Sunday, 25th September 2022

ನಿಧಿ ಹೊತ್ತ ವಿಮಾನ ಹೋದದ್ದೆಲ್ಲಿಗೆ ?

ವಿಶ್ಲೇಷಣೆ

ನಂಜನಗೂಡು ಪ್ರದ್ಯುಮ್ನ

vvpradyu@gmail.com

ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇವರನ್ನು ಜೈಲಿಗೆ ಕಳಿಸಿ, ಸೈನ್ಯೆಯ ಮೂರು ತುಕಡಿಗಳನ್ನು ಜೈಗಡ್ ಕೋಟೆಗೆ ಕಳುಹಿಸ ಲಾಯಿತು. ಯಾವುದೇ ಜಾಗವನ್ನು ಬಿಡದೇ ಎಲ್ಲ ಜಾಗವನ್ನು ಅಗೆದು ನಿಽಯನ್ನು ಹುಡುಕುವಂತೆ ಆದೇಶ ಹೊರಡಿಸಲಾ ಯಿತು.

1975 ರಲ್ಲಿ ಭಾರತ ದೇಶದ ಮೇಲೆ ಹೇರಲಾಗಿದ್ದ ತುರ್ತುಪರಿಸ್ಥಿತಿಯ ಬಗ್ಗೆ ಎಲ್ಲರಿಗೂ ತಿಳಿದೇ ಇರುತ್ತದೆ. ಅದರಲ್ಲೂ ಆ ಸಂದರ್ಭಕ್ಕೆ ಸಾಕ್ಷಿಯಾದ ವರಿಗಂತೂ ಮರೆಯಲಾಗದ ಘಟನೆಗಳಲ್ಲಿ ಒಂದು. ಹಾಗೂ ಆ ಘಟನೆಯ ನೈಜತೆಯನ್ನು ತುಂಬಾ ಹತ್ತಿರದಿಂದ ಬಲ್ಲವರೂ ಕೂಡ. ಆದರೇ ಇಂದಿನ ತಲೆಮಾರಿಗೆ ಅಥವ ಮುಂಬರುವ ಪೀಳಿಗೆಗೆ ತುರ್ತುಪರಿಸ್ಥಿತಿ ಮತ್ತು ಆ ಸಂದರ್ಭದಲ್ಲಿ ಆದ ಬೆಳವಣಿಗೆಗಳ ಬಗ್ಗೆ ನೈಜ ಸತ್ಯಗಳನ್ನು ತೆರೆದಿಡುವ ಕೆಲಸವಾಗಬೇಕಿತ್ತು ಮತ್ತು ಆ ಕೆಲಸವಾಗುತ್ತಿದೆ ಕೂಡ.

ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿಯ ಆ ಕರಾಳ ಮುಖ, ಅದರ ಹಿಂದಿನ ಶಕ್ತಿಗಳು, ತಂತ್ರಗಾರಿಕೆ ಎಲ್ಲವೂ ಒಂದು ಕಡೆಯಾದರೇ ಅದನ್ನು ಹೊರತಾಗಿ ಬೆಳಕಿಗೇ ಬಾರದ ಅನೇಕ ಘಟನೆಗಳು ಹೊರ ಬರದೇ ಒಳಗೆ ಹುದುಗಿ ಹೋಗಿದೆ. ಆ ಹುದುಗಿಟ್ಟ ವಿಚಾರಗಳಲ್ಲಿ, ‘ಹುದುಗಿಟ್ಟ ನಿಧಿ’ಯ ವಿಚಾರವೂ ಒಂದು.

ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣ ಗಳಲ್ಲಿ ತುಂಬಾ ಚೆರ್ಚೆಗೆ ಗ್ರಾಸವಾಗಿದೆ. ಇತಿಹಾಸ ತಜ್ಞೆ ಸೌಜನ್ಯಾ ಕೌಶಿಕ್, ಸಾಮಾಜಿಕ ಜಾಲತಾಣದ ಖಾಸಗಿ ಚಾನೆಲ್ ಒಂದರಲ್ಲಿ, ನಿಧಿ ಮತ್ತು ಇಂದಿರಾಗಾಂಧಿ ಹಾಗೂ ತುರ್ತುಪರಿಸ್ಥಿತಿ ಮೂರಕ್ಕೂ ಸಂಬಂಧಿಸಿದ ಕೆಲವು ರೋಚಕ ಮಾಹಿತಿ ಗಳನ್ನು ತೆರೆದಿಡುವ ಕೆಲಸ ಮಾಡಿದ್ದಾರೆ.

ಇಂದಿರೆಯ ನಿಧಿ ಶೋಧದ ಬಗ್ಗೆ ಸೌಜನ್ಯಾ ಅವರ ಮಾತುಗಳ ಕೇಳುವುದಾದರೇ, ಮೊಗಲ್ ಬಾದಶಾ ಜಲಾಲುದಿನ್
ಮೊಹಮದ್ ಅಕ್ಬರ್, ಜೋದಾಬಾಯಿಯನ್ನು ವಿವಾಹವಾದ ವಿಚಾರ ಎಲ್ಲರಿಗೂ ತಿಳಿದಿದೆ. ವಿವಾಹದ ನಂತರ ಜೋದಾ ಬಾಯಿ ಪರಿವಾರದ ಮಾನ್ ಸಿಂಗ್, ಅಕ್ಬರ್ ಸೇನೆಯಲ್ಲಿ ವಿಶ್ವಾಸಾರ್ಹ ಸೇನಾಧಿಪತಿಯಾಗಿದ್ದ. ಸೋಲಿಲ್ಲದ ಸರದಾರ ನಾಗಿದ್ದ. ಒಂದು ದಿನ ಅಕ್ಬರ್, ಮಾನ್‌ಸಿಂಗ್‌ನನ್ನು ಕರೆದು ‘ಅಫ್ಘಾನಿಸ್ಥಾನದಲ್ಲಿ ಪರೆಶಾನಿಯಾಗುತ್ತಿದೆ. ಆ ಪ್ರಾಂತ್ಯ ದಲ್ಲಿ ಬೇರೆ ಬೇರೆ ಆದಿವಾಸಿ ಜನಾಂಗದವರಿದ್ದಾರೆ.

ಅವರಾರೂ ನಮ್ಮ ಮೊಗಲ್ ಆeಗಳನ್ನು ಪಾಲಿಸುತ್ತಿಲ್ಲ. ಅಲ್ಲಿ ಮೊಗಲ್ ಆಜ್ಞೆಗಳು ಪಾಲಿಸುವಂತಹ ವಾತಾವರಣ ನಿರ್ಮಿಸಿ’ ಎಂದ. ಮಾನ್ಸಿಂಗ್, ದೊಡ್ಡ ರಜಪೂತ್ ಸೈನ್ಯದ ಒಂದು ತಂಡದೊಂದಿಗೆ ಅಲ್ಲಿಗೆ ತೆರಳಿ, ಅಲ್ಲಿದ್ದ ಎರಡು ‘ಯುಸೆ-ಕ್ ಮತ್ತು ರೋಶನೀಯ’ ಆದಿವಾಸಿಗಳನ್ನು ಸೋಲಿಸಿ ಎಲ್ಲ ಕೋಟೆಗಳ ಮೇಲೆ ಮೊಗಲ್ ಭಾವುಟವನ್ನು ಹಾರಿಸಿ, ಅವರೆಲ್ಲರೂ ಮೊಗಲ್ ಆeಗಳನ್ನು ಪಾಲಿಸುವಂತೆ ಮಾಡಿ ಹಿಂತಿರುಗಿ ಬಂದ. ಈ ಯುದ್ಧದ ಸಂದರ್ಭದಲ್ಲಿ ಮಾನ್ಸಿಂಗ್‌ಗೆ ಅಪಾರ ಆಸ್ತಿಪಾಸ್ತಿ ದೊರಕಿತ್ತು. ಕೋಟೆಗಳನ್ನು ಮೊಗಲ್ ವಶಕ್ಕೆ ಒಪ್ಪಿಸಿದ ಮಾನ್ಸಿಂಗ್, ಅಲ್ಲಿ ಸಿಕ್ಕ ಆಸ್ತಿಪಾಸ್ತಿಯನ್ನು ಮಾತ್ರ ತನ್ನ ಸಾಮ್ರಾಜ್ಯ ಆಮೀರ್‌ಗೆ ತಂದ. ಯಾರಿಗೂ ತಿಳಿಯದಂತೆ ನೆಲಮಾಳಿಗೆಯಲ್ಲಿ ಮುಚ್ಚಿಟ್ಟ.

