Wednesday, 21st October 2020

ಅಸಾಮಾನ್ಯ ಶಿಕ್ಷಣ ಚಿಂತಕ ಶ್ರೀ ವಿಭುದೇಶ ತೀರ್ಥ ಶ್ರೀಪಾದರು

ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ- ಶ್ರೇಷ್ಠ ವಿಚಾರಗಳು ಜಗತ್ತಿನೆ¯್ಲÉಡೆಯಿಂದ ನಮಗೆ ಬರಲಿ ಎಂಬ ಉದಾತ್ತವಾದ ಆದರ್ಶದ ತಳಹದಿಯ ಶಿP್ಷÀಣದ ಮೂಲಕ ಸಮಾಜಸೇವೆ, ತನ್ಮೂಲಕ ದೇಶಸೇವೆಯ ಹಾದಿಯನ್ನು ಸವೆಸಿದವರು ಅದಮಾರು ಮಠದ ಶ್ರೀ ವಿಭುದೇಶ ತೀರ್ಥರು. ತನ್ನ ಸಮಸ್ತ ಬದುಕನ್ನು ಸಮಗ್ರ ಆಕೃತಿಯಾಗಿ ಸಮಾಜವನ್ನು ಉನ್ನತೀಕರಿಸುವ ಕಾರ್ಯವನ್ನು ಮಾಡಿದವರು ಶ್ರೀಗಳು. ಇವರ ಒಟ್ಟೂ ಬದುಕನ್ನು ಅವಲೋಕಿಸಿದರೆ ತಿಳಿಯುವ ಅನೇಕ ಸಂಗತಿಗಳಲ್ಲಿ ಎರಡು ಪ್ರಧಾನವಾದುದು. ಒಂದು: ಸದಾ ಚೈತನ್ಯಶೀಲವಾದ ಅವರ ಜೀವನಕ್ರಮ, ಶ್ರಮಸಂಸ್ಕøತಿ. ಇನ್ನೊಂದು: ಅಸಾಧ್ಯವಾದುದನ್ನು ಸಾಧ್ಯಗೊಳಿಸಿದ ಸೃಜನಶೀಲವಾದ ಸಾಹಸ ಪ್ರವೃತ್ತಿ. ಸ್ವಾಮೀಜಿಯಾಗಿ ಅವರು ಮಾಡಿದ ಕಾರ್ಯಗಳು, ಸಮಾಜಕ್ಕೆ ಅವರು ನೀಡಿದ 32 ಪೂರ್ಣಪ್ರಜ್ಞ ವಿದ್ಯಾಲಯಗಳು ಅನನ್ಯವಾದುವು. ಮೇಲ್ಪಂಕ್ತಿಯಾದುದು. ಅಂತರಂಗದ ಸಾಧಕನಾಗಿ ತಾನು ಮಾಡಿದ ಎಲ್ಲ ಸೇವೆಗಳೂ ಭಗವದನುಗ್ರಹಕ್ಕಾಗಿ, ಜಗದೊಡೆಯ ಶ್ರೀಕೃಷ್ಣನಿಗಾಗಿ. ಬಹಿರಂಗ ಸಾಧಕನಾಗಿ ತಾನು ಮಾಡಿದ ಎಲ್ಲ ಸೇವೆಗಳೂ ದೇಶಸೇವೆಗಾಗಿ.

ಎಳವೆಯ¯್ಲÉೀ ತಾಯಿಯನ್ನು ಕಳೆದುಕೊಂಡ ಶ್ರೀಗಳು ತಾಯಿ ಮತ್ತು ತಾಯ್ನಾಡಿನ ಬಗ್ಗೆ ಮಾತಾಡದ ದಿನಗಳಿಲ್ಲ. ಅಪರಿಮಿತವಾದ ದೇಶಪ್ರೇಮವೇ ಅವರ ಜೀವನ ಸಾಧನೆಗಳಿಗೆ ದೃಢವಾದ ನೆಲೆಗಟ್ಟು, ಮೂಲ ಆಧಾರ. ಜೀವಸೆಲೆ. ಶ್ರೀ ರಘುಮಾನ್ಯ ತೀರ್ಥರ ಕನಸಾದ ಸಂಸ್ಕøತ ಮಹಾಪಾಠಶಾಲೆಯ ಕಟ್ಟಡದ ಪೂರ್ತಿ ರಚನೆ, ಪ್ರಥಮ ಪರ್ಯಾಯದಲ್ಲಿ ವೇದ ಪಾಠಶಾಲೆಯ ಆರಂಭ, ಬಡ ವಿದ್ಯಾರ್ಥಿಗಳಿಗೆ ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಎಜ್ಯುಕೇಶನ್ ಸೊಸೈಟಿ, 1969 ರಲ್ಲಿ ಸರ್ವಧರ್ಮ ಸಮ್ಮೇಳನವನ್ನು ಬೆಂಗಳೂರಿನ ಲಾಲ್ ಬಾಗಲ್ಲಿ ಸಂಯೋಜಿಸಿದ್ದು, ಶ್ರೀ ಸುಧೀಂದ್ರ ತೀರ್ಥರ ನೆನಪಿಗಾಗಿ ಉಡುಪಿಯ ಶ್ರೀಕೃಷ್ಣನಿಗೆ ಚಿನ್ನದ ತೊಟ್ಟಿಲು ಮತ್ತು ಬೆಳ್ಳಿಯ ರಥದ ಅರ್ಪಣೆ, ಕೃಷ್ಣಮಠದಲ್ಲಿ ಸುಸಜ್ಜಿತ ಭೋಜನಶಾಲೆ, ರಾಷ್ಟ್ರವ್ಯಾಪಿ ಮೂವತ್ತೆರಡು ಗುಣಮಟ್ಟದ ಶಿP್ಷÀಣ ನೀಡುವ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳು, ಉತ್ತರ ಅಮೆರಿಕಾದಲ್ಲಿ ಹದಿನೇಳು ಶಾಖೆ ಮತ್ತು ಕೇಂದ್ರಗಳ ಸ್ಥಾಪನೆ ಮತ್ತು ಅದಮಾರು ಮಠ ಎಜ್ಯುಕೇಶನ್ ಕೌನ್ಸಿಲ್ ಸ್ಥಾಪನೆ, 1999ರಲ್ಲಿ ವಿಶ್ವಬ್ಯಾಂಕ್ ಅಧ್ಯP್ಷÀರು ಹಾಗೂ ಕ್ಯಾಂಟರ್‍ಬರಿಯ ಆರ್ಚ್ ಬಿಷಪ್‍ರ ಆಹ್ವಾನದ ಮೇರೆಗೆ ಸರ್ವ ಧರ್ಮ ಗುರುಗಳ ಸಮಾವೇಶದಲ್ಲಿ ಭಾಗಿಯಾಗಿ ಬಡತನ ನಿರ್ಮೂಲನಾ ಯೋಜನೆಗಳಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದ್ದು, ಇಂಗ್ಲೆಂಡಿನಲ್ಲಿ ನಡೆದ ಧರ್ಮ ಮತ್ತು ಪರಿಸರ ಸಂರP್ಷÀಣೆ ಸಮಾವೇಶದಲ್ಲಿ ಪಾಲ್ಗೊಂಡು ಅದೇ ವಿಷಯದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ರಾಷ್ಟ್ರಕ್ಕೆ ನೊಬೆಲ್ಲಿಗೆ ಸರಿದೂಗುವ ಪ್ರಶಸ್ತಿ ನೀಡಬೇಕೆಂದು ಒತ್ತಾಯಿಸಿದ್ದು, 1993 ರಲ್ಲಿ ಯುಎಸ್‍ಎ ಮತ್ತು 1995 ರಲ್ಲಿ ಯು.ಕೆ.ಗೆ ಭೇಟಿ, ಉಡುಪಿಗೆ ಬರುವ ಯಾತ್ರಾರ್ಥಿಗಳಿಗೆ ತಂಗಲು ಅದಮಾರು ಮಠ ಅತಿಥಿ ಗೃಹ, ಉಡುಪಿಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳಿಗಾಗಿ ಪೂರ್ಣಪ್ರಜ್ಞ ಸಭಾಭವನ, ಜೀವಮಾನದ ಕನಸಾದ ಪೂರ್ಣಪ್ರಜ್ಞ ವೈe್ಞÁನಿಕ ಸಂಶೋಧನಾ ಕೇಂದ್ರವನ್ನು 500 ಕೋಟಿ ರು. ವೆಚ್ಚದಲ್ಲಿ ಬೆಂಗಳೂರಿನ ಬಿದಲೂರಿನಲ್ಲಿ ಸ್ಥಾಪಿಸಿದ್ದು, ಪೂರ್ಣಪ್ರಜ್ಞ ಗ್ರಾಮೀಣ ಸಂಸ್ಥೆ, ಬೆಂಗಳೂರು ಸಮೀಪ ಬಡತನ ಹಾಗೂ ಸೌಲಭ್ಯ ವಂಚಿತ ಬರಪೀಡಿತ ಕೆಲವು ಪ್ರದೇಶಗಳಲ್ಲಿ, ಚಿಕ್ಕಮಗಳೂರಿನ ಸಂಗಮೇಶ್ವರಪೇಟೆಯ ಹತ್ತಿರದ ಹಳ್ಳಿಯಲ್ಲಿ 52 ಮನೆಗಳನ್ನು, ಕೋಲಾರದ ಬಾಗೇಪಲ್ಲಿಯ ಮೂರು ಹಳ್ಳಿಗಳನ್ನು ದತ್ತು ಕೊಂಡದ್ದು, ಇತ್ಯಾದಿ ದಾನ ಧರ್ಮಗಳು- ಇವು ಶ್ರೀಗಳ ಜೀವನ ಸಾಧನೆಗಳು.

