Wednesday, 26th February 2020

ಎಪ್ಪತ್ಮೂರರ ಪ್ರೌಢಾವಸ್ಥೆೆಯಲ್ಲಿ ಸಾಧನೆಗೈದದ್ದು, ಉಳಿದದ್ದು!

ಎಲ್.ಪಿ.ಕುಲಕರ್ಣಿ, ಬಾದಾಮಿ


ಅವಲೋಕನ

ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸ ಎಲ್ಲರಿಗೂ ಗೊತ್ತಿರುವಂಥದ್ದೇ. ಅದೇನು ಮಹಾ, ಬ್ರಿಿಟಿಷರ ವಿರುದ್ಧ ಹೋರಾಡಿ ನಮ್ಮದೇ ಸರಕಾರ ಸ್ಥಾಾಪನೆಯಾದ ದಿನ ಎಂದು ಮೂಗು ಮುರಿಯುತ್ತದೆ, ನಮ್ಮ ಯುವ ಸಮುದಾಯ. ‘ಅಂದು ಹೋರಾಡಿ ಸ್ವಾಾತಂತ್ರ್ಯ ತಂದು ಕೊಟ್ಟರು, ಅದಕ್ಕೆೆ ಇಂದು ನಾವೇನು ಮಾಡುವುದು?’ ಎಂದು ಹಲವರು ಪ್ರಶ್ನೆೆ ಕೇಳುತ್ತಾಾರೆ. ಸಿದ್ಧ ಮಾದರಿಯ ಒಂದು ಸಂದೇಶ, ರಾಷ್ಟ್ರಧ್ವಜ, ಭೂಪಟ, ಮಹಾತ್ಮ ಗಾಂಧಿ ಚಿತ್ರ ಇರುವ ಚಿತ್ರ ಸಂದೇಶವನ್ನು ವಾಟ್‌ಸ್‌‌ಆ್ಯಪ್ನಲ್ಲಿ ತೇಲಿ ಬಿಡುತ್ತಾಾರೆ. ‘ಹ್ಯಾಾಪಿ ಇಂಡಿಪೆಂಡೆನ್‌ಸ್‌ ಡೇ’ ಎಂದು ಹೇಳಿ ತಾವು ಸ್ವಾಾತಂತ್ರ್ಯ ದಿನಾಚರಣೆ ಆಚರಿಸಿದೆವು ಎಂದು ಸಂಭ್ರಮಿಸುತ್ತಾಾರೆ. ಈ ಸಂದೇಶಗಳನ್ನು ಎಲ್ಲರಿಗೂ ಕಳುಹಿಸುತ್ತಾಾರೆ. ಅವನ್ನು ಪಡೆದುಕೊಂಡ ಎಷ್ಟೋೋ ಮಂದಿ ಸಂದೇಶಗಳನ್ನು ತೆರೆದೇ ನೋಡುವುದಿಲ್ಲ. ರಜಾ ಸಿಕ್ಕಿಿತೆಂದು ಪ್ರವಾಸಕ್ಕೆೆ ಹೊರಡುತ್ತಾಾರೆ. ಮನೆಯಲ್ಲಿ ಕುಳಿತು ಅಂದು ಟಿವಿಯಲ್ಲಿ ಪ್ರಸಾರವಾಗುವ ದೇಶಭಕ್ತಿಿಯಾಧರಿತ ಸಿನಿಮಾಗಳನ್ನು ವೀಕ್ಷಿಸುತ್ತಾಾರೆ. ಇಲ್ಲವೇ ನಿದ್ದೆ ಹೊಡೆಯುತ್ತಾಾರೆ. ಇನ್ನು ಕೆಲವರಂತೂ ಮೊಬೈಲಿಗೆ ಚುಚ್ಚಿಿದ ಇಯರ್ ಫೋನನ್ನು ಕಿವಿಯಲ್ಲಿ ತುರುಕಿಕೊಂಡು ತಮಗಿಷ್ಟವಾದ ಹಾಡು ಕೇಳುವುದರಲ್ಲೇ ಮಗ್ನರಾಗಿಬಿಡುತ್ತಾಾರೆ. ‘ಇಷ್ಟೇನಾ ನಾವು ಸ್ವಾಾತಂತ್ರ್ಯ ದಿನಾಚರಣೆಗೆ ಕೊಡುವ ಮಹತ್ವ?!’ಎಂದು ನಮ್ಮನ್ನು ನಾವು ಪ್ರಶ್ನಿಿಸಿಕೊಳ್ಳಬೇಕಾದಂತಹ ಪರಿಸ್ಥಿಿತಿ ನಿರ್ಮಾಣವಾಗಿಬಿಟ್ಟಿಿದೆ.