ಇವೆಲ್ಲ ಆದ 200 ವರ್ಷಗಳ ನಂತರ, ಜೈಗಡ ಕೋಟೆ ನಿರ್ಮಾಣವಾದ ಕಾಲದಲ್ಲಿ, ಆಮೀರ್‌ನಿಂದ ಜೈಗಡ್ ಕೋಟೆಗೆ ಒಂದು ಸುರಂಗ ಮಾರ್ಗವನ್ನು ನಿರ್ಮಸಲಾಯಿತು. ಅ ಸುರಂಗ ಮಾರ್ಗವಾಗಿ ಆಮೀರನಲ್ಲಿ ಹೂತಿದ್ದ ಅಷ್ಟೂ ನಿಧಿಯನ್ನು ಜೈಗಡ್ ಕೋಟೆಗೆ ಸ್ಥಳಾಂತರಿಸಲಾಯಿತು ಎಂಬ ಮಾತಿದೆ. 1976ರಲ್ಲಿ ಈ ಊಹಾಪೋಹಗಳಿಗೆ ಮತ್ತೆ ಪುಷ್ಟಿ ನೀಡಿತು. ನಮಗೆಲ್ಲ ರಿಗೂ ತಿಳಿದಂತೆ 1975ರಲ್ಲಿ ನಮ್ಮ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಲಾಗಿತ್ತು.

ಆ ಸಂದರ್ಭದಲ್ಲಿ ಶ್ರೀಮತಿ ಇಂದಿರಾಗಾಂಧಿ ಅವರ ಕೈಗೆ ‘ಹ- ತಾಲಿಸ್ಮತಿಯೇ ಆಮೀರ್’ ಎಂಬ ಪುಸ್ತಕ ಸೇರಿತು. ‘ಹಫ್ತ್’
ಎಂದರೇ ಏಳು, ಹಫ್ತ್ ತಾಲಿಸ್ಮತಿಯೇ ಆಮೀರ್ ಎಂದರೆ ಏಳು ದೊಡ್ಡ ಕಬ್ಬಿಣದ ಪೆಟ್ಟಿಗೆ ಭರ್ತಿ ನಿಧಿ ಆಮೀರ್ ಸಾಮ್ರಾಜ್ಯ ದಲ್ಲಿ ಬಚ್ಚಿಡಲಾಗಿದೆ ಎಂದು ಅರ್ಥ. ಅಂದಿನ ಜೈಪುರದ ಮಹಾರಾಣಿ ಗಾಯತ್ರಿ ದೇವಿ ಮತ್ತು ಆಕೆಯ ಮಗ ಬ್ರಿಗೆಡಿಯರ್ ಮಹಾವೀರ್ ಚಕ್ರ ಭವಾನಿ ಸಿಂಗ್ ಇಬ್ಬರನ್ನು ತಿಹಾರ್ ಜೈಲಿಗೆ ತಳ್ಳಲಾಯಿತು.

