Wednesday, 19th February 2020

ದಸರಾ: ಸಿಎಂ ನಿಲುವು ಸ್ವಾಗತಾರ್ಹ

ನಾಡಹಬ್ಬ ದಸರಾ ಮತ್ತು ಕನ್ನಡಕ್ಕೊೊಂದು ಹಬ್ಬದಂತಿರುವ ರಾಜ್ಯೋತ್ಸವ, ಇವು ರಾಜ್ಯದ ಎರಡು ಪ್ರಮುಖ ಘಟನಾವಳಿಗಳು. ಯುಗಾದಿ, ದೀಪಾವಳಿ, ಗಣೇಶೋತ್ಸವದಂತಹ ಪ್ರಮುಖ ಹಬ್ಬಗಳನ್ನು ನಾಗರಿಕರು ಹೇಗೆ ಪ್ರತಿವರ್ಷ ಆಚರಿಸುತ್ತಾ ಸಂಪ್ರದಾಯ ಉಳಿಸಿಕೊಂಡು ಬರುತ್ತಿದ್ದಾರೋ ಹಾಗೆಯೇ ರಾಜ್ಯ ಸರಕಾರ ದಸರಾ ಮತ್ತು ರಾಜ್ಯೋತ್ಸವವನ್ನು ಸಂಭ್ರದಿಂದ ಅಚರಿಸಿಕೊಂಡು ಬರುತ್ತಿದ್ದು, ಇದರ ವೈಭವವನ್ನು ಯಾವುದೇ ಕಾರಣಕ್ಕೆೆ ‘ಮಂಕಾಗಿಸುವುದು’ ತರವಲ್ಲ ಎಂಬುದು ಬಹುತೇಕ ಕನ್ನಡಿಗರ ಅಭಿಪ್ರಾಾಯವಾಗಿದೆ. ಇದು ಉಚಿತವೂ ಹೌದು. ದಸರಾದ ಹಿನ್ನೆೆಲೆಯಲ್ಲಿ ಮೈಸೂರಿನಲ್ಲಿ ಹಲವು ಕಾಮಗಾರಿಗಳು ನಡೆಯುವುದರಿಂದ ’ಸಾಂಸ್ಕೃತಿಕ ರಾಜಧಾನಿ’ಗೆ ಒಂದು ರೀತಿಯ ರಂಗು ಬರಲಿದೆ. ಅಲ್ಲದೆ ಪ್ರವಾಸೋದ್ಯಮದ ದೃಷ್ಟಿಯಿಂದಲೂ ದಸರಾ ಒಂದು ಪ್ರಮುಖ ಕಾರ್ಯಕ್ರಮವೇ ಸರಿ.
ಚಾಮುಂಡಿಬೆಟ್ಟ, ಅರಮನೆ, ಮೃಗಾಲಯ ಸೇರಿದಂತೆ ಹಲವು ತಾಣಗಳು ವರ್ಷಪೂರ್ತಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಆದರೆ ಮೈಸೂರು ಸಂಸ್ಥಾಾನದ ಚರಿತ್ರೆೆಯನ್ನು ತಿಳಿದವರು, ವಿಶೇಷವಾಗಿ ವಿದೇಶಿ ಪ್ರವಾಸಿಗರು ಮೈಸೂರು ದಸರಾ, ಜಂಬೂಸವಾರಿ ಹಾಗೂ ಇತರ ಧಾರ್ಮಿಕ ಆಚರಣೆಗಳನ್ನು ಕಣ್ತುಂಬಿಕೊಳ್ಳಲು ಈ ಸಮಯದಲ್ಲೆೆ ಮೈಸೂರಿಗೆ ಬರುವ ಉದ್ದೇಶ ಹೊಂದಿರುತ್ತಾಾರೆ.ಈ ಹಿಂದೆ ಹಲವು ಸಾರಿ ಅತಿವೃಷ್ಟಿಿ ಹಾಗೂ ಅನಾವೃಷ್ಟಿಿಯಿಂದಾಗಿ ದಸರಾ ಸರಳವಾಗಿ ನಡೆಯಬೇಕೆಂಬ ಧ್ವನಿಗೆ ಮಾನ್ಯತೆ ದೊರೆತಿತ್ತು. ಇದಕ್ಕೆೆ ವ್ಯತಿರಿಕ್ತವಾಗಿ ವರ್ಷಕ್ಕೆೆ ಒಂದು ಸಲ ಬರುವ ನಾಡಹಬ್ಬ ಕಳೆಗುಂದಿತ್ತು ಎಂದು ನೊಂದವರನ್ನೂ ಕಾಣಬಹುದಿತ್ತು.