ಎಪ್ಪತೆರಡು ವರ್ಷಗಳು ಜೀವನದಲ್ಲಿ ಪ್ರೌೌಢಾವಸ್ಥೆೆಯ ಮೆಟ್ಟಿಿಲನ್ನೇರಿದ್ದರ ಕಾಲಮಾನ ಸೂಚಿ. ಪ್ರಜಾತಂತ್ರ ರಾಷ್ಟ್ರವಾಗಿ ಭಾರತವೂ ಈ ಪ್ರೌೌಢಾವಸ್ಥೆೆಯನ್ನು ತಲುಪಿದಂತಾಗಿದೆ. 1947 ರಲ್ಲಿ ಬ್ರಿಿಟಿಷರ ಕಪಿಮುಷ್ಟಿಿಯಿಂದ ಹೊರಬಂದಾಗ-ಈ ದೇಶ ಹೆಚ್ಚು ಕಾಲ ಪ್ರಜಾಪ್ರಭುತ್ವವಾಗಿ ಉಳಿಯುವುದು ಕಷ್ಟಸಾಧ್ಯ ಎಂಬ ಅಭಿಪ್ರಾಾಯ ಅಂತಾರಾಷ್ಟ್ರೀಯ ವಲಯದಲ್ಲಿ ವ್ಯಾಾಪಕವಾಗಿ, ಬಿಸಿ ಚರ್ಚೆಯ ವಿಷಯವಾಗಿ ಹಬ್ಬಿಿತ್ತು. ನಾವು ಪರಕೀಯತೆಯಿಂದ ಮುಕ್ತಿಿ ಪಡೆದ ಸಂದರ್ಭದಲ್ಲೇ ದಾಸ್ಯಮುಕ್ತಗೊಂಡ ಕೆಲ ರಾಷ್ಟ್ರಗಳು ಪ್ರಜಾಪ್ರಭುತ್ವ ಉಳಿಸಿಕೊಳ್ಳಲಾಗದಿದ್ದುದು-ವಿಶೇಷವಾಗಿ ನೆರೆಯ ಪಾಕಿಸ್ತಾಾನ ಮಿಲಿಟರಿ ಆಡಳಿತಕೊಳ್ಳಪಟ್ಟಿಿದ್ದು- ಭಾರತದ ಜನಾಡಳಿತ ವ್ಯವಸ್ಥೆೆಯ ಭವಿಷ್ಯದ ಮೇಲೂ ಅನುಮಾನದ ದೃಷ್ಟಿಿ ಹರಿಯಲು ಕಾರಣವಾಗಿತ್ತು. ಆದರೆ ಈ ಎಲ್ಲ ಸಂಶಯಗಳನ್ನು ಬದಿಗೆ ಸರಿಸಿ, ಎದುರಾದ ಎಲ್ಲ ರೀತಿಯ ಸವಾಲುಗಳನ್ನು ಹಿಂದಡಿ ಇರಿಸದೇ ಸಮರ್ಥವಾಗಿ ಎದುರಿಸಿಕೊಂಡೇ ಹಿಂದೂಸ್ಥಾಾನ ಜಾಗತಿಕ ಮಟ್ಟದಲ್ಲಿ ಇಂದಿಗೂ *’ಟಠಿ ಏಛ್ಞಿಿಜ್ಞಿಿಜ ಈಛಿಞಟ್ಚ್ಟ್ಚ ’ ಯಾಗಿ ಮುನ್ನಡೆಯುತ್ತಿಿರುವುದೇ ಬಹು ದೊಡ್ಡ ಸಾಧನೆ. ಗ್ರಾಾಮ-ಗ್ರಾಾಮಗಳಲ್ಲಿ, ರಾಜ್ಯ-ರಾಜ್ಯಗಳಲ್ಲಿ, ವಿಭಿನ್ನ ಪ್ರದೇಶಗಳ ಸಂಸ್ಕೃತಿ-ಆಚಾರ-ವಿಚಾರಗಳಲ್ಲಿ ಬಹುವಿಧದ ಭಿನ್ನತೆಗಳನ್ನು ಹೊಂದಿದ್ದರೂ, ಭಾರತ ಯಾವಾಗಲೂ ಏಕತೆಯನ್ನು ಉಳಿಸಿಕೊಂಡು ಪ್ರಗತಿಯ ಪಥದತ್ತ ಸಾಗುತ್ತಿಿರುವುದು ಮಹಾನ್ ಸಾಧನೆ ಎಂದರೆ ತಪ್ಪಾಾಗಲಾರದು.

