Friday, 17th January 2020

ಡಿಕೆಶಿ ವಿಚಾರ ಭಾವನಾತ್ಮಕವಾಗಿ ತೆಗೆದುಕೊಳ್ಳದಿರಿ

ಮೈಸೂರು ನಗರದ ಅರಮನೆಯಲ್ಲಿ ಸುದ್ದಿಗಾರರೊಂದಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿದರು

ಪ್ರತಿಭಟನೆ ಹೆಸರಲ್ಲಿ ಕಾಂಗ್ರೆೆಸ್‌ನಿಂದ ಅಪಚಾರ ಒಕ್ಕಲಿಗ ಸಂಘಟನೆ ಪ್ರತಿಭಟನೆ ವಿಚಾರದಲ್ಲಿ ಸಿ.ಟಿ.ರವಿ ಎಂಟ್ರಿ

ನಾನೂ ಒಕ್ಕಲಿಗ ಸಮುದಾಯಕ್ಕೆೆ ಸೇರಿದವನು. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಸಂವಿಧಾನದ ಬಗ್ಗೆೆ ಮಾತನಾಡುವ ಕಾಂಗ್ರೆೆಸ್ಸಿಗರು ಪ್ರತಿಭಟನೆ ಹೆಸರಲ್ಲಿ ಅಪಚಾರ ಎಸಗುತ್ತಾಾರೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಚಾರವನ್ನು ಯಾರೂ ಭಾವನಾತ್ಮಕವಾಗಿ ತೆಗೆದುಕೊಳ್ಳಬಾರದು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕೂಡ ಒಕ್ಕಲಿಗ ಸಮುದಾಯಕ್ಕೆೆ ಸೇರಿದಲ್ಲದೆ, ಅನೇಕರು ನಮ್ಮಲ್ಲೂ ಒಕ್ಕಲಿಗರು ಇದ್ದಾಾರೆ. ಕಾನೂನಿನ ವಿಚಾರದಲ್ಲಿ ಯಾರೂ ದೊಡ್ಡವರಲ್ಲ. ಹಾಗಾಗಿ, ಯಾರೂ ಭಾವನಾತ್ಮಕವಾಗಿ ನೋಡಬಾರದು ಎಂದರು

ನನ್ನ ಮನೆಯಲ್ಲಿ ಹತ್ತು ಕೋಟಿ ದುಡ್ಡು ಇದ್ದರೆ ನಾನು ಪ್ರಾಾಮಾಣಿಕ ಅಂತಾ ಎನ್ನಿಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆೆ ಲೆಕ್ಕ ಕೊಡಬೇಕು ಅಲ್ಲವೇ? ಇದನ್ನೇ ತನಿಖೆ ಮಾಡ್ತಾಾ ಇದ್ದಾಾರೆ. ತನಿಖೆಯನ್ನೇ ಪ್ರಶ್ನೆೆ ಮಾಡಿದರೆ ಹೇಗೆ? ಎಂದು ಕಾಂಗ್ರೆೆಸ್ ನಾಯಕರಿಗೆ ತಿರುಗೇಟು ನೀಡಿದರು.

ತನಿಖೆ ನಡೆಸುವದನ್ನೇ ಬೆಟ್ಟ ಅಗೆದು ಇಲಿ ಹಿಡಿಯೋದು ಅನ್ನುವುದಾದರೆ ಹ್ಯೂಬ್ಲೆೆಟ್ ವಿಚಾರ, ಅರ್ಕಾವತಿ ಡಿನೋಟಿಫಿಕೇಷನ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿಿ ಸಿದ್ದರಾಮಯ್ಯ ತನಿಖೆಗೆ ಆದೇಶಿಸಿ ಕ್ಲೀನ್‌ಚಿಟ್ ಪಡೆಯಲಿಲ್ಲವೇ? ಎಂದು ಪ್ರಶ್ನಿಿಸಿದರು.

ಯಾವುದನ್ನೂ ರಾಜಕೀಯ ಪ್ರೇರಿತವಾಗಿ ತನಿಖೆ ನಡೆಸುತ್ತಿಿಲ್ಲ. ಭ್ರಷ್ಟಾಾಚಾರ ಮಾಡಿದ್ದರೆ ಭಯಪಡಬೇಕು, ಇಲ್ಲದಿದ್ದರೆ ಇಲ್ಲ. ಅದನ್ನು ಬಿಟ್ಟು ತನಿಖೆಯೇ ಮಾಡದಿದ್ದರೆ ಹೇಗೆ? ಶುದ್ಧ ಕುಡಿಯುವ ನೀರಿನ ಯೋಜನೆ ವಿಚಾರದಲ್ಲಿ ಜಿಪಂನಲ್ಲಿ ಸಾಕಷ್ಟು ಚರ್ಚೆಯಾಗಿದ್ದರಿಂದ ಸಾಕಷ್ಟು ದೂರು ಬಂದಿದ್ದರಿಂದ ತನಿಖೆಗೆ ಆದೇಶಿಸಲಾಗಿದೆಯೇ ಹೊರತು ಬೇರೇನೂ ಇಲ್ಲ ಎಂದರು.

ಸಿದ್ದರಾಮಯ್ಯರನ್ನು ಕಾಂಗ್ರೆೆಸ್ ಬಿಟ್ಟರೂ ನಾವು ಬಿಡಲ್ಲ
ಸಿದ್ದರಾಮಯ್ಯ ಅವರನ್ನು ದಸರಾಗೆ ಆಹ್ವಾಾನ ನೀಡಿದ್ರಾಾ ಎಂಬ ಪ್ರಶ್ನೆೆಗೆ ಉತ್ತರ ನೀಡಿದ ವಸತಿ ಸಚಿವ ವಿ.ಸೋಮಣ್ಣ, ಅವರನ್ನು ಸೇರಿಸಿಕೊಂಡೇ ದಸರಾ ಮಾಡುತ್ತೇವೆ. ಸಿದ್ದರಾಮಯ್ಯ ನಿತ್ಯ ನನ್ನ ಸಂಪರ್ಕದಲ್ಲಿ ಇದ್ದಾಾರೆ. ಆಹ್ವಾಾನ ಪತ್ರಿಿಕೆ ಇನ್ನೂ ಮುದ್ರಣಕ್ಕೆೆ ಹೋಗಿಲ್ಲ. ಅವರನ್ನು ಆಹ್ವಾಾನಿಸಿಯೇ ದಸರಾ ಮಾಡುತ್ತೇವೆ. ನೀವೂ ಬನ್ನಿಿ ನಿಮ್ಮ ಜತೆಯಲ್ಲೇ ಸಿದ್ದರಾಮಯ್ಯರ ಮನೆಗೆ ಹೋಗುತ್ತೇನೆ ಎಂದು ಸಚಿವ ವಿ.ಸೋಮಣ್ಣ ಹೇಳದರು.

Leave a Reply

Your email address will not be published. Required fields are marked *