ಹಲವು ಹತ್ತು ಆದರ್ಶ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸಿ, ಬೆಳೆಸಿರುವುದು ಅವರು ಸಮಾಜಕ್ಕೆ ನೀಡಿದ ದೊಡ್ಡ ಕೊಡುಗೆ. ಅದು ಅವರ ಜೀವನದ ದೊಡ್ಡ ಸಾಧನೆ. ಅವರು ಶೈP್ಷÀಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯ ಬಗ್ಗೆ ಅಷ್ಟಮಠಾಧಿಪತಿಗಳು ಹೆಮ್ಮೆಪಡಲೇಬೇಕಾಗಿದೆ ಎಂದು ಶ್ರೀಗಳ ಸಾಧನೆಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದವರು ಹಿರಿಯರಾದ ಪೇಜಾವರ ಶ್ರೀಗಳು. ಅದಮ್ಯ ದೇಶಪ್ರೇಮ, ಅಚಲ ನಂಬಿಕೆ, ದೂರಾತಿದೂರ ದೃಷ್ಟಿ, ನೇರಾತಿನೇರ ವೃತ್ತಿ, ಧೀರೋದಾತ್ತ ನಡೆ, ಖಂಡತುಂಡ ಮಾತು, ಸಮಷ್ಟಿ ಹಿತಚಿಂತನೆ, ಗುಣಬದ್ಧತೆ, ಉತ್ಕøಷ್ಟ ಉದಾರತೆ, ನಿಷ್ಪP್ಷÀಪಾತಿತಾ, ಅವಿಶ್ರಾಂತತೆ, ಕಠಿಣ ಸಾಧನೆ, ಹುಟ್ಟುನಾಯಕ, ಉಕ್ಕಿನ ಸಂನ್ಯಾಸಿ, ಸಿಂಹ ಸಂನ್ಯಾಸಿ, ವೃದ್ಧೋಪಿ ತರುಣಾಯತೇ ಎಂದು ಶ್ರೀಗಳ ಪರಮಗಮ್ಯವನ್ನು ಹತ್ತಿರದಿಂದ ಕಂಡವರು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು.

ನಿರಂತರ ಪ್ರಯತ್ನ ಶೀಲತೆ, ಮಹತ್ತ್ವವನ್ನು ಸಾಧಿಸುವ ಛಲ ತೊಟ್ಟ ಆತ್ಮಶಕ್ತಿ ಮತ್ತು ಭಗವಂತನ ಅನುಗ್ರಹ ಈ ಮೂರರಲ್ಲಿ ಯಾವೊಂದು ಕೊರತೆಯಾದರೂ ಮನುಷ್ಯ ಎತ್ತರಕ್ಕೇರಲಾರ. ಅದಮಾರು ಶ್ರೀಗಳಲ್ಲಿ ಪ್ರಾಯಶಃ ಈ ಮೂರೂ ಮುಪ್ಪುರಿಗೊಂಡಿದೆ. ಅವರು ದೊಡ್ಡ ವಿದ್ವಾಂಸ; ದೊಡ್ಡ ಕನಸುಗಾರ; ಅಸಾಧಾರಣ ಕರ್ತೃತ್ವ ಶಕ್ತಿ ಧೀಮಂತ; ದಿಟ್ಟ ಆಡಳಿತಗಾರ; ಅಂಜದ ಮುಲಾಜಿಲ್ಲದ ಮಾತುಗಾರ. ತನ್ನ ಹೆಸರನ್ನು ಸಾರ್ಥಕಗೊಳಿಸಿದ ಗಟ್ಟಿಗ. ಎಲ್ಲಕ್ಕಿಂತ ಮಿಗಿಲಾಗಿ ಶಿP್ಷÀಣ ಕ್ಷೇತ್ರದಲ್ಲಿ ಶ್ರೀಪಾದರ ಸಾಧನೆ ಅನನ್ಯ. ಯಾವ ಮಾಧ್ವ ಮಠಾಧೀಶರೂ ಇನ್ನೂ ಆ ಬಗೆಗೆ ಕನಸೂ ಕಾಣದಿದ್ದ ಕಾಲದಲ್ಲಿ ಇವರು ಶಿP್ಷÀಣ ರಂಗಕ್ಕೆ ತನ್ನನ್ನು ಅರ್ಪಿಸಿಕೊಂಡರು.

ಶ್ರೀಪಾದರ ದೂರದೃಷ್ಟಿಗೆ ಅವರ ಇಂಗ್ಲಿಷ್ ಶಿP್ಷÀಣ ನೀಡುವ ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳೇ ನಿದರ್ಶನ. ಅವರು ದಾರಿ ನೋಡಿಕೊಂಡು ನಡೆದವರಲ್ಲ. ಅವರು ನಡೆದz್ದÉೀ ದಾರಿಯಾಯಿತು. ಅವರು ಯಾರನ್ನೂ ಅನುಸರಿಸಲಿಲ್ಲ. ಉಳಿದವರು ಹಿಂದೆ ಬರುವಂತೆ ಅವರು ಮುಂದೆ ನಡೆದರು. ಶ್ರೀಪಾದರಲ್ಲಿ ನಾನು ಕಂಡ ಅಪೂರ್ವತೆ ಎಂದರೆ ಯಾರಿಗೂ ಮಣಿಯದ ಅವರ ಆತ್ಮಾಭಿಮಾನ, ಗಟ್ಟಿ ನಿಲುವಿನ ದಿಟ್ಟ ನಿರ್ಧಾರ, ಯಾರ ಟೀಕೆಗೂ ಅಳುಕದ ಸ್ವಂತಿಕೆ. ಮನುಷ್ಯ ಸಹಜವಾದ ತನ್ನೆ¯್ಲÁ ದೌರ್ಬಲ್ಯಗಳನ್ನು ಹಂತಹಂತವಾಗಿ ಮೀರಿ ಎತ್ತರಕ್ಕೇರಿ ನಿಂತ ಅವರ ಸಾಹಸದ ಗಾಥೆ ಮುಂದಿನ ತರುಣ ಜನಾಂಗಕ್ಕೆ ಆದರ್ಶವಾಗಲಿ, ದಾರಿದೀಪವಾಗಲಿ ಎಂದು, ಶ್ರೀ ವಿಭುದೇಶ ತೀರ್ಥರಿಂದ ವಿದ್ಯಾವಾಚಸ್ಪತಿ ಎಂಬ *ಛ್ಡ್ಚ್ಝ್ಠಿoಜಿqಛಿಆದ ಅಭಿದಾನವನ್ನು ಪಡೆದ ಶ್ರೀ ಬನ್ನಂಜೆ ಗೋವಿಂದಾಚಾರ್ಯರು ಶ್ರೀಪಾದರ ಬಗ್ಗೆ ಆಡಿದ ಮಾತುಗಳಿವು.

ಉದಾರತೆ, ವಿದ್ಯಾಪP್ಷÀಪಾತ, ಅದಮ್ಯ ಕರ್ತೃತ್ವ ಶಕ್ತಿ, ಸಾಮಾಜಿಕ ಕಳಕಳಿ, ಗುಣಮಟ್ಟದಲ್ಲಿ ಉತ್ಕøಷ್ಟತೆ, ಸಾಧನೆಗಾಗಿ ನಿರಂತರ ಪ್ರಯತ್ನ ಇದು ವಿಭುದೇಶ ತೀರ್ಥರ ಬಗ್ಗೆ ಸಂಕ್ಷಿಪ್ತದಲ್ಲಿ ಹೇಳಬಹುದಾದ ವಿವರಣೆಯೆಂದವರು ಡಾ. ವಿ.ಎಸ್.ಆಚಾರ್ಯರು.