ಏಕತೆಯೊಂದೇ ಭಾರತೀಯ ಪ್ರಜಾಪ್ರಭುತ್ವದ ಹೆಗ್ಗುರುತು. ಈಶಾನ್ಯದ ಕೆಲವು ರಾಜ್ಯಗಳಲ್ಲಿ, ಉತ್ತರದ ಪಂಜಾಬ್ ನಲ್ಲಿ ಕೆಲ ಕಾಲ ರಾಷ್ಟ್ರದ ಒಕ್ಕೂಟ ವ್ಯವಸ್ಥೆೆಯಲ್ಲಿ ಬಿರುಕುಂಟು ಮಾಡುವ ವಿಫಲ ಯತ್ನಗಳು ನಡೆದದ್ದಿದೆ. ಆದರೆ ಕಾಲಕಾಲಕ್ಕೆೆ ಆಯಾ ಸರಕಾರಗಳು ದೇಶದ ಒಗ್ಗಟ್ಟನ್ನು ಮುರಿಯುವ ಈ ಪ್ರಯತ್ನಗಳನ್ನು ಸಮರ್ಪಕವಾಗಿ ಹತ್ತಿಿಕ್ಕಿಿ ಏಕತೆಯನ್ನು ಕಾಪಾಡಿವೆ. ಭಾರತದ ಕಳಶಪ್ರಾಾಯವಾದ ಕಾಶ್ಮೀರವು ಅಲ್ಲಿನ ಪ್ರತ್ಯೇಕತಾವಾದಿಗಳ, ಭಯೋತ್ಪಾಾದಕರ, ಮತ್ತು ಕೆಲವು ಲಾಬಿ ಮಾಡುವ ರಾಜಕಾರಣಿಗಳ ನಡುವೆ ಸಿಲುಕಿ ಕಳೆದ ಆರೇಳು ದಶಕಗಳಿಂದ ಒದ್ದಾಡುತ್ತಿಿತ್ತು. ಇದಕ್ಕೆೆ ಅಂತ್ಯ ಹಾಡಲು ಇದುವರೆಗೂ ಯಾವ ಸರಕಾರಗಳೂ ತೆಗೆದುಕೊಳ್ಳಲಾಗದಂತಹ ದಿಟ್ಟ ನಿರ್ಧಾರವನ್ನು ಈಗಿರುವ ಕೇಂದ್ರ ಸರಕಾರ ತೆಗೆದುಕೊಂಡು 35ಎ ಮತ್ತು 370 ಎಂಬ ವಿಶೇಷ ವಿಧಿಗಳನ್ನು ರದ್ದುಗೊಳಿಸಿದ್ದು ದೇಶದ ಬಹು ದಶಕದ ಪ್ರಯತ್ನವೊಂದನ್ನು ಈಡೇರಿಸಿದಂತಾಗಿದೆ. ಬಾಂಗ್ಲಾಾದ ಅಕ್ರಮ ವಲಸಿಗರನ್ನು ನಿಯಂತ್ರಿಿಸಲು ವಿಶೇಷ ಕಾರ್ಯಪಡೆಯನ್ನು ರಚಿಸುವ ಮೂಲಕ ಪಶ್ಚಿಿಮ ಬಂಗಾಳವನ್ನೊೊಳಗೊಂಡಂತೆ ದೇಶದ ಕೆಲವು ಆಯಕಟ್ಟಿಿನ ಪ್ರದೇಶಗಳಲ್ಲಿ ಕಟ್ಟೆೆಚ್ಚರದ ಕ್ರಮವನ್ನು ತೆಗೆದುಕೊಳ್ಳಲಾಗಿದೆ.

