Saturday, 8th August 2020

ಎರಡನೇ ಕಾದಾಟಕ್ಕೆ ಭಾರತ-ವಿಂಡೀಸ್ ಸಜ್ಜು

 

ಗೆಲುವಿನ ವಿಶ್ವಾಾಸದಲ್ಲಿ ಟೀಮ್ ಇಂಡಿಯಾ ಏಕದಿನ ತಂಡಕ್ಕೆೆ ಮರಳಿದ ಧವನ್ ಪುಟಿದೇಳುವ ತುಡಿತದಲ್ಲಿ ಹೋಲ್ಡರ್ ಪಡೆ

ಪೋರ್ಟ್ ಆಫ್ ಸ್ಪೇನ್:
ಗಯಾನದಲ್ಲಿ ನಡೆಯಬೇಕಿದ್ದ ಮೊದಲನೇ ಏಕದಿನ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಭಾರತ ಹಾಗೂ ವೆಸ್‌ಟ್‌ ಇಂಡೀಸ್ ತಂಡಗಳು ಇಂದು ಎರಡನೇ ಹಣಾಹಣಿಗೆ ಸಜ್ಜಾಾಗಿವೆ. ಉಭಯ ತಂಡಗಳ ಕಾದಾಟಕ್ಕೆೆ ಕ್ವೀನ್‌ಸ್‌ ಪಾರ್ಕ್ ಓವಲ್ ಕ್ರೀಡಾಂಗಣದಲ್ಲಿ ಸಿದ್ಧವಾಗಿದೆ. ಟೆಸ್‌ಟ್‌ ತಂಡದಲ್ಲಿ ಕ್ರಿಿಸ್ ಗೇಲ್ ಆಡದೆ ಇರುವ ಹಿನ್ನೆೆಲೆಯಲ್ಲಿ ಏಕದಿನ ಸರಣಿಯೇ ಅವರ ಪಾಲಿಗೆ ಕೊನೆಯ ಅಂತಾರಾಷ್ಟ್ರೀಯ ವೇದಿಕೆಯಾಗಲಿದೆ ಎಂದು ಹೇಳಬಹುದಾಗಿದೆ.
ಇಂಗ್ಲೆೆಂಡ್ ಹಾಗೂ ವೇಲ್ಸ್ ಆತಿಥ್ಯದಲ್ಲಿ ಇತ್ತೀಚೆಗೆ ಮುಕ್ತಾಾಯವಾಗಿದ್ದ ಐಸಿಸಿ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸೋಲು ಅನುಭವಿಸಿತ್ತು. ವಿಶ್ವಕಪ್ ಸೋಲಿನ ನಿರಾಸೆಯಲ್ಲಿರುವ ಟೀಮ್ ಇಂಡಿಯಾ ಹೊಸದಾಗಿ ತಮ್ಮ ಓಟವನ್ನು ಆರಂಭಿಸಲು ಸಿದ್ಧವಾಗಿದೆ.
ರೋಹಿತ್ ಶರ್ಮಾಗೆ ಆರಂಭಿಕ ಜತೆಗಾರ ಶಿಖರ್ ಧವನ್ ಅವರು ಮೂರನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಿ ಸೇರಿದಂತೆ ಭಾರತ ತಂಡದ ಬ್ಯಾಾಟಿಂಗ್ ವಿಭಾಗ ಬಲಿಷ್ಟವಾಗಿದೆ. ಅಲ್ಲದೇ, ನಾಲ್ಕನೇ ಕ್ರಮಾಂಕದಲ್ಲಿ ಕೆ.ಎಲ್ ರಾಹುಲ್ ಮರಳಿದ್ದು ವಿಂಡೀಸ್ ಬೌಲರ್‌ಗಳನ್ನು ದಂಡಿಸಲು ಕೊಹ್ಲಿಿ ಬ್ಯಾಾಟಿಂಗ್ ಪಡೆ ತುದಿಗಾಲಲ್ಲಿ ನಿಂತಿದೆ.
