
ಜೈಲಿನಿಂದ ಹೊರ ಬರಲು ಆಶೀರ್ವಾದ ಮಾಡುವಂತೆ ಬೆಂಬಲಿಗರು, ಆಪ್ತರು ಬೇಡಿಕೊಂಡಿದ್ದ ಹರಕೆಯನ್ನು ಮನಸ್ಸಿಿನೊಳಗೆ ತೀರಿಸಿದ ಡಿ.ಕೆ.ಶಿವಕುಮಾರ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಕೈಮುಗಿದು ತಾಯಿಯ ಆಶೀರ್ವಾದ ಕೋರಿದರು.

ಮೈಸೂರು ನಗರಕ್ಕೆೆ ಗುರುವಾರ ಆಗಮಿಸಿ ಕಾಂಗ್ರೆೆಸ್ ಕಚೇರಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸನ್ಮಾಾನ ಸ್ವೀಕರಿಸಿದ ಬಳಿಕ ನಂಜನಗೂಡು, ಸುತ್ತೂರುಮಠದ ಗದ್ದಿಗೆ, ಶ್ರೀಗಣಪತಿ ಸಚ್ಚಿಿದಾನಂದ ಆಶ್ರಮಕ್ಕೆೆ ಭೇಟಿ ನೀಡಿ ಬಳಿಕ ವಾಸ್ತವ್ಯ ಹೂಡಿದ್ದರು. ಶುಕ್ರವಾರ ಬೆಳಗ್ಗೆೆ ಚಾಮುಂಡಿಬೆಟ್ಟಕ್ಕೆೆ ನೀಡಿದ ಡಿ.ಕೆ.ಶಿವಕುಮಾರ್‌ಗೆ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.

ನಂತರ ದೇವಸ್ಥಾಾನದ ಒಳಗೆ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಹೆಸರಿನಲ್ಲಿ ಅರ್ಚನೆ ಮಾಡಿಸಿದರು. ನಂತರ, ಮತ್ತೊೊಂದು ಚೀಟಿ ಕೊಟ್ಟು ಕುಟುಂಬದವರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.

ಜಿಟಿಡಿ ಮೊದಲಾದವರ ಸಾಥ್:
ಚಾಮುಂಡಿಬೆಟ್ಟಕ್ಕೆೆ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದ ವೇಳೆ ಅನೇಕ ನಾಯಕರು ಸಾಥ್ ನೀಡಿದರು. ಮಾಜಿ ಸಚಿವರೂ ಆದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ, ಮಾಜಿ ಸಂಸದ ಆರ್.ಧ್ರುವನಾರಾಯಣ್, ಮಾಜಿ ಶಾಸಕ ಎಸ್. ಮೊದಲಾದವರು ಹಾಜರಿದ್ದು ಸಾಥ್ ಕೊಟ್ಟರು. ಪೂಜೆ ಸಲ್ಲಿಸಿದ ಬಳಿಕ ಕೆಲ ಹೊತ್ತು ಜಿಟಿಡಿ ಜತೆ ಸಮಾಲೋಚನೆ ನಡೆಸಿದರು.

ಗೌಡರ ಕುಟುಂಬದೊಂದಿಗೆ ಮುನಿಸು ಮುಂದುವರಿಸಿದ ಜಿಟಿಡಿ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದೊಂದಿಗೆ ಮಾಜಿ ಸಚಿವ ಜಿ.ಟಿ.ದೇವೇಗೌಡ ತಮ್ಮಲ್ಲಿನ ಮುನಿಸನ್ನು ಮುಂದುವರಿಸಿದ್ದಾಾರೆ. ಚಾಮುಂಡೇಶ್ವರಿ ದೇವಿಯ ದರ್ಶನಕ್ಕೆೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಜತೆ ಆಗಮಿಸಿದ್ದ ಜಿ.ಟಿ.ದೇವೇಗೌಡರು, ಎಚ್.ಡಿ.ದೇವೇಗೌಡರ ಆಗಮನದ ವಿಷಯ ಅರಿತು ಬಹುಬೇಗನೆ ಹೊರ ನಡೆದರು. ಡಿಕೆಶಿ ಜತೆ ದರ್ಶನ ಪಡೆದು ಒಂದು ನಿಲ್ಲದೆ ಮುಖಂಡರು, ಕಾರ್ಯಕರ್ತರಿಗೆ ಕೈತೋರಿಸಿ ವಾಪಸ್ ಹೋದರು. ಈ ವೇಳೆ ದೇವೇಗೌಡರನ್ನು ಭೇಟಿ ಮಾಡಲು ಬಯಸದ ಜಿಟಿಡಿ ತಮ್ಮಲ್ಲಿದ್ದ ಅಸಮಾಧಾನ ಮುಂದುವರಿಸಿದರು.