1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಿಂದ ಹಿಡಿದು, ಇತ್ತೀಚೆಗೆ ಬಾಲಕೋಟ್‌ನಲ್ಲಿ ನಡೆದ ಆತಂಕವಾದಿಗಳ ಜೊತೆ ನಮ್ಮ ಸೈನಿಕರ ಸೆಣಸಾಟದವರೆಗೆ ಪ್ರತಿ ಸಾರಿಯೂ ಪಾಕ್ ಜೊತೆಗಿನ ಕದನದಲ್ಲಿ ಭಾರತವೇ ಗೆದ್ದಂತಾಗಿದೆ. ಬ್ರಿಿಟಿಷರಿಂದ ಸ್ವಾಾತಂತ್ರ್ಯ ಸಿಕ್ಕರೂ ಕೂಡ, ನಮ್ಮ ನಡುವೇ ಇದ್ದು ಕುಕೃತ್ಯಗಳನ್ನು ಎಸಗುತ್ತಿಿರುವ ದೇಶದ್ರೋಹಿಗಳನ್ನು ಮಟ್ಟ ಹಾಕುವುದು ಭಾರತಕ್ಕೆೆ ಇದುವರೆಗಿನ ಬಹು ಬಹುದೊಡ್ಡ ಸವಾಲಾಗೇ ಪರಿಣಮಿಸಿದೆ. ಪಾಕಿಸ್ತಾಾನ, ಹೇಗಾದರೂ ಮಾಡಿ ಕಾಶ್ಮೀರವನ್ನು ವಶಪಡಿಸಿಕೊಳ್ಳಬೇಕೆಂದು ಚೀನಾದ ಜೊತೆ ಕೈ ಜೋಡಿಸಲು ಮುಂದಾಗಿದೆ. ಏಕೆಂದರೆ ಚೀನಿ ಸೈನಿಕರ ಪುಂಡಾಟಿಕೆ ನಮ್ಮ ಅರುಣಾಚಲ ಪ್ರದೇಶದಲ್ಲಿ ಇದ್ದೇಇದೆ. ಆದರೆ, ಭಾರತದಲ್ಲಾಗುತ್ತಿಿರುವ ಹೊಸ ಬೆಳವಣಿಗೆಗಳು ಚೀನಾದ ನಿದ್ದೆಗೆಡಿಸಿದೆ. ಚೀನಾಕ್ಕೆೆ ಭಾರತ ಬಹು ದೊಡ್ಡ ಮಾರುಕಟ್ಟೆೆ. ಒಂದು ವೇಳೆ ಪಾಕಿಸ್ತಾಾನದ ಜೊತೆಗೂಡಿ ಚೀನಾ, ಭಾರತದ ಮೇಲೆ ಆಕ್ರಮಣ ಮಾಡಿದರೆ, ಅದು ಭಾರತದ ಜತೆಗಿನ ತನ್ನ ಸಂಪೂರ್ಣ ವ್ಯಾಾಪಾರ ವಹಿವಾಟನ್ನು ಕಳೆದುಕೊಂಡು, ಪಾಪರ್ ಆಗುವ ಸಾಧ್ಯತೆಗಳೇ ಹೆಚ್ಚು.

ಕೇವಲ ರಾಷ್ಟ್ರವನ್ನು ದುರುಳರಿಂದ ಕಾಪಾಡುವದಷ್ಟೇ ಅಲ್ಲ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ವಿಜ್ಞಾನ-ತಂತ್ರಜ್ಞಾನ, ರಾಜಕೀಯ ಕ್ಷೇತ್ರಗಳಲ್ಲೂ ಭಾರತ ಕಳೆದ ಏಳು ದಶಕಗಳಲ್ಲಿ ಅಪ್ರತಿಮ ಸಾಧನೆ ತೋರಿರುವುದರ ಕುರಿತು ಎರಡು ಮಾತಿಲ್ಲ. ಸಾಮಾಜಿಕವಾಗಿ ನೋಡುವುದಾದರೆ, ಬಹು ದಶಕಗಳಿಂದ ಮುಸ್ಲಿಿಂ ಸಮುದಾಯದಲ್ಲಿ ನಡೆದುಕೊಂಡು ಬಂದಿದ್ದ, ಮಹಿಳೆಯರ ಶೋಷಣೆಯ ತ್ರಿಿವಳಿ ತಲಾಖ್‌ನ್ನು ಪರಿಶೀಲಿಸಿ, ಇತ್ತೀಚೆಗಷ್ಟೇ ಅದನ್ನು ಕಾನೂನು ಬಾಹಿರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಅಂತೆಯೇ ಮಹಿಳಾ ಸಬಲೀಕರಣದ ವಿಚಾರದಲ್ಲಿ ಸದ್ಯದ ಬೆಳವಣಿಗೆಗಳು ಬಹಳ ಪ್ರೋೋತ್ಸಾಾಹದಾಯಕವಾಗಿವೆ. ಶಾಲಾ ಶಿಕ್ಷಣದಲ್ಲಿ ಲಿಂಗಸಮಾನತೆ ಸಾಧಿಸುವಲ್ಲಿ ಭಾರತ ಯಶಸ್ಸಿಿನ ಹಾದಿಯಲ್ಲಿದೆ. ಮ್ಯಾಾನೇಜಮೆಂಟ್, ವೈದ್ಯಕೀಯ ಮುಂತಾದ ತಾಂತ್ರಿಿಕ ಮತ್ತು ವೃತ್ತಿಿಪರ ಶಿಕ್ಷಣದಲ್ಲಿ ಮಹಿಳೆಯರ ಪ್ರಾಾತಿನಿಧ್ಯ ಗಮನಾರ್ಹವಾಗಿ ಅಧಿಕಗೊಳ್ಳುತ್ತಿಿದೆ. 1951 ರಲ್ಲಿ ಶೇ.9 ರಷ್ಟಿಿದ್ದ ಮಹಿಳಾ ಸಾಕ್ಷರತೆ ಪ್ರಮಾಣ 2011 ರಲ್ಲಿ ಶೇ.65 ಕ್ಕೆೆ ಏರಿದೆ. ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಲಿದೆ. ಮಹಿಳೆಯರ ಆರ್ಥಿಕ ಸಬಲತೆ ಕೂಡಾ ಕಳೆದ ಕೆಲವು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿಿದೆ. ಮಹಿಳೆಯರು ತಾವೇ ಸ್ವತಃ ನಿರ್ವಹಿಸುವ ಬ್ಯಾಾಂಕು ಅಥವಾ ಉಳಿತಾಯ ಖಾತೆಗಳ ಸಂಖ್ಯೆೆ 2005 – 06 ರಲ್ಲಿ ಕೇವಲ ಶೇ.15 ರಷ್ಟಿಿತ್ತು. ಈ ಪ್ರಮಾಣ2015-16 ರಲ್ಲಿ ಶೇ.53 ರಷ್ಟು ಹೆಚ್ಚಾಾಗಿದೆ.