1956-58ರಲ್ಲಿ ಪ್ರಥಮ, 1972-74 ರಲ್ಲಿ ದ್ವಿತೀಯ ಪರ್ಯಾಯವನ್ನು ಪೂರೈಸಿದ ವಿಭುದೇಶ ತೀರ್ಥರು ತೃತೀಯ ಪರ್ಯಾಯವನ್ನು ಶಿಷ್ಯರಾದ ವಿಶ್ವಪ್ರಿಯತೀರ್ಥರಿಗೆ ನೀಡಿದ್ದು ಗಮನೀಯ. ಈ ರೀತಿ ಗುರುವೇ ಮುಂದಾಗಿ ನಿಂತು ಶಿಷ್ಯನಿಂದ ಪರ್ಯಾಯವನ್ನು ಸುಮಾರು 510 ವರ್ಷಗಳ ಹಿಂದೆ ಶ್ರೀ ವಾದಿರಾಜ ಶ್ರೀಪಾದರು ಮಾಡಿಸಿದ್ದರು. ವಿಭುದೇಶ ತೀರ್ಥರ ಶಿಷ್ಯವಾತ್ಸಲ್ಯ ದೊಡ್ಡದು ಎನ್ನುತ್ತಾರೆ ಅವರ ಶಿಷ್ಯರಾದ, ಈಗ ಅದಮಾರು ಪೀಠಾಧಿಪತಿಗಳಾದ, ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳ ಅಧ್ಯP್ಷÀರಾದ ಶ್ರೀ ವಿಶ್ವಪ್ರಿಯತೀರ್ಥರು.

ವಿಭುದೇಶ ತೀರ್ಥರು ತಮ್ಮ ಪರ್ಯಾಯ ಕಾಲದಲ್ಲಿ ಕೈಗೊಂಡ ಅನೇಕ ಕಾರ್ಯಗಳು ಚಿರಸ್ಮರಣೀಯವಾದವುಗಳು. ಪ್ರತಿಯೊಂದರಲ್ಲೂ ವಿಶೇಷತೆಯನ್ನು, ಪ್ರತಿಯೊಬ್ಬರಲ್ಲೂ ವಿಶೇಷವಾದುದ್ದನ್ನು ಗುರುತಿಸಿ ಮೆಚ್ಚುವ, ಹೊಗಳುವ, ಸಂಮ್ಮಾನಿಸುವ ಶ್ರೀಪಾದರು ಜಗತ್ಪ್ರಸಿದ್ಧ ಭಾರತೀಯ ವಿe್ಞÁನಿಗಳಾದ ಯು. ಆರ್.ರಾವ್, ಸಿ.ಎನ್.ಆರ್.ರಾವ್, ಕಸ್ತೂರಿ ರಂಗನ್, ರೊದ್ದಂ ಮುಂತಾದವರನ್ನು ಉಡುಪಿಗೆ ಆಹ್ವಾನಿಸಿ ಸಮ್ಮಾನಿಸಿದರು. ವಿ.ಎಂ.ಇನಾಂದಾರ್, ಶಂಕರ ಮೊಕಾಶಿ ಪುಣೇಕರ, ಗೋಪಾಲಕೃಷ್ಣ ಅಡಿಗ, ಚಂದ್ರಶೇಖರ ಕಂಬಾರ, ಎಂ.ರಾಜಗೋಪಾಲ ಆಚಾರ್ಯ, ಸುಬ್ರಹ್ಮಣ್ಯಂ, ಮಾಧವ ಕುಲಕರ್ಣಿ, ಉದ್ಯಾವರ ಮಾಧವಾಚಾರ್ಯ, ರಾಮದಾಸ, ಬಿ.ಆರ್.ನಾಗೇಶ, ಡಾ. ದಾಮೋದರರಾವ್, ಮುರಳೀಧರ ಉಪಾಧ್ಯ ಅವರೇ ಮುಂತಾದ ಸಾಹಿತಿಗಳನ್ನು ತನ್ನ ಸಂಸ್ಥೆಗೆ ಆಹ್ವಾನಿಸಿ ಉದ್ಯೋಗ ಕೊಟ್ಟು ಸೇವೆ ಕೈಗೊಂಡರು.

`ಪೂರ್ಣಪ್ರಜ್ಞ ಸಂಜೆ ಕಾಲೇಜು’ ಎಂಬ ಹೊಸ ಪ್ರಯೋಗವನ್ನು ಆರಂಭಿಸಿದರು. ಶ್ರೀ ಲಾಲಾಜಿ ಮೆಂಡನ್, ಮಟಪಾಡಿ ಕುಮಾರಸ್ವಾಮಿಯಂಥ ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡಿ ಇಂದು ಜನಪ್ರಿಯತೆಯನ್ನು ಗಳಿಸಿದವರಾಗಿz್ದÁರೆ. ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಎಜ್ಯುಕೇಶನ್ ಸೊಸೈಟಿಯ ಅನೇಕ ಫಲಾನುಭವಿಗಳಲ್ಲಿ ಹಿಂದೆ ರಾಜ್ಯದ ಉನ್ನತ ಶಿP್ಷÀಣ ಸಚಿವರಾದ ಡಾ.ವಿ.ಎಸ್.ಆಚಾರ್ಯರೂ ಒಬ್ಬರು.

ತಾನೊಬ್ಬ ವಿe್ಞÁನಿಯಾಗಬೇಕೆಂಬ ರಮೇಶನ ಬಾಲ್ಯದ ಹಂಬಲ, ಸಂನ್ಯಾಸ ದೀಕ್ಷೆ ಸ್ವೀಕರಿಸಿ ವಿಭುದೇಶ ತೀರ್ಥರಾದ ಮೇಲೂ ಬೆಳೆದು ವಿಸ್ತರಿಸಿಕೊಂಡು ಬೆಂಗಳೂರಿನ ಬಿದಲೂರಿನಲ್ಲಿ ಪೂರ್ಣಪ್ರಜ್ಞ ವೈe್ಞÁನಿಕ ಸಂಶೋಧನಾ ಕೇಂದ್ರವನ್ನು ನಿರ್ಮಿಸುವಂತೆ ಮಾಡಿತು. ಅಂದಿನ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಉದ್ಘಾಟನೆಯನ್ನು ಶ್ರೀ ಲಾಲ್ ಕೃಷ್ಣ ಅಡ್ವಾಣಿಯವರು ನೆರವೇರಿಸಿದರು. ದೇಶದಲ್ಲಿ ಖ್ಯಾತಿವೆತ್ತ ಅಂತಾರಾಷ್ಟ್ರೀಯ ಮಟ್ಟದ ವಿe್ಞÁನಿಗಳು ಇದರ ಗೌರವ ಟ್ರಸ್ಟಿಗಳಾಗಿದ್ದರು. ಮೂಲ ವಿe್ಞÁನದ ಸಂಶೋಧನೆಗೆ ಹೆಚ್ಚು ಒತ್ತು ಕೊಡಬೇಕೆನ್ನುವುದು ಶ್ರೀಗಳ ಮನದ ಒತ್ತಡವಾಗಿತ್ತು.

ವಿಭುದೇಶ ತೀರ್ಥರ ಇನ್ನೊಂದು ಹೊಸ ಪ್ರಯೋಗ ಪೂರ್ಣಪ್ರಜ್ಞ ಫ್ಯಾಕಲ್ಟಿ ಇಂಪ್ರೂವ್ ಮೆಂಟ್. ಈ ಪರಿಕಲ್ಪನೆಯೇ ನಿತ್ಯನೂತನ. ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬೋಧಕವರ್ಗದ e್ಞÁನವನ್ನು ಕಾಲಕಾಲಕ್ಕೆ ಉನ್ನತೀಕರಿಸುವಂತೆ, ಬೋಧನೆಯಲ್ಲಿ ನಾವೀನ್ಯ, ಸ್ವಾಧ್ಯಾಯ, ಪಠ್ಯ-ಪಠ್ಯೇತರ ಚಟುವಟಿಕೆಗಳಿಗೆ ಚೈತನ್ಯ ಹಾಗೂ ಪ್ರೇರೇಪಣೆ ತುಂಬುವಲ್ಲಿ ಅನುಭವೀ ಸಂಪನ್ಮೂಲ ವ್ಯಕ್ತಿಗಳಿಂದ ಕಾರ್ಯಾಗಾರವನ್ನು ಪ್ರತಿ ಶೈP್ಷÀಣಿಕ ವರ್ಷದಾರಂಭದಲ್ಲಿ ಹಮ್ಮಿಕೊಳ್ಳುವ ಮುಖೇನ ತುಕ್ಕು ಹಿಡಿದ ಮನಸಿಗೆ ಹೊರ ಹರಿತದ ಹೊಳಪನ್ನು ತಂದಂತೆ ಶಿP್ಷÀಕರನ್ನು ರಿಫ್ರೆಶ್ ಮಾಡುವುದು ಇದರ ಮುಖ್ಯ ಉದ್ದಿಶ್ಯ. ಈ ಸಂಸ್ಥೆ ಬೆಂಗಳೂರಿನ ವಿಡಿಯಾದಲ್ಲಿದೆ.

