Sunday, 31st May 2020

ಎರಡು ಕಡೆ ಡಿಕೆಶಿಗೆ ಹಿನ್ನೆಡೆ

 10 ದಿನ ನ್ಯಾಯಾಂಗ ಬಂಧನ ವಿಸ್ತರಿಸದ ಇಡಿ ವಿಶೇಷ ನ್ಯಾಯಾಲಯ 

ದೆಹಲಿ ಹೈಕೋರ್ಟ್‌ನಿಂದ ಜಾಮೀನು ಅರ್ಜಿ ತೀರ್ಪು  ಮುಂದೂಡಿಕೆ

ತಿಹಾರ್ ಜೈಲಿನಿಂದ ಬಿಡುಗಡೆಗೆ ಹವಣಿಸುತ್ತಿರುವ ಡಿಕೆಶಿ ಮನವಿಗೆ ಇಡಿ ನ್ಯಾಯಲಯ ಮತ್ತು ದೆಹಲಿ ಹೈಕೋರ್ಟ್‌ಗಳೆರಡು ಕಡೆಯಲ್ಲಿಯೂ ಹಿನ್ನೆೆಡೆಯಾಗಿದ್ದು, ಇಡಿ ವಿಶೇಷ ನ್ಯಾಯಾಲಯ ಹತ್ತು ದಿನಗಳ ನ್ಯಾಾಯಾಂಗ ಬಂಧನ ಹೆಚ್ಚಿಸಿದೆ.
ಮಂಗಳವಾರ ಇಡಿ ವಿಶೇಷ ನ್ಯಾಾಯಾಲಯದಲ್ಲಿ ವಿಚಾರಣೆ ನಿಗದಿಯಾಗಿತ್ತು. ಇದರ ಜತೆಜತೆಗೆ ದೆಹಲಿ ಹೈಕೋರ್ಟ್‌ನಲ್ಲಿ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಯಿತು. ನ್ಯಾ. ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಹಿರಿಯ ವಕೀಲ ಅಭಿಷೇಕ್ ಮನು ಸಿ್ಂವ ಡಿಕೆಶಿ ಅವರಿಗೆ ಜಾಮೀನು ನೀಡುವಂತೆ ಮನವಿ ಮಾಡಿದರು. ಆದರೆ, ನ್ಯಾಾಯಮೂರ್ತಿ ಅವರು ತೀರ್ಪನ್ನು ಅ.17ಕ್ಕೆ ಮುಂದೂಡಿದರು.

ಇದಕ್ಕೂ ಮೊದಲು ಅಕ್ರಮ ಹಣ ಪತ್ತೆೆ ಪ್ರಕರಣ ಕುರಿತು ಇಡಿ ವಿಶೇಷ ನ್ಯಾಾಯಾಲಯದಲ್ಲಿ ವಿಚಾರಣೆ ನಡೆದು, ಇನ್ನೂ 10 ದಿನಗಳ ಕಾಲ ನ್ಯಾಾಯಾಂಗ ಬಂಧನ ವಿಸ್ತರಿಸಿ ನ್ಯಾಾಯಾಲಯ ಆದೇಶ ನೀಡಿದೆ. ಹೀಗಾಗಿ, ಡಿ.ಕೆ. ಶಿವಕುಮಾರ್ ಅ.25ರವರೆಗೆ ಇಡಿ ಅಧಿಕಾರಿಗಳ ವಶದಲ್ಲಿಯೇ ಇರಬೇಕಾಗುತ್ತದೆ. ಈ ಮಧ್ಯೆೆಯೇ ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದರೂ ಡಿಕೆಶಿ ಆಶಯಕ್ಕೆೆ ಫಲ ಸಿಗಲಿಲ್ಲ. ಈ ಹಿಂದೆಯೇ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ದಸರಾ ಹಬ್ಬದ ಕಾರಣ ಮುಂದೂಡಲಾಗಿತ್ತು.

