Sunday, 27th September 2020

ವೈದ್ಯರ ವಿರುದ್ಧ ಕತ್ತಿಮಸೆಯುವ ನಮ್ಮ ಸಮಾಜ!

ಡಾ. ಸಿ.ಜಿ.ರಾಘವೇಂದ್ರ ವೈಲಾಯ
ನವಜಾತ ಶಿಶು ಮತ್ತು ಮಕ್ಕಳ ತಜ್ಞರು.
ಶಿವಮೊಗ್ಗ.

ನಮ್ಮ ದೇಶವು ಈಗ ವೈದ್ಯರ ಪಾಲಿಗೆ ಅಕ್ಷರಶಃ ನರಕವಾಗಿ ಪರಿಣಮಿಸುತ್ತಿದೆ. ಬದುಕು, ರಕ್ಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯ, ವೃತ್ತಿ ಸ್ವಾತಂತ್ರ್ಯವೇ ಮೊದಲಾದ ಮೂಲಭೂತ ಹಕ್ಕುಗಳೂ ವೈದ್ಯರ ಪಾಲಿಗೆ ಮರೀಚಿಕೆಯಾಗುತ್ತಿದೆ.

ಅಶೋಕನ ಕಾಲದಲ್ಲಿ ಬೌದ್ಧರು ಉಚ್ಛ್ರಾಾಯ ಸ್ಥಿಿತಿಯಲ್ಲಿದ್ದರು. ರಾಜಾಶ್ರದಿಂದ ಕೊಬ್ಬಿಿದ ಭಿಕ್ಷುಗಳಿಗೆ ಸುಖ ಜೀವನ ಒಗ್ಗಿಿ ಹೋಗಿತ್ತು. ನಂತರ ಬಂದ ಪುಶ್ಯಮಿತ್ರಶುಂಗನ ಕಾಲಕ್ಕೆೆ ವೈದಿಕಧರ್ಮವು ತಾನು ಮತ್ತೆೆ ಪ್ರವರ್ಧಮಾನಕ್ಕೆೆ ಬಂದಿತು. ನಂತರ ಆದಿಶಂಕರಾಚಾರ್ಯರ ಕಾಲಕ್ಕೆೆ ಸನಾತನ ಧರ್ಮಿಯರಿಗೆ ರಾಜಾಶ್ರಯವು ಇನ್ನೂ ಹೆಚ್ಚಾಾಯಿತು. ಹೀಗೆ ಅವರಿಗೆ ಮತ್ತಷ್ಟು ಬಲವರ್ಧನೆಯಾದದ್ದನ್ನು ಸಹಿಸದ ಗಡಿನಾಡ ಬೌದ್ಧರು ಅಸೂಯೆಯಿಂದ ವಿದೇಶಿ ಇಸ್ಲಾಾಂ ಆಕ್ರಮಣಕಾರರನ್ನು ದೇಶಕ್ಕೆೆ ಸ್ವಾಾಗತಿಸಿದರು. ಸಿಂಧ್ ಪ್ರಾಾಂತದ ರಾಜ ದಾಹಿರನಿಗೆ ಮೋಸ ಮಾಡಿ ಹೇಗಾದರೂ ವೈದಿಕರನ್ನು ಮುಗಿಸಬೇಕೆಂದುಕೊಂಡರು. ಆದರೆ ಈ ದಾಳಿಕೋರರು ಮೊತ್ತಮೊದಲು ಹೊಸಕಿಹಾಕಿದ್ದು ಅದೇ ಬೌದ್ಧರನ್ನು. ವಿಪರ್ಯಾಸ ನೋಡಿ, ಯಾವ ವೈದಿಕ ಧರ್ಮವು ತನಗೆ ಜನ್ಮ ನೀಡಿತ್ತೋೋ ಅದಕ್ಕೇ ಮಾತೃದ್ರೋಹವೆಸಗುವ ಹೀನ ಹುನ್ನಾಾರಕ್ಕೆೆ ವಿಧಿಯು ತಕ್ಕ ಪಾಠ ಕಲಿಸಿತ್ತು. ಹೀಗೆ ಮಾತೃನೆಲ ಭಾರತದಿಂದ ಬೌದ್ಧರು ಮೂಲೋತ್ಪಾಾಟನೆಯಾಗಿದ್ದು. ಇಲ್ಲಿ ಮನುಕುಲಕ್ಕೊೊಂದು ಶಾಶ್ವತ ಪಾಠವಿದೆ. ಕೃತಘ್ನತೆಯ ಪಾಪಕ್ಕೆೆ ಫಲ ಏನೆನ್ನುವ ಸಾರ್ವಕಾಲಿಕ ಎಚ್ಚರಿಕೆಯಿದೆ.