ವಸತಿ ಮತ್ತು ಊಟದ ವ್ಯವಸ್ಥೆಯನ್ನು ಹೊಂದಿರುವ ಇದರಲ್ಲಿ ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದಂತೆ ಆಧುನಿಕ ಸೌಕರ್ಯಗಳಿವೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತುಕೊಟ್ಟಿರುವ ಶ್ರೀಗಳ ಶಿP್ಷÀಣದ ಆಕೃತಿಗಳು ವಿಭಿನ್ನ ಮತ್ತು ವಿಶಿಷ್ಟವಾದುವು. ಸುಶಿಕ್ಷಿತ ಜವಾಬ್ದಾರಿಯುತ ನಾಗರಿಕರು ನಿರ್ಮಾಣವಾಗುವುದು ಈ ಹಂತದ ಶಿP್ಷÀಣದ ಆಕೃತಿಗಳು ಸರಿಯಾಗಿದ್ದರೆ ಮಾತ್ರ ಎಂಬುದು ಶ್ರೀಪಾದರ ಘನವಾದ ಅಭಿಪ್ರಾಯ. ಪ್ರಾಥಮಿಕ ಶಾಲೆಯಿಂದ ಕಾಲೇಜು ಹಂತದವರೆಗಿನ ಶಿP್ಷÀಣಕ್ಕೆ ಶ್ರೀಪಾದರು ನೀಡಿದ ಮಹತ್ತ್ವ ಗಮನಾರ್ಹ.

ಲಂಚ, ಗುಂಪುಗಾರಿಕೆ, ಜಾತಿವೈಷಮ್ಯ ಇಲ್ಲದ ವ್ಯಕ್ತಿಗೆ ಮನ್ನಣೆ ಸಿಗಬೇಕು. ಭಾರತದ ಉನ್ನತ ಸ್ಥಾನದಲ್ಲಿ ವಿದೇಶೀ ಮೂಲದವರು ಇರಬಾರದೆನ್ನುವ ಶ್ರೀಗಳು ಸೋನಿಯಾ ಗಾಂಧಿ ಪ್ರಧಾನಿಯಾಗುವುದನ್ನು ವಿರೋಧಿಸುವುದರ ಮೂಲಕ ರಾಷ್ಟ್ರೀಯ ಬದ್ಧತೆಯನ್ನು ಅಭಿವ್ಯಕ್ತಿಸಿದ್ದರು. ಅಮ್ಮ ಬೇಗ ನಿಧನಳಾದಳು; ದೇಶವೇ ನನ್ನ ಅಮ್ಮ ಎಂದು ಹೇಳುತ್ತಿದ್ದವರು ವಿಭುದೇಶ ತೀರ್ಥರು. ಮೊದಲಿನಿಂದಲೂ ಅವರದು ಕ್ರಾಂತಿಕಾರಿ ಮನೋಭಾವದ ಗುಣಸ್ವಭಾವ. ನಾವೀಗ ಇರುವ ಸ್ಥಿತಿ ಸರಿಯಿಲ್ಲ. ಇದನ್ನು ಬದಲಾಯಿಸಬೇಕು ಎಂದ ಶ್ರೀಗಳು 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

ಗೌರವಾನ್ವಿತ ಡಾ.ರಾಜೇಂದ್ರ ಪ್ರಸಾದ್, ಡಾ.ರಾಧಾಕೃಷ್ಣ, ಶ್ರೀ ಆರ್.ಆರ್.ದಿವಾಕರ, ಶ್ರೀ ವಾಜಪೇಯಿ, ಶ್ರೀ ಎಲï.ಕೆ.ಅಡ್ವಾಣಿ, ಶ್ರೀಮತಿ ಇಂದಿರಾ ಗಾಂಧಿ, ಶ್ರೀ ಶಾಸ್ತ್ರೀ, ಶ್ರೀ ಮೊರಾರ್ಜಿ ದೇಸಾಯಿ, ಶ್ರೀ ಹನುಮಂತಯ್ಯ, ಶ್ರೀ ಬಿ.ಡಿ.ಜತ್ತಿ, ಶ್ರೀ ರತ್ನವರ್ಮ ಹೆಗ್ಗಡೆ, ಶ್ರೀ ಕಡಂದಲೆ ಕೃಷ್ಣಭಟ್ಟರು, ಜನರಲ್ ಕಾರ್ಯಪ್ಪ, ಡಾ.ಮಾಧವ ಪೈ , ಡಾ.ಟಿ.ಎ.ಪೈ, ಶ್ರೀ ಕೆ.ಕೆ.ಪೈ, ಶ್ರೀ ಉಪೇಂದ್ರ ನಾಯಕ್, ಡಾ.ರಾಜಕುಮಾರ್, ಶ್ರೀ ರಾಮಕೃಷ್ಣ ಹೆಗಡೆ, ಶ್ರೀ ಜೀವರಾಜ ಆಳ್ವಾ, ಶ್ರೀ ಡಿ.ಬಿ.ಚಂದ್ರೇಗೌಡ, ಡಾ.ಜಾಕಿರ್ ಹುಸೇನ್, ಶ್ರೀಮತಿ ಸರೋಜಿನಿ ನಾಯ್ಡು, ಗದ್ವಾಲ್ ಮಹಾರಾಣಿ, ಕೊಚ್ಚಿ ಮಹಾರಾಜರು, ಶ್ರೀಕಂಠ ದತ್ತ ಒಡೆಯರು, ಶ್ರೀ ಕಡಿದಾಳ್ ಮಂಜಪ್ಪ, ಶ್ರೀ ನಿಜಲಿಂಗಪ್ಪ, ಶ್ರೀ ಕೆ.ಎಂ.ಮುನ್ಷಿ, ಶ್ರೀ ಸುಖಾಡಿಯ, ಶ್ರೀ ಮುಥಾಲಿಕ್ ದೇಸಾಯಿ, ಶ್ರೀ ಎಚ್.ಎಸ್.ಬಲ್ಹೋಟ್, ಶ್ರೀ ಭಾವನಾನಿ, ಶ್ರೀ ವಿಶ್ವನಾಥ ರಾವ್, ಡಾ.ಎ.ಆರ್.ಆಚಾರ್ಯ, ಶ್ರೀ ಶಂಕರನಾರಾಯಣ ಹೆಬ್ಬಾರ್, ಶ್ರೀ ಶಿವಪ್ರಕಾಶ್, ಶ್ರೀ ವಿಷ್ಣುಪ್ರಸಾದ್, ಶ್ರೀ ರವಿಶಂಕರ್, ಶ್ರೀಮತಿ ಆಶಾ ಪರೇಳ್, ಗುಬ್ಬಿವೀರಣ್ಣ ಗ್ರೂಪ್, ಶ್ರೀ ವಿದ್ಯಾಭೂಷಣ, ಶ್ರೀ ಶೇಣಿ ಗೋಪಾಲಕೃಷ್ಣ ಭಟ್ಟ, ಶ್ರೀ ಅಶೋಕ ಸಿಂಘಾಲï, ಶ್ರೀ ಪ್ರವೀಣ ಭಾಯ್ ತೊಗಾಡಿಯಾ, ಶ್ರೀ ಸಂತೋಷ ಹೆಗ್ಡೆ, ಶ್ರೀ ಬಿ.ಡಿ.ಜತ್ತಿ, ಶ್ರೀ ಗುಂಡೂರಾವ್, ಡಾ.ವೀರೇಂದ್ರ ಹೆಗ್ಗಡೆ , ಶ್ರೀ ವೆಂಕಟ ಸುಬ್ಬಯ್ಯ , ಶ್ರೀಮತಿ ಎಂ.ಎಸ್.ಸುಬ್ಬುಲಕ್ಷ್ಮೀ , ಶ್ರೀ ವೈ.ಬಿ.ಚವ್ಹಾಣ್, ಡಾ.ಸರೋಜಿನಿ ಮಹಿಷಿ, ಶ್ರೀ ಆರ್.ಡಿ.ಖಾಡೀಲ್ಕರ್, ಶ್ರೀ ರಾಜ ಬಹಾದ್ದೂರ್, ಶ್ರೀ ವೀರಪ್ಪ ಮೊಯ್ಲಿ, ಶ್ರೀ ಎಸ್.ಆರ್.ಕಂಠಿ, ಶ್ರೀ ಬಿ.ಜಿ.ಖೇರ್, ಶ್ರೀ ಜಯಚಾಮರಾಜೇಂದ್ರ ಒಡೆಯರ್, ಶ್ರೀ ಧರ್ಮವೀರ, ಜಸ್ಟೀಸ್ ಕೆ.ಎಸ್.ಹೆಗ್ಡೆ, ಶ್ರೀ ಶಿವರಾಮ ಕಾರಂತ, ಡಾ.ಎಸ್.ವಿ.ಪರಮೇಶ್ವರ ಭಟ್ಟ, ಪೆÇ್ರ.ಕೀರ್ತಿನಾಥ ಕುರ್ತಕೋಟಿ, ಡಾ.ಮಾಧವ ಗಾಡ್ಗೀಳ್…ಹೀಗೆ ಅನೇಕ ಮಹನೀಯರೊಂದಿಗೆ ಶ್ರೀಗಳ ಸಂಪರ್ಕ ಮತ್ತು ಒಡನಾಟವಿತ್ತು. ಸಾಂದರ್ಭಿಕವಾಗಿ ಇವರೆಲ್ಲರೂ ಶ್ರೀಗಳ ಕಾರ್ಯದಲ್ಲಿ ಸಹಕರಿಸಿದವರು.