ನಮ್ಮ ದೇಶದಲ್ಲಿ ಬಹುಪಾಲು ನಗರಗಳು ಮಹಿಳೆಯರು ವಾಸಿಸಲು ಯೋಗ್ಯವಾಗಿಲ್ಲವೆಂದೇ ಹೇಳಬಹುದು. ಇದಕ್ಕೆೆ ಕಾರಣ ನಗರಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿಿರುವ ದೌರ್ಜನ್ಯ ಸೇರಿದಂತೆ ವಿವಿಧ ರೀತಿಯ ಕ್ರೈಮ್ ಗಳು. ಪ್ರಸ್ತುತ ಮಹಿಳಾ ಸುರಕ್ಷತೆಗೆ ಒತ್ತು ನೀಡಲು ‘ಸೇಫ್ ಸಿಟಿ ಸ್ಕೀಮ್’ ನ್ನು ಇದೇ ಫೆಬ್ರುವರಿ 1, 2018 ರಂದು ಆಗಿನ ಕೇಂದ್ರ ಗೃಹ ಸಚಿವರಾಗಿದ್ದ ರಾಜನಾಥ್ ಸಿಂಗ್ ವಿಧ್ಯುಕ್ತ ಚಾಲನೆ ನೀಡಿದ್ದರು. ದೇಶದ ಮಹಾ ನಗರಗಳಾದ ಮುಂಬೈ, ಅಹಮದಾಬಾದ್, ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್‌ಗಳಲ್ಲಿ ಮೊದಲ ಹಂತದಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಮಹಾನಗರಗಳನ್ನು ಮಹಿಳೆಯರಿಗೆ ಸುರಕ್ಷಿತ ತಾಣವನ್ನಾಾಗಿ ಬದಲಾಯಿಸುವುದು ಸೇಫ್ ಸಿಟಿ ಸ್ಕೀಮ್ ನ ಪ್ರಮುಖ ಉದ್ದೇಶವಾಗಿದೆ. ಇದಕ್ಕೆೆ ಜಿಐಎಸ್(ಜಿಯಾಗ್ರಾಾಫಿಕಲ್ ಇನ್ಫರ್ಮೇಷನ್ ಸಿಸ್ಟಮ್) ಮೊದಲಾಗಿ ಹಲವಾರು ನವನವೀನ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗಿದೆ.