ಯಾವ ಸಮಾಜ ತನ್ನ ಶ್ರಮಿಕರಿಗೆ ಋಣಿ ಯಾಗಿರದೋ ಅದು ಬಲು ಬೇಗ ನಾಶವಾಗುತ್ತದೆ. ಇಂದು ದೇಶದಲ್ಲಿ ಭ್ರಷ್ಟವ್ಯವಸ್ಥೆೆಯು ಜನರಲ್ಲಿ ಮೂಡಿಸಿರುವ ಅಸಹನೆಯ ಕೋಪಕ್ಕೆ ಬಲಿಯಾಗುವುದು ಅಮಾಯಕರು, ಅಸಹಾಯಕರು. ಇದಕ್ಕೆ ಯುಕ್ತ ಉದಾಹರಣೆಯೆಂದರೆ ವೈದ್ಯರು. ಆಳುಗರ ಅಸಮರ್ಪಕ ನಿರ್ವಹಣೆಯಿಂದ ಹಳ್ಳ ಹಿಡಿದಿರುವ ನಮ್ಮ ಸರಕಾರಿ ಆರೋಗ್ಯ ಸೇವೆಯಿಂದ ರೋಗಿಗಳು ಸಂತುಷ್ಟರಾಗಿಲ್ಲವೆನ್ನುವುದು ಸತ್ಯ. ಹಾಗೆಯೇ ನಮ್ಮಲ್ಲಿ ವ್ಯಕ್ತಿಗಳ ತಲಾ ಆದಾಯ ಕಡಿಮೆ ಇರುವುದರಿಂದ ಜನರಿಗೆ ಕೆಲವೊಮ್ಮೆೆ ಪ್ರಪಂಚದ ಇತರೆಡೆಗೆ ಹೋಲಿಸಿದರೆ 10-20ಪಟ್ಟು ಅಗ್ಗವಾಗಿರುವ ನಮ್ಮ ಖಾಸಗಿ ಆರೋಗ್ಯ ಸೇವೆಗಳೂ ದುಬಾರಿಯೆನ್ನಿಿಸುವುದೂ ಸಹಜವೇ. ಆದರೆ ಇದಕ್ಕೆೆ ಕಾರಣ ವೈದ್ಯರಲ್ಲ. ವೈದ್ಯರು ಕೇವಲ ಆರೋಗ್ಯ ವ್ಯವಸ್ಥೆೆಯಲ್ಲಿ ಶ್ರಮಿಕರಷ್ಟೇ, ಆಳುಗರಲ್ಲ. ದುಬಾರಿ ವಿಮಾನಯಾನಕ್ಕೆೆ ಹೇಗೆ ಪೈಲಟ್ ಕಾರಣನಲ್ಲವೋ ಹಾಗೇ ವೈದ್ಯಕೀಯರಂಗದ ಆರ್ಥಿಕ ಸ್ಥಿಿತಿಗೆ ವೈದ್ಯರೂ ಕಾರಣರಲ್ಲ. ನಿಮಿತ್ತ ಮಾತ್ರಂ ಭವ ಎಂಬಂತೆ. ಎತ್ತಿಿಗೆ ಜ್ವರ ಬಂದರೆ ಎಮ್ಮೆೆಗೆ ಬರೆ ಎಳೆದಂತೆ ನಮ್ಮ ಸಮಾಜ ಮಾತ್ರ ತನ್ನೆೆಲ್ಲಾ ಅಸಹನೆ, ಹತಾಶೆಗಳನ್ನು ತೋರಿಸುವುದು ವೈದ್ಯರ ಮೇಲೆಯೇ.