ಶ್ರೀ ವಿಭುದೇಶ ತೀರ್ಥರು ಒಬ್ಬ ಅವಧೂತ ಸಂನ್ಯಾಸಿ, ಅನಿರೀಕ್ಷಿತವಾದುದನ್ನು ನುಡಿಯಬಲ್ಲ, ಅಸಾಮಾನ್ಯವಾದುದನ್ನು ಮಾಡಬಲ್ಲ ವಿಲP್ಷÀಣ ಪುರುಷ ಎಂದವರು ಡಾ.ನಿ.ಮುರಾರಿ ಬ¯್ಲÁಳರು. ಶ್ರೀಮತಿ ಇಂದಿರಾ ಗಾಂಧಿ ಅವರ ಎಮರ್ಜೆನ್ಸಿಯನ್ನು ಒಂದು ಬಗೆಯಲ್ಲಿ ಸಮರ್ಥಿಸುತ್ತಾ ಯಾರ ಸ್ವಾತಂತ್ರ್ಯದ ಬಗ್ಗೆ ಮಾತಾಡುತ್ತೀರಿ? ಉತ್ತರ ಕರ್ನಾಟಕದ ಅತ್ಯಂತ ಹಿಂದುಳಿದ ಪ್ರದೇಶಗಳ ಜನರ ದುರವಸ್ಥೆಯನ್ನು ಬರಗಾಲಪೀಡಿತ ಪ್ರದೇಶದ ಕಾರ್ಮಿಕ ಸಂಕಟವನ್ನು ಒಮ್ಮೆ ನೋಡಬನ್ನಿ.

ಆಗ ತಿಳಿಯುತ್ತದೆ ನೀವು ಮಾತಾಡುವ ಸ್ವಾತಂತ್ರ್ಯದ ಪೆÇಳ್ಳುತನ ಏನೆಂದು. ಈ ದೇಶದ ಎಪ್ಪತ್ತು ಶೇಕಡಾ ಮಂದಿ ಬದುಕುವ ಹಕ್ಕಿನಿಂದಲೇ ವಂಚಿತರಾಗಿz್ದÁರೆ. ಅವರಿಗೆ ಸ್ವಾತಂತ್ರ್ಯವೆಂದರೇನೇ ಗೊತ್ತಿಲ್ಲ. ಎಂದಾದರೂ ಅವರಿಗೆ ಮಾತಾಡುವ ಹಕ್ಕಿತ್ತೇ ಈ ದೇಶದಲ್ಲಿ? ಅಂಥ ವರ್ಗದ ಏಳ್ಗೆಗಾಗಿ ಕೈಗೊಂಡ ಯಾವ ಆರ್ಥಿಕ ಶಿಸ್ತಿಗೂ ನನ್ನ ಬೆಂಬಲವಿದೆ ಎಂದು ವಿಚಿತ್ರವಾದರೂ ಸತ್ಯ ನುಡಿದಿದ್ದ ಶ್ರೀಗಳಿಗೆ ಎಲ್ಲರ ಆರ್ಥಿಕ ಹಿತದೃಷ್ಟಿ ಮತ್ತು ಜನಪರ ಸಂವೇದನೆಯಿತ್ತು ಎನ್ನುತ್ತಾರೆ ಶ್ರೀ ಬ¯್ಲÁಳರು. ನಾವು ನಮ್ಮ ಮನೆಯ, ನಮ್ಮ ಬಾಂಧವ್ಯದ, ನಮ್ಮ ಭಾಷೆಯ, ನಮ್ಮ ಪ್ರಾಂತದ ಮಟ್ಟಿಗಷ್ಟೆ ಚಿಂತಿಸಬಾರದು. ರಾಷ್ಟ್ರೀಯ ಚಿಂತನೆ ಮುಖ್ಯವಾಗಬೇಕು ಎಂದವರು ಶ್ರೀಗಳು. ಧರ್ಮಗುರುಗಳು ರಾಜಕೀಯವನ್ನು ಚರ್ಚಿಸುವುದು, ವಿಮರ್ಶಿಸುವುದು, ಜನರಿಗೆ ಮಾರ್ಗದರ್ಶನ ಮಾಡುವುದು ತಪ್ಪಲ್ಲ. ಈ ಹಿಂದೆ ರಾಜಮಹಾರಾಜರುಗಳ ಕಾಲದಲ್ಲಿ ಧರ್ಮಗುರುಗಳು ರಾಜಕೀಯ ವಿಷಯಗಳಲ್ಲೂ ಮಾರ್ಗದರ್ಶನ ಮಾಡುತ್ತಿದ್ದರೆಂಬುದು ಶ್ರೀಗಳ ವಾದ.

ಶ್ರೀ ವಿಭುದೇಶ ತೀರ್ಥರು ತಮ್ಮ ಮಠದ ಚೌಕಟ್ಟಿಗೆ ಕಟ್ಟಿಕೊಂಡವರಲ್ಲ. ಜಡ ಆಧ್ಯಾತ್ಮ ಯತಿಗಳಲ್ಲ; ಸದ್ಯದ ವರ್ತಮಾನಕ್ಕೆ ಸ್ಪಂದಿಸುತ್ತ ದೈವವನ್ನು, ಆಧ್ಯಾತ್ಮಿಕತೆಯನ್ನು, ವಿದ್ಯಾಪ್ರಸಾರದಲ್ಲಿ, e್ಞÁನದಲ್ಲಿ ಕಂಡುಕೊಂಡವರು. ಉಡುಪಿಯ ಇತರ ಮಠಗಳವರು ವಿದ್ಯಾಕ್ಷೇತ್ರದಲ್ಲಿ ಮಾಡಬಹುದಾಗಿದ್ದ ಕೆಲಸವನ್ನು ಶ್ರೀ ವಿಭುದೇಶರು ಓರ್ವರೇ ನಿರ್ವಹಿಸಿದ್ದಾರೆ ಎಂದು ಶ್ರೀಪಾದರ ಸಾಧನೆಯ ಗುಣಗೌರವ ಮಾಡಿದವರು ಶಿP್ಷÀಣ ಚಿಂತಕ ಡಾ. ಮಹಾಬಲೇಶ್ವರ ರಾವ್ ಅವರು.

