Friday, 3rd February 2023

ರಾಯಲ್ ಚಾಲೆಂಜರ್ಸ್’ಗೆ ಫಾಫ್ ಡು ಪ್ಲೆಸಿಸ್ ನಾಯಕ

ಬೆಂಗಳೂರು : ಮಾರ್ಚ್ 26ರಿಂದ ಆರಂಭವಾಗಲಿರುವ ಇಂಡಿಯನ್ ಪ್ರೀಮಿ ಯರ್ ಲೀಗ್ ನ ಮುಂಬರುವ ಋತುವಿನಲ್ಲಿ ಫಾಫ್ ಡು ಪ್ಲೆಸಿಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರನ್ನಾಗಿ ನೇಮಿಸ ಲಾಗಿದೆ.

ಪ್ಲೆಸಿಸ್ ಅವರನ್ನ 2022ರ ಐಪಿಎಲ್ ಹರಾಜಿನಲ್ಲಿ ಆರ್ ಸಿಬಿ 7 ಕೋಟಿ ರೂ. ಬೆಲೆಗೆ ಖರೀದಿಸಿದೆ. ಕಳೆದ ಋತುವಿನವರೆಗೆ ಸಿಎಸ್ ಕೆ ಪರ ಆಡಿದ್ದ ದಕ್ಷಿಣ ಆಫ್ರಿಕಾದ ಆಟಗಾರ. ಇಲ್ಲಿಯವರೆಗೆ ಐಪಿಎಲ್ʼನಲ್ಲಿ ಅತ್ಯಂತ ಸ್ಥಿರ ಆಟಗಾರರಲ್ಲಿ ಒಬ್ಬರಾಗಿದ್ದಾರೆ.

ಅವರು 2021ರ ಐಪಿಎಲ್ ಅಭಿಯಾನದಲ್ಲಿ ಸಿಎಸ್ ಕೆ ಪರ ಅದ್ಭುತ ಫಾರ್ಮ್ ʼನಲ್ಲಿದ್ದು, 16 ಪಂದ್ಯಗಳಲ್ಲಿ 633 ರನ್ ಗಳಿಸಿದರು.

error: Content is protected !!