Tuesday, 25th February 2020

ಇ.ಡಿ ಎದುರು ಡಿ.ಕೆ. ಸುರೇಶ್ ಹಾಜರು

ದೆಹಲಿ: ಅಕ್ರಮ ಹಣ ಪತ್ತೆೆ ಪ್ರಕರಣಕ್ಕೆೆ ಸಂಬಂಧಿಸಿದಂತೆ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರ ಸಹೋದರ ಹಾಗೂ ಸಂಸದ ಡಿ.ಕೆ. ಸುರೇಶ್ ಅವರನ್ನು ಗುರುವಾರ ದಿನವಿಡೀ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾಾರೆ.

ದೆಹಲಿಯ ಲೋಕನಾಯಕ ರಸ್ತೆೆಯಲ್ಲಿರುವ ಇ.ಡಿ. ಕಚೇರಿಯಲ್ಲಿ ಗುರುವಾರ ಬೆಳಗ್ಗೆೆಯಿಂದ ಸಂಜೆವರೆಗೂ ಡಿ.ಕೆ. ಸುರೇಶ್ ಅವರ ವಿಚಾರಣೆ ನಡೆದಿದ್ದು, ಮತ್ತೆೆ ಶುಕ್ರವಾರ ಬೆಳಗ್ಗೆೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸಮನ್‌ಸ್‌ ನೀಡಲಾಗಿದೆ.
ನವದೆಹಲಿಯ ಫ್ಲಾಾಟ್‌ನಲ್ಲಿ ಸಿಕ್ಕಿಿದ ಹಣದ ಬಗ್ಗೆೆ ವಿಚಾರಣೆಗೆ ಅ.7ರೊಳಗೆ ಹಾಜರಾಗಬೇಕೆಂದು ಇ.ಡಿ ಅಧಿಕಾರಿಗಳು ಸಂಸದ ಡಿ.ಕೆ. ಸುರೇಶ್‌ಗೆ ನೋಟಿಸ್ ನೀಡಿದ್ದರು. ಮನಿ ಲಾಂಡರಿಂಗ್ ಪ್ರಕರಣದಲ್ಲಿ 1 ತಿಂಗಳಿನಿಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿಚಾರಣೆ ನಡೆಸಲಾಗುತ್ತಿಿದೆ.

Leave a Reply

Your email address will not be published. Required fields are marked *