ಸ್ವಭಾವತಃ ಧಾರ್ಮಿಕ ಮನುಷ್ಯರಾದ ಇವರಲ್ಲಿ ಧರ್ಮಭಕ್ತಿ ಸೇವೆ- ಪಾರಮಾರ್ಥಿಕ ಚಿಂತನೆಯ ಜೊತೆಜೊತೆಗೆ ಶಿP್ಷÀಣ ವಿe್ಞÁನದ ಬಗ್ಗೆ ಆಸಕ್ತಿ ಮೂಡಿ ಇಷ್ಟೊಂದು ಸಾಧನೆಗಳನ್ನು ಮಾಡಿದ ಶ್ರೀಪಾದರು ನನ್ನ ಪಾಲಿಗೆ ಅಚ್ಚರಿ ಹುಟ್ಟಿಸಿದವರು ಎನ್ನುತ್ತಾರೆ ಡಾ.ಚಂದ್ರಶೇಖರ ಕಂಬಾರರು.

ಜಾತಿಯ ಕಟ್ಟುಪಾಡು, ಬ್ರಾಹ್ಮಣ್ಯದ ನಿಯಮ, ಯತಿಧರ್ಮದ ನಿಯಮದ ನಡುಬಿದ್ದುಕೊಂಡೇ ಸಮಾನತೆಯ ಕನಸನ್ನು ಮತ್ತು ಸೀಮೋಲ್ಲಂಘನದ ಸಾಧ್ಯತೆಯನ್ನು ಸಮಾಜಕ್ಕೆ ತೋರಿಸಿ ಕೊಟ್ಟವರು ವಿಭುದೇಶ ಶ್ರೀಪಾದರು- ಹೀಗೆಂದವರು ಶ್ರೀಗಳೊಂದಿಗೆ ಬಹುಕಾಲ ಒಡನಾಡಿಗಳಾದ್ದ ಶ್ರೀ ದೇವೇಂದ್ರ ಪೆಜತ್ತಾಯರು.

`ಇಂಗ್ಲಿಷ್ ಸ್ವಾಮೀಜಿ’ ಎಂದೇ ಖ್ಯಾತಿ ಪಡೆದವರು ಶ್ರೀಗಳು. ಜಗತ್ತಿನ ಜೊತೆ ನಮ್ಮನ್ನು ನಾವು ತೆರೆದುಕೊಂಡು ಸ್ಪರ್ಧಿಸುವಂತಾಗಬೇಕೆಂದರೆ ನಾವು ಆಂಗ್ಲ ಮಾಧ್ಯಮದಲ್ಲಿ ಶಿP್ಷÀಣದಲ್ಲಿ ರೂಪಿಸಿಕೊಳ್ಳಬೇಕು. ಅದಕ್ಕಾಗಿಯೇ ಅವರು ಆಂಗ್ಲಮಾಧ್ಯಮ ವಿದ್ಯಾಲಯಗಳನ್ನು ದೇಶವ್ಯಾಪಿ ತೆರೆದರು. ಆಂಗ್ಲಭಾಷೆ, ವಿe್ಞÁನ, ಆಧುನಿಕ ತಂತ್ರe್ಞÁನ ಜೀವನದ ಯಶಸ್ಸಿಗೆ ಅಗತ್ಯ ಎಂದು ಬಲವಾಗಿ ನಂಬಿದ ಯತಿಗಳು ಭಾರತೀಯ ಸಂಸ್ಕøತಿಯ ಹಿರಿಮೆಯನ್ನು ಕಡೆಗಣಿಸಲಿಲ್ಲ. `ಉನ್ನತ ಶಿP್ಷÀಣದ ಮುಖ್ಯ ಗುರಿಯೇ ಆಧುನಿಕ e್ಞÁನದ ಸಿದ್ಧಿ. ಅದು ದೊರಕದಿದ್ದರೆ ಬೇರೆಲ್ಲದರ ಪರಿಣಾಮ ಶೂನ್ಯ’ ಎಂಬುದು ಸ್ವಾಮಿಗಳ ಚಿಂತನೆ.

ಅಣು ಪರಮಾಣುಗಳ ವಿಚಾರಗಳಲ್ಲಿ ಶ್ರೀ ಮಧ್ವರು ಉ¯್ಲÉೀಖಿಸಿದ ಶ್ಲೋಕಗಳನ್ನು ಆಗಾಗ ನೆನಪಿಸುತ್ತಲೇ, ಅವುಗಳ ಮತಿತಾರ್ಥವನ್ನು ಆಂಗ್ಲಭಾಷೆಯಲ್ಲಿ *ಅಠಿಟಞ ್ಚZ್ಞ ಚಿಛಿ om್ಝಜಿಠಿ eಟ್ಟಜ್ಢಿಟ್ಞಠಿZ್ಝ Z್ಞb qಛ್ಟಿಠಿಜ್ಚಿZ್ಝ bಜಿಞಛ್ಞಿoಜಿಟ್ಞo. ಈಜಿqಜಿoಜಿಟ್ಞo ಟ್ಛ ಅಠಿಟಞ ್ಚZ್ಞ ಚಿಛಿ ಞZbಛಿ ್ಛಟ್ಟ ಜ್ಞ್ಛಿಜ್ಞಿಜಿಠಿಛಿ ಠಿಜಿಞಛಿ ಹೇಳುತ್ತಿದ್ದರು. ಶ್ರೇಷ್ಠತೆಯ ತುಡಿತ, ವಿe್ಞÁನ ಶಿP್ಷÀಣ, ಇಂಗ್ಲಿಷ್ ಶಿP್ಷÀಣಕ್ಕೆ ಒತ್ತು, ಅಧ್ಯಾಪಕರ- ಉಪನ್ಯಾಸಕರ ಆಯ್ಕೆಯಲ್ಲಿ ಕಟ್ಟೆಚ್ಚರ, ಗುಣಮಟ್ಟದ ಶಿP್ಷÀಣ, ಉತ್ತಮ ಸಂಬಳ, ಆರ್ಥಿಕ ಸಮಾನತೆ, ವಿನಿಯೋಗಿತ್ವದ ತಾತ್ವಿಕ ಪರಿಕಲ್ಪನೆ, ಸ್ವಾವಲಂಬನೆಯ ಆಕೃತಿಗಳು- ಇವೇ ಮುಂತಾದವು ಶ್ರೀಗಳ ಶೈP್ಷÀಣಿಕ ಧೋರಣೆಯ ಲP್ಷÀಣಗಳು. ಶ್ರೀಗಳಲ್ಲಿ ಯಾವತ್ತೂ ಇವು ಶೈಥಿಲ್ಯವನ್ನು ಕಾಣಲಿಲ್ಲ. ಶ್ರೀಗಳಿಂದ 1961 ರಲ್ಲಿ ಅದಮಾರು ಮಠ ಎಜ್ಯುಕೇಷನ್ ಕೌನ್ಸಿಲ್ ರಚನೆಯಾಯಿತು. ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳು ಇದರಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರಲ್ಲಿ ಮುಖ್ಯ ಕಛೇರಿಯೂ ಉಡುಪಿಯಲ್ಲಿ ಉಪಕಛೇರಿಯೂ ಸಕ್ರಿಯವಾಗಿವೆ.

ಈ ನಾಡಿನ, ದೇಶದ ಶಿP್ಷÀಣ ಮತ್ತು ಸಮಾಜಕ್ಕೆ ಶ್ರೀಗಳ ಕೊಡುಗೆ ಅನನ್ಯವಾದುದು. ಅವುಗಳಲ್ಲಿ ಅತ್ಯಂತ ಅದ್ಭುತವಾದ ಕೊಡುಗೆಯೆಂದರೆ ಶ್ರೀ ವಿಶ್ವಪ್ರಿಯ ತೀರ್ಥರು. ಈ ಕೊಡುಗೆಯ ಬಗ್ಗೆ ಉಳಿದವರು ಗುರುಕುಲದ ಹೆಸರಲ್ಲಿ ಶಿಷ್ಯಕುಲವನ್ನು ಬೆಳೆಸಿದರೆ ಶ್ರೀಗಳು ಇತಿಹಾಸವೇ ಕಂಡು ಕೇಳರಿಯದ ಪಂಚಪೀಠಾಧಿಪತಿಗಳ ಆದರ್ಶ ಗುರುಕುಲವನ್ನು ಸಮಾಜಕ್ಕೆ ನೀಡಿದರು ಎಂದು ವಿಶ್ವಪ್ರಿಯರ ಆಧ್ಯಾತ್ಮಿಕ e್ಞÁನವನ್ನು ಮೆಚ್ಚುತ್ತಾರೆ.