ಮೊದಲನೇ ಪಂದ್ಯಕ್ಕೆೆ ಆಯ್ಕೆೆ ಮಾಡಿದ್ದ ಮಧ್ಯಮ ಕ್ರಮಾಂಕದ ಬ್ಯಾಾಟ್‌ಸ್‌‌ಮನ್‌ಗಳಿಗೂ ಇಂದಿನ ಪಂದ್ಯದಲ್ಲಿ ಸವಾಲು ಎದುರಾಗಲಿದೆ. ಶ್ರೇಯಸ್ ಅಯ್ಯರ್ ಮತ್ತೇ ಇಂದಿನ ಪಂದ್ಯಕ್ಕೂ ಅಂತಿಮ 11ರಲ್ಲಿ ಸ್ಥಾಾನ ಪಡೆಯಲಿದ್ದಾರೆ. ರಿಷಭ್ ಪಂತ್ ಅವರು ಎಂ.ಎಸ್ ಧೋನಿ ವಿಕೆಟ್ ಹಿಂದೆ ಪ್ರದಾನ ಪಾತ್ರ ವಹಿಸಬೇಕಿದೆ. ಒಂದು ವೇಳೆ ಅಗ್ರ ಕ್ರಮಾಂಕದ ಬ್ಯಾಾಟ್‌ಸ್‌‌ಮನ್‌ಗಳು ವಿಫಲರಾದರೆ, ಮಧ್ಯಮ ಕ್ರಮಾಂಕದಲ್ಲಿ ಪಂತ್ ಬಲ ತುಂಬಲಿದ್ದಾರೆ. ಕರ್ನಾಟಕದ ಮನೀಶ್ ಪಾಂಡ್ಯ ಅಥವಾ ಕೇದಾರ್ ಜಾಧವ್ ಅವರಲ್ಲಿ ಒಬ್ಬರಿಗೆ ಅವಕಾಶ ಸಿಗಲಿದೆ.
ಬೌಲಿಂಗ್ ವಿಭಾಗದಲ್ಲಿ ಮೊದಲನೇ ಪಂದ್ಯದಲ್ಲಿ ಮೊಹಮ್ಮದ್ ಶಮಿ ಮೂರು ಓವರ್‌ಗಳಿಗೆ ಕೇವಲ ಐದು ರನ್ ನೀಡಿ ಗಮನಾರ್ಹ ಪ್ರದರ್ಶನ ತೋರಿದ್ದರು. ಆದರೆ, ಯುವ ವೇಗಿ ಖಲೀಲ್ ಅಹಮದ್ ಅವರು ಕೇವಲ ಮೂರು 27 ರನ್ ನೀಡಿ ದುಬಾರಿಯಾಗಿದ್ದರು. ಟಿ-20 ಸರಣಿಯಲ್ಲಿ ಗಮನಾರ್ಹ ಬೌಲಿಂಗ್ ದಾಳಿ ನಡೆಸಿದ್ದ ನವದೀಪ್ ಸೈನಿ ಅವರಿಗೆ ಚ್ಚೊೊಚ್ಚಲ ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆೆ ಅವಕಾಶವನ್ನು ಟೀಮ್ ಇಂಡಿಯಾ ಮ್ಯಾಾನೇಜ್ಮೆೆಂಟ್ ನೀಡಲಿದೆಯೇ ಎಂಬುದನ್ನು ಕಾದು ನೋಡಬೇಕು.
ಮೊದಲನೇ ಪಂದ್ಯದಲ್ಲಿ ಕ್ರಿಿಸ್ ಗೇಲ್ ವಿಕೆಟ್ ಕಿತ್ತಿಿದ್ದ ಕುಲ್ದೀಪ್ ಯಾದವ್ ಅವರಿಗೆ ಇಂದಿನ ಪಂದ್ಯದಲ್ಲಿ ಮತ್ತೊೊಮ್ಮೆೆ ಪರಿಗಣಿಸುವ ಸಾಧ್ಯತೆ ಇದೆ. ಜತೆಗೆ, ರವೀಂದ್ರ ಜಡೇಜಾ ಅವರಿಗೂ ಅಂತಿಮ 11ರಲ್ಲಿ ಸ್ಥಾಾನ ಲಭಿಸುವ ಸಾಧ್ಯತೆಗಳಿವೆ.
ಪಂದ್ಯಗಳ ಟೆಸ್‌ಟ್‌ ಸರಣಿಯನ್ನು ಭಾರತದ ಎದರು ವೈಟ್ ವಾಶ್ ಮಾಡಿಸಿಕೊಂಡಿದ್ದ ವೆಸ್‌ಟ್‌ ಇಂಡೀಸ್ ತವರು ಅಭಿಮಾನಿಗಳ ಎದುರು ಮುಖಭಂಗ ಅನುಭವಿಸಿತ್ತು. ಹಾಗಾಗಿ, ಇನ್ನುಳಿದ ಎರಡು ಏಕದಿನ ಪಂದ್ಯಗಳಲ್ಲಿ ಗೆದ್ದು ಸರಣಿ ವಶಪಡಿಸಿಕೊಳ್ಳುವ ಯೋಜನೆಯಲ್ಲಿ ಆತಿಥೇಯರು ಇದ್ದಾರೆ. ವಿಶೇಷವಾಗಿ ದೈತ್ಯ ಬ್ಯಾಾಟ್‌ಸ್‌‌ಮನ್ ಕ್ರಿಿಸ್ ಗೇಲ್ ಅವರ ಪಾಲಿಗೆ ಈ ಸರಣಿ ವೃತ್ತಿಿ ಜೀವನದ ಕೊನೆಯದಾಗಿದೆ. ಆದ್ದರಿಂದ ಅವರು ಸರಣಿ ಜಯದ ವಿದಾಯ ಹೇಳುವ ಹೊಸ್ತಿಿಲಲ್ಲಿ ಇದ್ದಾರೆ.