ಮಹಿಳೆಯರ ವಿರುದ್ಧ ದೌರ್ಜನ್ಯವೆಸಗಿದ ಇಲ್ಲವೇ ಯಾವುದೇ ರೀತಿಯ ಅಪರಾಧವೆಸಗಿದ ವ್ಯಕ್ತಿಿಯ ಎಲ್ಲ ಮಾಹಿತಿ ಇದರಲ್ಲಿ ಪಡೆದುಕೊಳ್ಳಬಹುದು. ಈ ತಂತ್ರಜ್ಞಾನ ದೇಶಾದ್ಯಂತ ಲಭ್ಯವಾಗಲಿದ್ದು, ಕ್ರೈಂ ಪ್ರಕರಣಗಳ ತನಿಖೆಗೆ ಸಹಾಯಕವಾಗಲಿದೆ. ಅಲ್ಲದೇ ಇದರ ನಿರ್ವಹಣೆ ವೆಚ್ಚವೂ ಸಹ ಮಿತವಾದದ್ದು. ಮಹಿಳೆಯರ ವಿರುದ್ಧ ಲೈಂಗಿಕ ಅಪರಾಧ ಎಸಗುವವರ ವಿಚಾರಣೆಗೆ ವಿಶೇಷ ‘ಟ್ರ್ಯಾಾಕಿಂಗ್ ಸಿಸ್ಟಮ್’, ಫೊರೆನ್ಸಿಿಕ್ ಲ್ಯಾಾಬೋರೇಟರಿಗಳಲ್ಲಿ ಡಿಎನ್‌ಎ ಅನಾಲಿಸಿಸ್ ಸಾಮರ್ಥ್ಯ ಹೆಚ್ಚಿಿಸುವುದು ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಲಖನೌ, ಮದುರೈ, ಮುಂಬೈ, ಆಗ್ರಾಾ, ಚೆನ್ನೈ ಮತ್ತು ಕೋಲ್ಕತಾಗಳಲ್ಲಿರುವ ಫೊರೆನ್ಸಿಿಕ್ ಪ್ರಯೋಗಾಲಯಗಳನ್ನು ಇನ್ನಷ್ಟು ಉನ್ನತೀಕರಿಸಲು ನಿರ್ಧರಿಸಲಾಗಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಸೇಫ್ ಸಿಟಿ ಯೋಜನೆಗಾಗಿ ₹.2,920 ಕೋಟಿ ಖರ್ಚನ್ನು ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ.

ಇನ್ನು ಶೈಕ್ಷಣಿಕ ವಲಯಕ್ಕೆೆ ಬಂದರೆ, ಬಹು ನಿರೀಕ್ಷಿತ ರಾಷ್ಟ್ರೀಯ ಶೈಕ್ಷಣಿಕ ನೀತಿ-2019 ನ್ನು ರೂಪಿಸಲಾಗಿದೆ. ಪೂರ್ವ ಪ್ರಾಾಥಮಿಕದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಆಮೂಲಾಗ್ರ ಬದಲಾವಣೆ ತರಲು ಇಸ್ರೋೋ ದ ಮಾಜಿ ಅಧ್ಯಕ್ಷ ಕೆ.ಕಸ್ತೂರಿ ರಂಗನ್ ನೇತೃದ್ವದ ಸಮಿತಿ ಈ ಶಿಕ್ಷಣ ನೀತಿಯನ್ನು ಶಿಫಾರಸು ಮಾಡಿದೆ.12 ನೇ ತರಗತಿಯವರೆಗೆ ಶಿಕ್ಷಣ ಹಕ್ಕು ಕಾಯಿದೆ ವಿಸ್ತರಿಸಬೇಕು ಹಾಗೂ ಉನ್ನತ ಶಿಕ್ಷಣದಲ್ಲಿ ಲಿಬರಲ್ ವ್ಯವಸ್ಥೆೆ ಜಾರಿಗೆ ಬರಬೇಕು ಎಂಬುದು ವರದಿಯ ಮುಖ್ಯಾಾಂಶಗಳು. 484 ಪುಟಗಳ ಸುದೀರ್ಘ ವರದಿಯನ್ನು ಸಮಿತಿ ನೀಡಿದ್ದು, ಮುಂದಿನ ಒಂದು ತಿಂಗಳವರೆಗೆ ಸಾರ್ವಜನಿಕರ ಅಭಿಪ್ರಾಾಯ ಪಡೆದು ನಂತರ ಅದರ ಲೋಪದೋಷಗಳು, ಕುಂದುಕೊರತೆಗಳನ್ನು ಸರಿಪಡಿಸಿ ಕೇಂದ್ರ ಸರಕಾರ ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ರೆಡಿಯಾಗಿದೆ.

