Tuesday, 5th July 2022

ಖೋಟಾ ನೋಟು ಪ್ರಕರಣ: ಚಿತ್ರದುರ್ಗ ನಗರಸಭೆ ಜೆಡಿಎಸ್ ಸದಸ್ಯನ ಬಂಧನ

ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ಜೆಡಿಎಸ್ ಸದಸ್ಯ, ಖೋಟಾ ನೋಟು ಆರೋಪಿ ಚಂದ್ರಶೇಖರ್ ಅಲಿಯಾಸ್ ಖೋಟಾ ನೋಟು ಚಂದ್ರನನ್ನು ಚಿತ್ರದುರ್ಗ ಬಡಾವಣೆ ಪೋಲಿಸರು ಬಂಧಿಸಿದ್ದಾರೆ.

ಚಿತ್ರದುರ್ಗ ನಗರಸಭೆಯ ಸದಸ್ಯ ಖೋಟಾ ನೋಟು ಚಂದ್ರ @ಬೆಂಡೋಲೆ ಚಂದ್ರ ಎಂದೆಲ್ಲಾ ಹೆಸ ರಿನ ಈತ ಹಣ ಡಬ್ಲಿಂಗ್, ಖೋಟಾ ನೋಟು ದಂಧೆ ಮಾಡಿಕೊಂಡು ಬರುತ್ತಿದ್ದನು ಎಂದು ಹೇಳಲಾ ಗುತ್ತಿದೆ.

ಹೊರ ರಾಜ್ಯಗಳ ಜನರಿಗೆ ಹಣ ಡಬ್ಲಿಂಗ್ ಮಾಡಿಕೊಡುವುದಾಗಿ ನಂಬಿಸಿ ವಂಚಿಸಿರುವ ಪ್ರಕರಣಗಳು ದಾಖಲಾಗಿವೆ. ಚಂದ್ರಶೇಖರ್ ಅನೇಕ ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡು ಹೊರಗೆ ಬಂದಿ ದ್ದಾನೆ.

10 ವರ್ಷಗಳ ಹಿಂದೆ ಪೊಲೀಸರು ದೊಡ್ಡ ಪೇಟೆಯಲ್ಲಿರುವ ಹಾಗೂ ಮಹಾವೀರ ಕಾಲೊನಿಯಲ್ಲಿರುವ ಮನೆಗಳ ಮೇಲೆ ದಾಳಿ ನಡೆ ಖೋಟಾ ನೋಟು ಹಾಗೂ ನೋಟು ಮುದ್ರಣದ ಯಂತ್ರವನ್ನು ವಶಪ ಡಿಸಿಕೊಂಡು ಜೈಲಿಗೆ ಕಳುಹಿಸಿದ್ದರು. ಆದರೂ ಖೋಟಾ ನೋಟು ದಂಧೆ ನಿಲ್ಲಿಸದೆ ಹಳೇ ಚಾಳಿ ಮುಂದುವರೆಸಿಕೊಂಡು ಬಂದಿದ್ದ.

ದೊಡ್ಡಬಳ್ಳಾಪುರದ ನಾಗರಾಜ್ ಎಂಬುವರಿಂದ ಆರು ಲಕ್ಷ ಪಡೆದು, ಆತನಿಗೆ ವಾಪಸ್ ಹದಿನೆಂಟು ಲಕ್ಷ ನಕಲಿ ನೋಟು ನೀಡಿ ವಂಚಿಸಿದ್ದಾನೆ. ಈ ಹಿನ್ನೆಲೆಯಲ್ಲಿ ನಾಗರಾಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ಹಿಂದೆ ಬಿದ್ದ ಪೊಲೀಸರು ಚಂದ್ರಶೇಖರ್‌ಗಾಗಿ ಹುಡುಕಾಟ ನಡೆಸಿದ್ದರು.