ಎಚ್‌ಡಿಡಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಕೆಶಿ:
ಮೈಸೂರಿನ ಚಾಮುಂಡಿಬೆಟ್ಟಕ್ಕೆೆ ಆಗಮಿಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ-ಮಾಜಿ ಸಚಿವ ಡಿ.ಕೆ.ಶಿವಕುಮಾರ್ ದೇವಸ್ಥಾಾನದಲ್ಲಿ ಮುಖಾಮುಖಿಯಾದರು. ಈ ವೇಳೆ ಮಾಜಿ ಪಿಎಂ ದೇವೇಗೌಡರನ್ನು ನೋಡಿದ ಶಿವಕುಮಾರ್ ಕಾಲಿಗೆ ಬಿದ್ದರು. ಈ ವೇಳೆ ಡಿಕೆಶಿ ಅವರನ್ನು ನೋಡಿದ ಗೌಡರು ಕೈಹಿಡಿದುಕೊಂಡು ಮೇಲೆತ್ತಿಿ ಮಾಡಿದರು. ದೇವರು ನಿಮಗೆ ಬಂದಿರುವ ಎಲ್ಲ ಕಷ್ಟಗಳನ್ನು ನಿವಾರಣೆ ಮಾಡಲೆಂದು ಹೇಳಿ ದೇವರ ದರ್ಶನಕ್ಕೆೆ ಒಳಹೋದರು.

ಸಾ.ರಾ-ಶಿವಕುಮಾರ್ ರಹಸ್ಯ ಮಾತುಕತೆ
ಮೈಸೂರಿನ ಬೋಗಾದಿಯಲ್ಲಿರುವ ಆದಿಚುಂಚನಗಿರಿ ಶಾಖಾ ಮಠದಲ್ಲಿ ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್-ಸಾ.ರಾ.ಮಹೇಶ್ ಭೇಟಿಯಾಗಿ ರಹಸ್ಯ ಸಮಾಲೋಚನೆ ನಡೆಸಿದರು. ಶ್ರೀ ಸೋಮನಾಥೇಶ್ವರ ಸ್ವಾಾಮೀಜಿಯ ಆಶೀರ್ವಾದ ಪಡೆದ ಉಭಯ ನಾಯಕರು ಬಳಿಕ ಪ್ರತ್ಯೇಕವಾಗಿ ಕೊಠಡಿಯೊಳಗೆ ಚರ್ಚಿಸಿದರು. ಸ್ವಾಾಮೀಜಿ, ಮಾಜಿ ಶಾಸಕ ವಾಸು ಅವರ ಜತೆ ಚರ್ಚಿಸಿದ್ದ ಈ ಮಾಜಿ ಸಚಿವರು ಮತ್ತೊೊಂದು ಕೊಠಡಿಗೆ ತೆರಳಿ ಸಮಾಲೋಚಿಸಿದರು. ಶಾಸಕ ಅನಿಲ್ ಚಿಕ್ಕಮಾದು, ಮಾಜಿ ಸಂಸದ ಆರ್.ಧ್ರುವನಾರಾಯಣ್, ಮಾಜಿ ಶಾಸಕರಾದ ವಾಸು, ಎಸ್. ಬಾಲರಾಜು ಮೊದಲಾದ ನಾಯಕರು ಉಭಯ ನಾಯಕರು ಮಾತುಕತೆ ನಡೆಸಿ ಕೊಠಡಿಯಿಂದ ಹೊರ ಬರುವ ತನಕ ಕಾದು ಕುಳಿತಿದ್ದರು.

Leave a Reply

Your email address will not be published. Required fields are marked *