ಭಾರತವು ಬಾಹ್ಯಾಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವುದಕ್ಕೂ ಕಮ್ಮಿಿಯಿಲ್ಲ. ಚಂದ್ರಯಾನ-2ರ ಅಭೂತಪೂರ್ವ ಯಶಸ್ಸಿಿನ ಬೆನ್ನಲ್ಲೇ 2030ರ ವೇಳೆಗೆ ಸ್ವಂತ ಬಾಹ್ಯಾಾಕಾಶ ನಿಲ್ದಾಾಣ ಹೊಂದಲು ಭಾರತ ಉದ್ದೇಶಿಸಿದೆ ಎಂದು ಇಸ್ರೊೊ ಮುಖ್ಯಸ್ಥ ಕೆ.ಶಿವನ್ ಇತ್ತೀಚೆಗೆ ತಿಳಿಸಿದ್ದಾರೆ. ಗಗನಯಾನ ಯೋಜನೆಯ ಮುಂದುವರಿದ ಭಾಗ ಇದಾಗಿದೆ. ಬಾಹ್ಯಾಾಕಾಶಕ್ಕೆೆ ಗಗನಯಾತ್ರಿಿಗಳನ್ನು ಕಳುಹಿಸುವ ಯೋಜನೆಯ ಬಳಿಕ ಬಾಹ್ಯಾಾಕಾಶ ನಿಲ್ದಾಾಣದ ರೂಪುರೇಷೆಗಳು ಸಿದ್ಧವಾಗಲಿವೆ.

‘ಪ್ಯಾಾನ್ ಇಂಡಿಯಾ ನೆಟ್ ವರ್ಕ್, ರಾಷ್ಟ್ರೀಯ ಕ್ಲೌೌಡ್ (ಮೇಘರಾಜ್ ), ಜಿಯೋ ಸ್ಪೇಷಿಯಲ್, ನೇರ ಪ್ರಯೋಜನ (ನಗದು) ವರ್ಗಾವಣೆ, ಡಿಜಿ ಲಾಕರ್, ಉಮಂಗ್, ಇ-ಆಸ್ಪತ್ರೆೆ, ಇ-ನ್ಯಾಾಮ್, ಸ್ವಯಂ, ರಾಷ್ಟ್ರೀಯ ವಿದ್ಯಾಾರ್ಥಿವೇತನ ಜಾಲತಾಣ, ಪಿ ಎಮ್ ಜಿ ದಿಶಾ , ಇಂಡಿಯಾ ಬಿಪಿಓ ಸ್ಕೀಮ್, ಗೌರ್ನಮೆಂಟ್-ಇ-ಮಾರ್ಕೆಟಿಂಗ್, ಸ್ಟಾಾರ್ಟ್ ಅಪ್ ಹಬ್, ಸೈಬರ್ ಭದ್ರತೆ, ವಿಡಿಯೋ ಕಾನ್ಫರೆನ್ಸಿಿಂಗ್, ಡಿಜಿಟಲ್ ವೇದಿಕೆಗಳು’ ಇನ್ನೂ ಮುಂತಾದ ಡಿಜಿಟಲ್ ಮೂಲ ಸೌಕರ್ಯಗಳನ್ನು ಆಡಳಿತದಲ್ಲಿ ತಂದು ದೇಶದ ಆಡಳಿತವನ್ನು ಸ್ಚಚ್ಛ ಮತ್ತು ಪಾರದರ್ಶಕವನ್ನಾಾಗಿಸಲಾಗುತ್ತಿಿದೆ. ರಾಷ್ಟ್ರೀಯ ಸಾರಿಗೆ ನೀತಿ-2006ನ್ನು ನವೀಕರಿಸುತ್ತ, ಮೆಟ್ರೊೊ ರೈಲು ನೀತಿ-2017 ನ್ನು ಜಾರಿಗೆ ತರುವ ಮೂಲಕ ದೇಶದಲ್ಲಿ ಮೆಟ್ರೋೋ ರೈಲು ಸೇವೆಯನ್ನೂ ಸಹ ವಿಸ್ತರಿಸಲಾಗಿದೆ.

ಇನ್ನು ದೇಶದ ಕ್ರೀಡಾ ಸಾಧನೆಯನ್ನು ನೋಡುವುದಾದರೆ, ವಿಶ್ವ ಮಹಿಳಾ ಬಾಕ್ಸಿಿಂಗ್ ನಲ್ಲಿ ಮಿಂಚಿದ, ‘ಮ್ಯಾಾಗ್ನಿಿಫಿಸೆಂಟ್ ಮೇರಿ’ ಎಂದೇ ಹೇಸರಾಗಿರುವ ಮೇರಿ ಕೋಮ್ ಅಂತಾರಾಷ್ಟ್ರೀಯ ಬಾಕ್ಸಿಿಂಗ್ ಕ್ಷೇತ್ರದಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ
ದೇಶಕ್ಕೆೆ ಕೀರ್ತಿ ತಂದಿದ್ದಾರೆ. ಓಟಗಾರ್ತಿ ಹಿಮಾ ದಾಸ್ ಜೆಕ್ ರಿಪಬ್ಲಿಿಕ್ನಲ್ಲಿ ನಡೆದ ಆಟೋಟ ಪಂದ್ಯಾಾವಳಿಯಲ್ಲಿ 400 ಮೀಟರ್ ಓಟದಲ್ಲಿ ಚಿನ್ನ ಗೆದ್ದು, ಜುಲೈ ತಿಂಗಳೊಂದರಲ್ಲೇ ಐದು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡು ದೇಶದ ಹಿರಿಮೆಯನ್ನು ಹಿಮಾಲಯದೆತ್ತರಕ್ಕೆೆ ಒಯ್ದಿಿದ್ದಾರೆ. ಅದೇ ರೀತಿ ಮಹೇಂದ್ರ ಸಿಂಗ್ ಧೋನಿ, ರೋಹಿತ್ ಶರ್ಮಾ, ವಿರಾಟ್ ಕೋಹ್ಲಿಿ ಇನ್ನು ಮುಂತಾದ ಕ್ರಿಿಕೆಟ್ ಪಟುಗಳು ಹಲವು ದಾಖಲೆಗಳನ್ನು ನಿರ್ಮಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿಿದ್ದಾರೆ.