ಇಂದಿರಾಗಾಂಧಿ ಮತ್ತು ಗಾಯತ್ರಿದೇವಿ ಇಬ್ಬರೂ ರವಿಂದ್ರನಾಥ್ ಟ್ಯಾಗೋರ್ ಅವರ ಶಾಂತಿನಿಕೇತನ್ ಶಾಲೆಯಲ್ಲಿ ಸಹಪಾಠಿಗಳಾಗಿದ್ದವರು. ಅಂದಿನಿಂದಲೇ ಇಂದಿರಾಗಾಂಧಿ ಮತ್ತು ಗಾಯತ್ರಿದೇವಿ ಇಬ್ಬರ ಮಧ್ಯೆ ಜಟಾಪಟಿ ಇತ್ತು. ಅದಲ್ಲದೇ ಚಕ್ರವರ್ತಿ ರಾಜಗೋಪಾಲಚಾರಿ ಅವರ ಸ್ವತಂತ್ರ ಪಾರ್ಟಿ ಮೂಲಕ ಗಾಯತ್ರಿದೇವಿ ಮೂರು ಬಾರಿ ಸಂಸದೆಯಾಗಿ ಆಯ್ಕೆ ಯಾಗಿದ್ದರು.

ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಇವರನ್ನು ಜೈಲಿಗೆ ಕಳಿಸಿ, ಸೈನ್ಯೆಯ ಮೂರು ತುಕಡಿಗಳನ್ನು ಜೈಗಡ್ ಕೋಟೆಗೆ ಕಳುಹಿಸ ಲಾಯಿತು. ಯಾವುದೇ ಜಾಗವನ್ನು ಬಿಡದೇ ಎಲ್ಲ ಜಾಗವನ್ನು ಅಗೆದು ನಿಧಿಯನ್ನು ಹುಡುಕುವಂತೆ ಆದೇಶ ಹೊರಡಿಸ ಲಾಯಿತು. ರಾಜವಂಶಸ್ಥರ ಸಹಾಯಕರಾದ ಬಕ್ಷಿ ಪರಿವಾರದ ಒಬ್ಬನನ್ನು ಕರೆದು ತಂದು ಇಂಟ್ರಾಗೇಟ್ ಕೂಡ ಮಾಡಲಾಯಿತು. ಇವೆಲ್ಲ ಬೆಳವಣಿಗೆಯ ಮಧ್ಯೆ ಪಾಕಿಸ್ಥಾನದ ಅಧ್ಯಕ್ಷ ಜುಲಿಕರ್ ಅಲಿ ಬುಟ್ಟೋ, ಇಂದಿರಾಗಾಂಧಿ ಅವರಿಗೆ
ಒಂದು ಪತ್ರದ ಮುಖೇನ ‘ದೇಶ ವಿಭಜನೆ ಸಂದರ್ಭದಲ್ಲಿ ನಿಮ್ಮ ತಂದೆಯಾದ ನೆಹರು ಅವರು ನೀಡಿದ ವಾಗ್ದಾನದಂತೆ
ಭಾರತದಲ್ಲಿ ಯಾವುದೇ ನಿಧಿ ಸಿಕ್ಕಿದರೂ ಅದರಲ್ಲಿ ನಮಗೂ ಪಾಲಿದೆ’ ಎಂದು ಬರೆದು ಕಳಿಸಿದರು.

5 ರಿಂದ 6 ತಿಂಗಳು ಅಗೆಯುವ ಕೆಲಸ ನಂತರ ನಿಧಿ ಹುಡುಕುವುದರಲ್ಲಿ ಯಶಸ್ವಿಯಾದರು. ಈ ಮಧ್ಯೆ, ಟೈಮ್ಸ್ ಆಫ್  ಇಂಡಿಯಾ ಪತ್ರಿಕೆಯಲ್ಲಿ ಒಂದು ಸಂದರ್ಶನ ಪ್ರಕಟವಾಗಿತ್ತು. ನನ್ನ ಹೆಸರು ಆನಂದ್. ನಾನು ಜೈಪುರದವನು. ೧೯೭೧ರಲ್ಲಿ ಭಾರತ ಸೇನೆಯನ್ನು ಸೇರಿದೆ. ಜೈಗಡ್ ಕೋಟೆಯನ್ನು ಅಗೆದು ನಿಧಿ ತೆಗೆಯುವ ಕಾರ್ಯದಲ್ಲಿ ನಾನು ಇದ್ದೆ. ತಿಂಗಳುಗಟ್ಟಲೆ ಕೆಲಸ ನಡೆಯಿತು. ನಂತರ ನಿಧಿ ಕೂಡ ಸಿಕ್ಕಿತು.