ಸಂತಸ ಮತ್ತು ಸಂಕಟ ಜೀವನದ ಎರಡು ಅನಿವಾರ‌್ಯಗಳು. ಬಂದದ್ದನ್ನು ಎದುರಿಸುತ್ತಾಾ ಜೀವನ ಸಾಗಬೇಕು ಎಂಬ ವೇದಾಂತದ ಸಾರವನ್ನು ಅರಿಯಬೇಕೆಂದು ಪ್ರಾಜ್ಞರ ಅನಿಸಿಕೆ. ಡಾ.ರಾಜ್‌ಕುಮಾರ ಅವರ ‘ಭಾಗ್ಯದ ಲಕ್ಷ್ಮಿಿ ಬಾರಮ್ಮ’ ಚಿತ್ರದ ಹಾಡಿನ ಒಂದು ಸಾಲು ಹೀಗಿದೆ-‘…ಯುದ್ಧವೆ ಇರಲಿ, ಕ್ಷಾಾಮವೆ ಬರಲಿ ಸಿನಿಮಾ, ಡ್ರಾಾಮ ನಿಲ್ಲೊೊಲ್ಲ’.
ರಾಜ್ಯದ 17 ಜಿಲ್ಲೆೆಗಳು ಜಲದಿಗ್ಬಂಧನದಲ್ಲಿ ಸಿಲುಕಿ ಜನರು, ಮೂಕಪ್ರಾಾಣಿಗಳು ಅನುಭವಿಸಿದ ಸಂಕಟ ಕರುಳು ಕತ್ತರಿಸುವಂತಿದೆ. ಈ ಸಂದರ್ಭದಲ್ಲಿ ರಾಜ್ಯದ ವಿಶೇಷವಾಗಿ ದಕ್ಷಿಿಣ ಕರ್ನಾಟಕದ ಜನರ ಸ್ಪಂದನೆ ಸ್ತುತ್ಯರ್ಹ. ಯುವಕರನ್ನು ನಾಚಿಸುವಂತೆ ಓಡಾಡಿದ ಮುಖ್ಯಮಂತ್ರಿಿ ಬಿ.ಎಸ್. ಯಡಿಯೂರಪ್ಪ ಪರಿಹಾರ ಪ್ರಕಟಿಸಿದ್ದು, ಕೇಂದ್ರ ಸರಕಾರದಿಂದ ಬೇಕಾದ ಆರ್ಥಿಕ ನೆರವು ಪಡೆಯುವುದಾಗಿ ಘೋಷಿಸಿದ್ದು ಕಾರ್ಯರೂಪಕ್ಕೆೆ ಬರಕಾಗಿದೆ. ಇನ್ನೊೊಂದೆಡೆ ಸೋಮವಾರ ನಂಜನಗೂಡಿನಲ್ಲಿ, ನಾಡಹಬ್ಬ ದಸರಾ ಮಹೋತ್ಸವವನ್ನು ಈ ವರ್ಷವೂ ವಿಜೃಂಭಣೆಯಿಂದ ಆಚರಿಸಲಾಗುವುದು. ಇದರಲ್ಲಿ ಬದಲಾವಣೆ ಇಲ್ಲ ಎಂದು ಹೇಳಿರುವ ಅವರ ನಿಖರ ಮಾತನ್ನೂ ಮೆಚ್ಚಬೇಕಾಗಿದೆ.

ಆದರೆ ಈ ಬಾರಿಯ ‘ಹಬ್ಬ’ದ ಸಿದ್ಧಗೆ ಸಿಗುವ ಕಾಲಾವಧಿ 47 ದಿನಗಳು ಮಾತ್ರ. ಇನ್ನೂ ಮಂತ್ರಿಿಮಂಡಲವೂ ರಚನೆಯಾಗಿಲ್ಲ. ಉನ್ನತಾಧಿಕಾರ ಸಮಿತಿಯ ಸಭೆಯೂ ನಡೆದಿಲ್ಲ. ಈ ವೇಳೆಗಾಗಲೇ ಸಮಿತಿ ಸಭೆ ನಡೆದು, ಉಪಸಮಿತಿಗಳ ರಚನೆ ಕಾರ್ಯ ಆಗಬೇಕಿತ್ತು ಹಾಗೂ ಹಣ ಬಿಡುಗಡೆ ಆಗಿದ್ದರೆ ಗುಣಮಟ್ಟದ ಕಾರ್ಯ ಹಾಗೂ ಉತ್ತಮ ಕಾರ್ಯಕ್ರಮಗಳನ್ನು ರೂಪಿಸುವ ಕುರಿತು ಸಮಯವೂ ಸಿಗುತ್ತಿಿತ್ತು. ಆದರೆ ಏನೂ ಆಗಿಲ್ಲ. ವಿಳಂಬವಾದಷ್ಟು ಅಚ್ಚುಕಟ್ಟಾಾಗಿ ಕಾರ್ಯಕ್ರಮ ಹಮ್ಮಿಿಕೊಳ್ಳಲು ಕಷ್ಟವಾಗುತ್ತದೆ. ಸಂತೆಗೆ ಮೂರು ಮೊಳ ಎಂಬಂತಾದರೆ ಅಂದುಕೊಂಡ ಉದ್ದೇಶ ಈಡೇರುತ್ತದೆಯೇ? ಮುಖ್ಯಮಂತ್ರಿಿಗಳು ಸಂಪುಟ ರಚನೆಗೆ ಕಾಯದೆ ಇತ್ತ ಕಾರ್ಯೋನ್ಮುಖರಾಗುವುದು ಅತ್ಯಗತ್ಯವಾಗಿದೆ. ಹಾಗೆಯೇ ಪ್ರತಿಪಕ್ಷಗಳು ಮುಖ್ಯಮಂತ್ರಿಿಗಳ ನಿಲುವಿಗೆ ಬೆನ್ನೆೆಲುಬಾಗಿ ನಿಲ್ಲಬೇಕಿದೆ.

Leave a Reply

Your email address will not be published. Required fields are marked *