ಇತ್ತೀಚೆಗೆ ಮಿಂಟೋ ಆಸ್ಪತ್ರೆೆಯಲ್ಲಿ ನಡೆದ ಘಟನೆಯೊಂದು ದೇಶದ ಗಮನ ಸೆಳೆದಿದೆ. ಗಂಟೆಗಟ್ಟಲೇ ಮೇಕಪ್ ಮಾಡಿಕೊಂಡು ಸಾಕಷ್ಟು ರಿಹರ್ಸಲ್ ಮಾಡಿ ಕ್ಯಾಾಮೆರಾಗಳೊಂದಿಗೆ ತಯಾರಾಗಿ ಬಂದ ಮಹಿಳಾ ಮಣಿಗಳ ತಂಡವೊಂದು ಅಸಭ್ಯವಾಗಿ ಘೋಷಣೆಗಳನ್ನು ಕೂಗುತ್ತಾಾ ಹಲವು ಪೋಲಿಪುಂಡರೊಂದಿಗೆ ನುಗ್ಗಿಿಬಂದು ಕರ್ತವ್ಯನಿರತ ಮಹಿಳಾ ವೈದ್ಯರಿಗೆ ಬೆದರಿಕೆ ಹಾಕಿ, ಅಸಭ್ಯವಾಗಿ ವರ್ತಿಸಿ ತಮ್ಮ ಅನಾಗರಿಕತೆಯ ಅನಾವರಣ ಮಾಡಿದ್ದನ್ನು ಇಡೀ ಕರ್ನಾಟಕ ನೋಡಿದೆ. ಇವರು ಕನ್ನಡ ಭಾಷಾ ಹೋರಾಟಗಾರರ ಸೋಗಿನಲ್ಲಿ ಬಂದಿದ್ದರು. ಹಿಂದೆ ಇಂಥದ್ದೇ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಾಗ ಇಡೀ ದೇಶದ ಮಾಧ್ಯಮ ವೈದ್ಯರ ಬೆನ್ನಿಿಗೆ ನಿಂತಿತ್ತು. ಆದರೆ ನಮ್ಮ ಕರುನಾಡ ಮಾಧ್ಯಮಗಳಿಗೆ ಮಾತ್ರ ಸಾಮಾಜಿಕ ಬದ್ಧತೆಗಿಂತ *್ಕ ಹುಚ್ಚೇ ಹೆಚ್ಚಾಾಯಿತೆನ್ನಿಸುತ್ತದೆ.