ನಂತರ ಒಂದು ದಿನ ಸಂಪೂರ್ಣವಾಗಿ ದಿಲ್ಲಿ-ಜೈಪುರ್ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು. ಸಾರ್ವಜನಿಕರಿಗೆ, ಹೆzರಿ ಸಂಚಾರಕ್ಕೆ ಅವಕಾಶವಿರಲಿಲ್ಲ. ಆ ಸಂದರ್ಭದಲ್ಲಿ ಸುಮಾರು 50 ಆಮಿರ್ ಟ್ರಕ್‌ಗಳಲ್ಲಿ ನಿಧಿಯನ್ನು ಸರ್ವಾಜನಿಕರಿಗೆ ಕಾಣ ದಂತೆ ದಿಲ್ಲಿಗೆ ಸಾಗಿಸಲಾಯಿತು. ಅಲ್ಲಿಂದ ನೇರವಾಗಿ ಪಾಲಂ ಏರ್ಪೋಟ್ ಗೆ ತಲುಪಿತು. ಏಪೋರ್ಟ್‌ನಲ್ಲಿ ಟ್ರಾನ್ಸ್ ಪೋರ್ಟ್ ಏರ್ ಕ್ರಾಫ್ಟ್ ‘ಎಎನ್12’ನ ಎರಡು ವಿಮಾನಗಳು ಸಿದ್ದವಾಗಿ ನಿಂತಿದ್ದವು.

ಆಮಿರ್ ಟ್ರಕ್‌ನಲ್ಲಿದ್ದ ನಿಧಿಗಳನ್ನು ಈ ವಿಮಾನಗಳಿಗೆ ಸಾಗಿಸಲಾಯಿತು. ಕಾಂಗ್ರೆಸ್ ಸರಕಾರದ ತಾಕೀತಿನಂತೆ,
ಈ ಎರಡೂ ವಿಮಾನಗಳ ಲಾಗ್ ಡೀಟೈಲ್ಸ ಯಾವ ರಿಜಿಸ್ಟರ್ ನಲ್ಲೂ ಬರೆಯಲಿಲ್ಲ. ಈ ವಿಮಾನದ ಟೈಲ್ ನಂಬರ್ ಕೂಡ
ಎಲ್ಲಿಯೂ ನೋಟ್ ಮಾಡಿಕೊಳ್ಳಲಿಲ್ಲ. ಬಹು ಮುಖ್ಯವಾಗಿ ಈ ವಿಮಾನ ಎಲ್ಲಿಗೆ ಹೋಗುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ ಎಂದು ಸಂದರ್ಶನವೊಂದರಲ್ಲಿ ಆನಂದ್ ಹೇಳಿಕೆಯನ್ನು ಪ್ರಕಟಿಸಲಾಯಿತು.