ವಿಶೇಷ ನ್ಯಾಯಾಲಯದ ಜಾಮೀನು ರದ್ದು ಆದೇಶ ಪ್ರಶ್ನಿಸಿ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಮತ್ತೆೆ ಹೈಕೋರ್ಟ್ ಕೈಗೆತ್ತಿಕೊಂಡಿತ್ತು.ತಿಹಾರ್ ಜೈಲಿನಲ್ಲಿರುವ ಡಿಕೆ ಶಿವಕುಮಾರ್ ಎಷ್ಟು ಜಾಮೀನು ಕೋರಿ ಅರ್ಜಿ ಸಲ್ಲಿಸಿದರೂ ನ್ಯಾಾಯಾಲಯ ತಿರಸ್ಕರಿಸುತ್ತಲೇ ಬಂದಿದೆ. ಸೆ. 4ರಿಂದಲೂ ಜಾರಿ ನಿರ್ದೇಶನಾಲಯದ ವಿಚಾರಣೆ ಎದುರಿಸುತ್ತಿರುವ ಡಿಕೆ ಶಿವಕುಮಾರ್ ಅವರನ್ನು ನ್ಯಾಾಯಾಂಗ ವಶಕ್ಕೆೆ ಒಳಪಡಿಸಲಾಗಿದೆ. ಅವರಿಗೆ ಜಾಮೀನು ಸಿಗುವವರೆಗೂ ಡಿಕೆಶಿ ತಿಹಾರ್ ಜೈಲಿನಲ್ಲಿ ನ್ಯಾಾಯಾಂಗ ಬಂಧನದಲ್ಲೇ ಮುಂದುವರಿಯಬೇಕಿದೆ. ಅ.17ರಂದು ಅವರಿಗೆ ಜಾಮೀನು ನೀಡುವ ಬಗ್ಗೆೆ ಹೈಕೋರ್ಟ್ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಯಿದೆ.

ತಾಯಿ ಮತ್ತು ಪತ್ನಿ ಸಂಕಷ್ಟದಲ್ಲಿ
ಡಿಕೆಶಿ ಪ್ರಕರಣದಲ್ಲಿ ಈಗಾಗಲೇ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸಹೋದರ ಸಂಸದ ಡಿ.ಕೆ. ಸುರೇಶ್, ಆಪ್ತ ಸುನೀಲ್ ಕುಮಾರ್ ಶರ್ಮಾ ಮತ್ತು ಪುತ್ರಿಿ ಐಶ್ವರ್ಯ ವಿಚಾರಣೆ ನಡೆಸಲಾಗಿದೆ. ಇನ್ನು ಮಾಜಿ ಶಾಸಕ ಕೆ.ಎನ್ ರಾಜಣ್ಣ ವಿಚಾರಣೆ ಬಾಕಿ ಇದೆ. ಅವರ ತಾಯಿ, ಪತ್ನಿಿ ಸೇರಿ ಇತರರ ಹೆಸರಲ್ಲಿ ಡಿಕೆ ಶಿವಕುಮಾರ್ ಬೇನಾಮಿ ಆಸ್ತಿಿ ಮಾಡಿರುವುದು ಕಂಡು ಬಂದಿದ್ದರಿಂದ ಇಡಿ ಅಧಿಕಾರಿಗಳ ವಿಚಾರಣೆ ಮುಂದುವರಿದಿದೆ. ತನಿಖೆ ಮುಗಿದ ಬಳಿಕ ಸರಕಾರ ಅಧಿಕೃತವಾಗಿ ಆಸ್ತಿಿ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆಯಿದೆ. ಅವರ ತಾಯಿ ಮತ್ತು ಪತ್ನಿಿ ವಿಚಾರಣೆಗೆ ದೆಹಲಿಗೆ ಆಗಮಿಸಲು ಸಾಧ್ಯವಿಲ್ಲ. ಹೀಗಾಗಿ ವಿನಾಯಿತಿ ನೀಡಿ ಎಂದು ಮನವಿ ಮಾಡಿಕೊಂಡಿದ್ದಾಾರೆ. 2017ರ ಆಗ್ಟ್ನಲ್ಲಿ ಐಟಿ ಅಧಿಕಾರಿಗಳು ಶಿವಕುಮಾರ್ ಮೇಲೆ ನಡೆಸಿದ ದಾಳಿ ವೇಳೆ ಸುಮಾರು 400 ಕೋಟಿ ರು.ಗೂ ಅಧಿಕ ಮೌಲ್ಯದ ಅಘೊಷಿತ ಆಸ್ತಿಿ ಪತ್ತೆೆಯಾಗಿತ್ತು. ಆ ಬಗ್ಗೆೆ ಸೂಕ್ತ ತನಿಖೆ ನಡೆಸಿದಾಗ ಹಲವರ ಹೆಸರಲ್ಲಿ ಆಸ್ತಿಿ ಮಾಡಿರುವುದು ಬೆಳಕಿಗೆ ಬಂದಿತ್ತು.