ಹಿಂದೆ ಕೆಲವು ಕಳ್ಳರು ಜೈಲಿನಿಂದ ಹೊರಬಂದಮೇಲೆ ತಮ್ಮನ್ನು ಸ್ವಾಾತಂತ್ರ್ಯ ಹೋರಾಟಗಾರರೆಂದು ಬಿಂಬಿಸಿ ಕೊಂಡು ಸರಕಾರದ ಪಿಂಚಣಿ ಪಡೆದಂತೆ ಈ ಪುಂಡರೂ ತಮ್ಮನ್ನು ಹಾಗೇ ಅಂದುಕೊಂಡಿದ್ದಾರೆ. ಜನರನ್ನೂ ಹಾಗೇ ನಂಬಿಸುತ್ತಿಿದ್ದಾರೆ. ಅನ್ಯಾಾಯದ ವಿರುದ್ಧ ವೈದ್ಯರು ಮುಷ್ಕರ ಮಾಡಿದಾಗ ರೋಗಿಗಳ ಬಗ್ಗೆೆ ಗ್ಯಾಾಲನ್ನುಗಟ್ಟಲೆ ಮೊಸಳೆ ಕಣ್ಣೀರು ಸುರಿಸುವ ಸಮಾಜ ಮಾಧ್ಯಮಗಳು ಈ ಪುಂಡರ ದುಂಡಾವರ್ತನೆಯಿಂದ ಬಡ ರೋಗಿಗಳಿಗಾದ ಅನಾನುಕೂಲದ ಬಗ್ಗೆೆ ಒಂದೂ ಚಕಾರವೆತ್ತಿಿಲ್ಲ. ಇದು ಬೂಟಾಟಿಕೆಯ ಪರಾಕಾಷ್ಠೆೆಯಲ್ಲವೇ? ಅವರಿಗೆ ಕರ್ತವ್ಯಕ್ಕೆೆ ಅಡ್ಡಿಿಪಡಿಸಲು ಸಂವಿಧಾನದ ಯಾವ ವಿಧಿ ಅವಕಾಶ ನೀಡಿದೆ? ಇದು * ್ಠೃಚ್ಝಿಿಜ್ಚಿಿ ಖ್ಛಛಿಠಿ ಅ್ಚಠಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಲ್ಲವೇ? ಲಭ್ಯವಿರುವ ಅತ್ಯಲ್ಪ ಸೌಲಭ್ಯಗಳನ್ನು ಬಳಸಿ ಶಕ್ತಿಿಮೀರಿ ಜನರ ಸೇವೆಯನ್ನು ನಿಸ್ವಾಾರ್ಥವಾಗಿ ಮಾಡುತ್ತಿಿರುವ ಸರಕಾರಿ ವೈದ್ಯರಿಗೆ ಕೃತಘ್ನ ಸಮಾಜವು ತಾನು ನೀಡುವ ಬಳುವಳಿ ಇದೇ ಏನು? ಕಾಶ್ಮೀರದಲ್ಲಿ ಸೈನಿಕರಿಗೆ ಕಲ್ಲು ಹೊಡೆದರೆ ಜನರಲ್ಲಿ ಕಾಣುವ ಸಹಾನುಭೂತಿಯು ವೈದ್ಯರ ಕುರಿತಾಗಿ ಏಕೆ ಬಾರದು? ಭಾರತೀಯ ವೈದ್ಯರು ಬದ್ಧತೆ, ಕ್ಷಮತೆ ಫಲಿತಾಂಶದಲ್ಲಿ ಪ್ರಪಂಚದ ಇತರೇ ದೇಶಗಳ ವೃತ್ತಿಿ ಬಾಂಧವರಿಗಿಂತ ಒಂದು ಹೆಜ್ಜೆೆ ಮುಂದೆಯೇ ಇದ್ದಾರೆ. ಹೀಗಿದ್ದೂ ವೈದ್ಯರೇ ಏಕೆ ಸಮಾಜದ ಕೆಂಗಣ್ಣಿಿಗೆ ಸುಲಭವಾಗಿ ಈಡಾಗುತ್ತಾಾರೆ? 80-90ರ ದಶಕಗಳಲ್ಲಿ ಪ್ರತಿಭಾವಂತ ಯುವಜನತೆ ವೈದ್ಯ ವೃತ್ತಿಿಯನ್ನು ತಾವು ಆಯ್ಕೆೆ ಮಾಡಿದ್ದು ತಪ್ಪಾಾಯಿತು ಎಂದು ಈಗ ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಇದೇ ಅಸಹನೆ ಕೆಲಸವನ್ನೇ ಮಾಡದ ಸರಕಾರಿ ನೌಕರರ ವಿರುದ್ಧವೋ, ವರ್ಷಗಟ್ಟಲೇ ಕೋರ್ಟಿನ ಮೆಟ್ಟಿಿಲು ಹತ್ತಿಿಸಿ ಸತಾಯಿಸುವ ನ್ಯಾಾಯಾಧೀಶರ ವಿರುದ್ಧವೋ ನಮ್ಮ ಜನ ಏಕೆ ಪ್ರದರ್ಶಿಸುವುದಿಲ್ಲ? ವೈದ್ಯರ * ಎಛ್ಞಿಿಠ್ಝಿಿಛಿಞ್ಞ ನಡತೆಯೇ ಅವರ ಬಲಹೀನತೆಯೆಂದು *(ಖಟ್ಛಠಿ ್ಟಜಛಿಠಿ) ಸಮಾಜ ತಿಳಿದಿದೆಯೇ? ಇದು ನಮಗೆಲ್ಲಾ ಆತ್ಮಾಾವಲೋಕನದ ಸಮಯ. ಇದು ಉಪಾಧ್ಯಾಾಯಶ್ಚ ವೈದ್ಯಶ್ಚ ಅಂಬಿಗಶ್ಚ ಕಾರ್ಯ ಪೂರ್ಯಂತೇ ಅಪ್ರಯೋಜಕಾಃ ಎನ್ನುವ ಸುಭಾಷಿತವನ್ನು ಪುಷ್ಟೀಕರಿಸುತ್ತದೆ.