ನಾಲ್ಕು ತಿಂಗಳ ನಂತರ ಇಂದಿರಾಗಾಂಧಿ, ಜುಲ್ಫಿಕರ್ ಅಲಿ ಬುಟ್ಟೋಗೆ ಒಂದು ಪತ್ರದ ಮುಖೇನ ‘ಇಲ್ಲಿ ಯಾವುದೇ ನಿಧಿ ಸಿಕ್ಕಿಲ್ಲ’ ಎಂದು ಉತ್ತರ ಬರೆದು ಕಳಿಸಿದರು. ಸರಿ ಎಂದು ಪಾಕ್‌ನ ಅಧ್ಯಕ್ಷ ಸುಮ್ಮನಾದರು. ಆದರೇ ಭಾರತದಲ್ಲಿ ಈ ಎಲ್ಲವನ್ನು ನೋಡಿದ ಕೆಲವು ಕಣ್ಣುಗಳು ಪ್ರಶ್ನಿಸಿದಾಗ, ‘ಕೇವಲ ಒಂದಿಷ್ಟು ಬೆಳ್ಳಿ ಸಿಕ್ಕಿತು, ಮತ್ತೊಮ್ಮೆ ಬೆಳ್ಳಿ ಜತೆಗೆ ಸ್ವಪ
ಪುಡಿ ಬೆಳ್ಳಿ ಮತ್ತೊಂದು ಬಾರಿ ಇದೆಲ್ಲದರ ಜತೆ ಸ್ವಲ್ಪ ಚಿನ್ನ ಸಿಕ್ಕಿದೆ’ ಎಂದು ಹೇಳಲಾಯಿತು.

ಆದರೆ ಅಲ್ಲಿ ಏನು ಸಿಕ್ಕಿದೆ, ಎಷ್ಟು ಸಿಕ್ಕಿದೆ ಎಂದು ಯಾರಿಗೂ ತಿಳಿಯಲೇ ಇಲ್ಲ. ಇದೆಲ್ಲ ಆದ ನಂತರ ಕೆಲವು ಊಹಾಪೋಹ ಗಳು ಪ್ರಾರಂಭವಾದವು. ಕೆಲವರ ಪ್ರಕಾರ ಈ ಎರಡು ವಿಮಾನ ಸ್ವಿಜರ್ ಲೆಂಡ್‌ಗೆ ಹೋಯಿತು ಎಂದರೆ, ಇನ್ನು ಕೆಲವರು ಇಲ್ಲ
ಇಟಲಿಗೆ ಹೋಗಿದೆ ಎಂದರು, ಮತ್ತೆ ಕೆಲವರು ಒಂದು ಇಟಲಿಗೆ ಮತ್ತೊಂದು ಪಾಕಿಸ್ಥಾನಕ್ಕೆ ಹೋಗಿದೆ ಎಂದರು. ಸೌಜನ್ಯಾ ಕೌಶಿಕ್ ಅವರ ಮೂಲಕ ಈ ಖಜಾನೆ ವಿಚಾರ ಬೆಳಕಿಗೆ ಬಂದಿದೆ. ಆದರೇ ಇಂಥ ಅದೆಷ್ಟು ವಿಚಾರಗಳು ಹೊರಬರದೇ ನಿಗೂಢವಾಗಿ ಖಜಾನೆಯ ಮುಚ್ಚಿಡಲಾಗಿದೆಯೋ ತಿಳಿದಿಲ್ಲ.

ಆದರೇ ಒಂದಂತೂ ಸತ್ಯ, ಈ ಬೃಹತ್ ಖಜಾನೆಯನ್ನು ಹೊತ್ತು ಹಾರಿದ ಎರಡು ವಿಮಾನಗಳು, ಯಾವ ದಿಕ್ಕಿಗೆ ಹಾರಿತು, ಯಾವ ಅಂಗಳಕ್ಕೆ, ಯಾರ ಖಜಾನೆಗೆ ಸೇರಿತು ದು ಇಂದಿಗೂ ಪ್ರಶ್ನೆಯಾಗಿಯೇ ಉಳಿದುಕೊಂಡಿದೆ! ಇದಕ್ಕೆ ಉತ್ತರ ನಿಧಿ ಕಾರ್ಯಾಚರಣೆ, ಸಾಗಾಣೆ ಕಾರ್ಯದಲ್ಲಿ ಭಾಗಿಯಾಗಿದ್ದ ಅಂದಿನ ರಾಜಕೀಯ ಮುತ್ಸದ್ಧಿಗಳೇ ಹೇಳಬೇಕಿದೆ. ಅಥವಾ ಗಾಂಧಿ ಪರಿವಾರ ಬಾಯಿಬಿಟ್ಟರೆ ಬಿಡಬೇಕು ಅಷ್ಟೆ.