ತಂಡಗಳು

ವೆಸ್‌ಟ್‌
ಕ್ರಿಿಸ್ ಗೇಲ್, ಕೇಮರ್ ರೋಚ್, ಕಾರ್ಲೋಸ್ ಬ್ರಾಾಥ್‌ವೇಟ್, ಜೇಸನ್ ಹೋಲ್ಡರ್(ನಾಯಕ), ಎವಿನ್ ಲೆವಿಸ್, ಶೆಲ್ಡನ್ ಕಾಟ್ರೆೆಲ್, ನಿಕೋಲಸ್ ಪೂರನ್, ಫ್ಯಾಾಬಿಯನ್ ಅಲ್ಲೆನ್, ಶಿಮ್ರಾಾನ್ ಹೆಟ್ಮೇರ್, ಶಾಯ್ ಹೋಪ್ (ವಿ.ಕೀ), ರೋಸ್ಟನ್ ಚೇಸ್, ಜಾನ್ ಕ್ಯಾಾಂಪ್‌ಬೆಲ್, ಕಿಮೋ ಪಾಲ್, ಓಶಾನ್ ಥಾಮಸ್

ಭಾರತ:
ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ವಿರಾಟ್ ಕೊಹ್ಲಿಿ(ನಾಯಕ), ಶಿಖರ್ ಧವನ್, ಭುವನೇಶ್ವರ್ ಕುಮಾರ್, ಕೇದಾರ್ ಜಾಧವ್, ಮೊಹಮ್ಮದ್ ಶಮಿ. ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಕುಲ್ದೀಪ್ ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿ.ಕೀ), ಖಲೀಲ್ ಅಹಮದ್, ಮನೀಶ್ ಪಾಂಡೆ, ಯಜುವೇಂದ್ರ ಚಾಹಲ್, ಕೆ.ಎಲ್. ರಾಹುಲ್, ನವದೀಪ್ ಸೈನಿ

ಸಮಯ: ಇಂದು ಸಂಜೆ 07:00
ಸ್ಥಳ: ಕ್ವೀನ್‌ಸ್‌ ಪಾರ್ಕ್ ಓವಲ್, ಪೋರ್ಟ್ ಆಫ್ ಸ್ಪೇನ್

ರ್ಯಾಾಂಕಿಂಗ್
ಭಾರತ: 2
ವೆಸ್‌ಟ್‌ ಇಂಡೀಸ್: 9

ಕೀ ಆಟಗಾರರು
ಭಾರತ
ಬ್ಯಾಾಟಿಂಗ್: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಿ
ಬೌಲಿಂಗ್: ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್

ವೆಸ್‌ಟ್‌ ಇಂಡೀಸ್
ನಿಕೋಲಸ್ ಪೂರನ್, ಶಾಯ್ ಹೋಪ್
ಬೌಲಿಂಗ್: ಶೆಲ್ಡನ್ ಕಾಟ್ರೆೆಲ್, ಓಶೇನ್ ಥಾಮಸ್

ಕಳೆದ ಐದು ಪಂದ್ಯಗಳ ಫಲಿತಾಂಶ
ಭಾರತ: 3
ವೆಸ್‌ಟ್‌ ಇಂಡೀಸ್: 1
ರದ್ದು: 1

Leave a Reply

Your email address will not be published. Required fields are marked *