ಈ ರೀತಿ ಆಕ್ಷೇಪದ ಹಿಂದೆ ವೈದ್ಯರು ಮಾಡಿದ್ದೆಲ್ಲವೂ ಸರಿಯೆಂದು ಸಾರಾಸಗಟಾಗಿ ಸೈ ಎನ್ನುವ ಏಕಪಕ್ಷೀಯ ಧೋರಣೆಯಂತೂ ನಮ್ಮದಲ್ಲ. ತಪ್ಪುು ಮಾಡಿದವರೆಲ್ಲರೂ ಶಿಕ್ಷಾರ್ಹರೇ. ಆದರೆ ಅದರ ನಿರ್ಧಾರ ಸೂಕ್ತ ಕಾನೂನಿನ ಚೌಕಟ್ಟಿಿನಲ್ಲಿ ಆಗಬೇಕೇ ಹೊರತು * ಟಚಿ ಒ್ಠಠಿಜ್ಚಿಿಛಿ ರೀತಿ ಅಲ್ಲ. ಸರಿತಪ್ಪುುಗಳ ತಕ್ಕಡಿಯನ್ನು ಹಾದಿಬೀದಿಯಲ್ಲಿ ತೂಗುಹಾಕುವುದಲ್ಲ. ಅದಕ್ಕೆೆಂದೇ ದೇಶದಲ್ಲಿ ಕಾನೂನಿನ ವ್ಯವಸ್ಥೆೆಯಿದೆ. ಅದನ್ನು ಬಿಟ್ಟು ವೈದ್ಯರನ್ನು ಅವಾಚ್ಯವಾಗಿ ನಿಂದಿಸುವುದು, ಹೊಡೆಯುವುದು, ಗುಂಪು ಗಲಭೆ ಮಾಡುವುದು, ಕೊಲ್ಲುವುದು, ಆಸ್ಪತ್ರೆೆಯ ವಸ್ತುಗಳಿಗೆ ಹಾನಿ ಮಾಡುವುದು ಇವೆಲ್ಲಾ ಸಭ್ಯ ಸಮಾಜದ ರೀತಿನೀತಿಗಳಲ್ಲ. ಅದೇನಿದ್ದರೂ ಹಮ್ಮುರಬಿ ಕೋಡ್‌ನ ಕಾಲದ ಮಾತ್ಸ್ಯ ನ್ಯಾಾಯವಾದೀತು. ತನಿಖೆಯಿಂದ ನಿರ್ದೋಷಿಯಾಗಿ ಹೊರಬರುವ ವೈದ್ಯರು ಜೀವಮಾನವೆಲ್ಲಾ ಕಷ್ಟಪಟ್ಟು ಗಳಿಸಿದ ಹೆಸರು ಒಮ್ಮೆೆ ಹಾಳಾದರೆ ಮತ್ತೆೆ ಸರಿಪಡಿಸಲು ಸಾಧ್ಯವೇ? ಒಡೆದ ಕನ್ನಡಕದ ಗಾಜನ್ನು ಮತ್ತೆೆ ಜೋಡಿಸಬರುವದೇ?