ಭೌಗೋಳಿಕವಾಗಿ ನಮಗಿಂತ ಚಿಕ್ಕವಾಗಿರುವ ಭೂತಾನ್, ಇಸ್ರೇಲ್‌ಗಳಂಥ ದೇಶಗಳು ಜಗತ್ತನ್ನೇ ನಿಬ್ಬೆೆರಗಾಗಿಸುವಂತೆ ಪ್ರಗತಿ ಸಾಧಿಸಿವೆ. ವಿಶ್ವದ ‘ಆನಂದಮಯ’ ದೇಶವಾಗಿರುವ ಭೂತಾನ್ ವಿದ್ಯುಚ್ಛಕ್ತಿಿ ಉತ್ಪಾಾದನೆಯಿಂದ ಸಾಕ್ಷರತೆವರೆಗೆ ಹಲವು ರಂಗಗಳಲ್ಲಿ ಅಪ್ರತಿಮ ಸಾಧನೆ ತೋರಿದ್ದರೆ ಇಸ್ರೇಲ್ ಬಂಜರು ಭೂಮಿಯಲ್ಲಿ ಹಸುರೆಬ್ಬಿಿಸಿ ಮಾಡಿರುವ ಕೃಷಿಕ್ರಾಾಂತಿ, ರಕ್ಷಣಾ ತಂತ್ರಜ್ಞಾನ ಅಭಿವೃದ್ಧಿಿ ಕ್ಷೇತ್ರದಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ನಿದರ್ಶನಗಳು ಕಣ್ಣ ಮುಂದಿವೆ. ಈ ಚಿಕ್ಕಪುಟ್ಟ ರಾಷ್ಟ್ರಗಳ ಅಪರೂಪದ ಸಾಧನೆ ಸಾಧ್ಯವಾಗಿದ್ದು ಅಲ್ಲಿನ ಜನರ ಇಚ್ಛಾಾಶಕ್ತಿಿಯಿಂದ. ದೇಶ ಕಟ್ಟುವ ಕಾಯಕದಲ್ಲಿ ಅವಿರತವಾಗಿ ತೊಡಗಿಕೊಳ್ಳುವ ನಿಷ್ಠೆೆಯಿಂದ. ರಾಷ್ಟ್ರದ ಪ್ರಗತಿಗೆ ಕಂಟಕಗಳಾಗಿರುವ ಭ್ರಷ್ಟಾಾಚಾರ, ದ್ವೇಷಮಯ ರಾಜಕಾರಣ, ಸ್ವಜನ ಪಕ್ಷಪಾತ ಗಳನ್ನು ಆಮೂಲಾಗ್ರವಾಗಿ ತೊಡೆದು ಹಾಕುವುದರಲ್ಲೂ ಸರಕಾರ ಹಾಗೂ ನಾಗರಿಕರು ಒಗ್ಗೂಡಿ ಶ್ರಮಿಸಬೇಕು. ಹಾಗಾದರಷ್ಟೇ ಭೂತಾನ್, ಇಸ್ರೇಲ್ ಗಳಂತೆ ಭಾರತದ ಸಾಧನೆಯ ಹಾದಿಯಲ್ಲೂ ಭರಪೂರ ಸುಗ್ಗಿಿ ಲಭ್ಯವಾಗಿ, ಅದರ ಸಡಗರ-ಸಂಭ್ರಮಗಳನ್ನು ಭಾರತೀಯರಾದ ನಾವೆಲ್ಲರೂ ಅನುಭವಿಸಲು ಸಾಧ್ಯ.

Leave a Reply

Your email address will not be published. Required fields are marked *