ಪುತ್ತಿಗೆ ಶ್ರೀಗಳು. ಎಲ್ಲದಕ್ಕಿಂತ ಮುಖ್ಯವಾಗಿ ವಾಗ್ಮಿಗಳಾದ, ನಿತ್ಯನೂತನ ಚಿಂತಕರಾದ ಕಂಚಿನ ಕಂಠದ ತುಂಬು ಪಾಂಡಿತ್ಯದ ಶ್ರೀ ವಿಶ್ವಪ್ರಿಯ ತೀರ್ಥರನ್ನು ಸಮಾಜಕ್ಕೆ ಕೊಟ್ಟ ಸಾಧನೆ ಅತಿ ದೊಡ್ಡದು. ಸಮಾಜ ಮರೆಯದ ಸ್ವಾಮಿಗಳ ಈ ದಾನಕ್ಕೆ ಇಡೀ ಸಮಾಜವೇ ಚಿರ ಋಣಿಯಾಗಿದೆ ಎಂದು ವಿಶ್ವಪ್ರಿಯ ತೀರ್ಥರ e್ಞÁನ ಮಹತ್ತನ್ನು ಎತ್ತಿಹಿಡಿದವರು ಫಲಿಮಾರು ಶ್ರೀಗಳು. ವಾಗ್ದೇವಿಯ ವರಪುತ್ರರಂತಿರುವ ವಿಶ್ವಪ್ರಿಯರ ವಾಗ್ಝರಿ ಆಕರ್ಷಣೀಯ, ಮನೋಜ್ಞ. ಅನುಭಾವ ತೀವ್ರತೆಯ ಉತ್ಕರ್ಷದಿಂದಾಗಿ ಅವರ ವ್ಯಕ್ತಿತ್ವದ ಭಾಷ್ಯದಂತೆ ಅವರ ಪ್ರವಚನವಿರುತ್ತದೆ. ಆರ್ಷೇಯವಾದ e್ಞÁನ ಸಂಪತ್ತನ್ನು ಜನಮಾನಸಕ್ಕೆ ಬಿತ್ತರಿಸುವಲ್ಲಿ ಇವರದು ಅವಿರತ ಪ್ರಯತ್ನ. ನಿರಂತರವಾದ ಆಳವಾದ ಅಧ್ಯಯನ, ತಲಸ್ಪರ್ಶಿ ಚಿಂತನೆ, ಯಾವುದೇ ವಿಚಾರಗಳನ್ನು ಗ್ರಹಿಸಬಲ್ಲ ಸೂಕ್ಷ್ಮಮತಿ, ನಿರಂತರ e್ಞÁನತೃಷೆ, ಸ್ವಾಧ್ಯಾಯದ ವಿಚP್ಷÀಣ ಮತಿತ್ವವನ್ನು ಹೊಂದಿರುವ ಯತಿ ಎಂಬುದು ಸರ್ವಗ್ರಾಹ್ಯ. ಇಂಥ ಸುe್ಞÁನಿ, ಸೂಕ್ಷ್ಮ, ಸುವಿಚಾರಿ, ಬಹು ದಾಕ್ಷಿಣ್ಯ ಸ್ವಭಾವದ ಯತಿಗಳನ್ನು ಸಮಾಜಕ್ಕೆ ನೀಡಿದವರು ವಿಭುದೇಶ ತೀರ್ಥರು.

ವಿಭುದೇಶರ ತೀರ್ಥರ ಬಗ್ಗೆ *Sಟ ಠಿeಛಿ ಛ್ಡಿಠಿಛ್ಞಿಠಿ ಐ h್ಞಟಡಿ eಜಿಞ, ಐ ್ಚZ್ಞ oZqs eಛಿ eZo ್ಚಟ್ಞಠ್ಟಿಜಿಚ್ಠಿಠಿಛಿb ಜ್ಞಿ Z ್ಝZ್ಟಜಛಿ ಞಛಿZo್ಠ್ಟಛಿ ಜ್ಞಿ m್ಟಟಞಟಠಿಜ್ಞಿಜ ಛಿb್ಠ್ಚZಠಿಜಿಟ್ಞZ್ಝ Z್ಚಠಿಜಿqಜಿಠಿಜಿಛಿo ಡಿಜಿಠಿe eಜಿo ್ಚಟ್ಞ್ಚಛ್ಟ್ಞಿ ್ಛಟ್ಟ oಟ್ಚಜಿZ್ಝ ಡಿಛ್ಝ್ಛಿZ್ಟಛಿ. ಏಛಿ ಜಿo ್ಟಟ್ಝಛಿ ಞಟbಛ್ಝಿ ್ಛಟ್ಟ m್ಠಚ್ಝಿಜ್ಚಿ oಛ್ಟಿqಜ್ಚಿಛಿ Z್ಞb eಛಿ eZo oeಟಡ್ಞಿ ಠಿeZಠಿ ಚಿಛಿoಜಿbಛಿo omಜ್ಟಿಜಿಠ್ಠಿZ್ಝ Z್ಚಠಿಜಿqಜಿಠಿಜಿಛಿo ಛ್ಡಿmಛ್ಚಿಠಿಛಿb ಟ್ಛ ್ಟಛ್ಝಿಜಿಜಜಿಟ್ಠo eಛಿZbo, ಠಿeಛಿqs ್ಚZ್ಞ Z್ಝoಟ ಛ್ಞಿಜZಜಛಿ ಠಿeಛಿಞoಛ್ಝಿqಛಿo ಜ್ಞಿ ್ಞZಠಿಜಿಟ್ಞ ಚ್ಠಿಜ್ಝಿbಜ್ಞಿಜ Z್ಚಠಿಜಿqಜಿಠಿಜಿಛಿo o್ಠ್ಚe Zo ಛಿb್ಠ್ಚZಠಿಜಿಟ್ಞ Z್ಞb eಛಿZ್ಝಠಿe ್ಚZ್ಟಛಿ ಎಂದೂ, *qಛ್ಟಿqs ್ಟZ್ಟಛಿ mಟ್ಞಠಿಜ್ಛ್ಛಿ ಎಂದು ಡಾ. ಸಿ.ಎನ್.ಆರ್.ರಾವ್ ಅವರು ವಿಭುದೇಶರನ್ನು ಸ್ಮರಿಸುತ್ತಾರೆ.

ವಿಭುದೇಶ ತೀರ್ಥರ ರಾಷ್ಟ್ರಭಕ್ತಿ ಬಹುದೊಡ್ಡದು. ತನ್ನ ವಿದ್ಯಾಸಂಸ್ಥೆಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ದೇಶದ ಮಕ್ಕಳು ಎಂದೇ ಅವರ ಹೆತ್ತವರಿಗೆ ಹೇಳುತ್ತಿದ್ದರು. ಉತ್ತಮ ಆಹಾರ ಸೇವನೆ ಮಾಡಿ, ವ್ಯಾಯಾಮ ಆಟೋಟಗಳಲ್ಲಿ ಪಾಲ್ಗೊಂಡು ಕಟ್ಟುಮಟ್ಟಾದ ಸದೃಢ ದೇಹವನ್ನು ಹೊಂದಬೇಕು ಅಂತ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಹೇಳುತ್ತಿದ್ದರು. ಸಣ್ಣವಯಸ್ಸ¯್ಲÉೀ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಕಂಪನಿ ಸರಕಾರದ ವಿರುದ್ಧ ವೇದಿಕೆಯ¯್ಲÉೀ ಗುಡುಗಿದವರು. ನಮ್ಮ ಮಕ್ಕಳು ಒಲಿಂಪಿಕ್ಸ್‍ನಲ್ಲಿ ಪದಕಗಳನ್ನು ಗೆದ್ದು ತರಬೇಕೆಂಬ ಕನಸನ್ನು ಹೊತ್ತಿದ್ದವರು. ಅದಕ್ಕಾಗಿ *ಐ್ಞಠಿಛ್ಟಿ Pಟಟ್ಟ್ಞZm್ಟZ್ಜ್ಞZ ಎZಞಛಿo Iಛಿಛಿಠಿ ಅನ್ನು ಆರಂಭಿಸಿದರು.