ನಮ್ಮ ದೇಶವು ಈಗ ವೈದ್ಯರ ಪಾಲಿಗೆ ಅಕ್ಷರಶಃ ನರಕವಾಗಿ ಪರಿಣಮಿಸುತ್ತಿದೆ. ಬದುಕು, ರಕ್ಷಣೆ, ಅಭಿವ್ಯಕ್ತಿ ಸ್ವಾತಂತ್ರ್ಯ, ವೃತ್ತಿ ಸ್ವಾಾತಂತ್ರ್ಯವೇ ಮೊದಲಾದ ಮೂಲಭೂತ ಹಕ್ಕುಗಳೂ ವೈದ್ಯರ ಪಾಲಿಗೆ ಮರೀಚಿಕೆಯಾಗುತ್ತಿಿದೆ. ವೈದ್ಯರ ಮೇಲಿನ ಹಲ್ಲೆ ಮೊದಲು ಅಲ್ಲೊಮ್ಮೆೆ ಇಲ್ಲೊಮ್ಮೆೆ ಎಂಬಂತೆ ಕೇಳಿಬರುತ್ತಿದ್ದುದು ಈಗ ನಿತ್ಯರೋದನೆಯಾಗಿದೆ. ದಿನವೂ ಸಾಯುವವರಿಗೆ ಅಳುವವರಾರು ಎಂಬಂತಾಗಿದೆ. ಇತ್ತೀಚೆಗೆ ಬಂಗಾಳದ ಎಸ್ಟೇಟ್ ಒಂದರಲ್ಲಿ ರೋಗಿಯೊಬ್ಬನ ಸಂಬಂಧಿಗಳ ಕ್ರೌೌರ್ಯಕ್ಕೆೆ ಬರ್ಬರವಾಗಿ ಹತ್ಯೆೆಯಾದ ವಯೋವೃದ್ಧ ವೈದ್ಯರ ಕೊಲೆಯು ನಿರ್ಭಯಾಳ ಪ್ರಕರಣದ ನೆನಪು ಮರುಕಳಿಸುವಂತೆ ಮಾಡಿದೆ.
ತಮ್ಮ ಆರೋಗ್ಯದ ರಕ್ಷಕರಾದ ವೈದ್ಯರಿಗೆ ನಿರ್ಭಯವಾಗಿ ಕಾರ್ಯನಿರ್ವಹಿಸಲು ಅಸಾಧ್ಯವೆನ್ನುವ ವಾತಾವರಣವನ್ನು ತಂದಿಟ್ಟ ಪ್ರಸಕ್ತ ಸ್ಥಿಿತಿಯು ನಮಗೆ ಶುಂಗರ ಕಾಲದ ಬೌದ್ಧರ ನೆನಪು ತಂದಿತು. ತಾನು ಕುಳಿತ ಕೊಂಬೆಯನ್ನೇ ತುಂಡರಿಸಹೊರಟ ದಡ್ಡನಂತೆ. ಸಮಾಜದ ಮಾನಸಿಕ ಆರೋಗ್ಯಕ್ಕೆೆ ಚಿಕಿತ್ಸೆೆ ನೀಡಬಲ್ಲ ವೈದ್ಯರಾರು? ಪರಿಸ್ಥಿಿತಿ ಹೀಗೇ ಮುಂದಿವರಿದರೆ ಮುಂದೆ ವೈದ್ಯರಾಗಲು ಯಾರೂ ಮುಂದೆ ಬರುವುದು ಕಷ್ಟ. ಅದರೆ ಮುನ್ಸೂಚನೆ ಈಗಾಗಲೇ ಕಾಣುತ್ತಿಿದೆ. ಅಂಥ ದಿನಗಳೆಂದೂ ಬಾರದಿರಲಿ ಎಂಬುದೇ ನಮ್ಮ ಆಶಯ. ‘ಜೀವೇಮ ಶರದಶ್ಶತಂ’ ಎನ್ನುವ ನಮ್ಮ ಆಶಯ ಸಾಧ್ಯವಾಗಬೇಕಾದರೆ ಉತ್ತಮ ವೈದ್ಯರು ಬೇಕಲ್ಲವೇ? ಇಲ್ಲವಾದರೆ ದೇಶದ ಆರೋಗ್ಯಕ್ಕೆೆ ದೇವರೇ ಗತಿ? ಹಾಗಾಗಿ ಸಮಾಜವು ವೈದ್ಯರ ಬಗೆಗಿನ ಪೂರ್ವಾಗ್ರಹ ಗಳನ್ನು ಬಿಟ್ಟು ನೈಜ ವಾಸ್ತವಿಕ ದೃಷ್ಟಿಿಕೋನವನ್ನು ಬೆಳೆಸಿಕೊಳ್ಳಬೇಕಿದೆ.

Leave a Reply

Your email address will not be published. Required fields are marked *