ಕುರ್ಚಿ ಕೇಳಿದ ಡಿಕೆಶಿ
ನನಗೆ ಆರೋಗ್ಯದಲ್ಲಿ ಸಮಸ್ಯೆೆಯಿದೆ. ಹೀಗಾಗಿ, ನಿಂತಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಕುರ್ಚಿ ಕೊಟ್ಟರೆ ಕುಳಿತುಕೊಳ್ಳುತ್ತೇನೆ ಎಂದು ಡಿಕೆಶಿ ಮನವಿ ಮಾಡಿಕೊಂಡರು ಎನ್ನಲಾಗಿದೆ. ನಾನು ಕೂಡ ಜೈಲು ಮಂತ್ರಿಿ ಆಗಿದ್ದವನು. ಜೈಲಿನಲ್ಲಿ ಕೈದಿಗಳಿಗೆ ಸಿಗಬೇಕಾದ ಸೌಲಭ್ಯಗಳ ಬಗ್ಗೆೆ ನನಗೆ ಅರಿವಿದೆ. ಆದರೆ, ವಿಚಾರಣೆ ವೇಳೆ ನನಗೆ ಯಾವುದೇ ರೀತಿಯ ಸೌಲಭ್ಯ ನೀಡುತ್ತಿಿಲ್ಲ. ಉಳಿದವರಿಗೆ ಕುರ್ಚಿ ನೀಡಿ ನನಗೆ ನಿಲ್ಲಿಸಿ ವಿಚಾರಣೆ ಮಾಡಲಾಗುತ್ತಿಿದೆ ಎಂದು ಮನವಿ ಮಾಡಿದರು. ನ್ಯಾಾಯಾಧೀಶರು ಇದಕ್ಕೆೆ ಯಾವುದೇ ಮಾತನ್ನಾಾಡಲಿಲ್ಲ ಎನ್ನಲಾಗಿದೆ. ನ್ಯಾಾಯಾಲಯ ಕುಟುಂಬಸ್ಥರು ಮತ್ತು ಬೆಂಬಲಿಗರ ಭೇಟಿಗೆ ಅವಕಾಶ ನೀಡಿದ್ದು, ದೇಗುಲ ಮಠದ ಸ್ವಾಾಮೀಜಿ, ಕಾಂಗ್ರೆೆಸ್ ನಾಯಕ ಪ್ರಿಿಯಾಂಕ್ ಖರ್ಗೆ, ವೀರಣ್ಣ ಮತ್ತಿಕಟ್ಟಿ, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಕಂಪ್ಲಿ ಗಣೇಶ್ ಭೇಟಿಯಾದರು.

ಬಂಡೆಗೆ ಮತ್ತೊೊಂದು ಸಂಕಷ್ಟ
ಈ ಮಧ್ಯೆೆ ಡಿ.ಕೆ ಶಿವಕುಮಾರ್‌ಗೆ ಮತ್ತೊೊಂದು ಸಂಕಷ್ಟ ಎದುರಾಗಿದೆ. ಆರು ವರ್ಷದ ಹಿಂದೆ ಸಲ್ಲಿಸಲಾಗಿದ್ದ ಪಿಎಎಲ್ ರಾಮನಗರ ನ್ಯಾಾಯಾಲಯದಲ್ಲಿ ವಿಚಾರಣೆಗೆ ಬಂದಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣ ಕುರಿತಂತೆ ಮಾಹಿತಿ ನೀಡುವಂತೆ ಸರಕಾರಕ್ಕೆ ಸೂಚನೆ ನೀಡಿದೆ. ನವೆಂಬರ್ 30ರೊಳಗೆ ಸರಕಾರ ಪ್ರಕರಣ ಸಂಬಂಧ ನ್ಯಾಾಯಾಲಯಕ್ಕೆ ಅಗತ್ಯವಾದ ಮಾಹಿತಿ ನೀಡಲಿದ್ದು, ಕಾಂಗ್ರೆೆಸ್ ಕಟ್ಟಾಳು ಹಳೆಯ ಪ್ರಕರಣಕ್ಕೂ ಮರು ಜೀವ ಬಂದಂತಾಗಿದೆ.

Leave a Reply

Your email address will not be published. Required fields are marked *