ಶ್ರೀಗಳ ಗುರುಭಕ್ತಿಯಂತೂ ಮೇಲ್ಪಂಕ್ತಿಯಾಗಿದೆ. ಯಾರೂ ಮೆಚ್ಚುವಂಥ ಗುರುಭಕ್ತಿ ಅವರಲ್ಲಿತ್ತು. ಆಸ್ಕರ್ ಫರ್ನಾಂಡಿಸ್ ಅವರ ತಂದೆ ರೋಕ್ ಫರ್ನಾಂಡೀಸ್ ಪೂರ್ವಾಶ್ರಮದಲ್ಲಿ ಇವರ ಇಂಗ್ಲಿಷ್ ಗುರುಗಳಾಗಿದ್ದರು. ಆಕ್ಸ್‍ಫರ್ಡ್ ಇಂಗ್ಲಿಷ್ ಡಿP್ಷÀನರಿಯೇ ರೋಕ್ ಅವರ ಬಾಯಲ್ಲಿತ್ತು ಎಂಬ ಖ್ಯಾತಿಯನ್ನು ಹೊಂದಿದ್ದರೆಂದು ತಮ್ಮ ಗುರುಗಳನ್ನು ಮೆಚ್ಚಿಕೊಂಡವರು ವಿಭುದೇಶರು. ಶ್ರೀಗಳಿಗೆ ಇಂಗ್ಲಿಷಿನ ಮೇಲೆ ಅತ್ಯಾಸಕ್ತಿ ಹುಟ್ಟಿದ್ದು ಇವರಿಂದಲೇ. ಶ್ರೀಗಳನ್ನು ಸಂನ್ಯಾಸ ದೀಕ್ಷೆಗೆ ಸೂಚಿಸಿದವರು ಕೂಡ ರೊಕ್ ಅವರೇ. ಸಂನ್ಯಾಸಿಯಾದ ಮೇಲೆ ತಮ್ಮ ಗುರುಗಳನ್ನು ತಮ್ಮ ಸಂಸ್ಥೆಗೆ ಕರೆಸಿ ಸಂಮಾನ ಮಾಡಿದಾಗ ರೋಕ್ ಅವರು ವಿಭುದೇಶರ ಕಾಲಿಗೆ ಬಿದ್ದು ನಮಸ್ಕರಿಸಿದರಂತೆ. ರೋಕ್ ಅವರಿಗೆ ಜೀವನದಲ್ಲಿ ಕಷ್ಟ ಬಂದಾಗ ಮಠದಿಂದಲೇ ಅಕ್ಕಿ ಧವಸ ಧಾನ್ಯಗಳನ್ನು ನೀಡಿ ಗುರು ಭಕ್ತಿಯ ಜೊತೆಗೆ ಗುರುಸೇವೆಯನ್ನು ಸಂನ್ಯಾಸಿಯಾದ ಮೇಲೂ ಮಾಡಿದವರು ವಿಭುದೇಶರು.

ಕೊನೆಯ ಮಾತು: ಶ್ರೀಗಳು ಕೃಷ್ಣ ಸಾಯುಜ್ಯವನ್ನು ಹೊಂದಿ ನಿನ್ನೆಗೆ ಹತ್ತು ವರ್ಷಗಳಾದವು. ಸರಕಾರವೊಂದು ಮಾಡಬಹುದಾದ ಕಾರ್ಯಗಳನ್ನು ಶಿP್ಷÀಣ ಕ್ಷೇತ್ರದಲ್ಲಿ ವಿಭುದೇಶರು ಮಾಡಿದ್ದಾರೆ. ಅಜಾ ಸೃಷ್ಟಾನ ಶಾಖಾಸ್ತಿ- ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಗಾದೆ ಮಾತು ಶ್ರೀಪಾದರ ಮಟ್ಟಿಗೆ ಪರಿಪೂರ್ಣವಾಗಿದೆ. ನಾನಾ ಜನಸ್ಯ ಶುಶ್ರೂಷಾ ಕರ್ಮಾಖ್ಯಾ ಕರವನ್ಮಿತೇ- ಸ್ವಾಮಿಗಳು ಏನು ಮಾಡಿz್ದÁರೆ ಅನ್ನುವುದಕ್ಕಿಂತ ಏನು ಮಾಡಿಲ್ಲ ಎಂದು ಹೇಳುವುದು ಕಷ್ಟ. ಇಂಥವರು ಈ ನಾಡಿನ ಸೌಭಾಗ್ಯ. `ಅತ್ಯುನ್ನತಿಯೊಳ್ ಸಿಂಧೂದ್ಭವಂ’ ಎಂದು ಪಂಪ, ಭೀಷ್ಮರನ್ನು ವರ್ಣಿಸುತ್ತಾನೆ. `ಶ್ರೀ ವಿಭುದೇಶ ತೀರ್ಥರದು ಅತ್ಯುನ್ನತಿಯ ವ್ಯಕ್ತಿತ್ವ’ ಎನ್ನುತ್ತಾರೆ ಶ್ರೀ ಮುರಳೀಧರ ಉಪಾಧ್ಯರು.

ಒಂದು ಧ್ಯೇಯಕ್ಕಾಗಿ, ಉz್ದÉೀಶಕ್ಕಾಗಿ, ಗುರಿಯನ್ನು ತಲುಪುವುದಕ್ಕಾಗಿ ತನ್ನ ಬಾಳನ್ನು ಪೂರ್ತಿಯಾಗಿ ಮುಡಿಪಾಗಿಟ್ಟುಕೊಂಡು ಇದಿರಾದ ಕಷ್ಟ-ಸಂಕಷ್ಟಗಳನ್ನು, ಅಂದುಕೊಂಡ ನಿರ್ದಿಷ್ಟ, ನಿಶ್ಚಯವಾದ ಗಮ್ಯವನ್ನು ತಲುಪುವುದಕ್ಕಾಗಿ ಬದುಕನ್ನು ಸಮಗ್ರವಾಗಿ, ಸಮರ್ಥವಾಗಿ, ದಿಟ್ಟವಾಗಿ ಕೊಂಡೊಯ್ದು ಇದಿರಾದ ಸವಾಲುಗಳನ್ನು ಒಂಟಿ ಸಲಗದಂತೆ ಧೈರ್ಯದಿಂದ ಎದುರಿಸಿ ಯಶಸ್ಸನ್ನು ಕಂಡೆ ಎಂಬ ಭಾವ ಶ್ರೀಪಾದರ ಬದುಕಿನ ಕೊನೆಯ ದಿನಗಳಲ್ಲಿತ್ತೆಂದು ನನಗನಿಸುತ್ತದೆ.

ಇಲ್ಲದೆ ಹೋದರೆ 32 ವಿದ್ಯಾಸಂಸ್ಥೆಗಳನ್ನು ಹುಟ್ಟುಹಾಕಿ ಬೆಳೆಸುವುದೆಂದರೆ ಸಣ್ಣ ಸಾಮಾನ್ಯವೇ? ಜುಲೈ ತಿಂಗಳ ಮೊದಲ ಗುರುವಾರ ಶ್ರೀಗಳ ಸ್ಮರಣಾರ್ಥ ಸಂಸ್ಥಾಪಕರ ದಿನಾಚರಣೆಯನ್ನು ಪೂರ್ಣಪ್ರಜ್ಞ ವಿದ್ಯಾಸಂಸ್ಥೆಗಳು ಆಚರಿಸುತ್ತವೆ. ನೀವು ದುಡಿಯುತ್ತಿರುವ ಸಂಸ್ಥೆಯನ್ನು ಪ್ರಶ್ನಿಸಬಹುದು, ವಿರೋಧಿಸಬಹುದು, ಒಪ್ಪದಿರಬಹುದು. ಆದರೆ ಸಂಸ್ಥೆಗೆ ಮೋಸ ಅಥವಾ ದ್ರೋಹ ಮಾಡುವ ಹಕ್ಕು ನಿಮಗಿರುವುದಿಲ್ಲ ಎಂದ ಅವರ ಮಾತು ಸಾರ್ವಕಾಲಿಕ ಸತ್ಯ. ತನ್ನವರಿಗೆ ತಾನೇ ಒಂದು ಮಾದರಿಯಾಗುತ್ತಾ ಸಮಾಜಕ್ಕೂ ಉತ್ಕಟ ಆದರ್ಶವಾಗುತ್ತಾ ತನ್ನ ಉದಾತ್ತ ಧ್ಯೇಯ ಮತ್ತು ಗುರಿಗಳಿಂದ ರಾಷ್ಟ್ರಕ್ಕೆ ಅರ್ಪಿಸಿಕೊಳ್ಳುವಲ್ಲಿ ಯಾವ ಪ್ರತಿಫಲವನ್ನೂ ಬಯಸದ ಶ್ರೀಗಳು ನಮ್ಮ ಪಾಲಿಗೆ ಜೀವಂತ ಮಾದರಿಯಾಗಿಯೇ ಉಳಿಯುತ್ತಾರೆ. ಒಂದು ಜೀವ ಇದಕ್ಕಿಂತ ದೊಡ್ಡ ಸಾಧನೆ ಮಾಡಲಾರದು ಎಂಬ ಭಾವ ನನ್ನದು.

Leave a Reply

Your email address will not be published. Required fields are marked *